dasara padagalu · gopala dasaru · MADHWA

mukya Kaarana vishnu sarvesha

ಮುಖ್ಯಕಾರಣ ವಿಷ್ಣು ಸರ್ವೇಶ
ಸಖ್ಯ ಸತ್ವರ ಪೋಷ್ಯ ಸರಸಿಜಾದ್ಯಮರೇಶ||ಪ||

ತಿಳಿವೆಂಬುವ ನೀನೆ ತಿಳಿದು ತಿಳಿಸುವ ನೀನೆ
ತಿಳಿವ ವಸ್ತುವು ನೀನೆ ತೀರ್ಥಪದನೆ
ತಿಳಿದುದಕೆ ಫಲ ನೀನೆ ತಿಳಿಯಗೊಡದವ ನೀನೆ
ತಿಳಿವ ಸ್ವತಂತ್ರ ನಿನ್ನದು ತಿಳಿಸೊ ಸರ್ವೇಶ ||೧||

ಧ್ವನಿ ವರ್ಣ ಉಭಯ ಶಬ್ದದ ವಾಚ್ಯನು ನೀನೆ
ಗುಣ ದೇಶ ಕಾಲ ಕರ್ಮದನು ನೀನೆ
ತನು ಕರಣ ವಿಷಯ ಮನ ಜೀವಸ್ವಾಮಿಯು ನೀನೆ
ಅಣುಮಹಜ್ಜಗದಿ ಬಹಿರಂತರದಿ ವ್ಯಾಪ್ತ ||೨||

ವ್ಯಾಸಕಪಿಲ ಹಯಾಸ್ಯ ಧನ್ವಂತ್ರಿ ವೃಷಭ ಮಹಿ-
ದಾಸ ದತ್ತಾತ್ರಯಾದ್ಯಮಿತ ರೂಪ
ಈಸು ರೂಪದಿ ಜ್ಞಾನವಧಿಕಾರಿಗಳಿಗೊರೆದು
ಪೋಷಕನು ಆದೆ ಕೃಪಾಳುವೆ ಶ್ರೀಶ ||೩||

ಚೇತನನು ನಾನು ನೀ ಚೇಷ್ಟೆ ಮಾಡಿಸಲಾಗ-
ಚೇತನನು ಸರಿ ನೀನು ಸುಮ್ಮನಿರಲು
ಯಾತರವ ನಾನಯ್ಯ ನಿನ್ನಧೀನವು ಎಲ್ಲ
ಚೇತನನಹುದೊ ನೀ ಚಲಿಸೆ ಚಲಿಸುವೆನು ||೪||

ತಿಳಿ ಎನ್ನುವುದಕಾಗಿ ತಿಳಿಯತಕ್ಕದ್ದು ನೀನೆ
ತಿಳಿಸೊ ಸೋತ್ತಮರೆಲ್ಲ ತಿಳಿದ ಶೇಷ
ತಿಳಿವಲ್ಲಿ ತಿಳಿಪಲ್ಲಿ ತಿಳುವಳಿಕೆ ನೀನಾಗಿ
ಚಲಿಸದಲೆ ಮನ ನಿಲ್ಲಿಸೊ ಗೋಪಾಲವಿಠಲ ||೫||

Mukyakarana vishnu sarvesa
Sakya satvara poshya sarasijadyamaresa||pa||

Tilivembuva nine tilidu tilisuva nine
Tiliva vastuvu nine tirthapadane
Tilidudake Pala nine tiliyagodadava nine
Tiliva svatantra ninnadu tiliso sarvesa ||1||

Dhvani varna ubaya Sabdada vacyanu nine
Guna desa kala karmadanu nine
Tanu karana vishaya mana jivasvamiyu nine
Anumahajjagadi bahiramtaradi vyapta ||2||

Vyasakapila hayasya dhanvamtri vrushaba mahi-
Dasa dattatrayadyamita rupa
Isu rupadi j~janavadhikarigaligoredu
Poshakanu Ade krupaluve srisa ||3||

