dasara padagalu · MADHWA · Vadirajaru

Ava ritiyindha

ಆವ ರೀತಿಯಿಂದ ನೀಯೆನ್ನ ಪಾಲಿಸೊಶ್ರೀವಿಭು ಹಯವದನ ||pa||

ಈ ವಿಧ ಭವದೊಳು ಇಷ್ಟು ಬವಣೆಪಟ್ಟೆತಾವರೆದಳನಯನ ಹಯವದನ||a.pa||

ಕಾಮನ ಬಾಧೆಯ ತಡೆಯಲಾರದೆ ಕಂಡಕಾಮಿನಿಯರನೆ ಕೂಡಿ
ನೇಮನಿಷ್ಠೆಯಿಂದ ನಿನ್ನನು ಭಜಿಸದೆಪಾಮರನಾದೆನೊ ಹಯವದನ ||1||

ಅಂಗನೆಯರಲ್ಲಿ ಅಧಿಕ ಮೋಹದಿಂದಶೃಂಗಾರಗಳನೆ ಮಾಡಿ
ಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆಭಂಗಕ್ಕೆ ಒಳಗಾದೆನೊ ಹಯವದನ ||2||

ಹೀನ ಸಂಗವನೆಲ್ಲ ಹಯಮುಖದೇ-ವನೆ ವರ್ಜಿಸುವಂತೆ ಮಾಡೊ
ಜ್ಞಾನಿ ಗಳರಸನೆ ದಯವಿಟ್ಟು ನಿನ್ನನುಧ್ಯಾನಿಸುವಂತೆ ಮಾಡೊ ಹಯವದನ ||3||

Ava ritiyinda niyenna paliso
Srivibu hayavadana ||pa||

I vidha bavadolu ishtu bavanepatte
Tavaredalanayana hayavadana ||a.pa||

Kamana badheya tadeyalarade kanda
Kaminiyarane kudi
Nemanishtheyinda ninnanu Bajisade
Pamaranadeno hayavadana ||1||

Anganeyaralli adhika mohadinda
Srungaragalane madi
Mangalangane ninna mahimeya pogalade
Bangakke olagadeno hayavadana ||2||

Hinasangavanella hayamukade-
Vane varjisuvante mado
J~janigalarasane dayavittu ninnanu
Dhyanisuvamte mado hayavadana ||3||

dasara padagalu · krishna · MADHWA · Vadirajaru

Venunada priya gopalakrushna |

ವೇಣುನಾದ ಪ್ರಿಯ ಗೋಪಾಲಕೃಷ್ಣ ||pa||

ವೇಣುನಾದ ವಿನೋದ ಮುಕುಂದಗಾನವಿನೋದ ಶೃಂಗಾರ ಗೋಪಾಲ ||a.pa||

ವಂದಿತಚರಣ ವಸುಧೆಯಾಭರಣಇಂದಿರಾರಮಣ ಇನಕೋಟಿತೇಜ|
ಮಂದರಧರ ಗೋವಿಂದ ಮುಕುಂದಸಿಂಧುಶಯನ ಹರಿ ಕಂದರ್ಪಜನಕ ||1||

ನವನೀತಚೋರ ನಂದಕುಮಾರಭುವನೈಕವೀರ ಬುದ್ಧಿವಿಸ್ತಾರ|
ರವಿಕೋಟಿತೇಜ ರಘುವಂಶರಾಜದಿವಿಜವಂದಿತ ದನುಜಾರಿ ಗೋಪಾಲ||2||

ಪರಮದಯಾಳು ಪಾವನಮೂರ್ತಿವರ ಕೀರ್ತಿಹಾರ ಶೃಂಗಾರಲೋಲ
ಉರಗೇಂದ್ರಶಯನ ವರ ಹಯವದನಶರಣರಕ್ಷಕ ಪಾಹಿ ಕೋದಂಡರಾಮ ||3||

Venunada priya gopalakrushna ||pa||

Venunada vinoda mukunda
Ganavinoda srungara gopala ||a.pa||

Vandita charana vasudheya abarana
Indira ramana ina koti teja
Mandaradhara govinda mukunda
Sindhu Sayana hari kandarpa janaka ||1||

