ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ
ಸಂಗಸುಖವಿತ್ತು ಕಾಯೊ ಕರುಣಾಸಾಗರ ||ಪ||
ಅರಿಯರೊ ನೀನಲ್ಲದೆ ಮತ್ತನ್ಯ ದೈವರ
ಮರೆಯರೊ ನೀ ಮಾಡಿದ ಅನಿಮಿತ್ತೋಪಕಾರ
ತೊರೆಯರೊ ನಿನ್ನಂಘ್ರಿಸೇವೆ ಪ್ರತಿವಾಸರ
ಅರಿಯರೊ ಪರತತ್ವವಲ್ಲದೆ ಇತರ ವಿಚಾರ ||೧||
ಮೂಕ ಬಧಿರರಂತಿಪ್ಪರೊ ನೋಳ್ಪ ಜನಕೆ
ಕಾಕುಯುಕುತಿಗಳನವರು ತಾರರೊ ಮನಕೆ
ಸ್ವೀಕರಿಸರನರ್ಪಿತವೊಂದು ಕಾಲಕೆ
ಆ ಕೈವಲ್ಯ ಭೋಗ ಸುಖ ಅವರಿಗೆ ಬೇಕೆ ||೨||
ಜಯಾಜಯ ಲಾಭಾಲಾಭ ಮಾನಾಪಮಾನ
ಭಯಾಭಯ ಸುಖ-ದುಃಖ ಲೋಷ್ಟಕಾಂಚನ
ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನ
ಶ್ರೀಯರಸ ಚಿಂತಿಸುವರೊ ನಿನ್ನ ಆಧೀನ ||೩||
ಈಶಿತವ್ಯರೆಂತಿಪ್ಪರೇಕಾಂತ ಭಕ್ತರು
ದೇಶಕಾಲೋಚಿತ ಧರ್ಮಕರ್ಮಾಸಕ್ತರು
ಆಶಾಕ್ರೋಧ ಲೋಭ ಮೋಹ ಪಾಶಮುಕ್ತರು
ಈ ಸುಜನರೇ ಶಾಪಾನುಗ್ರಹ ಶಕ್ತರು ||೪||
ಕಂಡಕಂಡಲ್ಲಿ ವಿಶ್ವರೂಪ ಕಾಂಬರು
ಉಂಡು ಉಣಿಸಿದ್ದೆಲ್ಲ ನಿನ್ನ ಯಜ್ಞವೆಂಬರು
ಬಂಡುಣಿಯಂದದಿ ನಾಮಾಮೃತವನುಂಬರು
ಹೆಂಡಿರು ಮಕ್ಕಳು ನಿನ್ನ ತೊಂಡರೆಂಬರು ||೫||
ಬಿಡರು ತಮ್ಮ ಸ್ವಧರ್ಮಗಳೇನು ಬಂದರು
ಬಿಡರು ದೈನ್ಯ ಒಬ್ಬರಿಗು, ಲೋಕವಂದ್ಯರು
ಪಿಡಿಯರು ನಿನ್ನ ದ್ವೇಷಿಗಳಿಂದೇನು ಬಂದರು
ಕೊಡುವರು ಬೇಡಿದಿಷ್ಟಾರ್ಥ , ನಿತ್ಯಾನಂದರು ||೬||
ನಗುವರೊ ರೋದಿಸುವರೊ ನಾಟ್ಯವಾಡೋರೊ
ಬಗೆಯರೊ ಬಡತನ ಭಾಗ್ಯ ಭಾಗವತರು
ತೆಗೆಯರೊ ನಿನ್ನಲ್ಲಿ ಮನವೊಮ್ಮೆಯಾದರು
ಜಗನ್ನಾಥವಿಠಲ ನಿನ್ನವರೇನು ಧನ್ಯರೊ ||೭|
Ranga ninna kondaduvamangalatmara |
Sanga sukavittukayokaruna sagara |
Ariyaro ninallade mattanya daivara |
Mareyaro ni madida animittopakara |
Toreyaro ninnangri seve prati vasara |
Ariyaro paratattva vallade itara vicara || 1 | |
Muka badirantipparo nolpajanake |
Kaku yatigalanutararo manake |
Svikarisanarpita ondu kalake |
A kaivalya boga suka avarige beke || 2 | |
Jayapajaya manapamana |
Bayabaya suka duhka loshta kancana |
Priya priya nindastutigalanudina |
Sriyarasachintisuvaro ninna adhina | |3 | |
Isita vyarentippare kantabaktaru |
Desa kalocita dharma karmasaktaru |
Asakrodha lobamohamuktaru | i
Sujanara sapanugraha saktaru || 4 | |
Kanda kandallavisvarapakambaro |
Undu unisiddella ninna yaj~javembaru |
Banduniyandadi namamrutasaviyuvaro |
Hendaru makkalu ninna tomdarembaro || 5 | |
Bidaru tamma svadharmagalenu bandaru |
Badaru dainya obbarigu loka vandyaru |
Pidiyaru ninna dveshigalimdenu bamndaru |
Koduvaru bedidishtartha nityanandaru || 6 ||
Naguvaro rodisuvarunatyavaduvaro |
Bageyaro badatana bagavataro |
Tegeyaro ninnalli manavanonmeyadaru |
Jagannatha vithalaninnavarenudhanyaro || 7 ||
2 thoughts on “Ranga ninna kondaduva”