dasara padagalu · kanakadasaru · krishna · MADHWA

Yadavaraya brundavanadolu

ಯಾದವರಾಯ ಬೃಂದಾವನದೊಳು
ವೇಣು ನಾದವ ಮಾಡುತಿರೆ ||ಪ||

ರಾಧಾ ಮುಂತಾದ ಗೋಪಿಯರೆಲ್ಲ
ಮಧುಸೂದನ ನಿನ್ನನು ಸೇವಿಸುತಿರೆ
ಸುರರು ಅಂಬರದಿ ಸಂದಣಿಸಿರೆ
ಅಪ್ಸರ ಸ್ತ್ರೀಯರು ಮೈ ಮರೆತಿರೇ||ಅ.ಪ||

ಕರದಲಿ ಕೊಳಲನು ಊದುತ ಪಾಡುತ
ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ
ಹರಿ ಹರ ಬ್ರಹ್ಮರು ನಲಿದಾಡುತಿರೆ
ತುಂಬುರು ನಾರದರು ಪಾಡುತಿರೆ||1||

ಅರವಿಂದ ದಳ ನಯನ
ಕರುಗಳ ಸಹಿತಲೇ ಗೋಕುಲವೆಲ್ಲ
ಸಿರಿ ಕಾಗಿನೆಲೆಯಾದಿ ಕೇಶವ ರಾಯ
ತರುಗಳ ಸಹಿತಲೇ ವರಗೋಪಾಲ||2||

Yadavaraya brundavanadolu
Venu nadava madutire ||pa||

Radha muntada gopiyarella
Madhusudana ninnanu sevisutire
Suraru ambaradi sandanisire
Apsara striyaru mai maretire anupallavi ||1||

Karadali kolalanu Uduta paduta
Sa ri ga ma pa da ni svaragala nudisuta
Hari hara brahmaru nalidadutire
Tumburu naradaru padutirecarana ||2||

Karugala sahitale gokulavella
Siri kagineleyadi kesava raya
Tarugala sahitale varagopalacarana ||3||

dasara padagalu · kanakadasaru

Hetta tayiginta atyadhika

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ
ಉತ್ತಮ ಅಶ್ವವ ಕತ್ತೆ ಹೋಲುವುದುಂಟೆ               ।।ಪ॥

ವಿತ್ತವುಳ್ಳವನ ಕುಲ ಎಣಿಸುವುದುಂಟೆ
ಸ್ವಾರ್ಥಕೆ ನ್ಯಾಯ ಎಂದಾದರೂ ಉಂಟೆ              ।।೧।।

ಅತ್ತೆಮನೆ ಸೇರುವಗೆ ಅಭಿಮಾನವುಂಟೆ
ಬತ್ತಲೆ ತಿರುಗುವಗೆ ಭಯವು ಇನ್ನುಂಟೆ                ।।೨।।

ಪೃಥ್ವಿಯೊಳಗೆ ಕಾಗಿನೆಲೆಯಾದಿ ಕೇಶವಗೆ
ಮರ್ತ್ಯದೊಳನ್ಯ ದೇವರು ಸರಿಯುಂಟೆ                ।।೩।।

Hetta tayiginta atyadhika mayavunte
Uttama asvava katte holuvudunte ||pa||

Vittavullavana kula enisuvudunte
Svarthake nyaya endadaru unte ||1||

Attemane seruvage abimanavunte
Battale tiruguvage Bayavu innunte ||2||

Pruthviyolage kagineleyadi kesavage
Martyadolanya devaru sariyunte ||3||

 

dasara padagalu · kanakadasaru · krishna · MADHWA

Itaniga vasudevanu

ಈತನೀಗ ವಾಸುದೇವನು ಲೋಕದೊಡೆಯ
ಈತನೀಗ ವಾಸುದೇವನು                                            ।।ಪ॥

ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ       ।।ಅ.ಪ॥

ಧನುಜೆಯಾಳ್ದನಣ್ಣನಯ್ಯನ ಪಿತನ ಮುoದೆ ಕೌರವೇಂದ್ರ
ನನುಜೆಯಾಳಿದವನ ಶಿರವ ಕತ್ತರಿಸುತ ತನ್ನ
ಅನುಜೆಯಾಳಿದವನ ಬೆಂಕಿ ಮುಟ್ಟದoತೆ ಕಾಯ್ದ ರುಕ್ಮ
ನನುಜೆಯಾಳಿದವನ ಮೂರ್ತಿಯನ್ನು ನೋಡಿರೋ           ।।೧।।

ನರನ ಸುತನರಣ್ಯದಲಿ ಗಿರಿಯೊಳ್ನಿಂತು ತನ್ನ ರೋಷದಿ
ಶರಗಳನ್ನು ತೀಡುತಿಪ್ಪನ ಯೋಚಿಸಿ
ಭರದಲವನ ಕರೆದು ಕುರುಹು ತೋರಿ ಪತ್ರವನ್ನು ಹಾರಿಸಿದವನ
ಶಿರವನ್ನು ಛೇದಿಸಿದ ದೇವ ಕಾಣಿರೋ                             ।।೨।।

ಸೃಷ್ಟಿಕರ್ತಗೆ ಮಗನಾದವನಿಗಿಷ್ಟ ಭೂಷಣ ಅಶನವಾದನ
ಜ್ಯೇಷ್ಠಪುತ್ರಗೆ ವೈರಿ ತೊಡೆಯ ಛೇದಿಸೆಂದು ಬೋಧಿಸಿ
ಕಷ್ಟವನ್ನು ಕಳೆದು ಭಕ್ತರಿಷ್ಟವನು ಕಾದ ಉ
ತ್ಕೃಷ್ಟ ಮಹಿಮನಾದ ದೇವ ಕಾಣಿರೋ                            ।।೩।।

ಕ್ರೂರವಾದ ಫಣಿಪಬಾಣವನ್ನು ತರಣಿಜನೆಚ್ಚಾಗ
ವೀರನರನತ್ತ ಬಪ್ಪುದನ್ನು ಈಕ್ಷಿಸಿ
ಧಾರಿಣಿಯ ಪದದೊಳೌಕಿ ಚರಣಭಜಕ ನರನ ಕಾಯ್ದ
ಭಾರಕರ್ತನಾದ ದೇವನೀತ ಕಾಣಿರೋ                           ।।೪।।

ವ್ಯೋಮಕೇಶನಿಪ್ಪ ದೆಸೆಯ ಸರ್ವ ಜಗಕೆ ತೋರುತ
ಸಾಮಜವನೇರಿ ಬರುವ ಶಕ್ತಿಯನೀಕ್ಷಿಸಿ
ಪ್ರೇಮದಿಂದ ಉರವನೊಡ್ಡಿ ಡಿoಗರಿಗನ ಕಾಯ್ದಾ ಸಾರ್ವ
ಭೌಮ ಬಾಡದಾದಿಕೇಶವನ್ನ ನೋಡಿರೋ                         ।।೫।।

Itaniga vasudevanu lokadodeya
Itaniga vasudevanu ||pa||

Itaniga vasudeva I samasta lokadodeya
Dasagolidu teraneri teji pididu nadesidata ||a.pa||

Dhanujeyaldanannanayyana pitana ;de kauravendra
Nanujeyalidavana Sirava kattarisuta tanna
Anujeyalidavana bemki muttada te kayda rukma
Nanujeyalidavana murtiyannu nodiro ||1||

Narana sutanaranyadali giriyolnimtu tanna roshadi
Saragalannu tidutippana yocisi
Baradalavana karedu kuruhu tori patravannu harisidavana
Siravannu cedisida deva kaniro ||2||

Srushtikartage maganadavanigishta bushana asanavadana
Jyeshthaputrage vairi todeya chedisendu bodhisi
Kashtavannu kaledu baktarishtavanu kada u
Tkrushta mahimanada deva kaniro ||3||

Kruravada panipabanavannu taranijaneccaga
Viranaranatta bappudannu ikshisi
Dhariniya padadolauki charanabajaka narana kayda
Barakartanada devanita kaniro ||4||

