dasara padagalu · MADHWA · Sri vedavyasa thirtharu

Dasara pada on sri Vedavyasa thirtharu

ನಮಿಸುವೆನು ನಮಿಸುವೆನು ಮುನಿವರ್ಯರೇ ||pa||

ಅಮಮ ನಿಮ್ಮಯ ಮಹಿಮೆಯ ಪೊಗಳಲೆನ್ನಳವೇ ||a.pa||
.
ಭಾವ ಬೋಧಾರ್ಯ ವಿಮಲ ಸತ್ಕರಜಾತ
ಭಾವಿ ಬೊಮ್ಮನ ಮತದಿ ಪೂರ್ಣ ವಿಖ್ಯಾತ
ಧಾವಿಸಿ ನಿಮ್ಮಡಿಗೆ ಓವಿ ನಮಿಪರ ತ್ರಾತ
ಕಾವುದೆಮ್ಮನು ಬಿಡದೆ ಪಾವಮಾನಿಯ ಪ್ರೀತ||1||

ಇಂದ್ರಗ ವರಜನಾಮ ಮಂದವಾಹಿನಿ ತಟದಿ
ಚೆಂದುಳ್ಳ ಮಹತೆನಿಪ ವೃಂದಾವನದೊಳು |
ಇಂದಿರೇ ರಮಣ ಶಿರಿ ರಾಮಚಂದ್ರನ ಮನದಿ
ಛಂದಾಗಿ ಧ್ಯಾನಿಸುತ ನಿಂದ ಯತಿವರ್ಯಾ ||2||

ಮೋದ ಮುನಿ ಸದ್ಭಾವ ಬೋಧಿಸುತ ಶಿಷ್ಯರಿಗೆ
ವೇದ ವ್ಯಾಸರ ಪ್ರೀತಿ ಆದರದಿ ಗಳಿಸೀ |
ಮೋದ ದಾಯಕನೆನಿಸಿ ಸಾಧುಗಳ ಸಲಹುತ್ತ
ಸಾಧಿಸಿದೆ ಸತ್ಕೀರ್ತಿ ರಾಜ ಸನ್ಮಾನ್ಯ ||3||

ಜೀಮೂತ ಸತ್‍ಕ್ಷೇತ್ರ ಶೋಭಿಸುವ ವಿಖ್ಯಾತಆ
ಮಾಯಿ ಮತ ತಿಮಿರ ಹರಿಚಕ್ಷುಜಾತ |
ಪಾಮರನು ನಾನಿಮ್ಮ ಚರಣಂಗಳಭಿನಮಿಪೆ
ಶ್ರೀ ಮನೋಹರ ಪಾದ ನೀ ತೋರೊ ಮುನಿಪ ||4||

ಬ್ರಹ್ಮಚರ್ಯಾಖ್ಯ ಮಹ ಮಹಿಮೆ ಪರಿಕಿಸಲು |
ಸನ್ಮನದಿ ನೃಪನೆನ್ನ ನಿಮ್ಮ ಕೌಪೀನವಾ |ಒ
ಮ್ಮನದಿ ಅಗ್ನಿಗಿಡೆ ದಹಿಸಲಾರದೆ ಪೋದ
ಸನ್ಮಹಿಮ ವೇದೇಶ ಸನ್ನುತನೆ ಪೊರೆಯೋ ||5||

ಹರಿಭಕ್ತ ಸುರತರುವೆ ವರ ಸು ಚಿಂತಾಮಣಿಯೆ
ಪರಮ ಸೇವಾಸಕ್ತ ಶರಣ ಸುರಧೇನು |
ಹರಿಯ ಸರ್ವೋತ್ತಮತೆ ಸ್ಥಿರ ಪಡಿಸೆ
ಸಂಚರಿಸಿಮೆರೆದ ವೇದವ್ಯಾಸ ತೀರ್ಥ ಸದ್ದಭಿಧಾ||6||

ಘನಗಿರಿ ನರಹರಿಯ ಪದವನುಜ
ಸಂಜಾತಮಿನುಗುತಿಹ ವಾಮನಾ ನದಿಯ
ಸಂಗಮದಿಗುಣಪೂರ್ಣನಾದ ಗುರು ಗೋವಿಂದ ವಿಠ್ಠಲನ |
ಮನದಿ ಧ್ಯಾನಾಸಕ್ತ ಪೊರೆಮಹ ವಿರಕ್ತ ||7||

Namisuvenu namisuvenu munivaryarē ||pa||

amama nim’maya mahimeya pogaḷalennaḷavē ||a.Pa||
.
Bhāva bōdhārya vimala satkarajāta
bhāvi bom’mana matadi pūrṇa vikhyāta
dhāvisi nim’maḍige ōvi namipara trāta
kāvudem’manu biḍade pāvamāniya prīta||1||

indraga varajanāma mandavāhini taṭadi
cenduḷḷa mahatenipa vr̥ndāvanadoḷu |
indirē ramaṇa śiri rāmacandrana manadi
chandāgi dhyānisuta ninda yativaryā ||2||

mōda muni sadbhāva bōdhisuta śiṣyarige
vēda vyāsara prīti ādaradi gaḷisī |
mōda dāyakanenisi sādhugaḷa salahutta
sādhiside satkīrti rāja sanmān’ya ||3||

jīmūta sat‍kṣētra śōbhisuva vikhyāta’ā
māyi mata timira haricakṣujāta |
pāmaranu nānim’ma caraṇaṅgaḷabhinamipe
śrī manōhara pāda nī tōro munipa ||4||

brahmacaryākhya maha mahime parikisalu |
sanmanadi nr̥panenna nim’ma kaupīnavā |o
m’manadi agnigiḍe dahisalārade pōda
sanmahima vēdēśa sannutane poreyō ||5||

haribhakta surataruve vara su cintāmaṇiye
parama sēvāsakta śaraṇa suradhēnu |
hariya sarvōttamate sthira paḍise
san̄carisimereda vēdavyāsa tīrtha saddabhidhā||6||

ghanagiri narahariya padavanuja
san̄jātaminugutiha vāmanā nadiya
saṅgamadiguṇapūrṇanāda guru gōvinda viṭhṭhalana |
manadi dhyānāsakta poremaha virakta ||7||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s