dasara padagalu · MADHWA · Vadirajaru

Gubbiyalo govinda govinda

ಗುಬ್ಬಿಯಾಳೊ ಗೋವಿಂದ ಗೋವಿಂದಾ |
ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ ||ಪ||

ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊ
ನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ ||೧||

ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊ
ಗೋವಿಂದನ್ನ ದಯದಿಂದ ಘೋರದುರಿತ ನಾಶನವು ಗುಬ್ಬಿಯಾಳೊ ||೨||

ವಿಷ್ಣುಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೇ ಗುಬ್ಬಿಯಾಳೊ
ಮಧುಸೂದನನ ಧ್ಯಾನದಿಂದ ಅತಿಶಯವು ಇಹುದೊ ಗುಬ್ಬಿಯಾಳೊ ||೩||

ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊ
ವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ ||೪||

ಶ್ರೀಧರನ್ನ ನೆನೆದರೆ ಸಿರಿ ನಮಗೆ ಒಲಿವಳೊ ಗುಬ್ಬಿಯಾಳೊ
ಹೃಷೀಕೇಶನ ಧ್ಯಾನದಿಂದ ಹೃದಯ ಪರಿಶುದ್ಧವೊ ಗುಬ್ಬಿಯಾಳೊ ||೫||

ಪದ್ಮನಾಭ ನಮ್ಮೆಲ್ಲರ ಪಾಲಿಸಿ ರಕ್ಷಿಪನೊ ಗುಬ್ಬಿಯಾಳೊ
ದಾಮೋದರನ ನೆನೆದರೆ ಪಾಮರತ್ವ ಬಿಡಿಸುವನೊ ಗುಬ್ಬಿಯಾಳೊ ||೬||

ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯಾಳೊ
ವಾಸುದೇವನ ದಯದಿಂದ ವಂಶ ಉದ್ಧಾರವೊ ಗುಬ್ಬಿಯಾಳೊ ||೭||

ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೊ
ಅನಿರುದ್ಧನ ಸೇವಿಸೆ ಪುನೀತರಹೆವೊ ಗುಬ್ಬಿಯಾಳೊ ||೮||

ಪುರುಷೋತ್ತಮನ್ನ ಪುರಾಣಪುರುಷನೆಂದು ತಿಳಿಯಿರೊ ಗುಬ್ಬಿಯಾಳೊ
ಅಧೋಕ್ಷಜ ನಮ್ಮೆಲ್ಲರಿಗಾಧಾರವಾಗಿಹನೊ ಗುಬ್ಬಿಯಾಳೊ ||೯||

ನಾರಸಿಂಹದೇವರು ನಮ್ಮ ಕುಲದೈವವೊ ಗುಬ್ಬಿಯಾಳೊ
ಅಚ್ಯುತ ಲಕ್ಷ್ಮಿಯ ಕೂಡಿ ಸಚ್ಚಿದಾನಂದನೊ ಗುಬ್ಬಿಯಾಳೊ ||೧೦||

ಜನಾರ್ದನದೇವರು ಜಗಕೆಲ್ಲ ಶ್ರೇಷ್ಠರೊ ಗುಬ್ಬಿಯಾಳೊ
ಉಪೇಂದ್ರನು ನಮ್ಮ ಅಪರಾಧವ ಕ್ಷಮಿಸುವನೊ ಗುಬ್ಬಿಯಾಳೊ ||೧೧||

ಹರಿನಾಮಾಮೃತಕೆ ಸರಿ ಧರೆಯೊಳಗೆ ಇಲ್ಲವೊ ಗುಬ್ಬಿಯಾಳೊ
ಶ್ರೀಕೃಷ್ಣ ರಂಗೇಶಯೆಂಬೊ ಸಿದ್ಧಕ್ರಿಯ ಬಲ್ಲರೆ ಗುಬ್ಬಿಯಾಳೊ ||೧೨||

ಈ ಗುಬ್ಬಿ ಪಾಡುವರಿಗೆ ಇಹ ಪರವು ಸಂತತವು ಗುಬ್ಬಿಯಾಳೋ
ಧರಣಿಯೊಳು ಆಚಂದ್ರಾರ್ಕ ತಾರಕವಾಗಿಹರು ಗುಬ್ಬಿಯಾಳೊ ||೧೩||

ಹಯವದನನ್ನ ಪಾದಧ್ಯಾನ ನಿತ್ಯ ಮರೆಯದೆ ನೀ ನೆನೆ ಮನವೆ
ನಮ್ಮ ಹಯವದನನ್ನ ಪಾದವೇ ನಿತ್ಯ ಮನವೆ ಗುಬ್ಬಿಯಾಳೊ ||೧೪ ||

Gubbiyalo govinda govinda |
Govinda govindanemdu neneyiro gubbiyalo ||pa||

Kesavanna nenedare klesa pariharavu gubbiyalo
Narayanana dhyanadinda narakabayavillavo gubbiyalo ||1||

Madhavanna nenedare manobishta koduvonu gubbiyalo
Govindanna dayadinda goradurita nasanavu gubbiyalo ||2||

Vishnubajaneyilladavage vaishnavara janmavunte gubbiyalo
Madhusudanana dhyanadinda atisayavu ihudo gubbiyalo ||3||

Trivikramana nenedare savitriyagiharo gubbiyalo
Vamanadevaru namage varagala koduvoru gubbiyalo ||4||

Sridharanna nenedare siri namage olivalo gubbiyalo
Hrushikesana dhyanadinda hrudaya parisuddhavo gubbiyalo ||5||

Padmanaba nammellara palisi rakshipano gubbiyalo
Damodarana nenedare pamaratva bidisuvano gubbiyalo ||6||

Sankarshanana dhyanadinda santana abivruddhiyu gubbiyalo
Vasudevana dayadinda vamsa uddharavo gubbiyalo ||7||

Pradyumnana nenedare bupradakshine Palavu gubbiyalo
Aniruddhana sevise punitarahevo gubbiyalo ||8||

Purushottamanna puranapurushanemdu tiliyiro gubbiyalo
Adhokshaja nammellarigadharavagihano gubbiyalo ||9||

Narasimhadevaru namma kuladaivavo gubbiyalo
Acyuta lakshmiya kudi saccidanamdano gubbiyalo ||10||

Janardanadevaru jagakella sreshtharo gubbiyalo
Upendranu namma aparadhava kshamisuvano gubbiyalo ||11||

Harinamamrutake sari dhareyolage illavo gubbiyalo
Srikrushna rangesayembo siddhakriya ballare gubbiyalo ||12||