Navanita cora nanda kumara
Buvaneka vira buddhi vistara
Ravikoti teja raguvamsa raja
Divija vandita dhanujari gopala ||2||

Parama dayalu pavana murti
Varakirti hara srungara lola
Uragendra Sayana varahayavadana
Saranu rakshaka pahi kodanda rama ||3||

dasara padagalu · krishna · MADHWA · Vadirajaru

Lokabaritano ranganeka charitano

ಲೋಕ ಭರಿತನೋ ರಂಗಾನೇಕ ಚರಿತನೊ ||ಪ||

ಕಾಕು ಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ||

ರಾಜಸೂಯ ಯಾಗದಲ್ಲಿ ರಾಜರಾಜರಿರಲು ವಸು-
ದೇವಸುತನು ಈತನೆ ಸಭಾಪೂಜೆಗರ್ಹನೆನಿಸಿದಾತ||1||

ಮಿಕ್ಕ ನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆ
ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ||2||

ಉತ್ತರೆಯ ಗರ್ಭದಲ್ಲಿ ಸುತ್ತುಮುತ್ತಿದ ಅಸ್ತ್ರವನ್ನು
ಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ||3||

ಜ್ಞಾನಶೂನ್ಯನಾಗಿ ಸೊಕ್ಕಿ ನಾನೇ ವಾಸುದೇವನೆಂದ
ದೀನ ಪೌಂಡ್ರಕನ ಶಿರವ ಜಾಣರಾಯ ಖಂಡಿಸಿ ಮೆರೆದ||4||

ತನ್ನ ಸೇವಕಜನರ ಪೊರೆದು ಉನ್ನತ ಉಡುಪಿಯಲ್ಲಿ ನಿಂತು
ಘನ್ನ ಮಹಿಮೆಯಿಂದ ಮೆರೆವ ಪ್ರಸನ್ನ ಹಯವದನನ ಕೃಷ್ಣ||5||

Lokabaritano ranganeka charitano ||pa||

Kakujanara muridu tanna ekanta Baktara poreva krushna ||a.pa||

Rajasuya yagadalli rajarajariralu dharma-
Rajasutanu itane sarva pujegarhanenisidata ||1||

Mikka nrupara jaridu amita vikrama yaduvarane tanage
Takka ramananendu rukmini ukki maleyikkidalaga ||2||

J~janasunyanagi sokki tane vasudevanenalu
Hina paundrakana Sirava janaraya taridanaga ||3||

Uttareya garbadalli sutti muttidastravannu
Otti chakradinda nija Bakta parikshitana kayda ||4||

Tanna sevaka janarigolidu unnata udupiyalli nintu
Ganna mahimeyinda poreva prasanna hayavadana krushna ||5||

bhootaraja · MADHWA · sloka · Vadirajaru

Bhootaraja stothram

ಪ್ರಸಾದಾರ್ಥಂ ಸದಾ ನಾರಾಯಣಭೂತಾಖ್ಯಮಾದರಾತ್ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೧ ||

ಸ್ಮರತಾಂ ನಿಯಮೇನೈವ ಭೂತಭೀತ್ಯಾದಿಭಂಜನಮ್ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೨ ||

ಗುರೋರ್ದಕ್ಷಿಣಭಾಗಸ್ಥಂ ಭಜತಾಂ ಭದ್ರದಂ ದ್ರುತಮ್ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೩ ||

ಭೃತೈಃ ಕರ್ಣವಿಕರ್ಣಾಖ್ಯೈರ್ಯುಕ್ತಂ ಭೂತಗಣೈಃ ಸದಾ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೪ ||

ಕ್ರೂರಂ ಘೋರಂ ತಥಾ ಶೂರಂ ಧನುಃಖಡ್ಗಾದಿ ಧಾರಿಣಮ್ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೫ ||

ಪ್ರತಾಪವಂತಂ ವೀರಾಗ್ರ್ಯಂ ವೀರಭದ್ರೋಪಮಂ ಹೃದಿ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೬ ||

ರಕ್ತಾಂಬರಧರಂ ರಮ್ಯಪುಷ್ಪಮಾಲಾಸುಶೋಭಿತಮ್ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೭ ||

ರತ್ನೌಘವಲಯೋಪೇತಂ ಮುಕ್ತಾಹಾರವಿಭೂಷಿತಮ್ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೮ ||

