aarathi · dasara padagalu · Gowri · Harapanahalli bheemavva · MADHWA

Arathi belega bannire

ಆರತಿಯ ಬೆಳಗಬನ್ನಿರೆ ಆರತಿಯ ಬೆಳಗಬನ್ನಿರೆ
ಪಾರ್ವತಿದೇವಿಯರಿಗೆ
ಕೀರುತಿ ಕೊಂಡಾಡುತಲಿ ಪರ್ವತರಾಜನ ಮಗಳಿಗೆ
ಆರತಿಯ ಬೆಳಗಬನ್ನಿರೆ ||ಪ||

ವಾಲೆ ಕಠಾಣಿ ಚಿಂತಾಕು ಮ್ಯಾಲೆ ಸರಿಗೆ ಸರ ಮುತ್ತುಗಳು
ಕಾಲಗೆಜ್ಜೆಸರಪಳಿನಿಟ್ಟ ಫಾಲಾಕ್ಷನ ಮಡದಿಗೆ ||1||

ರಂಗುಮಾಣಿಕ್ಯದ ಹೆರಳು ಬಂಗಾರದಾಭರಣವಿಟ್ಟು
ದುಂಡುಮಲ್ಲಿಗೆ ಮುಡಿದು ಕುಳಿತ ಮಂಗಳಾದೇವಿಯರಿಗೆ ||2||

ದುಂಡುಮುತ್ತಿನ ಮುಕುರ್ಯವು ಚಂದ್ರ ಬಾಳ್ಯಬುಗುಡಿನಿಟ್ಟು
ದುಂಡು ಹರಡಿ ಕಂಕಣಕಮಲ ದ್ವಾರ್ಯನಿಟ್ಟ ವಾರಿಜಾಕ್ಷಿಗೆ ||3||

ಜಾತಿಮಾಣಿಕ್ಯದ ವಂಕಿ ನೂತನಾದ ನಾಗಮುರಿಗೆ
ಪ್ರೀತಿಯಲಿ ಪೀತಾಂಬ್ರನುಟ್ಟು ಜ್ಯೋತಿಯಂತೆ ಹೊಳೆವೊ ಗೌರಿಗೆ ||4||

ನೀಲವರ್ಣ ಭೀಮೇಶಕೃಷ್ಣ ಧ್ಯಾನಮಾಡುತ ಕೃಷ್ಣನ
ನೀಲಕಂಠನ ಸಹಿತ ಕುಳಿತ್ವಿಶಾಲನೇತ್ರೆ ಪಾರ್ವತಿಗೆ||5||

Arathiya belagabannire parvati deviyarige
Kiruti kondadutali parvatarajana magalige
Aratiya belagabannire ||pa||

Vale kathani cintaku myale sarige sara muttugalu
Kalagejjesarapalinitta palakshana madadige ||1||

Rangumanikyada heralu bangaradabaranavittu
Dundumallige mudidu kulita mangaladeviyarige||2||

Dundumuttina mukuryavu camdra balyabugudinittu
Dundu haradi kankanakamala dvaryanitta varijakshige ||3||

Jatimanikyada vanki nutanada nagamurige
Pritiyali pitambranuttu jyotiyamte holevo gaurige ||4||

Nilavarna bimesakrushna dhyanamaduta krushnana
Nilakanthana sahita kulitvisalanetre parvatige 5

aarathi · dasara padagalu · DEVOTIONAL · MADHWA · Mahalakshmi

Arati belagire naariyaru bega

ಆರತಿ ಬೆಳಗಿರೆ ನಾರಿಯರು ಬೇಗ
ಆದಿ ಕೊಲ್ಹಾಪುರದ ಮಹಾಲಕ್ಷ್ಮಿಗೆ
ಹಾಡುತ ಪಾಡುತ ಜಾಣೆಯರೆಲ್ಲರು
ಆದಿ ನಾರಾಯಣ ಪ್ರಿಯಳಿಗೆ ||ಪಲ್ಲವಿ||

ವಿಳ್ಳೆ ಕಾಲುಂಗುರ ಋಲ್ಲುರುಳಿ ಪೈಜಣ
ಘಲ್ಲುಘಲ್ಲೆಂದು ಹೆಜ್ಜೆಯನಿಡುತ
ಉಲ್ಲಾಸದಿಂದಲಿ ನಡುವಿಗೊಡ್ಯಾಣ ಫುಲ್ಲನಾಭನ ಪ್ರಿಯಳಿಗೆ ||

ಜರದ ಪೀತಾಂಬರ ನಿರಿಗೆಗಳೆಳೆಯುತ
ಝಗಝಗಿಸುತ ತಾ ಹೊಳೆಯುತಲಿ
ತೊಟ್ಟ ಕಂಚುಕವು ಇಟ್ಟ ವಂಕಿಯ ತೋಡೆ
ಬೆಟ್ಟದ ವೆಂಕೋಬನ ಪ್ರಿಯಳಿಗೆ ||

ಚೌರಿ ರಾಗುಟೆ ಗೊಂಡೆ ಹೆರಳು ಬಂಗಾರ
ಬುಗುಡಿ ಬಾವುಲಿ ಹೊಳೆಯುತಲಿ
ಸಡಗರದಿಂದಲಿ ತುಡಿಯ ಕುಂಕುಮ ಹಚ್ಚಿ
ಒಡೆಯ ವೆಂಕೋಬನ ಮಡದಿಗೆ||

Arati belagire naariyaru bega |
Aadi kolhaapurada mahaalakshmige |
Haaduta paaduta jaaneyarellaru |
Aadinaaraayanana preeyalige || pa ||

