ಆರೋಗಣೆಯ ಮಾಡು ಅಂಬುಜನಯನೇ ಸಾಮವೇದಸದನೇ|
ಮಾರಜನನಿಯೇ ಮಧುಸೂದನಪ್ರಿಯೇ ಕಾಮಿತಫಲದಾಯೇ ಗೌರಿಯೇ||
ಶುಭ್ರಸ್ನಾನವ ಮಾಡಿ ಸುಮತಿಯರು ಮುದದಿಂದ ಶುಭ್ರವಸ್ತ್ರವನುಡಿಸಿ ಗೌರಿಗೆ
ತಿದ್ದಿ ತಿಲಕವನಿಟ್ಟು ತೀವ್ರದಿ ಗೌರಿಯ ವಜ್ರಮಾಣಿಕ್ಯದ ಪೀಠದಲ್ಲಿ ಕುಳಿಸ್ವರೋ ||1||
ಹಪ್ಪಳ ಅತ್ತಿರಸ ಒಪ್ಪುಳ್ಳ ಲಡ್ಡಿಗೆ ಚಕ್ಕುಲಿ ಕರಚಿಯಕಾಯ್ಗಳು
ಸಕ್ಕರೆ ಫೇಣಿ ಕೆನೆಮೊಸರು ಮಧು ಕ್ಷೀರ ಮೀಸಲಾದ ಅಡಿಗೆ ಸುವಾಸಿನಿಯರು ಬಡಿಸುವರು||2||
ಅತಿಹಿತದಿಂದಲಿ ಮಾಡಿದ ಅಡಿಗೆಯ ದಳಿಯ ತಪ್ಪದೆ ಬಡಿಸುವರು
ಪುಡಿಎಣ್ಣೋರಿಗೆ ಶೀಕಿಯದ ಉಂಡೆಗಳು ಆದಿಕೊಲ್ಹಾಪುರದ ದೇವಿ ಮಹಾಲಕ್ಷ್ಮೀಗೆ||3||
ಮೀಸಲು ಮಂಡಿಗೆ ಸೂಸಲ ಕಡುಬು ದೋಸೆ ಎಣ್ಣೋರಿಗೆ ನವನೀತ
ಕಾಸಿದ ತುಪ್ಪ ಕೆನೆಮೊಸರು ಮಧು ಕ್ಷೀರ ಭೀಮೇಶಕೃಷ್ಣನ ರಾಣಿ ಭುಂಜಿಸು ಬೇಗ||4||
Aroganeya madu ambujanayane
Samavedasadane|
Marajananiye madhusudanapriye
Kamitapaladaye gauriye||
Subrasnanava madi sumatiyaru mudadinda
Subravastravanudisi gaurige
Tiddi tilakavanittu tivradi gauriya
Vajramanikyada pithadalli kulisvaro ||1||
Happala attirasa oppulla laddige
Chakkuli karaciyakaygalu
Sakkare peni kenemosaru madhu kshira
Misalada adige suvasiniyaru badisuvaru||2||
Atihitadindali madida adigeya
daliya tappade badisuvaru
Pudi^^ennorige sikiyada undegalu
Adikolhapurada devi mahalakshmige||3||
Misalu mandige susala kadubu
Dose ennorige navanita
Kasida tuppa kenemosaru madhu kshira
Bimesakrushnana rani Bunjisu bega||4||
2 thoughts on “Gowri neivedhya haadu”