ಅರ್ಕಾಭಾಂಗದಸಂಯುಕ್ತಂ ರತ್ನಕುಂಡಲಮಂಡಿತಮ್ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೯ ||

ಉತ್ತುಂಗತುರಗಾರೂಢಂ ಛತ್ರಚಾಮರಸೇವಿತಮ್ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೧೦ ||

ದಿವ್ಯಚಂದನಲಿಪ್ತಾಂಗಂ ಕಸ್ತೂರೀತಿಲಕಾಂಚನಮ್ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೧೧ ||

ಅಚಿಂತ್ಯಾದ್ಭುತಸನ್ಮೂರ್ತಿಂ ಕಿರಿಟೋಜ್ಜಲಮಸ್ತಕಮ್ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೧೨ ||

ಕುಬೇರಕೋಶಾದಾನೀತಂ ದಿವ್ಯಮೌಲೀಂದುಪಾರ್ಷದಮ್ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೧೩ ||

ಮಸ್ತಕಾರ್ಪಿತ ತನ್ಮೌಲಿಂ ವಾದಿರಾಜಸ್ಯ ಸನ್ಮುನೇಃ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೧೪ ||

ಮಾನೇನ ಗುರುಣಾ ದತ್ತೇ ನೂಪರೇ ದಧತಂ ಮುದಾ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೧೫ ||

ತಸ್ಮಾದ್ ಗುರೋಃ ಪ್ರಸಾದಸ್ಯ ಪೂರ್ಣಪಾತ್ರಂ ತಪೋನಿಧಿಮ್ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೧೬ ||

ರಕ್ಷಕಂ ಮಹಿಮಾಸಕ್ತಂ ಸದಾ ಸರ್ವತ್ರ ಸರ್ವದಾ |
ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೧೭ ||

ವಾದಿರಾಜಗುರೋರ್ದೂತ ಭೂತರಾಜಸ್ತುತಿಂ ಸದಾ |
ಯಃ ಪಠೇಚ್ಚಿಂತಿತಂ ಕ್ಷಿಪ್ರಂ ಭವೇತ್ತಸ್ಯ ನ ಸಂಶಯಃ || ೧೮ ||

ಶ್ರೀವಾದಿರಾಜಹೃತ್ಪದ್ಮಸಂಸ್ಥಿತಂ ತುರಗಾನನಮ್ |
ಭಜಾಮಿ ಸತತಂ ಸರ್ವವಿನುತಂ ಚಿತ್ತಶುದ್ಧಯೇ || ೧೯ ||

|| ಇತಿ ಶ್ರೀಭೂತರಾಜ ಸ್ತೋತ್ರಂ ಸಂಪೂರ್ಣಮ್ ||



 

Prasadartham sada narayanabutakyamadarat |
Vadirajagurordutam butarajam nato smyaham || 1 ||

Smaratam niyamenaiva butabityadibanjanam |
Vadirajagurordutam butarajam nato smyaham || 2 ||

Gurordakshinabagastham bajatam badradam drutam |
Vadirajagurordutam butarajam nato smyaham || 3 ||

Brutaih karnavikarnakyairyuktam butaganaih sada |
Vadirajagurordutam butarajam nato smyaham || 4 ||

Kruram goram tatha suram dhanuhkadgadi dharinam |
Vadirajagurordutam butarajam nato smyaham || 5 ||

Pratapavamtam viragryam virabadropamam hrudi |
Vadirajagurordutam butarajam nato smyaham || 6 ||

Raktambaradharam ramyapushpamalasusobitam |
Vadirajagurordutam butarajam nato smyaham || 7 ||

Ratnaugavalayopetam muktaharavibushitam |
Vadirajagurordutam butarajam nato smyaham || 8 ||

Arkabanadasamyuktam ratnakundalamanditam |
Vadirajagurordutam butarajam nato smyaham || 9 ||

Uttungaturagarudham chatrachamara sevitam |
Vadirajagurordutam butarajam nato smyaham || 10 ||

Divyachandanaliptangam kasturitilakanchanam |
Vadirajagurordutam butarajam nato smyaham || 11 ||

Achintyadbutasanmurtim kiritojjalamastakam |
Vadirajagurordutam butarajam nato smyaham || 12 ||