Vyomakesanippa deseya sarva jagake toruta
Samajavaneri baruva saktiyanikshisi
Premadimda uravanoddi Digarigana kayda sarva
Bauma badadadikesavanna nodiro ||5||

dasara padagalu · kanakadasaru · krishna · MADHWA

Aane bandhidhe

ಆನೆ ಬಂದಿದೆ ಇದಿಗೊ ಮದ್ದಾನೆ ||pa||

ಸುಜ್ಞಾನಿ ಗಳೊಳಾಡುವ ಮದ್ದಾನೆ ||A.pa||

ದೇವಕಿಯೊಳು ಪುಟ್ಟಿದಾನೆ – ವಸುದೇವನ ಪೆಸರೊಳೈತಂದ
ಮದ್ದಾನೆಶ್ರೀ ವಾಸುದೇವನೆಂಬಾನೆ – ಗೋಪಿದೇವಿಯ ಗೃಹದೊಳಾಡುವ ಪುಟ್ಟಾನೆ ||1||

ನೀಲವರ್ಣದ ನಿಜದಾನೆ – ಸ್ವರ್ಣಮಾಲೆಗಳಿಟ್ಟು ಮೆರೆವ ಚಲುವಾನ
ೆಶ್ರೀಲೋಲನೆನಿಪ ಪಟ್ಟದಾನೆ – ದುಷ್ಟಕಾಲಿಂಗನ ಪೆಡೆಯ ಮೆಟ್ಟಿ ತುಳಿದಾನೆ ||2||

ಬಾಲೇಂದು ಮುಖದ ಮರಿಯಾನೆ – ಕದ್ದುಪಾಲನ್ನು ಕುಡಿದ ಮರಿಯಾನೆಕೈಲಿ
ಗಿರಿಯನೆತ್ತಿದಾನೆಕಾಳ್ಕಿಚ್ಚನ್ನು ನುಂಗಿದ ಪಟ್ಟದಾನೆ ||3||

ಧೇನುಕಾಸುರನ ಕೊಂದಾನೆತನಗೆ ಜೋಡಿಲ್ಲದಿಹ ನಿಜದಾನೆಮಾನವರಿಗೆಲ್ಲ ಸಿಲ್ಕದಾನೆಶೌನಕಾದಿಗಳೊಂದಿಗಿಪ್ಪಾನೆ ||4||

ಮಲ್ಲರೊಡನೆ ಗೆಲಿದಾನೆ – ಕಡುಖುಲ್ಲ ಕಂಸನ ಕೆಡಹಿದಾನೆ –
ವಿದ್ಯೆ ಸಾಂದೀಪರಲಿ ಕಲಿತ ಮರಿಯಾನೆಸಲೆ ಭಕ್ತರ ಕಾವ ಪುಟ್ಟಾನೆ ||5||

ತರಳೆ ರುಕ್ಮಿಣಿಯ ತಂದಾನೆ – ಬಹುಕರುಣದಿಂ ಪಾಂಡವರ ಪೊರೆದಾನೆವರ ವೇಲಾಪುರದೊಳಿಪ್ಪಾನೆಸಿರಿಯಾದಿಕೇಶವನೆಂಬ ಮದ್ದಾನೆ ||6||

Ane bandide idigo maddane ||

Paj~janigaloladuva maddane || a.pa||

Devakiyolu puttidane – vasudevana pesarolaitanda
Maddanesri vasudevanembane – gopideviya gruhadoladuva puttane||1||

Nilavarnada nijadane – svarnamalegalittu mereva caluvane
Srilolanenipa pattadane – dushtakalingana pedeya metti tulidane||2||

Balendu mukada mariyane – kaddupalannu kudida mariyanekaili
Giriyanettidanekalkiccannu nungida pattadane ||3||

Dhenukasurana komdanetanage jodilladiha nijadanemanavarigella
Silkadane saunakadigalondigippane ||4||

Mallarodane gelidane – kadukulla kamsana kedahidane –
Vidye sandiparali kalita mariyanesale Baktara kava puttane ||5||

Tarale rukminiya tamdane – bahukarunadim pandavara poredanevara
Vela puradolippane siriyadikesavanemba maddane ||6||

dasara padagalu · kanakadasaru · MADHWA · narasimha

Kande na uddanda narasimhana

ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ –
ರಿಪುಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ||pa||

ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆ
ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದು
ಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆ
ಹಿಡಿ ಹಿಡಿದು ಹಿರಣ್ಯಕನ ತೊಡೆ ಮೇಲೆ ಕೆಡಹಿದನ||1||

ಉರದೊಳಪ್ಪಳಿಸಿ ಅರಿ ಬಸಿರ ಸರಸರನೆ ಸೀಳಿ
ಪರಿಪರಿಯಲಿ ಚರ್ಮ ಎಳೆದೆಳೆದು ಎಲುಬು
ನರನರವನು ತೆಗೆದು ನಿರ್ಗಳಿತ ಶೋಣಿತ
ಸುರಿಯೆಹರಿಹರಿದು ಕರುಳ ಕೊರಳೊಳಿಟ್ಟವನ||2||

ಪುರಜನರು ಹಾಯೆನಲು ಸುರರು ಹೂಮಳೆ
ಗರೆಯೆತರತರದ ವಾದ್ಯ ಸಂಭ್ರಮಗಳಿಂದ
ಹರಿಹರಿ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವ
ಕರುಣಾಳು ಕಾಗಿನೆಲೆಯಾದಿಕೇಶವನ||3||

Kande na uddanda narasimhana
Kande na tanda tandada hindu hindu daiva pracanda
Ripuganda uddanda narasimhana kandenayya || pa ||

Gudugudisi kambadali dhadadhada sidilu sidiye |
Kidikidisi senudiya dagalodane mudi pididu |
Gada gadane nadu naduge gudugudisi sabe bedare |
Hidi hididu hiranyakana todeyolide kedahidane

Uradolappalisi aribasira sarasa sili |
Paripariyali carmaveledeleyalu |
Nara naratane negedu nirgalita sonita suriye ||

Hari haridu karula koralolittavana |
Purajanaru hayendu suraru hu malegareye |
Hari hari saranendu stutisi sisu mereye |
Karunalu kaginele adikesavana ||

 

dasara padagalu · kanakadasaru · MADHWA · siva

Kelirai sivasaranaru helalanjike

ಕೇಳಿರೈ ಶಿವಶರಣರು ಹೇಳಲಂಜಿಕೆ ಆವುದು||pa||

ಭಾಳನೇತ್ರನ ಭಕ್ತರಿಂತು ನೋಡಿಕೊಳ್ಳಿರೈ||a.pa||

ಮೂರುಲಿಂಗ ತನ್ನೊಳು ಮುಖ್ಯವಾಗಿರುವಾಗಬೇರೊಂದು ಲಿಂಗ ಬೆಲೆ ಮಾಡಿ ತಂದು
ತೋರುವಂಗೈಲಿಟ್ಟು ತೋಯ ಪುಷ್ಪವ ನೀಡಿಯಾರ ಮನಕೊಪ್ಪಿಸುವರೀ ಶೀಲವಂತರು ||1||

ಲಿಂಗವೊಂದು ತನ್ನೊಳು ಲೀನವಾಗಿರುವಾಗಅಂಗಭವಿಗಳು ಕೂಡಿ ಆಡಿಕೊಂಬರು
ಅಂಗದನುಭವದರ್ಥವನರಿಯದ ಇಂತಹಭಂಗಿ ಹುಚ್ಚರೆಲ್ಲ ಶಿವನ ಭಕ್ತರಹರೆ |2||

ನಾಗಲಿಂಗ ತನ್ನೊಳು ನಾಟ್ಯವಾಡುತಲಿರಲುಆಗಮಿಸಿದ ಲಿಂಗವ ಬೆದಕಲೇತಕ್ಕೆ
ಕಾಗಿನೆಲೆಯಾದಿಕೇಶವನೆ ನಾಗಶಯನನಾಗಿರಲು ಬೇರೊಂದನರಸಲೇತಕ್ಕೆ ||3||

Kelirai sivasaranaru helalanjike Avudu ||pa||

Balanetrana baktarintu nodikollirai ||a.pa||

Murulinga tannolu mukyavagiruvaga
Berondu linga bele madi tandu
Toruvangailittu toyapushpana nidi
Yara manakoppisuvari silavantaru ||1||

