ಕಂಡೆ ನಾ ಗೋವಿಂದನಾ
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ ||ಪ||
ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಯುತಾನಂತನ
ಸಾಸಿರ ನಾಮದ ಶ್ರೀಹೃಷೀಕೇಶನ
ಶೇಷಶಯನ ನಮ್ಮ ವಸುದೇವಸುತನ ||೧||
ಮಾಧವ ಮಧುಸೂದನ ತ್ರಿವಿಕ್ರಮ
ಯಾದವಕುಲ ಜನ ಮುನಿವಂದ್ಯನ
ವೇದಾಂತವೇದ್ಯನ ಇಂದಿರಾರಮಣನ
ಆದಿಮೂರುತಿ ಪ್ರಹ್ಲಾದವರದನ ||೨||
ಪುರುಷೋತ್ತಮ ನರಹರಿ ಶ್ರೀಕೃಷ್ಣನ
ಶರಣಾಗತ ವಜ್ರಪಂಜರನ
ಕರುಣಾಕರ ನಮ್ಮ ಪುರಂದರವಿಠಲನ
ನೆರೆ ನಂಬಿದೆನು ಬೇಲೂರ ಚೆನ್ನಿಗನ ||೩||
Kande na govindana
Pundarikaksha pandavapaksha krushnana ||pa||
Kesava narayana srikrushnana
Vasudeva acyutanantana
Sasira namada srihrushikesana
Seshasayana namma vasudevasutana ||1||
Madhava madhusudana trivikrama
Yadavakula jana munivandyana
Vedantavedyana indiraramanana
Adimuruti prahladavaradana ||2||
Purushottama narahari srikrushnana
Saranagata vajrapanjarana
Karunakara namma purandaravithalana
Nere nambidenu belura cennigana ||3||
3 thoughts on “Kande na govindana(Kesava nama)”