Kuberakosadanitam divyamaulimduparshadam |
Vadirajagurordutam butarajam nato smyaham || 13 ||

Mastakarpita tanmaulim vadirajasya sanmuneh |
Vadirajagurordutam butarajam nato smyaham || 14 ||

Manena guruna datte nupare dadhatam muda |
Vadirajagurordutam butarajam nato smyaham || 15 ||

Tasmad guroh prasadasya purnapatram taponidhim |
Vadirajagurordutam butarajam nato smyaham || 16 ||

Rakshakam mahimasaktam sada sarvatra sarvada |
Vadirajagurordutam butarajam nato smyaham || 17 ||

Vadirajagurorduta butarajastutim sada |
Yah pathecchintitam kshipram bavettasya na samsayah || 18 ||

Srivadirajahrutpadmasamsthitam turagananam |
Bajami satatam sarvavinutam chittasuddhaye || 19 ||
|| iti sributaraja stotram sampurnam ||

dasara padagalu · hanuma · MADHWA · Vadirajaru

Anjaneya amara vandhitha

ಆಂಜನೇಯನೆ ಅಮರವಂದಿತ ಕಂಜನಾಭನÀ ದೂತನೆ ||

ಮಂಜಿನೋಲಗದಂತೆ ಶರಧಿಯ ದಾಂಟಿದ ಮಹಾಧೀರನೆ||

ಆಂಜನೇಯನೆ ನಿನ್ನಗುಣಪರಾಕ್ರಮ ಪೊಗಳಲಳವೆ ಪ್ರಖ್ಯಾತನೆಸಂಜೀವನವ ತಂದು ಕಪಿಗಳ ನಂಜು ಕಳೆದ ಪ್ರಖ್ಯಾತನೆ ||

ಕಾಮನಿಗ್ರಹನೆನಿಸಿ ಸುರರಭಿಮಾನಿ ದೇವತೆಯೆನಿಸಿದೆರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ ||

ಸಿಂಧು ಹಾರಿದೆ ಶೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆತಂದು ಮುದ್ರೆಯನಿತ್ತು ಮಾತೆಯ ಮನವ ಸಂತೊಷಪಡಿಸಿದೆ ||

ಜನಕತನುಜೆಯ ಮನವ ಹರುಷಿಸಿ ವನವ ಕಿತ್ತೀಡಾಡಿದೆದನುಜರನ್ನು ಸದೆದು ಲಂಕೆಯ ಅನಲಗಾಹುತಿ ಮಾಡಿದೆ ||

ಶ್ರೀರಾಮಕಾರ್ಯವ ವಹಿಸಿ ಅಕ್ಷಕುಮಾರನನು ಸಂಹರಿಸಿದೆಘೋರ ರಕ್ಕಸರೆಂಬುವರನು ಮಾರಿವಶವನು ಗೈಸಿದೆ ||

ಭರದಿ ಬಂದು ಶ್ರೀರಾಮಪಾದಕ್ಕೆರಗಿ ಬಿನ್ನಹ ಮಾಡಿದೆಉರಗಗಿರಿ ಹಯವದನನ ಪರಮಭಕ್ತನೆಂದೆನಿಸಿದೆ||

Anjaneyane amaravandita kanjanabana dutane ||pa.||

Manjinolagadante Saradhiya dantida mahadhirane ||a.pa.||

Anjaneyane ninnagunaparakrama pogalalalave prakyatanesanjivanava
Tandu kapigala nanju kaleda prakyatane ||1||

Kamanigrahanenisi surarabimani devateyeniside rama padakkeragi
Nadedu nissima ninendeniside ||2||

Sindhu haride sigradindali bandu sitege namisidetandu mudreyanittu
Mateya manava santoshapadiside ||3||

Janakatanujeya manava harushisi vanava kittidadidedanu
Jarannu sadedu lankeya analagahuti madide ||4||

Sriramakaryava vahisi akshakumarananu samharisidegora
Rakkasarembuvaranu marivasavanu gaiside ||5||