Cetananu nanu ni ceshte madisalaga-
Cetananu sari ninu summaniralu
Yatarava nanayya ninnadhinavu ella
Cetananahudo ni calise calisuvenu ||4||

Tili ennuvudakagi tiliyatakkaddu nine
Tiliso sottamarella tilida sesha
Tilivalli tilipalli tiluvalike ninagi
Calisadale mana nilliso gopalavithala ||5||

dasara padagalu · gopala dasaru · MADHWA

Nane Bramisideno vishayadi

ನಾನೆ ಭ್ರಮಿಸಿದೆನೊ ವಿಷಯದಿ, ಮಮತೆ ನೀನೆ ಸೃಜಿಸಿದೆಯೊ || ಪ. ||

ಅನಾದಿ ನಿಧಾನ ನೀನೆ ತಿಳಿದು ನೋಡೊ || ಅ.ಪ. ||

ಕೇವಲಾನಂದ ಚಿನ್ಮಯರೂಪ ನೈಜಸ್ವಭಾವ ತ್ಯಜಿಸಿ
ಅನ್ಯ-ಭಾವವಾಶ್ರಯಿಸಲು ಶ್ರೀವರ ನಿನ್ನ ಬಂಧಕಶಕುತಿ
ಆವರಿಸೆನ್ನ ಕಾವಗೊಳಿಸಿ ಈ ವಿಧ ಬನ್ನ ಬಡಿಸುತಿದೆ
ಕೈವಲ್ಯದರಸನೆ ನೀ ವಿಚಾರಿಸಿ ಕಾಯೊ || 1 ||

ಸ್ವತಂತ್ರ ನೀನು ಅಸ್ವತಂತ್ರ ನಾನು
ದೂತನ್ನ ಈ ತೆರಕಾತುರಗೊಳಿಪುದು ಏತರಘನವೊ
ಇದರಿಂದಖ್ಯಾತೇನುಫಲವೊ ಎನ್ನೊಳು ನಿನಗೇತಕೀ ಛಲವೊ
ಭವದಿ ಕೈ-ಸೋತು ಬಿನ್ನೈಸುವೆ ಮಾತುಮನ್ನಿಸಿ ಕಾಯೊ || 2 ||

ಕಕ್ಕಸ ಭವದೊಳು ಠಕ್ಕಿಸಿ ಸಿಗಹಾಕಿ ಸಿಕ್ಕುಬಿಡಿಸದೆ
ನೀ-ನಕ್ಕು ಸುಮ್ಮನಿರಲು ದಿಕ್ಕ್ಯಾರೊ ಎನಗೆ
ದಣಿದು ಮೊರೆ-ಯಿಕ್ಕುವೆ ನಿನಗೆ, ಬಂದು ಬೇಗ
ನೀ ತಕ್ಕೊನೀ ಕೈಗೆ ಎನ್ನವಗುಣ ಲೆಕ್ಕಿಸದಲೆ ಕಾಯ್ಯಬೇಕಯ್ಯ ಕೊನೆಗೆ || 3 ||

ಪ್ರಿಯ ನೀನೆನಗೆಂದು ಅಯ್ಯ, ನಿನ್ನ ನಂಬಲು ಮಯ್ಯ ಮರೆಸಿ
ವಿ-ಷಯದುಯ್ಯಾಲೆಗೊಪ್ಪಿಸಿದೆ ಸಯ್ಯಲೊ ದೊರೆಯೆ ಇಂಥವನೆಂದು
ಅಯ್ಯೊ ಮುನ್ನರಿಯೆ ಕರುಣಿ ಎಂಬೊ ಹಿಯ್ಯಳಿ ಸರಿಯೆ
ಇನ್ನಾದರುಕಯ್ಯ ಪಿಡಿಯಲು ಕೀರ್ತಿ ನಿನಗೆಲೊ ಹರಿಯೆ || 4 ||

