ಸತ್ಯ ಜ್ಞಾನ ಮುನಿರಾಯಾ ತವಸ್ಮರಣೆ ಸತತ ಕೊಡು ಜೀಯಾ ||pa||
ಜ್ಞಾನ ಭಕ್ತಿ ವೈರಾಗ್ಯದ ಕಣಿಯೆ ಧ್ಯಾನ ಮೌನ ಜಪ-ತಪಗಳ ನಿಧಿಯೆ||a.pa||
ಸರ್ವತ್ರದಿ ಶ್ರಿ ಹರಿಯನು ಕಾಣುತ
ಸರ್ವಭೂತ ‘ತರತನಾಗಿ
ಸರ್ವೋತ್ತಮನು ಶ್ರೀರಾಮನ ಪೂಜಿಸಿ
ಸರ್ವಜ್ಞಮತ ಸುದಾಂಬುಧಿಗೆ ಚಂದ್ರಮನಾದೆ||1||
ಭರತಾರುಣ್ಯದಿ ಪರಮ ಹಂಸನಾಗಿ
ಧರ್ಮ ಸಾಮ್ರಾಜ್ಯದ ಧುರವ’ಸಿ
ಧರ್ಮ ಸಂರಕ್ಷಣೆ ಮಾಡುತ ಧರೆಯೊಳು
ಪೂರ್ಣಜ್ಞರ ಧ್ವಜ ಮೆರೆಸಿದ ಧೀರಾ||2||
ಲೌಕಿಕವನು ಸಂಪೂರ್ಣ ತ್ಯಜಿಸಿ ನೀ-
ಪರಲೋಕ ಸಾಧನ ಲೋಕಕೆ ತಿಳಿಸಿ
ಟೀಕಾರಾಯರ ಸನ್ನಿಧಾನವ ಹೊಂದಿದ
ಶ್ರೀಕಾಂತ ಭೂಪತಿ’ಠ್ಠಲನ ದೂತಾ ||3||
Satya jñāna munirāyā tavasmaraṇe satata koḍu jīyā ||pa||
jñāna bhakti vairāgyada kaṇiye dhyāna mauna japa-tapagaḷa nidhiye||a.Pa||
sarvatradi śri hariyanu kāṇuta
sarvabhūta’taratanāgi
sarvōttamanu śrīrāmana pūjisi
sarvajñamata sudāmbudhige candramanāde||1||
bharatāruṇyadi parama hansanāgi
dharma sāmrājyada dhurava’si
dharma sanrakṣaṇe māḍuta dhareyoḷu
pūrṇajñara dhvaja meresida dhīrā||2||
laukikavanu sampūrṇa tyajisi nī-
paralōka sādhana lōkake tiḷisi
ṭīkārāyara sannidhānava hondida
śrīkānta bhūpati’ṭhṭhalana dūtā ||3||