ಎಲ್ಲ ದೇವರ ಗಂಡ | ಕೃಷ್ಣ
ಚಿಲ್ಲರೆ ದೈವರ ಮಿಂಡ ||pa||
ಪಾದದಿ ನದಿಯನು ಪೆತ್ತ | ಅದನು
ರುದ್ರನು ಶಿರದಲಿ ಪೊತ್ತ
ಮಾಧವನ್ಹೊಕ್ಕಳ ಜಾತ | ಶತ
ಮೋದನು ಲೋಕ ಪ್ರಖ್ಯಾತ ||1||
ಸೃಷ್ಟಿ ಸಂಹಾರಗೈದ | ಪರ
ಮೇಷ್ಟಿ ರುದ್ರರನಾಳ್ದ
ಯೆಟ್ಟ ದೈತ್ಯರ ಶಿರ ಮುರಿದ | ದುರಿತ-
ದೃಷ್ಟಿಸಿ ನಾಶಗೈದ ||2||
ಬಂಟರ ಪಾಲಕನೀತ | ವೈ-
ಕುಂಠದ ಒಡೆಯನು ದಾತ
ತುಂಟರ ಮಡಹುವ ಸತತ | ನಮಗೆ
ನಂಟನು ಗೋಕುಲನಾಥ ||3||
ಮನಸಿಗೆ ಬಂದುದು ಸಿದ್ಧ | ಪ್ರತಿ
ಯೆಣಿಸುವ ಜೀವನೆ ಬದ್ಧ
ನೆನೆಸುವರಲಿ ತಾನಿದ್ದ | ದಯ
ವನಧಿಯು ಬೆಣ್ಣೆಯ | ಕದ್ದ ||4||
ದುರಿತ ದುರುಳರ ಭಂಗ | ತಾ
ನಿರುತ ಮಾಡುವ ರಂಗ
ಜಯೇಶವಿಠಲ ತುಂಗ | ಮಹಿ
ಮಾ ರಕ್ಷಿಸು ದಯಾಪಾಂಗ ||5||
Ella devara ganda | krushna
Chillare daivara minda ||pa||
Padadi nadiyanu petta | adanu
Rudranu Siradali potta
Madhavanhokkala jata | Sata
Modanu loka prakyata ||1||
Srushti samharagaida | para
Meshti rudraranalda
Yetta daityara Sira murida | durita-
Drushtisi nasagaida ||2||
Bantara palakanita | vai-
Kunthada odeyanu data
Tuntara madahuva satata | namage
Nantanu gokulanatha ||3||
Manasige bandudu siddha | prati
Yenisuva jivane baddha
Nenesuvarali tanidda | daya
Vanadhiyu benneya | kadda ||4||
Bava baya Banga | ta
Niruta maduva ranga
Jayesavithala tunga | mahi
Ma rakshisu dayapanga ||5||
One thought on “Ella devara genda krishna”