Pille kaalungura lullu paijhana ruli |
Ghallu ghillendhejjeyanidutaa |
Ulhaasadimdali naduvigodyaana |
Phullanaabhana preeyalige || 1 ||

Jarada peetaambara nirigegalaleyuta |
Jhaga jhagisuta taa holeyutali |
Totta kamcukavu itta vankiya tode |
Bettad vemkobana madadige || 2 ||

Chouri raagati gomde heralu bhangaara |
Bugudi baavligalu holeyutali |
Sadagara dindali kudiya kumkuma hacchi |
Odeya venkobana madadige. || 3 ||

aarathi · dasara padagalu · DEVOTIONAL · Harapanahalli bheemavva · MADHWA

Mangalaaruti tandu belagire

ಮಂಗಳಾರತಿ ತಂದು ಬೆಳಗಿರೆ ಅಂಬುಜಾಸನ ರಾಣಿಗೆ
ಅಂಬೆಗೆ ಜಗದಾಂಬೆಗೆ ಮೂಕಾಂಬೆಗೆ ಶಶಿ ಬಿಂಬೆಗೆ

ಶುದ್ಧ ಸ್ನಾನವ ಮಾಡಿ ನದಿಯಲಿ ವಜ್ರಪೀಠದಿ ನೆಲೆಸಿರೆ
ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳ ಗೌರಿಗೆ

ಎರೆದು ಪೀತಾಂಬರವನುಡಿಸಿ ಸರ್ವಾಭರಣವ ರಚಿಸಿದ
ಹರಳಿನೋಲೆ ವಜ್ರಮೂಗುತಿ ವರಮಹಾಲಕ್ಷ್ಮಿ ದೇವಿಗೆ

ಹುಟ್ಟುಬಡವೆಯ ಕಷ್ಟಕಳೆದು ಕೊಟ್ಟಳರಸನ ಸಿರಿಯನು
ಹೆತ್ತ ಕುಮರನ ತೋರಿದಂಥ ಶುಕ್ರವಾರದ ಲಕ್ಷ್ಮಿಗೆ

ನಿಗಮ ವೇದ್ಯಳೆ ನಿನ್ನ ಗುಣಗಳ ಬಗೆಬಗೆಯಲಿ ವರ್ಣಿಪೆ
ತೆಗೆದು ಭಾಗ್ಯವ ನೀಡು ಏನುತ ಜಗದೊಡೆಯನ ಭೀಮೇಶ ಕೃಷ್ಣನ ರಾಣಿಗೆ

Mangalaaruti tandu belagire ambujaakshana raanige || pa ||

Shuddha snaanava maadi gourige vajrapeethava rachisire |
Tiddi tilakava teedidantha muddu mahaalakshmi devige || 1 ||

Eredu peetaambaravanudisi sarvaabharanava idisire |
Vajradole moogutinittu varamahaalakshmi devige || 2 ||

Hutta badaviya kashta kaledu kottalarasage siriyanu |
Hetta kuvarana toridamthaa shukravaarada gourige || 3 ||

Hariyanoncisi karaviraa puradali sthira vaagiruvalu |
Parama bhaktaru smarane maadalu nigadiyindali oliva devige || 4 ||

Nigama vedyale ninna gunagala bage bage Yindali stutisuve |
Teredu bhaagyava needu neenu jagadodeya bhimesa krishnana raanige || 5 ||

dasara padagalu · DEVOTIONAL · jagannatha dasaru · MADHWA · raghavendra

Raghavendra arati song

ಮಂಗಳ ಶ್ರೀ ರಾಘವೇಂದ್ರಗೆ ಶುಭ
ಮಂಗಳ ಸುಜನಾಂಬುಧಿ ಚಂದ್ರಗೆ ||pa||

ಶ್ರೀ ಸುಧೀಂದ್ರ ಕುಮಾರಗೆ ಮಂಗಳ
ಭೂಸುರನುತ ಮಹಿಮಗೆ ಮಂಗಳ
ದೇಶಿಕ ಕುಲವನ ಜಾತನಿಗೆ ಮಂಗಳ
ಭಾಸುರ ಕೀರ್ತಿಯ ಪಡೆದವಗೆ ||1||

ವೃಂದಾವನ ದಿವಿಯೊಳಗೆ ಸುರದ್ರುಮ
ದಂದದಿ ರಾಜಿಸುವವಗೆ ಮಂಗಳ
ಅಂಧ ಪಂಗು ಮೂಕ ಬಧಿರರೀಪ್ಸಿತ
ಸಂದೋಹ ಸಲಿಸುವ ಮುನಿಗೆ ||2||

ಭೂತ ಪ್ರೇತ ಬೇತಾಳ ವಿಪಿನ ಭಯ
ವೀತಿಹೋತ್ರನಿಗೆ ಮಂಗಳ
ವಾತ ಜನಕ ಜಗನ್ನಾಥ ವಿಠ್ಠಲನ
ದೂತರ ಸಲಹುವ ದಾತನಿಗೆ ||3||

mangala gururaghavendrage
jaya mangala sujanambudhicandrage

sri sudhindrakumarage mangala
bhusuranvitanilayage mangala
daisika kulavanajakage mangala
bhasura kirtiya padedavage||1||

varundavanadolage suradruma
anandadi rajisuvage mangala
andha pan0gu muka badhiraripsita
sandoha salisuva guruvaryage||2||

bhuta pretala vipinabhaya
vitihotrage subhamangala
datajanaka jagannathavitthalana
dutara salahuva datanige||3||