ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ,
ಅಲ್ಲಿದೆ ನಮ್ಮ ಮನೆ ||ಪ||
ಕದಬಾಗಿಲಿರಿಸಿಹ ಕಳ್ಳ ಮನೆ ಇದು
ಮುದದಿಂದ ಓಲ್ಯಾಡೊ ಸುಳ್ಳು ಮನೆ
ವೈಕುಂಠವೆಂಬುದೆ ನಮ್ಮ ಸ್ವಂತ ಮನೆ
ಇದ್ದು ಇಲ್ಲದೆ ಹೋಗೋ ಕನಸಿನ ಮನೆ ಇದು ||೧||
ಮಾಳಿಗೆಮನೆಯೆಂದು ನೆಚ್ಚಿ ಕೆಡಲು ಬೇಡ
ಕೇಳಯ್ಯ ಹರಿಕಥೆ ಶ್ರವಣಂಗಳ
ನಾಳೆ ಯಮದೂತರು ಬಂದೆಳೆದೊಯ್ಯುವಾಗ
ಮಾಳಿಗೆ ಮನೆ ಸಂಗಡ ಬಾರದಯ್ಯ ||೨||
ಮಡದಿಮಕ್ಕಳು ಎಂಬೋ ಹಂಬಲ ನಿನಗ್ಯಾಕೋ
ಕಡುಗೊಬ್ಬುತನದಲಿ ಕೊಬ್ಬಿನಡೆಯದಿರೋ
ಒಡೆಯ ಶ್ರೀಪುರಂದರವಿಠಲರಾಯನ
ಧೃಡಭಕ್ತಿಯಿಂದಲಿ ಭಜಿಸಿಕೋ ಮನುಜ ||೩||
Allide nammane, illi bande summane,
Allide namma mane ||pa||
Kadabagilirisiha kalla mane idu
Mudadimda olyado sullu mane
Vaikunthavembude namma svanta mane
Iddu illade hogo kanasina mane idu ||1||
Maligemaneyendu necci kedalu beda
Kelayya harikathe sravanangala
Nale yamadutaru bamdeledoyyuvaga
Malige mane samgada baradayya ||2||
Madadimakkalu embo hambala ninagyako
Kadugobbutanadali kobbinadeyadiro
Odeya sripurandaravithalarayana
Dhrudabaktiyindali bajisiko manuja ||3||