ಹಬ್ಬ ಸುಳಾದಿ
ಧ್ರುವತಾಳ
ಹಬ್ಬಂಗಳಿವೆ ಕೇಳಿ ಊರ್ಬಿಯೊಳಗೆ ವೈ
ದರ್ಭರಮಣ ಕರುಣಾಬ್ಧಿ ಒಲಿದ ಬಳಿಕ
ಒಬ್ಬರ ಕಾಡಿಬೇಡಿ ಒಬ್ಬರ ಹಬ್ಬ ಮಾಡಿದರಿಂದ
ಉಬ್ಬುತೀರದು ಕಾಣೋ ಆರ್ಬುದ ಜನಕ್ಕೆ
ಅಬ್ಬಿದಾವರ್ತಿ ಧಾನ್ಯರುಬ್ಬಿಗಂಜಿಯ ಕಾಸಿ
ಹಬ್ಬಿದ ಸುಖಮಾನ ವಬ್ಬಿಗೆ ಸತಿಪತಿ
ಇಬ್ಬರಾನಂದಲ್ಲಿ ಹೆಬ್ಬಟ್ಟಿನಲ್ಲಿ ಸವಿದು
ಸಭ್ಯವಾಗಿಪ್ಪುದು ಹಬ್ಬವೆ ಬಲಹಬ್ಬ
ನಿರ್ಭಯವಾದ ರತ್ನಗರ್ಭದಲ್ಲಿ ಕುಟೀರ
ಗುಬ್ಬಿಗೂಡಿನಷ್ಟು ಗರ್ಭವಾಸವೆ ರಚಿಸಿ
ಹಬ್ಬಿಗಿಕ್ಕದೆ ಏನು ನಿರ್ಬಂಧನವಿಲ್ಲದೆ
ಲಭ್ಯವಾಗಿಪ್ಪ ಗರ್ಭದ ಸುಖಿಗಳವರು
ಕರ್ಬುರನಂತೆ ತಿಂದು ಕೊಬ್ಬಿ ತಿರುಗುವಂಗೆ
ದುರ್ಭಾಗ್ಯವಲ್ಲದೆ ಹಬ್ಬವೆನಿಸುವುದೆ
ಕಬ್ಬು ಬಿಲ್ಲಿನಯ್ಯ ವಿಜಯವಿಠ್ಠಲರೇಯ
ದರ್ಭೆ ಏರಿಸಲು ಹಿಬ್ಬರ ಕರವಪಿಡಿವಾ || ೧ ||
ಮಟ್ಠತಾಳ
ಕಾಮಕ್ರೋಧಂಗಳು ಬಿಡುವುದೇ ಬಲು ಹಬ್ಬ
ನೇಮ ನಿತ್ಯವನ್ನೇ ಮಾಡುವುದೇ ಹಬ್ಬ
ತಾಮಸ ಜನರುಗಳ ಬಿಡುವುದೇ ಮಹಾ ಹಬ್ಬ
ಕಾಮನ ಉಪಹತಿಗೆ ಅಂಜುವದೇ ಹಬ್ಬ
ಭೂಮಿಯೊಳಗೆ ಜ್ಞಾನಿಯಾಗುವದೇ ಹಬ್ಬ
ಸ್ವಾಮಿ ಭೃತ್ಯನ್ಯಾಯ ತಿಳಿಯುವದೇ ಮಹಾ ಹಬ್ಬ
ಶ್ರೀ ಮಾರುತಿ ಮತವ ಹಾರೈಪುದೇ ಹಬ್ಬ
ಯಾಮಯಾಮಕ್ಕೆ ಹರಿನಾಮ ನೆನೆವುದೇ ಹಬ್ಬ
ವ್ಯೋಮಗಂಗೆಯ ಜನಕ ವಿಜಯವಿಠ್ಠಲ ಹರಿಯ
ಧಾಮವ ಜಯಸುವದೇ ಧರೆಯೊಳ ಮಹಾ ಹಬ್ಬ || ೨ ||
ತ್ರಿವಿದಿತಾಳ
ಬಂದ ದುರಿತಗಳ ಪೋಗಾಡುವುದೇ ಹಬ್ಬ
ಮಂದಾಕಿನಿಯಲ್ಲಿ ಮಜ್ಜನವೇ ಹಬ್ಬ
ನಿಂದ್ಯಕಾರರ ನಿತ್ಯ ನಿಂದೆ ಮಾಳ್ಪುದೇ ಹಬ್ಬ
ವಂದಿಸಿ ಗುರುಗಳಿಗೆ ಎರಗುವದೇ ಹಬ್ಬ
ಮುಂದೆ ಪುಟ್ಟುವ ಜನನವ ನೀಗಿಕೊಂಬುದೇ ಹಬ್ಬ
ಬಂಧನವಾಗದ ಯೋಚನೆ ಬಲು ಹಬ್ಬ
ತಂದೆ ತಾಯಿಗಳಿಗೆ ಅನುಕೂಲವೇ ಹಬ್ಬ
ಅಂದನಗುತ ಸಂತೋಷವಾಹುದೇ ಹಬ್ಬ
ಕುಂದು ಸಜ್ಜನರಿಗೆ ನುಡಿಯದಿಪ್ಪದೇ ಹಬ್ಬ
ಬಿಂದು ಮಾತುರ ಭೋಗ ಬಯಸದಿಪ್ಪದೇ ಹಬ್ಬ
ಬಂದ ಅತಿಥಿಗಳ ಪೂಜಿಸುವುದೇ ಹಬ್ಬ
ಮಂದಿರದಲ್ಲಿ ಕಲಹವಿಲ್ಲದ್ದೇ ಮಹ ಹಬ್ಬ
ಇಂದು ನಾಳಿಗೆ ಇಂಬೊ ಚಿಂತೆ ಬಿಡುವುದೇ ಹಬ್ಬ
ಸಂದಣೆ ತೊರೆದು ಏಕಾಂತ ವಾಹದೆ ಹಬ್ಬ
ನಿಂದಿದ್ದಖಿಳರೊಳು ನರೆಯದಿಪ್ಪುದೇ ಹಬ್ಬ
ನಿಂದೆ ಬಾರದಂತೆ ಬಾಳುವುದೇ ಹಬ್ಬ
ಇಂದ್ವರ್ಕವುಳ್ಳ ನಕ ವಿಜಯವಿಠಲರೇಯನ
ಒಂದೇ ಭಕುತಿಯಲಿ ಭಜಿಪದೆ ಮಹಾ ಹಬ್ಬ || ೩ ||
ಅಟ್ಟತಾಳ
ಋಣರೂಪವಾಗದ ಸಂಸಾರವೇ ಹಬ್ಬ
ಗುಣವಂತನಾಗಿ ಸಂಚರಿಸುವುದೇ ಹಬ್ಬ
ಕನಸೀಲಿ ಹಣವನ್ನು ಬಯಸದಿಪ್ಪದೇ ಹಬ್ಬ
ಮನವಾಚ ಕಾಯಕ ಬಡತನವೇ ಹಬ್ಬ
ವನಜನಾಭನ ನೋಡಿ ಪಾಡುವುದೇ ಹಬ್ಬ
ದಿನಪ್ರತಿದಿನ ಸತ್ಕರ್ಮಾಚರಣೆ ಹಬ್ಬ
ಮಣಿಕರ್ಣಿಕೆಯಲ್ಲಿ ದೇಹತ್ಯಾಗವೇ ಹಬ್ಬ
ಮನೆ ನೆರೆ ಹೊರೆ ನೋಡಿ ಬಳಲದಿಪ್ಪದೆ ಹಬ್ಬ
