ಶರಣು ಶ್ರೀ ಗುರುರಾಘವೇಂದ್ರಗೆ
ಶರಣು ಯತಿಕುಲತಿಲಕಗೆ || ಪ ||
ಶರಣು ಶರಣರ ಪೊರೆವ ಕರುಣಿಗೆ
ಶರಣು ಹರಿಗುಣ ಲೋಲಗೆ || ಅ ||
ಮಧ್ವಮತ ಶುಭವಾರುಧಿಚಂದ್ರಗೆ
ಸಿಧ್ಧಸಾಧನಮೂರ್ತಿಗೆ
ಬಧ್ಧ ಶ್ರೀಹರಿದ್ವೇಷಿ ಮಾಯ್ಗಳ
ಗೆದ್ದ ರಘುಕುಲ ರಾಮದೂತಗೆ – ಶರಣು || ೧ ||
ನಿತ್ಯನಿರ್ಮಲ ಪುಣ್ಯಗಾತ್ರಗೆ
ಭೃತ್ಯಪಾಲಕ ಸುಗುಣಪಾತ್ರಗೆ
ಸತ್ಯ ಜ್ಞಾನ ಸುಮೋದ ನೇತ್ರಗೆ
ಸ್ತುತ್ಯ ಯತಿವರ ಸುಜನಮಿತ್ರಗೆ – ಶರಣು || ೨ ||
ಮೋದದಾಯಕ ಭೇದಸಾಧಕ
ಮೇದಿನಿಸುರಜಾಲನಾಯಕ
ಮೋದತೀರ್ಥರ ಚರಣಸೇವಕ
ಆದಿ ಗುರುಜಗನ್ನಾಥವಿಠ್ಠಲ ದೂತಗೆ – ಶರಣು || ೩ ||
Saranu sri gururagavendrage
Saranu yatikulatilakage || pa ||
Saranu saranara poreva karunige
Saranu hariguna lolage || a ||
Madhvamata subavarudhicandrage
Sidhdhasadhanamurtige
Badhdha sriharidveshi maygala
Gedda ragukula ramadutage – saranu || 1 ||
Nityanirmala punyagatrage
Brutyapalaka sugunapatrage
Satya j~jana sumoda netrage
Stutya yativara sujanamitrage – saranu || 2 ||
Modadayaka bedasadhaka
Medinisurajalanayaka
Modatirthara charanasevaka
Adi gurujagannathaviththala dutage – saranu || 3 ||
One thought on “Saranu sri guru raghavenrage”