I gubbi paduvarige iha paravu santatavu gubbiyalo
Dharaniyolu acandrarka tarakavagiharu gubbiyalo ||13||

Hayavadananna padadhyana nitya mareyade ni nene manave
Namma hayavadananna padave nitya manave gubbiyalo ||14 ||

dasara padagalu · kesava nama · MADHWA · Vadirajaru

Krushna murari kesava murari

ಕೃಷ್ಣ ಮುರಾರಿ ಕೇಶವ ಮುರಾರಿಅಚ್ಚುತಾನಂತ ಗೋವಿಂದ ಮುರಾರಿ||pa||

ವೇಷಧಾರಿಯಾಗಿ ಬಂದು ಅಸುರರ ಸಂಹರಿಸಿಭೂಸುರರಿಗ್ವೊರವನಿತ್ತ್ಯೋ ಕೇಶವ ಮುರಾರಿ ||1||

ನಾ ತಾಳಲಾರೆನೊ ಲೋಕಾಧಿಪತಿಯೆ ಕಾಯೊಅನಾಥರಕ್ಷಕ ನಾರಾಯಣನೆ ಮುರಾರಿ ||2||

ಮನಸು ನಿಲ್ಲದು ದೇವ ಮಾರನಟ್ಟುಳಿಗೆನ್ನಮನಕಾಗಿ ನೀನೆ ಬಾರೊ ಮಾಧವ ಮುರಾರಿ||3||

ಅನೇಕ ಗೋವ್ಗಳ ಕಾಯ್ದ ಗೋಪಾಲಮೂರುತಿಗೋಪಿಯರರಸ ಗೋವಿಂದ ಮುರಾರಿ ||4||

ಕಟ್ಟಿದ ಕಾಮನೆಯ ಬಿಟ್ಟು ಕಳಚಿ ಮನ-ದಿಷ್ಟಾರ್ಥವನೀವ ವಿಷ್ಣು ಮುರಾರಿ ||5||

ಮಧುರವಾಕ್ಯಗಳಿಂದ ಮಂದಿರಕಾಗಿ ಬಾರೊಮನಸಿಜನಯ್ಯ ಮಧುಸೂದನ ಮುರಾರಿ ||6||

ತಿದ್ದಿದ ಕಸ್ತುರಿತಿಲಕ ತಿಗುರಿದ ಪರಿಮಳಗಂಧಮುದ್ದು ನಸುನಗೆಯ ತ್ರಿವಿಕ್ರಮ ಮುರಾರಿ||7||

ಕಾಮಿನಿ ಅಗಲಿಬಂದು ಸೀಮೆನಾಳುವೆÀನೆಂದುನೇಮವಾಕ್ಯದಿ ನಿಂದ ವಾಮನ ಮುರಾರಿ ||8||

ಶ್ರೀಯರಸ ಮೇಳದಿ ರಮಿಸಿ ಬಹುಕಾಲದಿಸಿಂಧುಶಯನ ಶ್ರೀಧರನೆ ಮುರಾರಿ ||9||

ಋಷಿಗಳಿಗ್ವರವಿತ್ತು ಬೃಂದಾವನದಲ್ಲಿ ನಿಂದುಹರುಷವಾರಿಧಿ ಹೃಷಿಕೇಶ ಮುರಾರಿ ||10||

ಪಾವನ್ನ ಮೂರುತಿ ಪರಮದಯಾಳು ನೀನೆಪಾಲಿಸೊ ಶ್ರೀಪದ್ಮನಾಭ ಮುರಾರಿ||11||

ದಾನವರ ಮರ್ದಿಸಿ ಸುಮನಸರಿಗೊಲಿದದಾನದತ್ತನೆ ದಾಮೋದರನೆ ಮುರಾರಿ ||12||

ಶಂಕೆಯಿಲ್ಲದೆ ಗೆಲಿಸು ಶಂಖಚಕ್ರವ ಧÀರಿಸಿ ಅ-ಲಂಕಾರವಾದ ಸಂಕರ್ಷಣನೆ ಮುರಾರಿ ||13||

ಶೇಷಶಯನ ಸಾಧು ಸಜ್ಜನರ ಪೋಷನೀ ಸಲವೊ ವಾಸುದೇವ ಮುರಾರಿ ||14||

ಇದ್ದ ಗೋಪೇರಮನೆಯ ಕದ್ದು ಬೆಣ್ಣೆಯ ಮೆದ್ದಪದ್ಮದಳಾಕ್ಷ ಪ್ರದ್ಯುಮ್ನ ಮುರಾರಿ ||15||

ಅನಿಮಿಷನಾಗಿ ಬಂದು ಯಾದವರನೆಲ್ಲ ಗೆಲಿದಆ ಮಹಾಮಹಿಮ ಅನಿರುದ್ಧ ಮುರಾರಿ||16||

ಪುನಗು ಕಸ್ತೂರಿಗಂಧ ಪರಿಮಳಪುಷ್ಪದಿಂದ ಪುಣ್ಯಮೂರುತಿ ಪುರುಷೋತ್ತಮನೆ ಮುರಾರಿ ||17||

ರಕ್ಷಿಸೋ ನೀ ಎನ್ನ ಅಕ್ಷಯದಿಂದಲಿರಕ್ಷಿಸೋ ಅವನಿ ಅಧೋಕ್ಷಜ ಮುರಾರಿ ||18||

ನಾನೇನ ಪೇಳಲಿ ನಗೆನಗೆಯಲ್ಲಿ ಅಕ್ಷಿಕ್ರೂರವಾಯಿತು ನಾರಸಿಂಹ ಮುರಾರಿ ||19||

ಮೆಚ್ಚಿದೆ ನಾ ನಿನ್ನ ಪಕ್ಷಿವಾಹನ ಸ್ವಾಮಿಮುಚ್ಚುಮರೆಗಳ್ಯಾಕೊ ಅಚ್ಚುತ ಮುರಾರಿ ||20||

ಜಾಣತನದಿ ಪೋಗಿ ಜಾರಸ್ತ್ರೀಯರನ್ನುಒಡಗೂಡಿ ಆಡಿದ ಜನಾರ್ದನ ಮುರಾರಿ||21||

ಉಗುರಲ್ಲಿ ಹಿರಣ್ಯಕನ ಸೀಳಿ ಉರದಲ್ಲಿ ಮಾಲೆಯ ಧರಿಸಿಉಬ್ಬಲ್ಲಿ ಮೆರೆದ ಉಪೇಂದ್ರ ಮುರಾರಿ ||22||

ಹಿರಣ್ಯಾಕ್ಷತನಯನಂದು ಕರೆಯೆ ಕಂಬದಿ ಬಂದಗರುವದಿಂದಲೆ ನರಹರಿಯೆ ಮುರಾರಿ ||23||

ಅಟ್ಟಡವಿಯ ತಪಸು ಎಷ್ಟುದಿನವೊ ಸ್ವಾಮಿಪಟ್ಟಣಕಾಗಿ ಬಾರೊ ಕೃಷ್ಣಮುರಾರಿ ||24||

ಎಲ್ಲರ ಸಲಹಿದ ಫುಲ್ಲಲೋಚನ ಸ್ವಾಮಿಪಾಲಿಸೊ ಶ್ರೀಹಯವದನ ಮುರಾರಿ ||25||

Krushna murari kesava murari^^accutananta govinda murari||pa||

Veshadhariyagi bamdu asurara samharisibusurarigvoravanittyo kesava murari ||1||

Na talalareno lokadhipatiye kayo^^anatharakshaka narayanane murari ||2||

Manasu nilladu deva maranattuligennamanakagi nine baro madhava murari||3||

Aneka govgala kayda gopalamurutigopiyararasa govinda murari ||4||

Kattida kamaneya bittu kalaci mana-dishtarthavaniva vishnu murari ||5||