Baradi bandu sriramapadakkeragi binnaha madide uragagiri
Hayavadanana paramabaktanendeniside ||6||

dasara padagalu · MADHWA · Vadirajaru

Dasara padagalu on Vadirajaru

  1. Vadhiraja munipa
  2. Vaadiraaja guru nee daya
  3. Guru vadiraja yatiya nenasuvadu
  4. Guru vadiraja ravikoti teja
  5. Vadiraja asmadguru vadiraja
  6. Vadiraja dhira yativara vadadi
  7. Vadiraja guruve padaradhaka
  8. Vadiraja prativadi gajendra dha
  9. Vadiraja palisu enna
  10. Vadiraja suraraja tanadare
  11. Vadiraja nija modaniduva tava
  12. Sodakshetrave divya kshetra
  13. Vadirajara padava smarisuve
  14. Bavisamira guru sri vadiraja

Suladhi

  1. Vadiraja Suladhi by Vijaya dasa
dasara padagalu · hanuma · MADHWA · Vadirajaru

Ene yaro ninage hanumantaraya

ಎಣೆಯಾರೊ ನಿನಗೆ ಹನುಮಂತರಾಯ ||

ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲಪ್ರಣತಜನಮಂದಾರ ಪವನಸುಕುಮಾರ ||

ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತ
ನಡೆನಡೆದು ಮುದ್ರಿಕೆಯ ಪಡೆದು ಮುದದಿ
ದಡದಡನೆ ಅಂಬುಧಿಯ ದಾಟಿ ಸೀತೆಗೆ ಗುರುತ
ಕೊಡುಕೊಡುತ ಕುಸ್ತ್ತರಿಸಿದಂಥ ಹನುಮಂತ||

ಗರಗರನೆ ಪಲ್ಗಡಿದು ಕಲುಷದೈತ್ಯರನೆಲ್ಲ
ಚರಚರನೆ ಸೀಳಿ ಸಂಭ್ರಮದಿಂದ
ಬಿರಬಿರನೆ ಕಣ್ಬಿಡುತ ಬಿಂಕದಲಿ ಲಂಕೆಯನು
ಸುರಸುರನೆ ಬಾಲದಲಿ ಸುಟ್ಟ ರಣದಿಟ್ಟ ||

ಫಳಫಳನೆ ಆರ್ಭಟದಿಂದ ರಾವಣನ
ನಳನಳನೆ ಬೆಳೆದ ನಂದನವ
ಕಿತ್ತುಖಳಖಳನೆ ನಗುತ ದಶಕಂದರನ ಗುದ್ದಿ
ಬಂದೆಭಳಿಭಳಿರೆ ಹಯವದನ ದಾಸ ನಿಸ್ಸೀಮ ||

Ene yaro ninage hanumantaraya ||pa ||
Ene yaro ninage tribuvanadolagella |
Punata jana mandara pavana sukumara || a. Pa ||

Adigadige ramara padambujake vandisuta |
Nada nadedu mudrikeyagondu mudadi ||
Dhadadhadane ambudhiya dati sitege guru ta |
Koda kodutta kustarisidanta hanumanta || 1 ||

Garagarane halgiridu kalusha daityaranella |
Caracarane sili sambramadindali ||
Biribirine kanbiduta binkadali lankeyanu |
Surasurane baladali sutta rana dhitta || 2 ||

Galagalane arbatisi bapure ravanana
Belebeleda nandanavanava kitti ||
Kalakalane naguta dasakamdharana guddideyo |
Balibalire hayavadanana dasa nirdosha || 3 ||

dasara padagalu · MADHWA · Vadirajaru

Itane kaniro madhwamuni

ಈತನೆ ಕಾಣಿರೊ ಮಧ್ವಮುನಿ ||

ಪರಿಪರಿ ಶ್ರುತಿಗಳೆಂಬ ಗುಹೆಗಳಲಿ ಕೇ-ಸರಿಯಂತೆ
ಚರಿಸುತ್ತಹರಿಯೆ ಸರ್ವೋತ್ತಮನೆಂಬ
ಘೋಷಗಳಿಂದದುರುಳ ವಾದಿಗಳೆಂಬ ನರಿಗಳೋಡಿಸಿದಾತ ||