ಮೊದಲೆಮ್ಮಾರ್ಯರು ನಿನ್ನ ಪದನಂಬಲವರಘ ಸದೆದು
ಸಮ್ಮುದದಿ ಸಂ-ಪದವ ನೀಡಿದೆಯಂತೆ ಅದನು ಮರೆದೆಯೊ
ಶಕುತಿಯು ಸಾಲದಲೆ ಜ-ರಿದೆಯೊ ಜನರು ಪೇಳಿದ ಮಾತು
ಪುಸಿಯೊ ನಿಜ ತೋರಲು ಬುಧನುತ ಗೋಪಾಲವಿಠಲ ಕೀರುತಿಯೊ || 5 ||
Nane Bramisideno vishayadi, mamate nine srujisideyo || pa. ||

Anadi nidhana nine tilidu nodo || a.pa. ||

Kevalananda cinmayarupa naijasvabava tyajisi
Anya-bavavasrayisalu srivara ninna bandhakasakuti
Avarisenna kavagolisi I vidha banna badisutide
Kaivalyadarasane ni vicarisi kayo || 1 ||

Svatantra ninu asvatantra nanu
Dutanna I terakaturagolipudu etaraganavo
Idarindakyatenupalavo ennolu ninagetaki Calavo
Bavadi kai-sotu binnaisuve matumannisi kayo || 2 ||

Kakkasa bavadolu Thakkisi sigahaki sikkubidisade
Ni-nakku summaniralu dikkyaro enage
Danidu more-yikkuve ninage, bandu bega
Ni takkoni kaige ennavaguna lekkisadale kayyabekayya konege || 3 ||

Priya ninenagendu ayya, ninna nambalu mayya maresi
Vi-shayaduyyalegoppiside sayyalo doreye inthavanendu
Ayyo munnariye karuni embo hiyyali sariye
Innadarukayya pidiyalu kirti ninagelo hariye || 4 ||

Modalemmaryaru ninna padanambalavaraga sadedu
Sammudadi sam-padava nidideyante adanu maredeyo
Sakutiyu saladale ja-rideyo janaru pelida matu
Pusiyo nija toralu budhanuta gopalavithala kirutiyo || 5 ||

dasara padagalu · gopala dasaru · MADHWA

eke mamathe kottu

ಏಕೆ ಮಮತೆ ಕೊಟ್ಟು ದಣಿಸುವಿ ರಂಗ
ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ || . ||

ನಿನ್ನ ಹಂಬಲಿಸದೆ ಅನ್ಯ ವಿಷಯಗಳಿ
ಗೆನ್ನನೊಪ್ಪಿಸುವುದು ನೀತವೆ
ಮನ್ನಿಸಿ ದಯದಿ ನೀ ಎನ್ನ ಪಾಲಿಸಲು ನಾ
ನಿನ್ನ ನೇಮಕೆ ಪ್ರತಿಕೂಲನೆ || ||

ತನುವು ತನ್ನದು ಅಲ್ಲ ತನು ಸ೦ಬ೦ಧಿಗಳೆ೦ಬೋ
ತನುವ್ಯಾರೊ ತಾನ್ಯಾರೊ ಅವರಿಗೆ
ಧನ ಮೊದಲಾದ ವಿಷಯಗಳ ಅನುಭವ
ಹಿ೦ದಿನ ದೇಹದ೦ತಲ್ಲವೆ || ||

ಇ೦ದ್ರಿಯ೦ಗಳು ವಿಷಯದಿ೦ದ ತೆಗೆಯಲು
ಗೋವಿ೦ದ ಎನ್ನ ವಶಕೆ ಬಾರವೊ
ಇ೦ದಿರೆ ಅರಸ ಬ್ರಹ್ಮಾದಿವ೦ದಿತ ನಿನ್ನ
ಬ೦ಧಕಶಕುತಿಗೆ ನಮೋ ನಮೋ || ||

ಅರಿತು ಅರಿತು ಎನಗರೆಲವವಾದರು
ವಿರಕುತಿವಿಷಯದಿ ಬಾರದು
ಕರುಣಾಸಾಗರ ನಿನ್ನ ಮರೆಹೊಕ್ಕಲ್ಲದೆ
ಮರುಳು ನೀಗುವ ಬಗೆಗಾಣೆನೊ || ||

