ಜಯರಾಯ ಜಯರಾಯ ||pa||
ದಯಕರ ಸಜ್ಜನಭಯಹರ ಗುರುವರ ||a.pa||
ವಾಸವ ನೀ ವಸುಧೀಶನ ನಿಜ
ಕೂಸೆನಿಸೀಪರಿ ದೇಶದಿ ಮೆರೆದೆ ||1||
ಸತಿಯಳ ತ್ಯಜಿಸಿ ಯತಿರೂಪ ಧರಿಸಿ
ಪÀತಿತರ ಶಾಸ್ತ್ರವ ಹತಮಾಡಿದಿ ನೀ ||2||
ಸುಧಾದಿಗ್ರಂಥವ ಮುದದಲಿ ರಚಿಸಿ
ಬುಧಜನಸ್ತೊಮಕೆ ಒದಗಿಸಿ ಕೊಟ್ಟಿ||3||
ಅಲವಬೋಧರ ಮತ ಬಲವತ್ತರಮಾಡಿ
ಜಲಜನಾಭನ ಮನ ಒಲಿಸಿದ್ಯೊ ಜೀಯಾ ||4||
ಪ್ರಮಿತಜನಗಣನಮಿತ ಪದಾಂಬುಜ
ಅಮಿತಮಹಿಮ ನಿನ್ನ ನಮಿಸುವೆ ದಿನದಿನ ||5||
ಯಾತಕೆ ಎನ್ನನು ಈ ತೆರನೋಡುವಿ
ದಾತಗುರುಜಗನ್ನಾಥ ವಿಠಲ ಪ್ರೀಯ||6||
jayarAya jayarAya ||pa||
dayakara sajjanaBayahara guruvara ||a.pa||
vAsava nI vasudhISana nija
kUsenisIpari dESadi merede ||1||
satiyaLa tyajisi yatirUpa dharisi
paÀtitara SAstrava hatamADidi nI ||2||
sudhAdigranthava mudadali racisi
budhajanastomake odagisi koTTi||3||
alavabOdhara mata balavattaramADi
jalajanABana mana olisidyo jIyA ||4||
pramitajanagaNanamita padAMbuja
amitamahima ninna namisuve dinadina ||5||
yAtake ennanu I teranODuvi
dAtagurujagannAtha viThala prIya||6||
One thought on “jayaraaya jayaraaya(Guru Jagannatha dasaru)”