ಎಂಥಾ ಪಾಪಿ ದೃಷ್ಟಿ ತಾಗಿತು, ಗೋಪಾಲಕೃಷ್ಣಗೆ
ಕೆಟ್ಟ ಪಾಪಿ ದೃಷ್ಟಿ ತಾಗಿತು ||pa||
ಶಿಶು ಹಸಿದನೆಂದು ಗೋಪಿ
ಮೊಸರು ಕುಡಿಸುತ್ತಿರಲು ನೋಡಿ
ಹಸಿದ ಬಾಲರ ದೃಷ್ಟಿ ತಾಗಿ
ಮೊಸರು ಕುಡಿಯಲೊಲ್ಲನೆ ||1||
ಕೃಷ್ಣ ಹಸಿದನೆಂದು ಗೋಪಿ
ಬಟ್ಟಲೊಳಗೆ ಕ್ಷೀರ ಕೊಡಲು
ಕೆಟ್ಟ ಬಾಲರ ದೃಷ್ಟಿ ತಾಗಿ
ಕೊಟ್ಟ ಹಾಲು ಮುಟ್ಟನೆ ||2||
ಚಿಣ್ಣ ಹಸಿದನೆಂದು ಗೋಪಿ
ಬೆಣ್ಣೆ ಕೈಯಲಿ ಕೊಡಲು ನೋಡಿ
ಸಣ್ಣ ಬಾಲರ ದೃಷ್ಟಿ ತಾಗಿ
ಬೆಣ್ಣೆ ವಿಷಮವಾಯಿತೆ ||3||
ಅಂಗಿ ಹಾಕಿ ಉಂಗುರವಿಟ್ಟು
ಕಂಗಳಿಗೆ ಕಪ್ಪನಿಟ್ಟು
ಅಂಗಳದೊಳು ಆಡೊ ಕೃಷ್ಣಗೆ
ಹೆಂಗಳಾ ದೃಷ್ಟಿ ಇದೇನೋ ||4||
ಶಲ್ಲೆ ಉಡಿಸಿ ಮಲ್ಲೆ ಮುಡಿಸಿ
ಚೆಲ್ವ ಫಣೆಗೆ ತಿಲಕನಿಟ್ಟು
ವಲ್ಲಭ ಪುರಂದರವಿಠಲನ
ಫುಲ್ಲನೇತ್ರರು ನೋಡಿದರೇನೋ ||5||
Enthā pāpi dr̥ṣṭi tāgitu, gōpālakr̥ṣṇage
keṭṭa pāpi dr̥ṣṭi tāgitu ||pa||
śiśu hasidanendu gōpi
mosaru kuḍisuttiralu nōḍi
hasida bālara dr̥ṣṭi tāgi
mosaru kuḍiyalollane ||1||
kr̥ṣṇa hasidanendu gōpi
baṭṭaloḷage kṣīra koḍalu
keṭṭa bālara dr̥ṣṭi tāgi
koṭṭa hālu muṭṭane ||2||
ciṇṇa hasidanendu gōpi
beṇṇe kaiyali koḍalu nōḍi
saṇṇa bālara dr̥ṣṭi tāgi
beṇṇe viṣamavāyite ||3||
aṅgi hāki uṅguraviṭṭu
kaṅgaḷige kappaniṭṭu
aṅgaḷadoḷu āḍo kr̥ṣṇage
heṅgaḷā dr̥ṣṭi idēnō ||4||
śalle uḍisi malle muḍisi
celva phaṇege tilakaniṭṭu
vallabha purandaraviṭhalana
phullanētraru nōḍidarēnō ||5||
Thank you so much for posting such gems of songs. Whenever I need any traditional song I come to your website.
And each time I sing I am very grateful to you.
May Lord Hari AMD Goddess Lakshmi shower theor endless grace and infinite blessings on you and your family.
Sri Hari Preethostu
LikeLike