dasara padagalu · kanakadasaru · MADHWA

Muttabeda muttabeda muraharana dasaranu

ಮುಟ್ಟಬೇಡ ಮುಟ್ಟಬೇಡ ಮುರಹರನ ದಾಸರನು ||pa||

ಕಟ್ಟು ಮಾಡಿದ ಯಮನು ತನ್ನ ದೂತರಿಗೆ||a.pa||

ತಿರುಮಣಿ ತಿರುಚೂರ್ಣ ಶೃಂಗಾರ ಧರಿಸುವರ
ಸಿರಿ ತುಳಸಿ ವನಮಾಲೆಯಿಂದೊಪ್ಪುವ
ವರತಿರುಮಂತ್ರ ತೀರ್ಥಪ್ರಸಾದಕೊಳಗಾದವರ
ತಿರುಪತಿ ಯಾತ್ರೆಯನು ಮಾಡುವ ಮಹಾತ್ಮರ ||1||

ಬಡವರಾಗಲಿ ಭಾಗ್ಯವಂತರಾಗಲಿ ಅವರು
ಕಡು ಕರ್ಮಿ ಘೋರಪಾತಕರಾಗಲಿ ನಡೆ
ನುಡಿಗೆ ಮಾಧವನ ಬಿಡದೆ ಕೊಂಡಾಡು ವರ
ಗೊಡವೆ ಬೇಡೆಂದು ಯಮಧರ್ಮ ಸಾರಿದನು ||2||

ವಾಸುದೇವನ ವಾಸರವನಾಚರಿಸುವ
ವರ ಬೇಸರಿಸದೆ ಹರಿ ಪ್ರಸಂಗ ಮಾಳ್ಪವರ
ಶೇಷಶಯನ ಕಾಗಿನೆಲೆಯಾದಿ
ಕೇಶವನದಾಸಾನುದಾಸರಿಗೆ ದಾಸರಾದವರ||3||

Muṭṭabēḍa muṭṭabēḍa muraharana dāsaranu ||pa||

kaṭṭu māḍida yamanu tanna dūtarige||a.Pa||

tirumaṇi tirucūrṇa śr̥ṅgāra dharisuvara
siri tuḷasi vanamāleyindoppuva
varatirumantra tīrthaprasādakoḷagādavara
tirupati yātreyanu māḍuva mahātmara ||1||

baḍavarāgali bhāgyavantarāgali avaru
kaḍu karmi ghōrapātakarāgali naḍe
nuḍige mādhavana biḍade koṇḍāḍu vara
goḍave bēḍendu yamadharma sāridanu ||2||

vāsudēvana vāsaravanācarisuva
vara bēsarisade hari prasaṅga māḷpavara
śēṣaśayana kāgineleyādi
kēśavanadāsānudāsarige dāsarādavara||3||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s