ಅನಿಮಿಷ ಜಾಗರ ಹರಿವಾಸರವೇ ಹಬ್ಬ
ತನುವಿಗೆ ವ್ಯಾಧೆ ಬಾರದ್ದೊಂದೇ ಮಹಾ ಹಬ್ಬ
ಚಿನುಮಯ ಮೂರುತಿ ವಿಜಯವಿಠ್ಠಲರೇಯನ
ಮನಸಿನೊಳನುದಿನ ಈಕ್ಷಿಸುವುದೇ ಹಬ್ಬ || ೪ ||
ಆದಿತಾಳ
ಕಾಲನ ಭಾದಿಗೆ ಸಿಲುಕದಿಪ್ಪದೆ ಹಬ್ಬ
ಕಾಲಕಾಲಕೆ ತೀರ್ಥಯಾತ್ರೆ ಮಾಳ್ಪದೆ ಹಬ್ಬ
ಕೇಳುವ ಹರಿಕಥಾ ಶ್ರವಣವೇ ದೊಡ್ಡ ಹಬ್ಬ
ನಾಲಿಗಿಂದಲಿ ಹರಿಯ ಸ್ತೋತ್ರ ಮಾಳ್ಪದೇ ಹಬ್ಬ
ಆಳಾಗಿ ಒಬ್ಬನಲ್ಲಿ ವಶವಾಗದ್ದೊಂದು ಹಬ್ಬ
ಹಾಳು ಹರಟೆ ಬಿಟ್ಟು ಬಿಟ್ಟು ಹೊತ್ತು ಗಳಿಯುವುದೇ ಹಬ್ಬ
ಶ್ರೀಲೋಲ ಪರನೆಂದು ಕೂಗ್ಯಾಡುವದೇ ಹಬ್ಬ
ವಾಲಯಗಯದಲ್ಲಿ ಕುಲಪವಿತ್ರವೇ ಹಬ್ಬ
ಭಾಳಲಿಪಿಗೆ ನೋಯ ಆಡದಿಪ್ಪದೇ ಹಬ್ಬ
ವೇಳೆಗೆ ದೊರೆತದು ಭುಂಜಿಸುವುದೇ ಹಬ್ಬ
ಪಾಲಾಬ್ದಿಶಾಯಿ ನಮ್ಮ ವಿಜಯವಿಠ್ಠಲರೇಯನ
ಊಳಿಗದವನಾಗಿ ವಾಲ್ಗೈಸುವುದೇ ಹಬ್ಬ || ೫ ||
ಜತೆ
ದಂಪತಿಗಳು ಏಕವಾಗಿಪ್ಪುದೇ ಹಬ್ಬ |
ಶಂಪದಂತೆ ವಿಜಯವಿಠ್ಠಲ ಪೊಳೆವುದೇ ಹಬ್ಬ || ೬ ||
Dhruva tala
Habbangalive keli urbiyolage vai
Darbaramana karunabdhi olida balika
Obbara kadibedi obbara habba madidarinda
Ubbutiradu kano Arbuda janakke
Abbidavarti dhanyarubbiganjiya kasi
Habbida sukamana vabbige satipati
Ibbaranamdalli hebbattinalli savidu
Sabyavagippudu habbave balahabba
Nirbayavada ratnagarbadalli kutira
Gubbigudinashtu garbavasave racisi
Habbigikkade Enu nirbandhanavillade
Labyavagippa garbada sukigalavaru
Karburanamte timdu kobbi tiruguvange
Durbagyavallade habbavenisuvude
Kabbu billinayya vijayaviththalareya
Darbe Erisalu hibbara karavapidiva || 1 ||
mattha tala
Kamakrodhangalu biduvude balu habba
Nema nityavanne maduvude habba
Tamasa janarugala biduvude maha habba
Kamana upahatige amjuvade habba
Bumiyolage j~janiyaguvade habba
Svami brutyanyaya tiliyuvade maha habba
Sri maruti matava haraipude habba
Yamayamakke harinama nenevude habba
Vyomagangeya janaka vijayaviththala hariya
Dhamava jayasuvade dhareyola maha habba || 2 ||
trividi tala
Banda duritagala pogaduvude habba
