MADHWA · modalakalu sesha dasaru · raghavendra · sulaadhi

Guru vaara suladhi/Rayaru suladhi

ಧ್ರುವತಾಳ
ಘನ ದಯಾನಿಧಿಯಾದ ಗುರು ರಾಘವೇಂದ್ರ ನಿಮ್ಮವನಜ ಪಾದಯುಗಕೆ ನಮೊ ನಮೊಜನುಮಾರಭ್ಯವಾಗಿ ಅಭಿನಮಿಸದಲಿಪ್ಪಮನುಜನ ಅಪರಾಧವೆಣಿಸದಲೆವನಧಿ ಪೋಲುವ ಕರುಣಿ ಗೋವತ್ಸ ನ್ಯಾಯದಿಂದನಿನಗೆ ನೀನೆ ಬಂದು ಸ್ವಪ್ನದಲ್ಲಿಸನಕಾದಿ ಮುನಿಗಳ ಮನನಕ್ಕೆ ನಿಲುಕದಇನಕೋಟಿ ಭಾಸ ವೇದೇಶ ಪ್ರಮೋದ ತೀರ್ಥಮುನಿಗಳಿಂದಲಿ ಕೂಡಿ ಸಂದರುಶನವಿತ್ತುವಿನಯೋಕ್ತಿಗಳ ನುಡಿದ ಕೃತ್ಯದಿಂದಆನಂದವಾಯಿತು ಅಘದೂರನಾದೆನಿಂದುದನುಜಾರಿ ಭಕತರ ಮಣಿಯೇ ಗುಣಿಯೇಎಣೆಗಾಣೆ ನಿಮ್ಮ ಕರುಣಾ ಕಟಾಕ್ಷ ವೀಕ್ಷಣಕ್ಕೆಅನುಪಮ ಮಹಿಮನೆ ಅನಿಳ ಪ್ರೀಯಾಗುಣ ಗಣ ಪರಿಪೂರ್ಣ ಗುರು ವಿಜಯ ವಿಠ್ಠಲ ನಿಮ್ಮಘನವಾದ ಬಲದಿ ಎನಗೆ ಸುಳಿದನೆಂದು ||1||

ಮಟ್ಟತಾಳ
ಸುಖತೀರ್ಥರ ಮತವೆಂದೆಂಬ ಧ್ವಜವನ್ನು ವಿಖನಸಾಂಡದ ಮಧ್ಯ ಪ್ರತಿಯಿಲ್ಲದೆ ಮೆರೆಯೆಪಖರಹಿತವಾದ ಪಕ್ಷಿಯು ತನ್ನಯಪಖ ಚಿನ್ಹಿಹ್ಯ (ಯ) ಜನಿತ ಮಾರುತನಿಂದಲಿ ಧ್ವಜವಪ್ರಕಟದಿ ಚರಿಸುವ ಯತ್ನದಂದದಿ ದುರುಳಸಕುಟಿಲರಾದಿ ಆ ವಿದ್ಯಾರಣ್ಯಮುಖ ಮಖರೆಲ್ಲ ಬರಲು ಅಮ(ವ)ಸ್ಥಿತ2 ನಿಶ್ಚಯದಿ (ಮುಖ್ಯ ಜನರು ಬರಲು)ಮಖಶತಜನೆನೆಪ ಜಯರಾಯಾಚಾರ್ಯಪ್ರಕಟ ಗ್ರಂಥಗಳೆಂಬ ಪಾಶಗಳಿಂದಲ್ಲಿಯುಕುತಿಯಿಂದಲಿ ಬಿಗಿದು ವೀರಧ್ವನಿಯ ಗೈಯೆಉಕುತಿಗೆ ನಿಲ್ಲದಲೆ ಮೊಲದಂತೆ ಜರಿದುದಿಕ್ಕು ದಿಕ್ಕಿನಲ್ಲಿ ಪಲಾಯನರಾಗೆತ್ಯಕತ ಲಜ್ಜೆಯಲಿಂದ ಹತವಾಶೇಷ್ಯಸಾಕುಂಠಿತವಾದ ಬಲವೀರ್ಯನು ಮೇರುಶಿಖರವೆತ್ತುವನೆಂಬೊ ಸಹಸದಂದದಲಿವಿಕಟ ಮತಿಯುಕ್ತ ದುರುಳರು ರೋಷದಲಿ ಕು-ಯುಕುತಿಗಳಿಂದಲಿ ಸಂಚರಿಸುತ ಬರಲುಲಕುಮಿಪತಿಯ ನೇಮ ತಿಳಿದ ಪ್ರೌಢ ನೀನುಈ ಖಂಡದಿ ಬಂದು ದ್ವಿಜನ್ಮವ ಧರಿಸಿಪ್ರಖ್ಯಾತವಾದ ನ್ಯಾಯಾಮೃತವನ್ನುತರ್ಕ ತಾಂಡವ ಚಂದ್ರಿಕ ಪರಿಮಳ ಮೊದಲಾದಮಿಕ್ಕಾದ ಗ್ರಂಥವೆಂತೆಂಬ ವಜ್ರದಲಿ ದು-ರುಕುತಿಗಳೆಂಬಂಥ ಗಿರಿಗಳ ಛೇದಿಸಿಈ ಕುಂಭಿಣಿ ಮಧ್ಯ ಪ್ರತಿಯಿಲ್ಲದೆ ಮೆರದೆಭಕುತರಾಗ್ರೇಸರನೆ ಭೂ ವಿಬುಧರ ಪ್ರೀಯಾನಖ ಶಿಖ ಪರಿಪೂರ್ಣ ಗುರು ವಿಜಯ ವಿಠ್ಠಲ ನಿಮ್ಮಭಕುತಿಗೆ ವಶನಾಗಿ ಇತ್ತಿಹ ಕೀರ್ತಿಯನು ||2||