Lingavondu tannolu linavagiruvaga
Angabavigalu kudi adikombaru
Angadanubavadarthavanariyada intaha
Bangi huccarella Sivana Baktarahare ||2||

Nagalinga tannolu natyavadutiralu
Agamisida lingava bedakaletakke
Kagineleyadikesavane nagasayana
Nagiralu berondanarasaletake ||3||

dasara padagalu · kanakadasaru · MADHWA

ninna nanenendeno venkataraaya

ನಿನ್ನ ನಾನೇನೆಂದೆನೊ – ರಂಗಯ್ಯ ರಂಗನಿನ್ನ ನಾನೇಂದೆನೊ ||pa||

ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿಪನ್ನಗಶಯನ ಪಾಲ್ಗಡಲೊಡೆಯನೆ ರಂಗ ||a.pa||

ಧೀರ ಸೋಮಕ ವೇದಚೋರ ಖಳನನು ಸೀಳಿವಾರಿಧಿಗಿಳಿದು ಪರ್ವತವನೆತ್ತಿಧಾರಿಣಿಯನು ಕದ್ದ ದನುಜದಲ್ಲಣನಾದನಾರಸಿಂಹ ನಿನಗೆ ನಮೊ ಎಂದೆನಲ್ಲದೆನೀರ ಪೊಕ್ಕವನೆಂದೆನೆ – ಬೆನ್ನಲಿ ಘನ್ನಭಾರ ಪೊತ್ತವನೆಂದೆನೆ – ಮಣ್ಣನಗೆದುಬೇರ ಮೆದ್ದವನೆಂದೆನೆ – ರಕ್ಕಸನೊಳುಹೋರಿ ಹೊಯ್ದನೆಂದು ಹೊಗಳಿದೆನಲ್ಲದೆ ||1||

ಧರೆಯ ದಾನವ ಬೇಡಿ ನೆಲನ ಈರಡಿ ಮಾಡಿಪರಶು ಪಿಡಿದು ಕ್ಷತ್ರಿಯರ ಸವರಿಚರಣದಿ ಪಾಷಾಣ ಪೆಣ್ಣು ಮಾಡಿದ ಪುಣ್ಯಚರಿತ ಯಾದವ ಪತಿ ಶರಣೆಂದೆನಲ್ಲದೆತಿರುಕ ಹಾರುವನೆಂದೆನೆ – ಹೆತ್ತ ತಾಯಶಿರವ ತರಿದನೆಂದೆನೆ – ವನವಾಸಕೆಭರದಿ ಚರಿಸಿದನೆಂದೆನೆ – ಪೂತನಿಯನುಸರಕು ಮಾಡದೆ ಕೊಂದ ಹರಿಯೆಂದೆನಲ್ಲದೆ ||2||

ಚಿತ್ತಜಕೋಟಿ ಲಾವಣ್ಯ ಮುಪ್ಪುರದಉತ್ತಮಸ್ತ್ರೀಯರ ವ್ರತವಳಿದುಮತ್ತೆ ಕಲ್ಕಿಯಾಗಿ ಮಧುಪರ ಮಡುಹಿದಹತ್ತವತಾರದ ಹರಿಯೆಂದೆನಲ್ಲದೆಬತ್ತಲೆ ನಿಂತವನೆಂದೆನೆ – ತೇಜಿಯನೇರಿಒತ್ತಿ ನಡೆದವನೆಂದೆನೆ – ಬಾರಿಬಾರಿಗೆಸತ್ತು ಹುಟ್ಟುವನೆಂದೆನೆ – ಆದಿಕೇಶವಭಕ್ತವತ್ಸಲನೆಂದು ಪೊಗಳಿದೆನಲ್ಲದೆ ||3||

ninna nanenendeno venkataraaya | ni enna salahabeku | p|

ninna nanenende nigama gochara swami |
pannangasayana palgadalodeyane krushna | a.pa. |

dhira somaka veda chora tamanasili |
varadhigilidu parvatavanetti |
dharaniyanukadda danuja dallananada |
narasimhane ninage saranembenallade |
nirolu pokkavanendene |
bennili bara pottavanendane |
mannanageda beru meddavanendene |
hiranyaengudara bageda narahari endenallade | 1 |