Madhuravakyagalimda mandirakagi baromanasijanayya madhusudana murari ||6||

Tiddida kasturitilaka tigurida parimalagandhamuddu nasunageya trivikrama murari||7||

Kamini agalibamdu simenaluveànemdunemavakyadi nimda vamana murari ||8||

Sriyarasa meladi ramisi bahukaladisindhusayana sridharane murari ||9||

Rushigaligvaravittu brundavanadalli ninduharushavaridhi hrushikesa murari ||10||

Pavanna muruti paramadayalu ninepaliso sripadmanaba murari||11||

Danavara mardisi sumanasarigolidadanadattane damodarane murari ||12||

Sankeyillade gelisu sankacakrava dhaàrisi a-lankaravada sankarshanane murari ||13||

Seshasayana sadhu sajjanara poshani salavo vasudeva murari ||14||

Idda goperamaneya kaddu benneya meddapadmadalaksha pradyumna murari ||15||

Animishanagi bandu yadavaranella gelida^^A mahamahima aniruddha murari||16||

Punagu kasturigandha parimalapushpadinda punyamuruti purushottamane murari ||17||

Rakshiso ni enna akshayadindalirakshiso avani adhokshaja murari ||18||

Nanena pelali nagenageyalli akshikruravayitu narasimha murari ||19||

Meccide na ninna pakshivahana svamimuccumaregalyako accuta murari ||20||

Janatanadi pogi jarastriyarannu^^odagudi adida janardana murari||21||

Uguralli hiranyakana sili uradalli maleya dharisi^^ubballi mereda upendra murari ||22||

Hiranyakshatanayanandu kareye kambadi bandagaruvadinmdale narahariye murari ||23||

Attadaviya tapasu eshtudinavo svamipattanakagi baro krushnamurari ||24||

Ellara salahida pullalocana svamipaliso srihayavadana murari ||25||

dasara padagalu · kesava nama · MADHWA · Vadirajaru

Ranga baro narasinga baro

ರಂಗ ಬಾರೊ ನರಸಿಂಗ ಬಾರೊ ||pa||

ಅಂಗಜನಯ್ಯ ಕೋನೇರಿತಿಮ್ಮ ರಂಗ ಬಾರೊ ||ಅ.ಪ.||

ಸಾಸಿರ ಮೂರುತಿ ವಾಸವವಂದ್ಯನೆಸಾಸಿರನಾಮದೊಡೆಯನೆ
ಸಾಸಿರ ನಾಮದೊಡೆಯನೆ ನರಹರಿಕೇಶವ ನಮ್ಮ ಮನೆದೈವ ||1||

ವಾರಣವಂದ್ಯನೆ ಕಾರುಣ್ಯರೂಪನೆಪುರಾಣಗಳಲ್ಲಿ ಪೊಗಳುವಪುರಾಣಗಳಲ್ಲಿ
ಪೊಗಳುವ ನರಹರಿನಾರಾಯಣ ನಮ್ಮ ಮನೆದೈವ||2||

ಯಾದವಕುಲದಲ್ಲಿ ಸಾಧುಗಳರಸನೆಭೇದಿಸಿ ದನುಜರ ಗೆಲಿದನೆಭೇದಿಸಿ
ದನುಜರ ಗೆಲಿದನೆ ನರಹರಿಮಾಧವ ನಮ್ಮ ಮನೆದೈವ ||3||

ದೇವೆಂದ್ರ ಮಳೆಗರೆಯೆ ಗೋವರ್ಧನ ಗಿರಿಯೆತ್ತಿಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿಆ
ಗಿರಿಯ ಶ್ರೀಕೃಷ್ಣ ಕೊಡೆಮಾಡಿ ಕಾಯಿದನೆಗೋವಿಂದ ನಮ್ಮ ಮನೆದೈವ ||4||

ಸೃಷ್ಟಿಗೆ ಕರ್ತನೆ ದುಷ್ಟಕಂಸನ ಗೆಲಿದು ಶಿಷ್ಟ ಪರಿಪಾಲನೆನಿಸಿದ
ಶಿಷ್ಟಪರಿಪಾಲನೆನಿಸಿದ ನರಹರಿವಿಷ್ಣುವೆ ನಮ್ಮ ಮನೆದೈವ||5||

ಮಧುವೆಂಬೊ ದೈತ್ಯನ ಮುದದಿಂದ ಗೆಲಿದನೆವಿದುರನ ಮನೆಯಲಿ ನಲಿದುಂಡವಿದುರನ
ಮನೆಯಲಿ ನಲಿದುಂಡ ನರಹರಿಮಧುಸೂದನ ನಮ್ಮ ಮನೆದೈವ ||6||

ಚಕ್ರವ ಪಿಡಿದನೆ ಭೂಚಕ್ರವ ಗೆಲಿದನೆಅಕ್ರೂರನೊಡನೆ ಮಧುರೆಗೆ ಅಕ್ರೂರನೊಡನೆ
ಮಧುರೆಗೆ ಪೋದ ತ್ರಿ-ವಿಕ್ರಮ ನಮ್ಮ ಮನೆದೈವ||7|\

