kshetra suladhi · MADHWA · sulaadhi · Vijaya dasaru

ತೋತಾದ್ರಿ / Thothadhri

ಧ್ರುವತಾಳ
ಅಚ್ಯುತಾನಂತ ಮುಕುಂದ ಭಾರ್ಗವಿರಮಣ |
ಎಚ್ಚರಾದೈವ ಜಗದೇಕ ಮೂರ್ತಿಯಾ ಕಂಡೆ |
ಅಚ್ಚಾ ಮುತ್ತಿನ ಮುಕುಟಾ ಅರುಣೋದಯ ಕೆಂಪು |
ಪಚ್ಚಿದ ನೊಸಲ ಕಸ್ತೂರಿ ತಿಲಕನ ಕಂಡೆ |
ಅಚ್ಚಾ ಪೂವಿನ ಸರಾ ಕೊರಳೊಳು ತೂಗುತಿದೆ |
ಪಚ್ಚದ ಪದಕಾ ಉರದಲ್ಲಿ ಪೊಳೆವದು ಕಂಡೆ |
ನಿಚ್ಚಟ ಮದುವಣಿಗ ತೋತಾದ್ರಿಪುರ ವಾಸ |
ಹೆಚ್ಚಿನ ದೈವ ನಮ್ಮ ವಿಜಯವಿಠಲ ಸಂಘ್ರಿಗೆ |
ಎಚ್ಚರಿಕೆಯಾ ಪೇಳಿ ಶಿರವಾಗಿ ತುತಿಸಿಕಂಡೆ ||1||
ಮಟ್ಟತಾಳ
ಕುಂಡಲದ ಬೆಳಗು ಚಂಪನ ಶುಚಿಯಂತೆ |
ಗಂಡ ಸ್ಥಳದಲ್ಲಿ ಕಂಡೆನೊ ಎಳೆದುಳಿಸಿ |
ದಂಡೆ ಕೌಸ್ತುಭಮಣಿ ದುಂಡು ಮುತ್ತಿನ ಹಾರ |
ಕೊಂಡಾಡತೇನು ಮಂಡಲದೊಳಗುದ್ದಂಡ ತೋತಾದ್ರೀಶಾ |
ಖಂಡಪುರುಷ ಶ್ರೀ ವಿಜಯವಿಠಲನ್ನಾ |
ತಂಡ ತಂಡದಲಿಂದಾ ಕಂಡೆನು ಮನದೊಳಗೆ ||2||
ತ್ರಿವಿಡಿತಾಳ
ಮಂಜು ಭಾಷಣ ತೇಜೋಪುಂಜಾಪುಷ್ಕರಾಜಾಕ್ಷಾ |
ಕಂಜಾರಿಹಸ್ತ ಶೋಭಂಜಯಾ ಕಟಿ ಚತುರ |
ಮುಂಜಾರಾಗೆಳವಾ ನಿರಂಜನವಾಸಾ ಕಾ |
ಳಂಜಾಯಾದೇವಾ [ಪ್ರ] ಭಂಜನ್ನನೋಡಿಯಾ |
ಕುಂಜಾರವರದ ತೋತಾದ್ರಿ ನಿಲಯಾ ಮೃ |
ತ್ಯುಂಜಯನುತಾ ನಮ್ಮ ವಿಜಯ ವಿಠಲಾ ವಜ್ರಾ |
ಪಂಜರ ಭಕ್ತರಿಗೆ ಪ್ರಾಂಜಲಿಯಲಿಕಂಡೆ ||3||
ಅಟ್ಟತಾಳ
ಇಂದ್ರವಂದಿತ ಪಾದ ಚಂದ್ರ ವಂದಿತ ಪಾದ |
ಸ್ಕಂಧವಂದಿತ ಪಾದ ಸುಂದರ ಪಾರವಾರ |
ಇಂದು ರವಿ ಖಗೇಂದ್ರ ವಂದಿತ ಪಾದ |
ವೃಂದಾರಕ ವೃಂದವಂದಿತ ಸಿರಿ ಪಾದ |
ಅಂದಿಗೆ ಗೆಜ್ಜೆಲಿ ಅಂದವಾದ ಪಾದ |
ಇಂದು ತೋತಾದ್ರಿಲಿನಿಂದ ದೇವನ ಪಾದ |
ಮಂದರಧರ ಸಿರಿ ವಿಜಯ ವಿಠಲ ರೇಯಾ |
ಪೊಂದಿದವರ ಭವ ಬಂಧ ನಾಶನ ಪಾದ ||4||
ಆದಿತಾಳ
ನಖಶಿಖ ಪರಿಯಂತ ಸಕಲಾಭರಣವಿಟ್ಟಾ |
ಸುಖ ಸಾಂದ್ರ ಲಕುಮಿನಾಯಕ ನಾಟಕಧಾರಾ |
ಅಕುಟಿಲರಾಪ್ತ ಕುಹಕರ ಸಂಹಾರಕನೆ |
ಮಕುಟಧಾರ ನಮ್ಮ ತೋತಾದ್ರಿ ಪುರವಾಸಾ |
ಧಿಕಾದೈವ ವಿಜಯ ವಿಠಲ ರೇಯನ ವ |
ನಕೆ ತಂದ ಇಂದು ನಾನು ಧನ್ಯನಾದೆ ಧರೆಯೊಳಗೆ ||5||
ಜತೆ
ಭೂಮಿಯೊಳಾವಾವಾನಾದರು ಮನ್ನಿಸೆ |
ಸ್ವಾಮಿ ತೋತಾದ್ರೀಶಾ ವಿಜಯವಿಠಲ ಕಾಯ್ವಾ ||6||