dhareya danava bedi nelava iradi madi |
parasu hididu kshatrayara savari |
charanadi pashana hennu madida punya charita |
yadava pati saranembenallade |
tirukaharavanendene |
hetta tayi siravataridavanandene |
vanavasakke baradi charisidavanendene |
putaniya saraku madade konda hariyendenallade | 2 |

chittajakoti lavanya tejadi bandu |
uttama striyara vratavalidu |
matte kalkiyagiyavanarakedahida |
hattavatarada hariyendenallade |
battale nintavanendane |
tajiyaneri otti nadedavanendene |
bari barigu matte huttuvanandane |
adi kesava bakta vatsalanendu pogalidenallade | 3 |

dasara padagalu · DEVOTIONAL · kanakadasaru · MADHWA · srinivasa

enendu kondadi stutisalo deva

ಏನೆಂದು ಕೊಂಡಾಡಿ ಸ್ತುತಿಸಲೋ ದೇವನಾನೇನು
ಬಲ್ಲೆ ನಿನ್ನ ಮಹಿಮೆಗಳ ಮಾಧವ ||pa||

ಹರಿಮುಕುಂದನು ನೀನು ನರಜನ್ಮ ಹುಳು ನಾನುಪರಮಾತ್ಮನು ನೀನು ಪಾಮರನು ನಾನು
ಗರುಡ ಗಮನನು ನೀನು ಮರುಳು ಪಾಪಿಯು ನಾನುಪರಂಜ್ಯೋತಿಯು ನೀನು ದುರುಳ ತಿರುಕನು ನಾನು ||1||

ವಾರಿಧಿಶಯನನಾದ ಕಾರುಣ್ಯನಿಧಿ ನೀನುಘೋರದಿಂದಿಹ ಕಾಮಿಕ್ರೋಧಿ ನಾನು
ಈರೇಳು ಭುವನದೊಳು ಇರುವ ಮೂರುತಿ ನೀನುದೂರಿ ನಿನ್ನನು ಬೈವ ದುಷ್ಟ ನಾನು||2||

ಅಣುರೇಣು ತೃಣಗಳಲಿ ಪರಿಪೂರ್ಣನು ನೀನುಕ್ಷಣಕ್ಷಣಕೆ ಅವಗುಣದ ಕುಕರ್ಮಿ ನಾನು
ವಾಣಿಯರಸನ ಪೆತ್ತ ವೈಕುಂಠಪತಿ ನೀನುಕ್ಷಣಭಂಗುರ ತನುವಿನ ಗೊಂಬೆ ನಾನು ||3||

ಕಂಬದಲಿ ಬಂದ ಆನಂದ ಮೂರುತಿ ನೀನುನಂಬಿಕೆಯಿಲ್ಲದ ಪ್ರಪಂಚಕನು ನಾನು
ಅಂಬರೀಷಗೆ ಒಲಿದ ಅಕ್ರೂರಸಖ ನೀನುಡಂಬ ಕರ್ಮಿಯು ನಾನು ನಿರ್ಜಿತನು ನೀನು||4||

ತಿರುಪತಿಯ ವಾಸ ಶ್ರೀವೆಂಕಟೇಶನೆ ನಿನ್ನಚರಣಸೇವಕರ ಸೇವಕನು ನಾನು
ಬಿರುದುಳ್ಳವನು ನೀನು ಮೊರೆಹೊಕ್ಕವನು ನಾನುಸಿರಿ ಕಾಗಿನೆಲೆಯಾದಿಕೇಶವನು ನೀನು||5||

enendu kondadi stutisalo deva nanenu
balle nimma mahimegala madhava || pa ||

hari mukundanu ninu narajanma
hulunanu paramatma ninu pamaranu nanu
garudagamananu ninu marulu papiyu nanu
parama jyotiyu ninu tirupeyava nanu || 1 ||

kanbadali banda ananda muruti ninu
nanbike yillada prapanciganu nanu
anbarishage olida akrura saka ninu
danbakarmiyu nanu nirjitanu nanu || 2 ||

