ಜಗದೋದ್ಧಾರನ ಆಡಿಸಿದಳೆಶೋದಾ ||ಪ||
ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋದೆ ||ಅ.ಪ||
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ ||೧||
ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆಶೋದಾ ||೨||
ಪರಮ ಪುರುಷನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆಶೋದಾ ||೩||
Jagadoddharana adisidale yashode
Jagadoddharana maganendu tiliyuta
sugunanta rangana adisidale yashode||
Nigamake silukada aganita mahimana
magugale manikyana adisidale yashode||1||
Anoraniyana mahato mahimana
aprameyana na adisidale yashode||2||
Parama purusana paravasudevana
purandara vithalana adisidale yashode||3||
3 thoughts on “Jagadoddharana adisidale yashode”