ಶಿವನ ನೋಡಿರೊ ಇಂದು ಸ್ತವನ ಮಾಡಿರೊ |
ತವಕದಿಂದ ತಿಳಿದು ಅವಗುಣಂಗಳ ತೊರೆದು ನಿತ್ಯ ||pa||
ಅಂತಕಾಪುರ ವೈರಿ | ದಿನಾಂತ ವೃಷಭನೇರಿ |
ಶಾಂತಿ ಸಹಿತ ಜನರಂಗಣದಿ | ನಿಂತು ಮಾತು |
ಲಾಲಿಪ ಮಹಿಮ ||1||
ಸುರಜನತೆ ಪ್ರೀತ ಸರ್ವದ | ಅಸುರ ವೈರಿಯು ನೇಮದಿಂದ |
ವಸುಧೆಯಾಳಗೆ ಬಲಿದಾನೇಕಾ |
ದಶರುದ್ರರೊಳು ಬಲು ಗುಣವಂತ ||2||
ದಕ್ಷ ಪ್ರಜೇಶ್ವರನಧ್ವರ | ರಕ್ಷಣೆ ಮಾಡಿದ ದಕ್ಷಮೂರ್ತಿ |
ಮೋಕ್ಷಕೆ ಮನಸು ಕೊಡುವ |
ನಿಟಲೇಕ್ಷವಂತ ಶಾಂತ ||3||
ಕರಿಚರ್ಮಾಂಬರಧಾರಿ ವಾರಿ | ಧರ ತ್ರಿಶೂಲ
ಡಮರುಗ ಪಾಣಿ |ಶರಗದ್ದುಗೆ ಸುಮೇರುವೇದಾ |
ತುರಗವಾಗಿರಲಂದು ಅಂದದಿ||4||
ನಮಿಸಿ ಬರಲಿ ಬೇಡಿ ಭವದಿ | ಮಮತೆ
ಓಡಿಸಿ ಭಕುತಿಯಿಂದಲಿ |ರಮೆಯರಸ ವಿಜಯವಿಠ್ಠಲನ್ನ |
ಶಮೆ ದಮೆಯಿಂದ ಪೂಜಿಪ ಧೀರ ||5||
Sivana nodiro indu stavana madiro |
Tavakadinda tilidu avagunamgala toredu nitya ||pa||
Antakapura vairi | dinanta vrushabaneri |
Santi sahita janaranganadi | nintu matu |
Lalipa mahima ||1||
Surajanate prita sarvada | asura vairiyu nemadinda |
Vasudheyalage balidaneka |
Dasarudrarolu balu gunavanta ||2||
Daksha prajesvaranadhvara | rakshane madida dakshamurti |
Mokshake manasu koduva |
Nitalekshavamta santa ||3||
Karicarmambaradhari vari | dhara trisula
Damaruga pani |Saragadduge sumeruveda |
Turagavagiralandu amdadi||4||
Namisi barali bedi Bavadi | mamate
Odisi Bakutiyindali |rameyarasa vijayaviththalanna |
Same dameyinda pujipa dhira ||5||
2 thoughts on “Sivana nodiro indu stavana madiro”