tirupati vasa sri venkatesanu ninu
smarisi ninnaya padava badukuvanu nanu
birudullavanu ninu morehokkenai nanu
siri kagi neleyadi keshavanu ninu || 3 ||

dasara padagalu · dashavatharam · DEVOTIONAL · kanakadasaru · MADHWA

Sundari rangana tandu tora

ಸುಂದರಿ ರಂಗನ ತಂದು ತೋರ | ಒಂದರಘಳಿಗ್ಯಾಗೆ || ಪ ||

ಮತ್ಸ್ಯನಾಗಿ ಮೊದಲಿನಲ್ಲಿ | ಕೂರ್ಮನಾಗಿ ಕೊರೆನು ಕಾಯ್ದ |
ದೈತ್ಯರ ಕೊಂದ ಬಹು ಕ್ರೋಧದಿಂದ ದುರುಳ ಹಿರಣ್ಯಕನ ಕರುಳು ಬಗೆದು ತೋಡಿ
ಕೊರಳೊಳಗೆ ಧರಿಸಿದನು ಸರಗಳನ್ನೇ ಮಾಡಿ |
ಕೊರಳು ಕೊಯ್ದ ಎಲ್ಲಮ್ಮನ ಪುತ್ರನಾಗಿ ಕಾಯ್ದಿ ಸರಳ ಬಾಣವನ್ನೇ ಹೂಡಿ
ಲಂಕಾದ್ರಿ ಮಥನ ಮಾಡಿ ಎರಳ ಗಂಗೆಯರ ಪತಿವೃತೆಯರ ಕೆಡಿಸಿದನು ಕೂಡಿ |
ಮರಳು ತನದಿಂದ ಸೆಗೆದ ಹಯವನೇರಿ ಓಡಿ ||೧||

ನೀರೊಳು ಮೀನನಾಗಿ ಅಲೆವ | ಧರೆ ಭಾರವನ್ನು ಹೊರುವ |
ವರಹನಾಗಿ ನರಕಾಸುರನನು ತರೆವ ಕೋರೇಲಿ ಮಣ್ಣು ಬಗೆವ |
ಒಡೆ ಮುಡಿ ಕಂಬದಿಂದ ಘುಡಘುಡಿಸುತ ಬಂದ ಧೃಢವುಳ್ಳ ಬಲಿಚಕ್ರವರ್ತಿ
ಪಾಲಿಸಿದ ವರವಾ | ಕೊಡಲಿ ಪಿಡಿದು ಹಡೆದ ತಾಯಿ ಶಿರವಾ ಕಡಿದಾ |
ಮಡದಿ ಒಯ್ದ ರಾವಣನ ಕಡೆದು ಶಿರವಾ ದಾಡಿ ಬಿಟ್ಟು ತಿರುಗುವಂಥ
ತ್ರಿಪುರರರಂಥಪುರವಾ ಏರಿಸಿದ ಅಶ್ವಮೇಧ ಅರ್ಥಿಯಿಂದ ಮೆರೆವಾ ||೨||

ಬ್ರಹ್ಮಗೆ ಒಲಿದು ವೇದವ ತರುವ ಬ್ರಹ್ಮಾಂಡವನ್ಹೊರುವ |
ಗಮ್ಮೀಲಿ ಕಾಯ್ದವ- ನಾಗಿರುವ ಸುಮ್ಮನೆ ಹೋಗಿ ಬರುವಾ |
ಸಿಟ್ಟಿನಿಂದ ನಾರಸಿಂಹ ರೂಪನಾಗಿ ಬಂದ |
ಸೃಷ್ಟಿಯೊಳು ಪರಶುರಾಮ ರೇಣುಕೆಯ ಕಂದ |
ಕಷ್ಟವನ್ನಾಚರಿಸಿದನು ರಾಮ ವನವಾಸದಿಂದ |
ಕೃಷ್ಣಾವತಾರ ಬೌದ್ಧ ಕಲ್ಕಿ ರೂಪ ಒಂದೊಂದಾ |
ಇಷ್ಟುಪರಿ ವರ್ಣಿಸುತ ಹತ್ತಾವತಾರ ಚೆಂದ |
ಸೃಷ್ಠಿಯೋಳು ಕಾಗಿನೆಲೆ ಆದಿಕೇಶವನಿಂದಾ ||೩||

