ಶಿರಿ ಸತ್ಯವ್ರತಸುರ ತರುವೆ ನಿಮ್ಮಯಪಾದವರಶತ ಪತ್ರಕ್ಕೆಭಿನಮಿಪೇ||pa||
ಪರಮ ದುರ್ಮತದ್ವಾಂತ ಭಾಸ್ಕರವರಸುಜ್ಞಾನಾಕಾಂಕ್ಷಿಯಾಗಿಹೆ
ನಿರತ ಶ್ರೀ ಮದಾನಂದ ತೀರ್ಥರವರಸು ಭಾಷ್ಯಾಮೃತವ ನುಣಿಸೋ ||a.pa||
ಪೊಗಳಲೆನ್ನಳವೆ ನಿಮ್ಮಗಣಿತ ಮಹಿಮೆಯಜನದಿ ವಿಖ್ಯಾತರೆ ಗುರುವೇ |
ಸುಗುಣಿತವ ಭಕ್ತರ್ಗೆ ಕಾಡುವವಿಗಡ ಅಪಸ್ಮಾರ ಕುಷ್ಠವುಮಿಗಿಲು
ರೋಗಾದಿಗಳ ಕಳೆಯುತಬಗೆ ಬಗೆಂದಲಿ ಸ್ತುತ್ಯರಾಗಿಹ ||1||
ಸರಿತು ಪ್ರವಹದಿ ಎರಡೆರಡು ಸುತರ್ಗಳಹರಣ ಪೋಗಲು ಖೇದದೀ |
ವರದ್ವಿಜನು ರಘುನಾಥಾಖ್ಯ ಭಕ್ತಿಲಿಶಿರಿಸತ್ಯವ್ರತರನು ಸೇವೆಗೈಯ್ಯುಲು
ಅರಿತು ಸಂತಾನಾಷ್ಟ ಕಂಗಳತ್ವರಿತ ಕರುಣಿಸಿ ಪೊರೆದಗುರುವರ||2||
ಶಿರಿಸತ್ಯ ಸಮಧರೀ ವೃಂದಾವನದ ಬಳಿಶಿರಿಮನ್ಯಾಯಾಸುಧೆ ಪಠಿಸೇ |
ಗುರುವರರು ಸಂತುಷ್ಟ ಪಡುತಲಿಶಿರವತೂಗಲು ಅಂತರಂಗದಿ
ವರಸುವೃಂದಾವನವು ತನ್ನಯಶಿರವ ತೂಗುತ ತೋರಿತಚ್ಛರಿ ||3||
ವಾದಿಭಹರ್ಯಕ್ಷ ಮೇಧಾವಿ ವಿಭುಧೇಡ್ಯಸುಧಾಪಿವೃತಿ ಕರ್ತಾರ |
ಮೇಧಿನಿಯ ಸಂಚರಿಸಿದುರ್ವಾದಿಗಳ ಬಲು ಖಂಡಿ ಸುತ
ಭೋಧಿಸುತ ತತ್ವಗಳ ಸುಜನಕೆಹಾದಿಮೋಕ್ಷಕೆ ತೋರ್ದ ಯತಿವರ ||4||
ವೇದವಿದ್ಯಾಖ್ಯ ಸತ್ಕರಜರೆಂದೆನಿಸುತ್ತಮೋದ ತೀರ್ಥರ ಸೇವೆಗೈದೂ |
ಹಾದಿ ಚರಿಸುತ ಸಾಂಗ್ಲಿಕ್ಷೇತ್ರದಿಆದರದಿ ವೃಂದಾವನವ ಪೊಕ್ಕು
ನಾದಗುರು ಗೋವಿಂದ ವಿಠಲನಮೋದ ಧ್ಯಾನಾಸಕ್ತ ಗುರುವರ ||5||
Śiri satyavratasura taruve nim’mayapādavaraśata patrakkebhinamipē||pa||
parama durmatadvānta bhāskaravarasujñānākāṅkṣiyāgihe
nirata śrī madānanda tīrtharavarasu bhāṣyāmr̥tava nuṇisō ||a.Pa||
pogaḷalennaḷave nim’magaṇita mahimeyajanadi vikhyātare guruvē |
suguṇitava bhaktarge kāḍuvavigaḍa apasmāra kuṣṭhavumigilu
rōgādigaḷa kaḷeyutabage bagendali stutyarāgiha ||1||
saritu pravahadi eraḍeraḍu sutargaḷaharaṇa pōgalu khēdadī |
varadvijanu raghunāthākhya bhaktiliśirisatyavrataranu sēvegaiyyulu
aritu santānāṣṭa kaṅgaḷatvarita karuṇisi poredaguruvara||2||
śirisatya samadharī vr̥ndāvanada baḷiśiriman’yāyāsudhe paṭhisē |
guruvararu santuṣṭa paḍutaliśiravatūgalu antaraṅgadi
varasuvr̥ndāvanavu tannayaśirava tūguta tōritacchari ||3||
vādibhaharyakṣa mēdhāvi vibhudhēḍyasudhāpivr̥ti kartāra |
mēdhiniya san̄carisidurvādigaḷa balu khaṇḍi suta
bhōdhisuta tatvagaḷa sujanakehādimōkṣake tōrda yativara ||4||
vēdavidyākhya satkarajarendenisuttamōda tīrthara sēvegaidū |
hādi carisuta sāṅglikṣētradi’ādaradi vr̥ndāvanava pokku
nādaguru gōvinda viṭhalanamōda dhyānāsakta guruvara ||5||