ಮಧ್ವಾಂತರ್ಗತ ವೇದವ್ಯಾಸ ಕಾಯೊ ಶುದ್ಧ ಮೂರುತಿಯೆ ಸರ್ವೇಶ ||pa||
ಶ್ರದ್ಧೆಯಿಂದಲಿ ನಿನ್ನ ಭಜಿಸುವ ಭಕ್ತರಿಗೆಬುದ್ಧ್ಯಾದಿಗಳ ಕೊಟ್ಟುದ್ಧರಿಸೊ ದೇವರದೇವ||A.pa||
ದ್ವಾಪರದಲಿ ಒಬ್ಬ ಮುನಿಪ ತನ್ನಕೋಪದಿಂದಲಿ ಕೊಡಲು ಶಾಪ
ಸ್ಥಾಪಿಸಲು ಜ್ಞಾನ ಲೋಪಅಪಾರ ತತ್ವಸ್ವರೂಪ
ಶ್ರೀಪತಿಯೆ ಕಾಯೆಂದು ಮೊರೆಯಿಡೆಪಾಪ ವಿರಹಿತÀಳಾದ ಯಮುನೆಯ
ದ್ವೀಪದಲಿ ಅಂಬಿಗರ ಹೆಣ್ಣಿನರೂಪಕ್ಕೊಲಿದವಳಲ್ಲಿ ಜನಿಸಿದೆ ||1||
ವೇದವಾದಿಗÀಳೆಲ್ಲ ಕೆಡಲು ತತ್ವವಾದಿಜನರು ಬಾಯಿ ಬಿಡಲು
ಮೇದಿನಿ ಸುರರ್ಮೊರೆಯಿಡಲು ನಾಲ್ಕುವೇದ ವಿಭಾಗ ರಚಿಸಲು
ಮೋದದಿಂದ ತದರ್ಥ ಬೋದಕ-ವಾದ ಸೂತ್ರ ಪುರಾಣ ರಚಿಸಿ
ವಾದಗಳ ನಿರ್ವಾದ ಮಾಡಿಸಾಧುವಂದಿತ ಬಾದರಾಯಣ ||2||
ಸುಮತಿಗಳಿಗೆ ನೀ ಬೋಧಿಸಿದೆ ಮಿಕ್ಕಕುಮತಗಳನ್ನು ಛೇದಿಸಿದೆ
ಕ್ರಿಮಿಯಿಂದ ರಾಜ್ಯವಾಳಿಸಿದೆ ಜಗತ್‍ಸ್ವಾಮಿ ನೀನೆಂದು ತೋರಿಸಿದೆ
ವಿಮಲರೂಪನೆ ಕಮಲನಾಭನೆರಮೆಯ ಅರಸನೆ ರಮ್ಯ ಚರಿತನೆ
ಮಮತೆಯಲಿ ಕೊಡು ಕಾಮಿತಾರ್ಥವನಮಿಸುವೆನು ಹಯವದನಮೂರುತಿ||3||
Madhwaantargatavedavyaasaa | kaayo |
Shuddha moorutiye sarveshaa || pa ||
Shruddheyindali ninna bhajisuva janarige |
Buddhyaadigala kottuddhariso devara deva || a.pa ||
Dwaaparadali obba munipaa-tanna kopadindali kotta shaapa |
Shaapisalu j~jaanalopa-vaage apaara tatwaswaroopa ||
Shreepatiye kaayendu moreyide paapavirahitalaada yamuneya |
Dweepadali ambigara pennina roopagolidavanalli janiside ||1||
Veda vaadigalella kedalu tatwa-vaadi janaru baayi bidalu |
Medini suraru more idalu naanaa- vedagala vibhaagisalu |
Modadimda tadarthabhodakavaada sootrapuraana viracisi|
Vaadigala nirvaada maadida saadhuvamdita baadaraayana || 2 ||
Sumatigalige nee bhodhiside-mikka kumatigalanu nee chedhiside |
Krimiyimda raajyavaaliside | jagatswaamicaryava nee toriside ||
Vimala roopane kamalanaabhane rameya arasane ramyacaritane |
Mamateyali kodu kaamitaarthava namisuvenu hayavadanamooruti || 3 ||
One thought on “Madhwantargata vedavyasa(Vadirajaru)”