 

Sundari rangana tandu tora | ondaraghaligyaara || pa ||

Matsyanaagi modalinalli | koormanaagi korenu kaayda |
Daityara konda bahu krodhadinda durula hiranyakana karulu bagedu todi |
Koralolage dharisidanu saragalanne maadi |
Koralu koyda ellammana putranaagi kaaydi sarala baanavanne hoodi |
Lankaadri mathana maadi erala gangeyara pativruteyara kedisidanu koodi |
Maralu tanadinda segeda hayavaneri odi || 1 ||

Neerolu meenanaagi aleva | dhare bhaaravannu horuva |
Varahanaagi narakaasurananu tareva koreli mannu bageva |
Ode mudi kambadinda ghudaghudisuta banda dhrudhavulla balichakravarti
Paalisida varavaa | kodali pididu hadeda taayi shiravaa kadidaa |
Madadi oyda raavanana kadedu shiravaa daadi bittu tiruguvantha
Tripurararanthapuravaa Erisida ashwamedha arthiyinda merevaa || 2 ||

Brahmage olidu vedava taruva brahmaandavanhoruva |
Gammili kaaydava- naagiruva summane hogi baruvaa |
Sittinimda naarasimha roopanaagi banda |
Srushtiyolu parashuraama renukeya kanda |
Kashtavannaacarisidanu raama vanavaasadinda |
Krushnaavataara bouddha kalki roopa ondondaa |
Ishtupari varnisuta hattaavataara chemda |
Srushthiyolu kaaginele aadikeshavanindaa || 3 ||

dasara padagalu · DEVOTIONAL · kanakadasaru · MADHWA · narasimha

yenu kaarana baaya theredhiyo

ಏನು ಕಾರಣ ಬಾಯಿ ತೆರೆದಿ – ಪೇಳೆಲೊದಾನವಾಂತಕ ಅಹೋಬಲ ನಾರಸಿಂಹನೆ ||pa||

ನಿಗಮ ಚೋರನ ಕೊಲಲು ತೆರೆದೆಯೋ ಈ ಬಾಯ
ನಗವ ಬೆನ್ನಲಿ ಹೊತ್ತು ನಡುಗಿ ತೆರೆದೆಯೋ ಬಾಯ
ಭೂ-ಮಿಗಳ್ಳನ ಕೊಂದು ಬಳಲಿ ತೆರೆದೆಯೋ ಬಾಯ
ಜಗವರಿಯೆ ಪೇರುರವಿರಿದ ಪ್ರಹ್ಲಾದವರದಅಹೋಬಲ ನಾರಸಿಂಹನೆ||1||

ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯ
ಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯ
ಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯ
ಮರೆತು ಮಾವನ ಕೊಂದು ನಿಂದೆ – ಇಂಥಇಳಿಯ ಬಾರದ ಭೂಮಿಗಿಳಿದ ನಾರಸಿಂಹ||2||

ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯ
ಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯ
ಮಾರಪಿತ ಕಾಗಿನೆಲೆಯಾದಿಕೇಶವ ರಂಗಧೀರ
ಶ್ರೀನಾಥ ಭವನಾಶ ಪೇಳೋ ಪೇಳುಏತಕೆ ಅಹೋಬಲ ನಾರಸಿಂಹನೆ ||3||

yenu kaarana baaya theredhiyo

dhaanavanthaka ahobala naarasimha||

nigama chorakana kololu theredheyo baaya
nagava benneli potthu nadugi theredheyo baaya
bhoomigallanna kondhu balali theredhayo baaya
jagavariye perura viridha prahladha varadha narasimha||1||

baliya dhanava bedalendhu theredhayo baaya
kaladhindha krutiyara kolalu theradhayo baaya
kulasathiya arasi kaanadhe theradhayo baaya
malethu maavana kondu ninte inthaa bhoomigilidha narasimha||2||

naariyaru cheluvikeya nodi theradhayo baaya
yeri ashwatha metti alali theradheyo baaya
maarapitha kaginele adhi keshava ranga
dheera srinatha bhava naasha pelo narasimhaa||3||