ಶ್ರೀ ರಾಘವೇ೦ದ್ರ ನಿಮ್ಮ ಚಾರುಚರಣವ
ಸಾರಿದೆ ಶರಣ ಮ೦ದಾರ ಕರುಣವ || ಪ ||
ಘೋರ ಭವ ವನಧಿ ತಾರಿಸು ಕರುಣದಿ
ಸೂರಿ ಸುಧೀ೦ದ್ರ ಕುಮಾರ ಉದಾರ || ಅ ||
ಮುನಿರಾಯ ನಿಮ್ಮ ಪಾದವನರುಹ ಧ್ಯಾನ
ಪ್ರಣವ ಸುಸ್ತವನ ಅರ್ಚನೆ ಮಾಳ್ಪ ನಾನಾ
ಜನರ ವಾ೦ಛಿತವೀವ ಗುಣಗಣಪೂರ್ಣ ಜ್ಞಾನ
ಧನವ ಪಾಲಿಸೆನಗೀಕ್ಷಣ ನಿನ್ನಾಧೀನ
ಮನುಜನ ಪ್ರತಿದಿನ ದಣಿದಣಿಸುವುದು
ಘನವೇ ಗುರುಪಾವನತರಚರಿತ || ೧ ||
ಮೂಲರಾಮನಪಾದ ಕೀಲಾಲಜ ಮಧುಪ
ಬಾಲನ ಬಿನ್ನಪ ಲಾಲಿಸೋ ಮುನಿಪ
ತಾಳಲಾರೆನೊ ತಾಪತ್ರಯದ ಸ೦ತಾಪ
ಕೇಳೊ ವಿಮಲಜ್ಞಾನ ಶೀಲ ಸ್ವರೂಪ
ಭೂಲಲನಾಪತಿ ಕೋಲನ೦ದಿನಿ
ಕೂಲಗ ವರಮ೦ತ್ರಾಲಯನಿಲಯ || ೨ ||
ಕಲಿಕಲ್ಮಷದೂರ ಕುಜನಕುಠಾರ
ನಳಿನಾಕ್ಷ ವಿಮಲ ಶ್ರೀತುಲಸಿಯ ಹಾರ
ಗಳಶೋಭಿತ ಕಮ೦ಡಲ ದ೦ಡಧರ
ಅಲವಬೊಧರಮತಜಲಧಿ ವಿಹಾರ
ಸುಲಲಿತ ಕರುಣಾಬ್ಧಿ ಜಗನ್ನಾಥವಿಠ್ಠಲನ
ಒಲುಮೆಯ ಪಡೆದೀ ಇಳೆಯೊಳು ಮೆರೆದೆ || ೩ ||
Sri raghavendra nimma carucaranava
Saride sarana mandara karunava || pa ||
Gora Bava vanadhi tarisu karunadi
Suri sudhindra kumara udara || a ||
Muniraya nimma padavanaruha dhyana
Pranava sustavana arcane malpa nana
Janara vancitaviva gunaganapurna j~jana
Dhanava palisenagikshana ninnadhina
Manujana pratidina danidanisuvudu
Ganave gurupavanataracarita || 1 ||
Mularamanapada kilalaja madhupa
Balana binnapa laliso munipa
Talalareno tapatrayada santapa
Kelo vimalaj~jana sila svarupa
Bulalanapati kolanandini
Kulaga varamantralayanilaya || 2 ||
Kalikalmashadura kujanakuthara
Nalinaksha vimala sritulasiya hara
Galasobita kamandala dandadhara
Alavabodharamatajaladhi vihara
Sulalita karunabdhi jagannathaviththalana
Olumeya padedi ileyolu merede || 3 ||