ತ್ರಿವಿಡಿತಾಳ
ಕಲಿಯುಗದಿ ಜನರು ಕಲ್ಮಷದಲಿಂದ ಬಲವಂತವಾದ ತ್ರಿವಿಧ ತಾಪಗಳನುವಿಲಯ1ಗೈಸುವ ಉಪಾಯವನರಿಯದೆಮಲಯುಕ್ತವಾದ ಭವ ಶರಧಿಯಲ್ಲಿನೆಲೆಯಾಗಿ ಮಗ್ನರಾಗಿ ನಿವೃತ್ತಿ ವತ್ರ್ಮಾ2ವನ್ನು ತಿಳಿಯದಲೆ ದುಃಖ ಬಡುವ ಸುಜನಒಳಗೆ ತಾರಕನಾಗಿ ಈ ನದಿಯ ತೀರದಲ್ಲಿನಿಲಯವಲ್ಲದೆ ನಿನಗೆ ಅನ್ಯ ಕೃತ್ಯಗಳಿಲ್ಲನಳಿನ ಸಂಭವ ಜನಕ ಗುರು ವಿಜಯ ವಿಠ್ಠಲ ನಿನಗೆ ಒಲಿದಿಪ್ಪಾಧಿಕಧಿಕವಾಗಿ ಬಿಡದೆ ||3||

ಅಟ್ಟತಾಳ
ಸೂಚನೆ ಮಾಡಿದ ಸೊಬಗಿನ ತೆರದಂತೆಯೋಚನೆ ಯಾತಕ್ಕೆನ್ನನು ಉದ್ಧರಿಪದಕ್ಕೆಊಚ ಜ್ಞಾನಾನಂದ ಬಲವೀರ್ಯನು ನೀನುನೀಚವಾದ ದೇಹ ಧಾರಣವನು ಮಾಡಿ ಅ-ನೂಚಿತವಾಗಿದ್ದ ಕಾಮ ಕ್ರೋಧಂಗಳು ಆಚರಣೆಯ ಮಾಳ್ಪ ಅಧಮನಾದವ ನಾನುಸೂಚರಿತ್ರವಾದ ಶುಚಿಯಾದ ಮನುಜಂಗೆನೀಚ ಅಶುಚಿಯಾದ ನರನು ಅಧಿಕನೆಂದುಭೂ ಚಕ್ರದಲಿ ಅವರ ದೇಹ ತೆತ್ತವನಾಗಿಆಚರಿಸಿದೆ ಬಲು ಹೀನ ಕೃತ್ಯಂಗಳುಸೂಚನೆ ಮಾಡಿದ್ದು ಸೊಬಗು ನೋಡದಲೆಯೋಚನೆ ಮಾಡಿದ್ದು ಸಾರ್ಥಕ ಮಾಳ್ಪದುಮೋಚನೆ ಮಾಡುವದು ಭವ ಬಂಧದಲಿಂದಶ್ರೀ ಚಕ್ರಪಾಣಿ ಗುರು ವಿಜಯ ವಿಠ್ಠಲರೇಯನಯೋಚನೆ ಮಾಡುವ ಯೋಗವೆ ಬೋಧಿಸು ||4||

ಆದಿತಾಳ
ಪರಿಶುದ್ಧವಾದ ನಿನ್ನ ಭಕುತಿಗೆ ವಶನಾಗಿಹರಿ ತನ್ನ ಪರಿವಾರ ಸಮೇತನಾಗಿ ನಿಂದುಮೊರೆ ಹೊಕ್ಕ ಜನರಿಗೆ ಪರಿಪೂರ್ಣ ಸುಖವಿತ್ತುಪರಿ ಪರಿ ಕೀರ್ತಿಗಳು ತಂದೀವ ನಿಮಗೆಂದುಪರಮಾಪ್ತನಾಗಿ ತವಪಾದ ಸಾರಿದೆನುದೂರ ನೋಡದಲೆ ಕರುಣ ಮಾಡಿ ವೇಗಸುರರಿತ್ತ ಶಾಪದಿಂದ ಕಡಿಗೆ ಮಾಡಿ ಎನ್ನ ಹೃ-ತ್ಸರಸಿಜದಲ್ಲಿ ಹರಿ ಪೊಳೆವಂತೆ ಮಾಡುವದುಪರಿಪೂರ್ಣ ಕೃಪಾನಿಧೆ ಗುರು ವಿಜಯ ವಿಠ್ಠಲನ್ನಶರಣರ ಅಭಿಮಾನಿ ಔದಾರ್ಯ ಗುಣಮಣಿ ||5||