ಸಾಮವನೋದುತ್ತ ದಾನವ ಬೇಡುತ್ತನಾಮದ ಮಹಿಮೆ ಪೊಗಳುತ್ತನಾಮದ
ಮಹಿಮೆ ಪೊಗಳುತ್ತ ನರಹರಿವಾಮನ ನಮ್ಮ ಮನೆದೈವ||8||

ಶ್ರೀಧರ ಎಸಿಸಿದ ಶ್ರೀವತ್ಸ ಲಾಂಛನಶ್ರೀಧರ ಗೋಪೀತನಯನೆ ಶ್ರೀಧರ
ಗೋಪೀತನಯನೆ ನರಹರಿಶ್ರೀಧರ ನಮ್ಮ ಮನೆದೈವ ||9||

ಋಷಿಜನ ವಂದ್ಯನೆ ಬಿಸಜನಾಭನೆ ದೇವಋಷಿಜನರಿಗೆಲ್ಲ ಅಭಯವಋಷಿಜನರಿಗೆಲ್ಲ
ಅಭಯವ ಕೊಡುವೋನೆಹೃಷಿಕೇಶನೆ ನಮ್ಮ ಮನೆದೈವ||10||

ಪದುಮಸಂಭವಪಿತ ಪದುಮದಾಮೋದರದಿಂದಭಯವ ಕೊಡುವೋನೆ
[ಪದುಮ]ದಿಂದಭಯವ ಕೊಡುವೋನೆ ನರಹರಿಪದುಮನಾಭನೆ ನಮ್ಮ ಮನೆದೈವ ||11||

ನಾಮದ ಮಹಿಮೆಯ ಪ್ರೇಮದಿ ಪೊಗಳಲುಕಾಮಿತಾರ್ಥಗಳ ಕೊಡುವೋನೆ
ಕಾಮಿತಾರ್ಥಗಳ ಕೊಡುವೋನೆ ನರಹರಿದಾಮೋದರ ನಮ್ಮ ಮನೆದೈವ ||12||

ಸಂಕಟಗಳ ತರಿವೋನೆ ಪಂಕಜನಾಭನೆಶಂಕೆಯಿಲ್ಲದೆ ಅಸುರರಶಂಕೆಯಿಲ್ಲದೆ
ಅಸುರರ ಸಂಹರಿಸಿದಸಂಕರ್ಷಣ ನಮ್ಮ ಮನೆದೈವ ||13||

ವಸುದೇವತನಯನೆ ಶಿಶುಪಾಲನ ಗೆಲಿದನೆವಶವ ಮಾಡಿದೆಯೊ ತ್ರಿಪುರರವಶವ
ಮಾಡಿದೆಯೊ ತ್ರಿಪುರರ ನರಹರಿವಾಸುದೇವ ನಮ್ಮ ಮನೆದೈವ||14||

ಶುದ್ಧಸ್ವರೂಪನೆ ಶುದ್ಧ ಭಕ್ತರನು ಸಲಹಯ್ಯಹದ್ದುವಾಹನನಾದ ದೇವನೆಹದ್ದುವಾಹನನಾದ
ದೇವನೆ ನರಹರಿಪ್ರದ್ಯುಮ್ನ ನಮ್ಮ ಮನೆದೈವ ||15||

ವನಜಲೋಚನ ಹರಿ ವಿನಯ ಉಳ್ಳವನೆಧ್ವನಿಕೇಳಿ ಬಂದ ಕುಬುಜೆಯ
ಧ್ವನಿಕೇಳಿ ಬಂದ ಕುಬುಜೆಯ ನರಹರಿಅನಿರುದ್ಧ ನಮ್ಮ ಮನೆದೈವ ||16||

ಪಾರಿಜಾತದ ಹೂವ ನಾರಿಗೆ ಇತ್ತನೆವೀರ ದಾನವರ ಗೆಲಿದನೆವೀರ ದಾನವರ
ಗೆಲಿದನೆ ನರಹರಿಪುರುಷೋತ್ತಮ ನಮ್ಮ ಮನೆದೈವ ||17||

ಅಕ್ಷಯಪದವೀವ ಪಕ್ಷಿವಾಹನಸ್ವಾಮಿಕುಕ್ಷಿಯೊಳೀರೇಳು ಭುವನವಕುಕ್ಷಿಯೊಳೀರೇಳು
[ಭುವನವನಾಳಿದ] ನರಹರಿ ಅ-ಧೋಕ್ಷಜ ನಮ್ಮ ಮನೆದೈವ||18||

ನರಕಾಸುರನ ಕೊಂದು ಹಿರಣ್ಯನ ಮರ್ದಿಸಿಕರುಳ ಬಗೆದು ವನಮಾಲೆ ಹಾಕಿಕರುಳ
ಬಗೆದು ವನಮಾಲೆ ಹಾಕಿದ ಹರಿನರಸಿಂಹನೆ ನಮ್ಮ ಮನೆದೈವ||19||

ಅಚ್ಚ್ಚುತಾನಂತನೆ ಸಚ್ಚಿದಾನಂದನೆ[ಮಚ್ಚಾವತಾರದಿ] ನಲಿದನೆ[ಮಚ್ಚಾವತಾರದಿ]
ನಲಿದನೆ ನರಹರಿಅಚ್ಚುತ ನಮ್ಮ ಮನೆದೈವ ||20||

ಜಾನಕಿರಮಣನೆ ದಾನವಾಂತಕನೆದೀನರಕ್ಷಕನೆ ಸಲಹಯ್ಯದೀನರಕ್ಷಕನೆ
ಸಲಹಯ್ಯ ನರಹರಿಜನಾರ್ದನ ನಮ್ಮ ಮನೆದೈವ ||21||

ಅಪರಿಮಿತಮಹಿಮನೆ ವಿಪರೀತ ಚರಿತನೆ[ಗುಪಿತವೇಷಗಳ] ತಾಳಿದನೆ
ತಾಳಿದ ನರಹರಿಉಪೇಂದ್ರ ನಮ್ಮ ಮನೆದೈವ ||23||

ಹರನ ಭಸ್ಮಾಸುರನು ಮರಳಿ ಬೆನ್ನ್ಹತ್ತಲುತರುಣಿರೂಪವನು ತಾಳಿದನೆ
ತರುಣಿರೂಪವನು ತಾಳಿದ ನರಹರಿ ಶ್ರೀ-ಹರಿಯೆ ನಮ್ಮ ಮನೆದೈವ ||23||