ಸಕಲಾಗಮಗಳೆಂಬ ಶರಧಿಯೊಳಗೆ
ಯುಕುತಿಯಿಂದಲಿ ಮಥಿಸಿಅಕಳಂಕ ಶ್ರೀಹರಿಯೆಂಬ
ರತ್ನವ ಕಂಡುಮಕುಟದೊಳಿಟ್ಟು ಲೋಕದಿ ಮೆರೆಸಿದಾತ ||

ವೇದಸಾರವೆಂಬ ಈಶತತ್ವವಾದಸುಧೆಯ ಕಲ್ಪಿಸಿಕೊಂಡು
ಆದಿಮೂರುತಿ ಶ್ರೀ ಹಯವದನನ ದಿವ್ಯ
ಪಾದ ಸೇವಕನಾದ ಮಧ್ವಮುನಿಯೆಂಬಾತ ||

Itane kaniro madhwamuni || pa ||

Paripari sutigalemba guhegalalli ke sariyante
Charisutta hariye sarvottamanemba
Goshagalinda durulavadigalemba narigalodisidata || 1 ||

Sakalagamagalemba saradhiyolage
Mukutiyali mathisi akalanka srihariyemba
Ratnava kandu mukutadolagittu lokadi meredata || 2 ||

Vedasaranemba isatatta vada sude ya kalpisikondu
Adimuruti srihayavadanana divsa
Padasevakanada madhvamuniyembata || 3 ||

dasara padagalu · jagannatha dasaru · Vadirajaru

Vaadiraaja guru nee daya

ವಾದಿರಾಜ ಗುರು ನೀ ದಯಮಾಡದೆ
ಈ ದುರಿತಗಳ ಕಳೆದಾದರಿಪರಾರೊ ||pa||

ದೈಶಿಕಾರ್ಯ ವಾಗೀಶಕುವರ ತವ
ದಾಸಸಮೂಹವ ನೀ ಸಲಹೋ ಸದಾ||1||

ನೀ ಗತಿಯೆಂದನುರಾಗದಿ ನಂಬಿದೆ
ಭೋಗಪತೀಶನ ರೋಗವ ಕಳೆದೆ ||2||

ಜನ್ಮಾಧಿವಾಧ್ಯುನ್ಮಾದ ಭ್ರಮ
ನಿಮ್ಮ ಮೊರೆ ಹೊಕ್ಕ ಮೇಲಿನ್ನರಲುಂಟೆ ||3||

ಭೂಮಿಪರುಪಟಳಕಾ ಮಹಿನಾಥನು
ತಾ ಮೈಮರೆದಿರೆ ನೀ ಮುದವಿತ್ತೆ||4||

ಮೋದಮುನಿಮತ ಪಯೋದಧಿ ಪೂರ್ಣ
ವಿಧೋದಯ ಶರಣರ ಕಾದುಕೊ ಧೊರಿಯೆ||5||

ಕಲಿಬಾಧೆಯು ವೆಗ್ಗಳವಾಗಿದೆ ಕಾಯೊ
ಇಳೆಯೊಳು ಯತಿಕುಲತಿಲಕ ಕೃಪಾಳೊ ||6||

ನಿನ್ನೊಶನಾದ ಜಗನ್ನಾಥ ವಿಠಲನ
ಉನ್ನಾಹದಲಿ ತೋರೆನ್ನ ಮನದಲಿ ||7||

Vaadiraaja guru nee daya maadade |
Ee duritagala nivaariparaaro || pa ||

Deshikaarya vaageesha kuvara tava |
Daasa samoohava nee salaho sadaa || 1 ||

Nee gati endanuraagadi nambida |
Bhoga pureeshana rogava kalede || 2 ||

Janmaadhi vyaadhi unmaada vibhramegalu |
Nimmore hokka melinniralunte || 3 ||

Moda munimata mahodadhi chandra|
Poornodaya sharanara kaaduko doreye ||4||

Kali bhaadeyu veggala vaayitu endu |
Ilegilid|yatikula tilaka krupaalu || 5 ||

Ninvashanaada jagannaathaviththalana |
Innaadaru torenna manadali || 6 ||

 

dasara padagalu · gopala dasaru · MADHWA · Vadirajaru

Vadhiraja munipa

ವಾದಿರಾಜ ಮುನಿಪಾ ಹಯಮುಖ
ಪಾದಕಮಲ ಮಧುಪಾ                                   ||ಪ||

ನೀ  ದಯದಲಿ ತವ ಪಾದ ಧ್ಯಾನವನು
ಆದರದಲಿ ಕೊಟ್ಟಾದರಿಸೆನ್ನನು                         ||ಅ.ಪ||