ಜತೆ
ಗುರುಕುಲ ತಿಲಕನೆ ಗುರು ರಾಘವೇಂದ್ರಾಖ್ಯಸುರ ಕಲ್ಪತರು ಗುರು ವಿಜಯ ವಿಠ್ಠಲ ಪ್ರೀಯಾ ||

Dhruvatāḷa
ghana dayānidhiyāda guru rāghavēndra nim’mavanaja pādayugake namo namojanumārabhyavāgi abhinamisadalippamanujana aparādhaveṇisadalevanadhi pōluva karuṇi gōvatsa n’yāyadindaninage nīne bandu svapnadallisanakādi munigaḷa mananakke nilukada’inakōṭi bhāsa vēdēśa pramōda tīrthamunigaḷindali kūḍi sandaruśanavittuvinayōktigaḷa nuḍida kr̥tyadinda’ānandavāyitu aghadūranādenindudanujāri bhakatara maṇiyē guṇiyē’eṇegāṇe nim’ma karuṇā kaṭākṣa vīkṣaṇakke’anupama mahimane aniḷa prīyāguṇa gaṇa paripūrṇa guru vijaya viṭhṭhala nim’maghanavāda baladi enage suḷidanendu ||1||

maṭṭatāḷa
sukhatīrthara matavendemba dhvajavannu vikhanasāṇḍada madhya pratiyillade mereyepakharahitavāda pakṣiyu tannayapakha cinhihya (ya) janita mārutanindali dhvajavaprakaṭadi carisuva yatnadandadi duruḷasakuṭilarādi ā vidyāraṇyamukha makharella baralu ama(va)sthita2 niścayadi (mukhya janaru baralu)makhaśatajanenepa jayarāyācāryaprakaṭa granthagaḷemba pāśagaḷindalliyukutiyindali bigidu vīradhvaniya gaiye’ukutige nilladale moladante jaridudikku dikkinalli palāyanarāgetyakata lajjeyalinda hatavāśēṣyasākuṇṭhitavāda balavīryanu mēruśikharavettuvanembo sahasadandadalivikaṭa matiyukta duruḷaru rōṣadali ku-yukutigaḷindali san̄carisuta baralulakumipatiya nēma tiḷida prauḍha nīnu’ī khaṇḍadi bandu dvijanmava dharisiprakhyātavāda n’yāyāmr̥tavannutarka tāṇḍava candrika parimaḷa modalādamikkāda granthaventemba vajradali du-rukutigaḷembantha girigaḷa chēdisi’ī kumbhiṇi madhya pratiyillade meradebhakutarāgrēsarane bhū vibudhara prīyānakha śikha paripūrṇa guru vijaya viṭhṭhala nim’mabhakutige vaśanāgi ittiha kīrtiyanu ||2||

triviḍitāḷa
kaliyugadi janaru kalmaṣadalinda balavantavāda trividha tāpagaḷanuvilaya1gaisuva upāyavanariyademalayuktavāda bhava śaradhiyallineleyāgi magnarāgi nivr̥tti vatrmā2vannu tiḷiyadale duḥkha baḍuva sujana’oḷage tārakanāgi ī nadiya tīradallinilayavallade ninage an’ya kr̥tyagaḷillanaḷina sambhava janaka guru vijaya viṭhṭhala ninage olidippādhikadhikavāgi biḍade ||3||

aṭṭatāḷa
sūcane māḍida sobagina teradanteyōcane yātakkennanu ud’dharipadakke’ūca jñānānanda balavīryanu nīnunīcavāda dēha dhāraṇavanu māḍi a-nūcitavāgidda kāma krōdhaṅgaḷu ācaraṇeya māḷpa adhamanādava nānusūcaritravāda śuciyāda manujaṅgenīca aśuciyāda naranu adhikanendubhū cakradali avara dēha tettavanāgi’ācariside balu hīna kr̥tyaṅgaḷusūcane māḍiddu sobagu nōḍadaleyōcane māḍiddu sārthaka māḷpadumōcane māḍuvadu bhava bandhadalindaśrī cakrapāṇi guru vijaya viṭhṭhalarēyanayōcane māḍuva yōgave bōdhisu ||4||

āditāḷa
pariśud’dhavāda ninna bhakutige vaśanāgihari tanna parivāra samētanāgi nindumore hokka janarige paripūrṇa sukhavittupari pari kīrtigaḷu tandīva nimagenduparamāptanāgi tavapāda sāridenudūra nōḍadale karuṇa māḍi vēgasuraritta śāpadinda kaḍige māḍi enna hr̥-tsarasijadalli hari poḷevante māḍuvaduparipūrṇa kr̥pānidhe guru vijaya viṭhṭhalannaśaraṇara abhimāni audārya guṇamaṇi ||5||

jate
gurukula tilakane guru rāghavēndrākhyasura kalpataru guru vijaya viṭhṭhala prīyā ||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s