ಎ೦ದಿಗೆ ನಿನ್ನ ಚಿತ್ತಕ್ಕೆ ಬರುವುದೊ ಸ್ವಾಮಿ
ಅ೦ದೆ ಉದ್ಧರಿಸಯ್ಯ ಕರುಣಿಯೆ
ಸು೦ದರ ವಿಗ್ರಹ ಗೋಪಾಲವಿಠಲ ಸುಖ
ಸಾ೦ದ್ರ ಭವಮೋಚಕ ನಮೋ ನಮೋ || ||

Eke mamate kottu danisuvi ranga
Ni karunadi enna paliso krushna || pa. ||

Ninna hambalisade anya vishayagali-
Gennanoppisuvudu nitave
Mannisi dayadi ni enna palisalu na
Ninna nemake pratikulane || 1 ||

Tanuvu tannadu alla tanu sambandhigalembo
Tanuvyaro tanyaro avarige
Dhana modalada vishayagala anubava
Himdina dehada0tallave || 2 ||

Imdriyamgalu vishayadi0da tegeyalu
Govimda enna vasake baravo
Imdire arasa brahmadivandita ninna
Bandhakasakutige namo namo || 3 ||

Aritu aritu enagarelavavadaru
Virakutivishayadi baradu
Karunasagara ninna marehokkallade
Marulu niguva bageganeno || 4 ||

Endige ninna cittakke baruvudo svami
Ande uddharisayya karuniye
Sundara vigraha gopalavithala suka
Sandra bavamocaka namo namo || 5 ||

dasara padagalu · gopala dasaru · MADHWA

Ide paalisu ide paalisu

ಇದೇ ಪಾಲಿಸು ಇದೇ ಪಾಲಿಸು ಇದೇ ಪಾಲಿಸಯ್ಯ|
ಪದುಮ ಸಂಭವ ಪಿತನೆ ಪದೋಪದಿಗೆ ಎಮಗಿಂದು||pa||

ಜೀವ ಅಸ್ವಾತಂತ್ರ್ಯ ದೇವ ನಿಜ ಸ್ವಾತಂತ್ರ್ಯ
ಜೀವ ಜಡರೆಲ್ಲ ದೇವರಾಧೀನವೆಂದು|
ಜೀವೋತ್ತಮರಲಿ ಭಕುತಿ ಜಡದಲ್ಲಿ ವಿರಕುತಿ
ಕಾವ ಕೊಲ್ಲುವುದೆಲ್ಲ ಶ್ರೀಹರಿ ಎಂಬ ಜ್ಞಾನ||1||

ಬಿಂಬ ಚಲಿಸಿದರೆ ಪ್ರತಿಬಿಂಬ ಚಲಿಸುವುದು
ಬಿಂಬ ಪೂರ್ಣನು ಪ್ರತಿಬಿಂಬನು ಅಲ್ಪ|
ಉಂಬುಡುವ ಕ್ರಿಯೆಗಳನು ಬಿಂಬ ಮಾಡಿಸಲು
ಪ್ರತಿಬಿಂಬಾಖ್ಯವುಂಟೆಂಬ ಬಿಂಬಾಕ್ರಿಯವು ಎನಗೆ||2||

ಬಂಧನಾ ನಿವೃತ್ತಿಯು ಎಂದಿಗೋ ಎನಗೆಂದು
ಸಂದೇಹದಿಂದ ನಾ ಕೇಳಲಿಲ್ಲ|
ಸುಂದರಮೂರುತಿ ಗೋಪಾಲವಿಠ್ಠಲ
ಕುಂದಿಲ್ಲದಲೆ ಎನಗೆ ನವವಿಧ ಭಕುತಿಯ||3||

Ide palisu ide palisu ide palisayya|
Paduma sambava pitane padopadige emagindu||

Jiva asvatantrya deva nija svatantrya
Jiva jadarella devaradhinavemdu|
Jivottamarali Bakuti jadadalli virakuti
Kava kolluvudella srihari emba j~jana||1||