dhruvatALa
acyutAnaMta mukuMda BArgaviramaNa |
eccarAdaiva jagadEka mUrtiyA kaMDe |
accA muttina mukuTA aruNOdaya keMpu |
paccida nosala kastUri tilakana kaMDe |
accA pUvina sarA koraLoLu tUgutide |
paccada padakA uradalli poLevadu kaMDe |
niccaTa maduvaNiga tOtAdripura vAsa |
heccina daiva namma vijayaviThala saMGrige |
eccarikeyA pELi SiravAgi tutisikaMDe ||1||
maTTatALa
kuMDalada beLagu caMpana SuciyaMte |
gaMDa sthaLadalli kaMDeno eLeduLisi |
daMDe kaustuBamaNi duMDu muttina hAra |
koMDADatEnu maMDaladoLaguddaMDa tOtAdrISA |
KaMDapuruSha SrI vijayaviThalannA |
taMDa taMDadaliMdA kaMDenu manadoLage ||2||
triviDitALa
maMju BAShaNa tEjOpuMjApuShkarAjAkShA |
kaMjArihasta SOBaMjayA kaTi catura |
muMjArAgeLavA niraMjanavAsA kA |
LaMjAyAdEvA [pra] BaMjannanODiyA |
kuMjAravarada tOtAdri nilayA mRu |
tyuMjayanutA namma vijaya viThalA vajrA |
paMjara Baktarige prAMjaliyalikaMDe ||3||
aTTatALa
iMdravaMdita pAda caMdra vaMdita pAda |
skaMdhavaMdita pAda suMdara pAravAra |
iMdu ravi KagEMdra vaMdita pAda |
vRuMdAraka vRuMdavaMdita siri pAda |
aMdige gejjeli aMdavAda pAda |
iMdu tOtAdriliniMda dEvana pAda |
maMdaradhara siri vijaya viThala rEyA |
poMdidavara Bava baMdha nASana pAda ||4||
AditALa
naKaSiKa pariyaMta sakalABaraNaviTTA |
suKa sAMdra lakuminAyaka nATakadhArA |
akuTilarApta kuhakara saMhArakane |
makuTadhAra namma tOtAdri puravAsA |
dhikAdaiva vijaya viThala rEyana va |
nake taMda iMdu nAnu dhanyanAde dhareyoLage ||5||
jate
BUmiyoLAvAvAnAdaru mannise |
svAmi tOtAdrISA vijayaviThala kAyvA ||6||

Leave a comment