ರಾಯರ ನೋಡಿರೈ – ಶುಭತಮ ಕಾಯರ ಪಾಡಿರೈ || ಪ ||
ತೋಯಜಪತಿ ನಾರಾಯಣ ಪದಯುಗ
ಭೃಂಗ – ಭಕ್ತ ಕೃಪಾಂಗ || ಅ ||
ಸುಂದರ ಮುಖ ಅರವಿಂದ ಲೋಚನ – ಘ್ರಾಣ
ಕುಂದಕುಟ್ಮಲಸಮರದನ – ರಾಜಿತವದನ
ಮಂದಸ್ಮಿತಯುತ ದ್ವಂದ್ವ ಓಷ್ಟ ಶ್ರುತಿ
ಛಂದವಾಗಿಹ ಚುಬುಕಾ – ಫಾಲಾದಿ ತಿಲಕಾ
ಕಂಧರಯುತ ಪುರಂದರ ಕರಿಕರ
ವೃಂದವಾಗಿಹ ಬಾಹುಯುಗಳಾ – ಮೂಲಾಂಕಿತ ಕೊರಳ
ಇಂದಿರಾಪತಿ ನಿಜಮಂದಿರವೆನಿಸುವ
ಸುಂದರ ಹೃದಯದಿ ನಾಮಾ – ಹಚ್ಚಿದ ಪ್ರೇಮಾ || ೧ ||
ಹಸ್ತದಿ ರಾಜಿಪ ಪುಸ್ತಕ ಮಣಿಮಾಲೆ
ಸ್ವಸ್ಥಿಕಾಸನಸ್ಥಿತಮೋದ – ಕೃತ ವಿನೋದ
ಮಸ್ತಕದಿಂದಲಿ ವಿಸ್ತ್ರಿತ ಕಾಷಾಯ
ವಸ್ತ್ರದಿ ಶೋಭಿಪ ಗಾತ್ರ – ಶುಭ ಚಾರಿತ್ರ
ಸ್ವಸ್ಥ ಮನದಿ ಪ್ರಾಶಸ್ಥ ಹರಿಯ ಪಾದ
ಸ್ವಸ್ತಿಕ ಯುಗಳ ಧ್ಯಾನ – ಮಾಡುವ ಜ್ಞಾನ
ಧ್ವಸ್ತ ದೋಷ ಸಮಸ್ತ ಜಗತ್ತಿಗೆ
ಸ್ವಸ್ಥಿದ ನೆನೆನಿದ ಭೂಪಾ – ಭವ್ಯ ಪ್ರತಾಪ || ೨ ||
ಕುಟಿಲ ವಿಮಲತರ ಪಟಲಾಂಧಕಾರಕೆ
ಪಟುತರ ದಿನಮಣಿ ರೂಪ – ನಿಜಜನ ಸುರಪ
ಸ್ಫುಟ ಮೋದತೀರ್ಥರ ಸ್ಫಟಿಕ ಜಲಧಿಯೊಳು
ಸ್ಫುಟಿತಹಾಟಕಚಂದ್ರ – ಸದ್ಗುಣಸಾಂದ್ರ
ಶಠಮಾಳ್ಪರ ಬಹು ಹಟದಿ ಶಿಕ್ಷಿಸುವ
ಚಟುಲ ಜನರ ಪರಿಪಾಲ – ಕರುಣ ವಿಶಾಲ
ಕಿಟಿರದನ ಭವನದಿತಟಕೃತಮಂದಿರ
ದಿಟ ಗುರುಜಗನ್ನಾಥವಿಠ್ಠಲ ದೂತ || ೩ ||
Rayara nodirai – subatama kayara padirai || pa ||
Toyajapati narayana padayuga
Brunga – Bakta krupanga || a ||
Sundara muka aravinda locana – grana
Kundakutmalasamaradana – rajitavadana
Mandasmitayuta dvandva oshta Sruti
Chandavagiha cubuka – paladi tilaka
Kandharayuta purandara karikara
Vrundavagiha bahuyugala – mulankita korala
Indirapati nijamandiravenisuva
Sundara hrudayadi nama – haccida prema || 1 ||
Hastadi rajipa pustaka manimale
Svasthikasanasthitamoda – kruta vinoda
Mastakadindali vistrita kashaya
Vastradi sobipa gatra – suba caritra
Svastha manadi prasastha hariya pada
Svastika yugala dhyana – maduva j~jana
Dhvasta dosha samasta jagattige
Svasthida nenenida bupa – Bavya pratapa || 2 ||
Kutila vimalatara patalandhakarake
Patutara dinamani rupa – nijajana surapa
Sputa modatirthara spatika jaladhiyolu
Sputitahatakacamdra – sadgunasandra
Sathamalpara bahu hatadi sikshisuva
Catula janara paripala – karuna visala
Kitiradana bavanaditatakrutamandira
Dita gurujagannathaviththala duta || 3 ||
One thought on “Raayara nodirai”