Bimba calisidare pratibimba calisuvudu
Bimba purnanu pratibimbanu alpa|
Umbuduva kriyegalanu bimba madisalu
Pratibimbakyavuntemba bimbakriyavu enage||2||

Bandhana nivruttiyu emdigo enagendu
Sandehadimda na kelalilla|
Sundaramuruti gopalaviththala
Kundilladale enage navavidha Bakutiya||3||

dasara padagalu · gopala dasaru · MADHWA · Mahalakshmi

Komale Ramaadeviye

ಕೋಮಲೆ ರಮಾದೇವಿಯ ನೋಡಬನ್ನಿರೇ
ಕಮಲಾರಿ ಸಹೋದರಿಯನೀಗ ಬೇಡಬನ್ನಿರೇ ॥ಪ॥

ಇಂದುನಿಭದ ಸುಂದರಿಯರು ಬಂದು ನೋಡಿರೆ
ಕುಂದರದನೆ ಮಂದರೋದ್ಧರನರ್ಧಾಂಗಿಯೇ ॥೧॥

ಭಕ್ತಿಯಿಂದ ಭಜಿಪರಿಗೆ ಮುಕ್ತಿ ಕೊಡುವಳೇ
ಶಕ್ತಿ ಯುಕ್ತಿಗಳನೆ ಕೊಟ್ಟು ಆರತಿ ಮಾಳ್ಪಲೇ ॥೨॥

ದಾಸರಾದರೆ ಶ್ರೀಶನ ರಾಣಿ ಪೋಷಿಸುವಳೇ
ಗೋಪಾಲವಿಠಲ ಘಾಸಿಮಾಡದೆ ಪೋಷಿಸೆನುವಳೇ ॥೩॥

Komale ramadeviya nodabannire
Kamalari sahodariyaniga bedabannire ||pa||

Indunibada sundariyaru bandu nodire
I kundaradane mandaroddharanardhangiye ||1||

Baktiyinda Bajiparige mukti koduvale
Sakti yuktigalane kottu Arati malpale ||2||

Dasaradare srisana rani poshisuvale
Gopalavithala gasimadade poshisenuvale ||3||

dasara padagalu · gopala dasaru · MADHWA · Mahalakshmi

Kaapadale sakalaapadharini

ಕಾಪಾಡೆಲೆ ಸಕಲಾಪಧ್ಹಾರಿಣಿ ಕೊಲ್ಲಾಪುರಗತ ಕಮಲೆ || ಪ.||

ಈ ಪರಿ ಹರಿಯ ದಯಾಪಾತ್ರಳೆ ಶುಭನೂಪುರಾದಿ ಸುಕಲಾಪೆ ಶೋಭಿತೆ
ಭ್ರೂ-ಚಾಪ ಚಲನದಿಂದ ಪವಮಾನನಿ-ಗೆ ಪದದೇ ಭವತಾಪಗಳಳಿದು || ಅ.ಪ. ||

ಇಂದೀವರಮಂದಿರನಂದಿನಿ ಚಂದ್ರಜಯಿಪ ವದನೆಬೃಂದಾರಕ ಮುನಿವಂದಿತ
ಪದಯುಗೆ ಕುಂದಕುಟ್ಮಲರದನೆ ಮದನೆ ಮುಕುಂದ ಹೃದಯಸದನೆ ಇಂದ್ರನೀಲನಭ
ಸುಂದರತನು ಗುಣ-ಸಾಂದ್ರ ಇಂದುಮುಖಿ ಮಂದರಧರಗೋ-ವಿಂದ ಬಂಧುನುತೆ
ಬೃಂದಾವನಪತಿನಂದನಂದನನಾನಂದಿನಿ ವಂದಿತೆ || 1 ||

