dasara padagalu · MADHWA · Vadirajaru

Urutani haadu

ಲಕ್ಷಮಿ ರಮಣಗೆ ಮಾಡಿದಳು ಉರುಟಾಣಿ || ಪ||

ಇಳೆಯೊಳಗತಿ ಜಾಣೆ ಸುಂದರ ಫಣಿವೇಣಿ || ಅ.ಪ.||

ಮಚ್ಛ ಕಚ್ಛಪ ಕಿರನೆ ಕೇಸರಿ ಯಂದದ ಮುಖನೆ
ಸ್ವಚ್ಛ ಮುಖವ ತೋರೈ ಕುಂಕುಮ ಹಚ್ಚುವೆನು ||೧||

ಬಲಿಯ ದಾನವ ಬೇಡಿ ಇಳೆಯ ಈರಡಿ ಮಾಡಿ
ಅಳೆದಡಿ ಗಳ ತೋರೈ ಅರಿಷಿಣ ಹಚ್ಚುವೆನು ||೨||

ದುರುಳ ಕ್ಷತ್ರಿಯರ ಕೊರಳು ತರಿದ ಹರಿಯೆ
ಹರುಷ ದಿಂದ ಕೊರಳ ತೋರೈ ಗಂಧವ ಹಚ್ಚುವೆನು ||೩||

ದಶರಥ ನಲಿ ಜನಿಸಿ ದಶಮುಖನ ಸಂಹರಿಸಿ
ಶಶಿಮುಖಿ ಯ ತಂದವನೆ ಕುಸುಮ ಮುಡಿಸುವೆನು ||೪||

ಹದಿನಾರು ಸಾಸಿರ ಸುದತಿಯರನಾಳಿದನೆ
ಪದುಮಕರವ ತೋರೈ ವೀಳ್ಯವ ಕೊಡುವೆನು ||೫||

ವಸನ ರಹಿತ ನಾಗಿ ವಸುಧೆಯ ತಿರುಗಿದೆ
ಬಿಸಜ ನಾಭನೆ ನಿನಗೆ ವಸನ ಹೊದ್ದಿಸುವೆನು ||೬||

ವರ ತುರಗವನೇರಿ ಕಲಿಯ ಸಂಹರಿಸುವ
” ಸಿರಿ ಹಯವದನನೆ” ಆರತಿ ಯೆತ್ತುವೆನು ||೭||.

lakShami ramaNage mADidaLu uruTANi || pa||

iLeyoLagati jANe sundara PaNivENi || a.pa.||

macCa kacCapa kirane kEsari yandada muKane
svacCa muKava tOrai kuMkuma haccuvenu ||1||

baliya dAnava bEDi iLeya IraDi mADi
aLedaDi gaLa tOrai ariShiNa haccuvenu ||2||

duruLa kShatriyara koraLu tarida hariye
haruSha dinda koraLa tOrai gaMdhava haccuvenu ||3||

daSaratha nali janisi daSamuKana saMharisi
SaSimuKi ya tandavane kusuma muDisuvenu ||4||

hadinAru sAsira sudatiyaranALidane
padumakarava tOrai vILyava koDuvenu ||5||

vasana rahita nAgi vasudheya tirugide
bisaja nABane ninage vasana hoddisuvenu ||6||

vara turagavanEri kaliya saMharisuva
” siri hayavadanane” Arati yettuvenu ||7||.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s