ಕೃಷ್ಣಾವತಾರದಲಿ ದುಷ್ಟರ ಗೆಲಿದನೆವೃಷ್ಣಿಯರ ಕುಲತಿಲಕನೆ ವೃಷ್ಣಿಯರ
ಕುಲತಿಲಕನೆ ನರಹರಿ ಶ್ರೀ-ಕೃಷ್ಣನೆ ನಮ್ಮ ಮನೆದೈವ ||24||

ಇಪ್ಪತ್ತು ನಾಲ್ಕು ನಾಮಂಗಳ ಪಾಡುವೆನುಅಪ್ಪ ಕೇಶವನ ಚರಿತೆಯನುಅಪ್ಪ
ಕೇಶವನ ಚರಿತೆಯನು ಪಾಡಲುಒಪ್ಪಿಸಿಕೊಳ್ಳುವ ಹಯವದನ||25||

Ranga baro narasinga baro ||pa||

Angajanayya koneritimma ranga baro ||a.pa.||

Sasira muruti vasavavandyanesasiranamadodeyane
Sasira namadodeyane naraharikesava namma manedaiva ||1||

Varanavandyane karunyarupanepuranagalalli pogaluvapuranagalalli
Pogaluva naraharinarayana namma manedaiva||2||

Yadavakuladalli sadhugalarasanebedisi danujara gelidanebedisi
Danujara gelidane naraharimadhava namma manedaiva ||3||

Devendra malegareye govardhana giriyetti^^A giriya srikrushna kodemadi^^A
Giriya srikrushna kodemadi kayidanegovinda namma manedaiva ||4||

Srushtige kartane dushtakamsana gelidu sishta paripalanenisida
Sishtaparipalanenisida naraharivishnuve namma manedaiva||5||

Madhuvembo daityana mudadinda gelidanevidurana maneyali nalidumdavidurana
Maneyali nalidumda naraharimadhusudana namma manedaiva ||6||

Cakrava pididane bucakrava gelidane^^akruranodane madhurege akruranodane
Madhurege poda tri-vikrama namma manedaiva||7||

Samavanodutta danava beduttanamada mahime pogaluttanamada
Mahime pogalutta naraharivamana namma manedaiva||8||

Sridhara esisida srivatsa lancanasridhara gopitanayane sridhara
Gopitanayane naraharisridhara namma manedaiva ||9||

Rushijana vandyane bisajanabane deva^^rushijanarigella abayava^^rushijanarigella
Abayava koduvonehrushikesane namma manedaiva||10||

Padumasambavapita padumadamodaradindabayava koduvone
[paduma]dindabayava koduvone naraharipadumanabane namma manedaiva ||11||

Namada mahimeya premadi pogalalukamitarthagala koduvone
Kamitarthagala koduvone naraharidamodara namma manedaiva ||12||

Sankatagala tarivone pankajanabanesankeyillade asurarasankeyillade
Asurara samharisidasankarshana namma manedaiva ||13||

Vasudevatanayane sisupalana gelidanevasava madideyo tripuraravasava
Madideyo tripurara naraharivasudeva namma manedaiva||14||

Suddhasvarupane Suddha Baktaranu salahayyahadduvahananada devanehadduvahananada
Devane naraharipradyumna namma manedaiva ||15||

Vanajalocana hari vinaya ullavanedhvanikeli banda kubujeya
Dhvanikeli bamda kubujeya narahari^^aniruddha namma manedaiva ||16||

Parijatada huva narige ittanevira danavara gelidanevira danavara
Gelidane naraharipurushottama namma manedaiva ||17||

Akshayapadaviva pakshivahanasvamikukshiyolirelu buvanavakukshiyolirelu
[buvanavanalida] narahari a-dhokshaja namma manedaiva||18||

Narakasurana kondu hiranyana mardisikarula bagedu vanamale hakikarula
Bagedu vanamale hakida harinarasimhane namma manedaiva||19||

Acccutanamtane saccidanandane[maccavataradi] nalidane[maccavataradi]
Nalidane narahari^^accuta namma manedaiva ||20||

Janakiramanane danavanakanedinarakshakane salahayyadinarakshakane
Salahayya naraharijanardana namma manedaiva ||21||

Aparimitamahimane viparita caritane[gupitaveshagala] talidane
Talida narahari^^upendra namma manedaiva ||23||

Harana basmasuranu marali bennhattalutarunirupavanu talidane
Tarunirupavanu talida narahari sri-hariye namma manedaiva ||23||

Krushnavataradali dushtara gelidanevrushniyara kulatilakane vrushniyara
Kulatilakane narahari sri-krushnane namma manedaiva ||24||

Ippattu nalku namangala paduvenu^^appa kesavana cariteyanu^^appa
Kesavana cariteyanu padalu^^oppisikolluva hayavadana||25||

dasara padagalu · MADHWA · purandara dasaru

Tala beku takka mela beku

ತಾಳ ಬೇಕು ತಕ್ಕ ಮೇಳ ಬೇಕು ಶಾಂತ

ವೇಳೆ ಬೇಕು ಗಾನವನ್ನು ಕೇಳಬೇಕೆಂಬುವರಿಗೆ

ಯತಿಪ್ರಾಸವಿರಬೇಕು ಗತಿಗೆ ನಿಲ್ಲಿಸಬೇಕು
ರತಿಪತಿಪಿತನೊಳು ಅತಿ ಪ್ರೇಮವಿರಬೇಕು

ಗಳ ಶುದ್ಧವಿರಬೇಕು ತಿಳಿದು ಪೇಳಲು ಬೇಕು
ಕಳವಳ ಬಿಡಬೇಕು ಕಳೆಮುಖವಿರಬೇಕು

ಅರಿತವರಿರಬೇಕು ಹರುಷ ಹೆಚ್ಚಲಿ ಬೇಕು
ಪುರಂದರವಿಠಲನೆ ಪರದೈವವೆನಬೇಕು

Tala beku takka mela beku santa

Vele beku ganavannu kelabekembuvarige

Yatiprasavirabeku gatige nillisabeku
Ratipatipitanolu ati premavirabeku

Gala suddhavirabeku tilidu pelalu beku
Kalavala bidabeku kalemukavirabeku

Aritavarirabeku harusha heccali beku
Purandaravithalane paradaivavenabeku

dasara padagalu · MADHWA · purandara dasaru

Nageyu barutide enage nageyu

ನಗೆಯು ಬರುತಿದೆ ಎನಗೆ ನಗೆಯು ಬರುತಿದೆ

ಜಗದೊಳಿರುವ ಜಾಣರೆಲ್ಲ ಹಗರಣ ಮಾಡುವುದನೆ ಕಂಡು

ಪರರ ವನಿತೆಯೊಲುಮೆಗೊಲಿದು
ಹರುಷದಿಂದ ಅವಳ ಬೆರೆದು
ಹರಿವ ನೀರೊಳಗೆ ಮುಳುಗಿ
ಬೆರಳನೆಣಿಸುತಿಹರ ಕಂಡು