ಮೂಷಕ ಬಿಲದಿಂದ ಉದರಪೋಷಕ ಬರಲಂದು
ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ
ಕ್ಲೇಶ ಕಳೆದು ಸಂತೋಷಗೈಸಿದೆ                       ||೧||

ಮುಂದೆ ಭೂತನರನಾ ಪ್ರೇರಿಸಿ
ಹಿಂದೆ ಒಬ್ಬ ನರನಾ
ನಿಂದಿರಿಸಿದೆ ಆನಂದದಿಂದ ಜನ
ವೃಂದ ನೋಡುತಿರೆ ಅಂದಣ ನಡಿಸಿದ್ಯೋ          ||೨||

ಕ್ಷಿತಿಯೊಳು ಸತಿ ತನ್ನಾ ವಲ್ಲಭ
ಮೃತಿಯೈದಿರೆ ಮುನ್ನಾ
ಅತಿಶೋಕದಿ ಬಂದು ನುತಿಸಲು ಆ
ಪತಿಯನು ಬದುಕಿಸಿ ಹಿತದಿ ರಕ್ಷಿಸಿದೆ                 ||೩||

ನರಪತಿ ವ್ಯಾಧಿಯಲಿ ಬಳಲ್ವದ
ತ್ವರಿತದಿ ನೀ ಕೇಳಿ
ಹರುಷದಿ ವ್ಯಾಧಿಯ ಪರಿಹರಿಸ್ಯವನಿಗೆ
ಹರುಷದಿಂದಲಭಯದ ತೋರಿದೆ                     ||೪||

ಶಾಸ್ತ್ರ ಪ್ರಸಂಗದಲಿ ನಾರಾಯಣ ಭೂತರ ಗೆಲಿದಲ್ಲೆ
ಖ್ಯಾತಿಯಿಂದ ಬಹು ಮಾತನಾಡಿ ಶ್ರೀ
ನಾಥನ ಮಂದಿರ ಪ್ರೀತಿಲಿ ತರಿಸಿದ್ಯೋ                ||೫||

ತುರಗವದನ ಪಾದಾ ಭುಜಗಳಲಿ
ಧರಿಸಿಕೊಂಡು ಮೋದ ಕಡಲೆ ಮಡ್ಡಿಯನು
ಕರದಿಂದುಣಿಸಿದ ಗುರುವರ ಶೇಖರ                    ||೬||

ಆ ಮಹಾ ಗೋಪಾಲವಿಠ್ಠಲ ತಾಮರಸದಳಗಳ
ಧೀಮಂತರಿಗೆ ಸುಕಾಮಿತವನುಕೊಡುವ
ಆ ಮಹಾಮಹಿಮ                                            ||೭||

Vadiraja munipa hayamukapadakamala madhupa ||pa||

Ni dayadali tava pada dhyanavanu
Adaradali kottadarisennanu ||a.pa||

Mushaka biladinda udaraposhaka baralandu
Vasuki Bayadi nimmasanadede bare
Klesa kaledu santoshagaiside ||1||

Munde butanarana prerisi
Hinde obba narana
Nindiriside Anandadinda jana
Vrunda nodutire amdana nadisidyo ||2||

Kshitiyolu sati tanna vallaba
Mrutiyaidire munna
Atisokadi bamdu nutisalu A
Patiyanu badukisi hitadi rakshiside ||3||

Narapati vyadhiyali balalvada
Tvaritadi ni keli
Harushadi vyadhiya pariharisyavanige
Harushadindalabayada toride ||4||

Sastra prasangadali narayana butara gelidalle
Kyatiyinda bahu matanadi sri
Nathana mandira pritili tarisidyo ||5||

Turagavadana pada bujagalali
Dharisikondu moda kadale maddiyanu
Karadindunisida guruvara sekara ||6||

A maha gopalaviththala tamarasadalagala
Dhimantarige sukamitavanukoduva
A mahamahima ||7||