ಕನ್ಯಾಮಣಿ ಜಗನ್ಮಾನ್ಯಾಮೃತ ಪಾವನ್ನಾಧರ ಬಿಂಬೆಘನ ಕಲಶ ಕುಚವನ್ನು
ಧರಿಪ ಕಟಿಸಣ್ಣ ಘನನಿತಂಬೆ ಅಂಬೆ ಚಿನ್ನಪುತ್ಥಳಿ ಬೊಂಬೆಅನ್ನವಸನ
ಧನಧಾನ್ಯಕಾಗಿ ಪರ-ರನ್ನ ಯಾಚಿಸಿ ಬಲು ಖಿನ್ನನಾಗುತಲಿ
ನಿನ್ನನು ಮರೆದೆನು ಎನ್ನವಗುಣಗ-ಳನ್ನು ಎಣಿಸದಿರು ಮನ್ನಿಸು ಬಿನ್ನಪ || 2 ||

ಲೋಲಕುಂಡಲ ಕಪೋಲ ಶೋಭಿತ ಕೀಲಾಲಜಾತಪಾಣಿಕೇಳಿಲಿ
ಯಮುನಾಕೂಲದಿ ಹರಿದು-ಕೂಲಚೋರನ ರಾಣಿ ಜಾಣೆ
ಶುಶ್ರೋಣೆ ಜಗತ್ರಾಣೆಕಾಳಕೂಟಸಮ ಕೀಳು ವಿಷಯದಲಿಬೀಳುವುದೆನ್ನ
ಮನ ಕೀಳಿಸಿ ಶ್ರೀಗೋಪಾಲವಿಠಲನನುಗಾಲ ಸೇವಿಪಂತೆಶೀಲವೀಯೆಯೆಂದು ಕೇಳುವೆ ಲಾಲಿಸೆ || 3 ||

Kapadele sakalapadhharini kollapuragata kamale || pa.||

I pari hariya dayapatrale subanupuradi sukalape sobite
Bru-capa calanadinda pavamanani-ge padade bavatapagalalidu || a.pa. ||

Indivaramandiranandini chandrajayipa vadanebrundaraka munivandita
Padayuge kundakutmalaradane madane mukunda hrudayasadane indranilanaba
Sundaratanu guna-sandra indumuki mandaradharago-vinda bandhunute
Brundavana pati nandanandanananamdini vamdite || 1 ||

Kanyamani jaganmanyamruta pavannadhara bimbegana kalasa kucavannu
Dharipa katisanna gananitambe ambe cinnaputthali bombe^^annavasana
Dhanadhanyakagi para-ranna yacisi balu kinnanagutali
Ninnanu maredenu ennavagunaga-Lannu enisadiru mannisu binnapa || 2 ||

Lolakundala kapola sobita kilalajatapanikelili
Yamunakuladi haridu-kulacorana rani jane
Susrone jagatranekalakutasama kilu vishayadalibiluvudenna
Mana kilisi srigopalavithalananugala sevipantesilaviyeyendu keluve lalise || 3 ||

dasara padagalu · Gowri · MADHWA

Gauri devige saki tare Araati

ಗೌರಿ ದೇವಿಗೆ ಸಖಿ ತಾರೆ ಆರುತಿ||pa||

ಮುನಿಜನ ವಂದಿತೆ ಮನದಭಿ ಮಾನಿಯೆ |
ಗಣಪತಿ ಷಣ್ಮುಖ ಜನನಿ ದೇವಿಗೆ ||1||

ಶಂಕರಿ ಭಕ್ತಸುಶಂಕರಿ ದೈತ್ಯ ಭ
ಯಂಕಾರಿಯಾದ ಶಶಾಂಕ ಮುಖಿಗೆ ||2||

ಶಾಮಸುಂದರನಾಮ ಪತಿ ಸಹ
ನೇಮದಿ ಪಠಿಸುವ ಹೈಮಾವತಿಗೆ ||3||

Gauri devige saki tare Aruti||pa||

Munijana vandite manadabi maniye |
Ganapati shanmuka janani devige ||1||

Sankari baktasusankari daitya Ba
Yamkariyada sasanka mukige ||2||

Samasundaranama pati saha
Nemadi pathisuva haimavatige ||3||

 