ಪತಿಯ ಸೇವೆ ಬಿಟ್ಟಿ ಪರ
ಪತಿಯ ಕೂಡೆ ಸರಸವಾಡಿ
ಸತತ ಮೈಯ ತೊಳೆದು ಹಲವು
ವ್ರತವ ಮಾಳ್ಪ ಸತಿಯ ಕಂಡು

ಹೀನ ಗುಣದ ಮನದೊಳಿಟ್ಟು
ತಾನು ವಿಷದ ಪುಂಜನಾಗಿ
ಮೌನಿ ಪುರಂದರವಿಠಲನ್ನ
ಧ್ಯಾನ ಮಾಡುವವನ ಕಂಡು
Nageyu barutide enage nageyu barutide

Jagadoliruva janarella hagarana maduvudane kandu

Parara vaniteyolumegolidu
Harushadinda avala beredu
Hariva nirolage mulugi
Beralanenisutihara kandu

Patiya seve bitti para
Patiya kude sarasavadi
Satata maiya toledu halavu
Vratava malpa satiya kandu

Hina gunada manadolittu
Tanu vishada punjanagi
Mauni purandaravithalanna
Dhyana maduvavana kandu
Tala beku takka mela beku santa

dasara padagalu · MADHWA · purandara dasaru

Kagada bandide namma

ಕಾಗದ ಬಂದಿದೆ ನಮ್ಮ ಕಮಲನಾಭನದು, ಈ
ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೊ ||ಪ||

ಕಾಮಕ್ರೋಧವ ಬಿಡಿರೆಂಬೊ ಕಾಗದ ಬಂದಿದೆ
ನೇಮನಿಷ್ಠೆಯೊಳಿರೆಂಬೊ ಕಾಗದ ಬಂದಿದೆ
ತಾಮಸ ಜನರನ್ನು ಕೂಡದಿರೆಂಬೋ ಕಾಗದ ಬಂದಿದೆ , ನಮ್ಮ
ಕಾಮನಯ್ಯನು ತಾನೆ ಬರೆದ ಕಾಗದ ಬಂದಿದೆ ||

ಹೆಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ
ಹೊನ್ನಿನಾಸೆ ಬಿಡಿರೆಂಬೊ ಕಾಗದ ಬಂದಿದೆ
ಮಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ , ನಮ್ಮ
ಕಮಲನಾಭನು ತಾನೆ ಬರೆದ ಕಾಗದ ಬಂದಿದೆ ||

ಗೆಜ್ಜೆ ಕಾಲ್ಕಟ್ಟಿರೆಂಬೊ ಕಾಗದ ಬಂದಿದೆ
ಹೆಜ್ಜೆ ಹೆಜ್ಜೆಗೆ ಹರಿಯೆನ್ನಿರೆಂಬೊ ಕಾಗದ ಬಂದಿದೆ
ಲಜ್ಜೆ ಬಿಟ್ಟು ಕುಣಿಯಿರೆಂಬೊ ಕಾಗದ ಬಂದಿದೆ , ನಮ್ಮ
ಪುರಂದರವಿಟ್ಠಲ ತಾನೆ ಬರೆದ ಕಾಗದ ಬಂದಿದೆ ||
Kagada bandide namma kamalanabanadu, I
Kagadavannu odikondu kalava kaleyiro ||pa||

Kamakrodhava bidirembo kagada bandide
Nemanishtheyolirembo kagada bandide
Tamasa janarannu kudadirembo kagada bandide , namma
Kamanayyanu tane bareda kagada bandide ||1||

Henninase bidirembo kagada bandide
Honninase bidirembo kagada bandide
Manninase bidirembo kagada bandide , namma
Kamalanabanu tane bareda kagada bandide ||2||

Gejje kalkattirembo kagada bandide
Hejje hejjege hariyennirembo kagada bandide
Lajje bittu kuniyirembo kagada bandide , namma
Purandaravitthala tane bareda kagada bandide ||

dasara padagalu · hanuma · MADHWA · purandara dasaru

Ma maje bapure balire hanumanta

ಮಾ ಮಝೆ ಭಾಪುರೇ ಭಳಿರೇ ಹನುಮಂತ ಪ

ರಾಮಪದ ಸೇವಿಪ ವೀರ ಹನುಮಂತ ಅ.ಪ

ಹುಟ್ಟುತಲೇ ಹೊನ್ನ ಕಚ್ಚುಟವ ಕುಂಡಲವೆರಿಸಿ
ನಿಷ್ಠೆಯಲಿ ರಘುಪತಿಯ ಪಾದವನೇ ಕಂಡು
ಧಿಟ್ಟ ಹರಿದಾಡಿ ಮನಮುಟ್ಟಿ ಪೂಜಿಸಲಜನ
ಪಟ್ಟಕನುವಾದ ಸಿರಿವಂತ ಹನುಮಂತ ೧

ಅಂಬರಕೆ ಪುಟಿನೆಗೆದು ಅಂಬುಧಿಯ ನೆರೆ ದಾಟಿ
ಕುಂಭಿಣಿಯ ಮಗಳಿಗುಂಗುರವಿತ್ತೆ
ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆ
ಗಂಭೀರ ವೀರಾದಿವೀರ ಹನುಮಂತ ೨

ಅತಿ ದುರುಳ ರಕ್ಕಸನು ರಥದ ಮೇಲಿರಲು
ರಘುಪತಿಯು ಪದಚರಿಯಾಗಿ ನಿಂತಿರಲು
ಪೃಥಿವಿ ಗಗನಕೆ ಬೆಳೆದು ರಥವಾದೆ ಒಡೆಯನಿಗೆ
ಅತಿ ಭಯಂಕರ ಸತ್ಯವಂತ ಹನುಮಂತ ೩

ಒಡೆಯ ಉಣಕರೆಯಲಂದಡಿಗಡಿಗೆ ಕೈ ಮುಗಿದು
ದೃಡ ಭಕುತಿಯಿಂದ ಮೌನದಲಿ ಕುಳಿತು
ಎಡೆಯ ಕೊಂಡೊದ್ದೋಡಿ ಗಗನದಲಿ ಸುರರಿಗೆ
ಕೊಡುತ ಸವಿದುಂಡ ಗುಣವಂತ ಹನುಮಂತ ೪