Mandakiniyalli majjanave habba
Nindyakarara nitya ninde malpude habba
Vandisi gurugalige eraguvade habba
Munde puttuva jananava nigikombude habba
Bandhanavagada yocane balu habba
Tande tayigalige anukulave habba
Andanaguta santoshavahude habba
Kundu sajjanarige nudiyadippade habba
Bindu matura boga bayasadippade habba
Banda atithigala pujisuvude habba
Mandiradalli kalahavilladde maha habba
Indu nalige imbo chinte biduvude habba
Sandane toredu ekanta vahade habba
Nindiddakilarolu nareyadippude habba
Ninde baradante baluvude habba
Indvarkavulla naka vijayavithalareyana
Onde Bakutiyali Bajipade maha habba || 3 ||
atta tala
Runarupavagada samsarave habba
Gunavantanagi samcarisuvude habba
Kanasili hanavannu bayasadippade habba
Manavaca kayaka badatanave habba
Vanajanabana nodi paduvude habba
Dinapratidina satkarmacarane habba
Manikarnikeyalli dehatyagave habba
Mane nere hore nodi balaladippade habba
Animisha jagara harivasarave habba
Tanuvige vyadhe baraddonde maha habba
Chinumaya muruti vijayaviththalareyana
Manasinolanudina ikshisuvude habba || 4 ||
Adi tala
Kalana badige silukadippade habba
Kalakalake tirthayatre malpade habba
Keluva harikatha sravanave dodda habba
Naligindali hariya stotra malpade habba
Alagi obbanalli vasavagaddondu habba
Halu harate bittu bittu hottu galiyuvude habba
Srilola paranendu kugyaduvade habba
Valayagayadalli kulapavitrave habba
Balalipige noya adadippade habba
Velege doretadu bumjisuvude habba
Palabdisayi namma vijayaviththalareyana
Uligadavanagi valgaisuvude habba || 5 ||
jate
Dampatigalu ekavagippude habba |
Sampadante vijayaviththala polevude habba || 6 ||
3 thoughts on “Habba suladi”