dasara padagalu · Gowri · MADHWA

Palise ambe gunagane gauri

ಪಾಲಿಸೆ ಅಂಬೆ ಗುಣಗಣೆ ಗೌರಿ ||pa||

ಕಾಮಿತ ಫಲ ಪರಿಪೂರ್ಣಳೆ
ಚಿಂತಾಮಣಿಗುಣಪೂರ್ಣಳೆ ||1||

ಮಂಗಳ ಮೂರ್ತಿಯ ಜನನಿ
ಮಂಗಳಪ್ರದ ಸುರ ಕಾಮಿನಿ ||2||

ನರಸಿಂಹವಿಠ್ಠಲದಾಸಿ
ಸರಸಿಜಮುಖಿ ಮೃದುಹಾಸಿ||3||

Palise ambe gunagane gauri ||pa||

Kamita Pala paripurnale
Cintamanigunapurnale ||1||

Mangala murtiya janani
Mamgalaprada sura kamini ||2||

Narasimhaviththaladasi
Sarasijamuki mruduhasi||3||

dasara padagalu · MADHWA

Karunisi varagowri

ಕರುಣಿಸು ವರಗೌರಿ ಭರದಿಂದ ವರವನ್ನೂ
ಶರಣಾಪ್ತ ಬೇಡುವೆ ನಿನ್ನಾ ||

ಪಾರ್ವತೀ ತಾಯೇ ಪಾಮರರಿಗೆ ಪರಮಪಾವನ್ನೆ
ಪರಿಪಾಲಿಸುತ್ತ ವರವಿತ್ತು ನೀ ಕಾಪಾಡೆ ||1||

ಪತಿಪಾದ ಸೇವಾ ಸತತದೊಳಿತ್ತು ಸತಿಗೆ ಮಾಗಲ್ಯ
ನಿರತವೀಯೆ ತಾಯೆ ಸಕಲಕೆ ಶ್ರೀ ಗೌರಿ||2||

ಪಾದ ಸೋಸಿಲಿ ಭಜಿಪೆ
ವರವೀಯೆ ತಾಯೆ ಶಂಕರಿ ಕಾಯೆ ದೇಹಿಮೆ ||3||
Karunisu varagauri Baradinda varavannu
Saranapta beduve ninna ||

Parvati taye pamararige paramapavanne
Paripalisutta varavittu ni kapade ||1||

Patipada seva satatadolittu satige magalya
Nirataviye taye sakalake sri gauri||2||

Pada sosili Bajipe
Varaviye taye Sankari kaye dehime ||3||

dasara padagalu · Gowri · MADHWA

Aratiyanettire narerellaru

ಆರತಿಯನೆತ್ತಿರೆ ನಾರೇರೆಲ್ಲರು||pa||

ಕಾರುಣ್ಯ ಪಾಂಗಳಿಗೆ ಗೌರಿದೇವಿಗೆ||a.pa||

ದೇವರಾಜ ಸೇವ್ಯಮಾನ ಪಾವನಾಂಘ್ರಿಗೆ
ಜೀವಕೋಟಿಗನ್ನವಿತ್ತು ಕಾವ ದೇವಿಗೆ ||1||

ಸರ್ವ ಸೌಭಾಗ್ಯವೀವ ಶರ್ವಜಾಯೆಗೆ
ಪರ್ವತೇಶ ತನಯಳಿಗೆ ಗರ್ವರಹಿತೆಗೆ ||2||

ರಕ್ಷೌಘ ಧ್ವಂಸಿನಿಗೆ ದಕ್ಷ ಕನ್ಯೆಗೆ
ಲಕ್ಷ್ಮೀಕಾಂತನ ಭಗಿನಿ ಲಕ್ಷಣಾಂಗಿಗೆ ||3||

Aratiyanettire narerellaru||pa||

Karunya pangalige gauridevige||a.pa||

Devaraja sevyamana pavanangrige
Jivakotigannavittu kava devige ||1||

Sarva saubagyaviva sarvajayege
Parvatesa tanayalige garvarahitege ||2||

Rakshauga dhvamsinige daksha kanyege
Lakshmikamtana Bagini lakshanangige ||3||