ಪ್ರಥಮದಲಿ ಹನುಮಂತ ದ್ವಿತಿಯದಲಿ ಕಲಿಭೀಮ
ತೃತಿಯದಲಿ ಗುರು ಮಧ್ವಮುನಿಯು ಎನಿಸಿ
ಪ್ರತಿಯಿಲ್ಲದಲೆ ಮೆರೆದೆ ಪುರಂದರ ವಿಠಲನ
ಭಕ್ತ ನಿನಗಾರು ಸರಿ ವಿಜಯ ಹನುಮಂತ ೫

Ma maje bapure balire hanumanta ||pa||

Ramapada sevipa vira hanumanta ||a.pa||

Huttutale honna kaccutava kundalaverisi
Nishtheyali ragupatiya padavane kandu
Dhitta haridadi manamutti pujisalajana
Pattakanuvada sirivanta hanumanta 1

Ambarake putinegedu ambudhiya nere dati
Kumbiniya magaligunguravitte
Bembidade lankeyanu sambramadi sakagitte
Gambira viradivira hanumanta 2

Ati durula rakkasanu rathada meliralu
Ragupatiyu padacariyagi nintiralu
Pruthivi gaganake beledu rathavade odeyanige
Ati Bayankara satyavanta hanumanta 3

Odeya unakareyalandadigadige kai mugidu
Druda Bakutiyinda maunadali kulitu
Edeya kondoddodi gaganadali surarige
Koduta savidunda gunavanta hanumanta 4

Prathamadali hanumanta dvitiyadali kalibima
Trutiyadali guru madhvamuniyu enisi
Pratiyilladale merede purandara vithalana
Bakta ninagaru sari vijaya hanumanta 5

dasara padagalu · MADHWA · purandara dasaru

Purandara Dasaru – Vasudevana namavaliya

Purandara dasaru describes his devaranamas(Total numbers + topics) through a song “Vasudevana naamavaliya”.

Total number of devaranamas composed by Purandara Dasaru: 4,75,000

ವಾಸುದೇವನ ನಾಮಾವಳಿಯ ಕ್ಲಿಪ್ತಿಯನುವ್ಯಾಸರಾಯರ ದಯದಿಂದ ಬಣ್ಣಿಪೆನು||

ಕೇದಾರ ರಾಮೇಶ್ವರ ಕೇರಳ ಭೂತಳದ
ಪಾದಾರವಿಂದಕ್ಷೇತ್ರ ಪ್ರತಿಕ್ಷೇತ್ರವು
ಆದರದಿ ಲಕ್ಷದಿಪ್ಪತ್ತೈದು ಸಾವಿರ ಕೃತಿಯ
ವೇದಶಾಸ್ತ್ರಪುರಾಣ ಸಮ್ಮತದಿಂದ || ೧ ||

ಮಧ್ವರಾಯರ ಮಹಿಮೆ ಮಹಾಗುರುಪರಂಪರೆ ಪ್ರ-
ಸಿದ್ದ ವ್ಯಾಸರಾಯರ ಪರಿಯಂತವು
ಶುದ್ಧ ತಂತ್ರಸಾರೋಕ್ತಿ ಸೇವಕ ತಾರತಮ್ಯ
ಉದ್ಧರಿಸೈದು ಸಾವಿರವ ಪೇಳಿದೆನು || ೨ ||

ಬ್ರಹ್ಮಲೋಕ ಕೈಲಾಸ ಭರದಿ ದಿಕ್ಪಾಲರ
ಪೇರ್ಮ ತೊಂಭತ್ತು ಸಾವಿರದಿ ಪೇಳಿದೆನು
ಸಮ್ಮತದಿ ಹಲವು ಕಥಾಸಾರ ತೊಂಭತ್ತು ಸಾವಿರ
ಮೊಮ್ಮನದಿ ಪೇಳಿದೆನು ಕೇಳಿ ಜನರು || ೩ ||

ಅವರವರ ಮೂರ್ತಿಧ್ಯಾನ ಅವರವರ ಕೀರ್ತಿಮಾನ
ವಿವರದಿಂದಲಿ ನಾ ನಿಮಗೆ ವಿಸ್ತರಿಸಿದೆನು
ಘನತೆ ಅಗಣಿತ ಗಂಡಕಿಯ ಶಿಲಾಮೂರ್ತಿ
ಅನಘ ಕಳ್ಯಾಣ ಕಥೆ ಅರವತ್ತುಸಾವಿರ || ೪ ||

ಆಹ್ನೀಕಗುಣವು ಜನ್ಮಾಷ್ಟಮಿ ಏಕಾದಶಿಯ
ನಿರ್ಣಯವನು ಶ್ರುತಿಸ್ಮೃತಿ ಸಹಿತದ
ವರ್ಣಿಸಿದೆ ಕ್ಷೀರಾಬ್ಧಿಶಯನ ಅಹೋಬ-
ಲ ನರಸಿಂಹ ಮೂರಿತಿಗಳ ಶ್ರೀನಾಮಗಳ || ೫ ||

ಸುಳಾದಿ ಅರವತ್ತುನಾಲ್ಕುಸಾವಿರ ಬಹುತರ ನಾಮಾ
ವಳಿಯು ಇಪ್ಪತ್ತೈದುಸಾವಿರವಾಗಿದೆ
ತಿಳಿದು ಶ್ವೇತದ್ವೀಪ ಅನಂತಾಸನ ವೈಕುಂಠ
ಸಲೆ ಶೇಷನ ಚರಿತ್ರೆಯನು ಪೇಳಿದೆನು || ೬ ||

ಇಂತು ನಾಲ್ಕುಲಕ್ಷ ಎಪ್ಪತ್ತೈದುಸಾವಿರ ಕೃತಿಯು
ಕಂತುಜನಕನ ನಾಮ ಘನಮಹಿಮೆ
ಸಂತಸದಿ ಶ್ರುತಿಸ್ಮೃತಿ ಸಮ್ಮತದಿಂದ
ಪುರಂದರವಿಠಲ ವಾಸಮುನಿಗಳು ಪೇಳಿದರು || ೭ ||

Vasudevana namavaliya kliptiyanuvyasarayara dayadinda bannipenu||

Kedara ramesvara kerala butalada
Padaravindakshetra pratikshetravu
Adaradi lakshadippattaidu savira krutiya
Vedasastrapurana sammatadinda || 1 ||

Madhvarayara mahime mahaguruparampare pra-
Sidda vyasarayara pariyantavu
Suddha tantrasarokti sevaka taratamya
Uddharisaidu savirava pelidenu || 2 ||

Brahmaloka kailasa Baradi dikpalara
Perma tombattu saviradi pelidenu
Sammatadi halavu kathasara tombattu savira
Mommanadi pelidenu keli janaru || 3 ||

Avaravara murtidhyana avaravara kirtimana
Vivaradindali na nimage vistarisidenu
Ganate aganita gandakiya silamurti
Anaga kalyana kathe aravattusavira || 4 ||

Ahnikagunavu janmashtami ekadasiya
Nirnayavanu srutismruti sahitada
Varniside kshirabdhisayana ahoba-
La narasimha muritigala srinamagala || 5 ||

Suladi aravattunalkusavira bahutara nama
Valiyu ippattaidusaviravagide
Tilidu svetadvipa anantasana vaikuntha
Sale seshana caritreyanu pelidenu || 6 ||

Intu nalkulaksha eppattaidusavira krutiyu
Kantujanakana nama Ganamahime
Santasadi srutismruti sammatadinda
Purandaravithala vasamunigalu pelidaru || 7 ||


Purandara Dasaru Compositions

  1. Devaranamas by Purandara dasaru
  2. ugabhoga by Purandara dasaru(Part 1)
  3. ugabhoga by Purandara dasaru(Part 2)

Dasara padagalu composed by various Hari Dasaru on Purandara dasaru

Suladhi on Purandara dasaru by Vijaya Dasaru

dasara padagalu · MADHWA · purandara dasaru

Hariyadhika haranadhika endu

ಹರಿಯಧಿಕ ಹರನಧಿಕ ಎಂದು ಹೋರಾಡದಿರಿ
ಹರಿಹರರ ಭಕ್ತರೇ ಸಾಕ್ಷಿ ಲೋಕದೊಳು ||||

ಹರಿಯೆಂದು ಪ್ರಹ್ಲಾದ ಬಂದ ದುರಿತವ ಗೆಲಿದ
ಹರನೆಂದು ಅವನ ಪಿತ ತಾನೆ ಅಳಿದ
ಹರಿಯೆಂದು ವಿಭೀಷಣನು ಸ್ಥಿರಪಟ್ಟವೈದಿದ
ಹರನೆಂದು ರಾವಣನು ಹತನಾದನಯ್ಯ ||||

ಹರಿಯೆಂದು ಭೀಮ ಪರಿಪೂರ್ಣಕಾಮನು ಆದ
ಹರನೆಂದ ಜರಾಸಂಧ ಹತನಾದ
ಹರಿಯ ಬಾಗಿಲ ಕಾಯ್ದ ಬಲಿ ಭಾಗ್ಯವಂತನಾದ
ಹರನ ಬಾಗಿಲ ಕಾಯ್ದ ಬಾಣನಳಿದ ||||

ಹರನ ವರವನು ಪಡೆದ ಭಸ್ಮಾಸುರನು ಅವನ
ಶಿರದಲ್ಲಿ ತನ್ನ ಕರವಿಡಲು ಬರಲು
ಹರಿ ನೀನೆ ಗತಿಯೆಂದು ತ್ರಿಪುರಾರಿ ಮೊರೆಯಿಡಲು
ವರದ ಪುರಂದರ ವಿಠಲ ಕಾಯ್ದದರಿಯ ||||

Hariyadhika haranadhika endu horadadiri
Hari-harara baktare sakshi lokadolu ||pa||

Hariyendu prahlada banda duritava gelida
Haranendu avana pita tane alida
Hariyendu vibishananu sthira-pattavaidida
Haranendu ravananu hatanadanayya ||1||

Hariyendu bima paripurnakamanu Ada
Haranenda A jarasandha hatanada
Hariya bagila kayda bali bagyavantanada
Harana bagila kayda bananalida ||2||

Harana varavanu padeda basmasuranu avana
Siradalli tanna karavidalu baralu
Hari nine gatiyendu tripurari moreyidalu
Varada purandara vithala kayda-dariya ||3||

dasara padagalu · MADHWA · purandara dasaru

Hari hararu samarendu ariyada

ಹರಿ ಹರರು ಸಮರೆಂದು ಅರಿಯದಜ್ಞಾನಿಗಳು
ಹರನ ಹೃದಯದೊಳಿರುವ ಹರಿಯ ತಾವರಿಯರು ||ಪ||

ಶರಧಿ ಮಥನದೊಳಂದು ಸಿಂಧುಸುತೆ ಬಂದಾಗ
ಹರಿ ಹರ ವಿರಿಂಚಿ ಮೊದಲಾದ ಸುರರ
ವರರಾರೆಂದು ನೋಡಿ ಶಂಕೆಯ ಬಿಟ್ಟು ಸಿರಿದೇವಿ
ಹರಿ ಸರ್ವವರನೆಂದು ಮಾಲೆ ಹಾಕಿದಳು ||

ಹರಿನಾಮ ಕ್ಷೀರವನು ಹರನಾಮ ನೀರನು
ಕ್ಷೀರ ನೀರೊಂದಾದುದಂತೆ ಇಹದು ಪರರು
ಪರ ತತ್ವವರಿಯದ ನರ ತಾನು ಹರಿಹರರು
ಸರಿಯೆಂದು ನರಕಕ್ಕೆ ಒಳಗಾಗುತಿಹನು ||

ಕ್ಷೋಣಿಯೊಳು ಬಾಣನಾ ತೋಳುಗಳ ಕಡಿವಾಗ
ಏಣಾಂಕಧರ ಬಾಗಿಲೊಳಗೆ ಇರಲು
ಕಾಣಿಪರೆ ಜನರೆಲ್ಲ ಹರಿಪರನು ತಾನೆಂದು
ಗುಣಪೂರ್ಣ ಪುರಂದರ ವಿಟ್ಠಲನು ಪರನು ||
Hari hararu samarendu ariyadaj~janigalu
Harana hrudayadoliruva hariya tavariyaru ||pa||

Saradhi mathanadolandu sindhusute bandaga
Hari hara virinci modalada surara
Varararendu nodi Sankeya bittu siridevi
Hari sarvavaranendu male hakidalu ||

Harinama kshiravanu haranama niranu
Kshira nirondadudante ihadu pararu
Para tatvavariyada nara tanu harihararu
Sariyendu narakakke olagagutihanu ||

Kshoniyolu banana tolugala kadivaga
Enankadhara bagilolage iralu
Kanipare janarella hariparanu tanendu
Gunapurna purandara vitthalanu paranu ||