dasara padagalu · kanakadasaru · MADHWA

Endu sairisiri sri krishnana tappa

ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ
ಮುಂದಕೆ ನಿಮ್ಮ ಮನೆಗೆ ಬಾರನಮ್ಮ||

ಮಗುವು ಬಲ್ಲುದೆ ಇಷ್ಟು ಬೆಣ್ಣೆಯ ಕದ್ದರೆಬಿಗಿಯ ಬಹುದೇ ಶ್ರೀ ಚರಣವನು|
ಅಗಣಿತ ಮಹಿಮನ ಅಂಜಿಸಲೇಕಮ್ಮಬಗೆಯ ಬಾರದೆ ನಿಮ್ಮ ಮಕ್ಕಳಂತೆ ||1||

ಹಸುಮಗುವನು ಕಂಡು ಮುದ್ದಿಸಲೊಲ್ಲದೆಹುಸಿಗ ಕಳ್ಳನೆಂದು ಕಟ್ಟುವಿರಿ|
ವಸುಧೆಯೊಳಗೆ ನಾನೊಬ್ಬಳೆ ಪಡೆದೆನೆ ನಿಮ್ಮಹಸು ಮಗುವಿನಂತೆ ಭಾವಿಸಬಾರದೆ ||2||

ಎಷ್ಟು ಸಾರಿಯು ನಾ ಬೇಡವೆಂದರೆ ಕೇಳದುಷ್ಟ ಮಕ್ಕಳ ಕೂಡೆ ಒಡನಾಟವ|
ಕಟ್ಟಿದ ನೆಲುವಿನ ಬೆಣ್ಣೆಯನೀವೆನುಬಿಟ್ಟು ಕಳುಹಿರಮ್ಮ ಆದಿಕೇಶವನ ||3||

Endu sairisiri sri krishnana tappa
Mundake nimma manege baranamma

Maguvu ballude ishtu benneya kaddare
Bigiyabahude shricharanavanu
Aganita mahimana anjisalekamma
Bageyabarade nimma makkalante |1|

Hasu maguvanu kandu muddisalollade
Pusiga kallanendu kattuviri
Vasudheyolage nanobbale padedene nimma
Hasumaguvendu bhavisabarade |2|

Eshto bariyu na bedavendaru kela
Dushta makkala kuda odanatava
Kattida neluvina benneyanivenu
Bittu kaluhiramma adikeshavana |3|

dasara padagalu · kanakadasaru · MADHWA

Ene manavitte lalitaangi

ಏನೆ ಮನವಿತ್ತೆ ಲಲಿತಾಂಗಿ
ಅಸ-ಮಾನ ಗೋವಳ ಕುಲವಿಲ್ಲದವನೊಳು ||pa||

ಮಗಗೆ ಮೈದುನನಾದ ಮಗಳಿಗೆ ಪತಿಯಾದ
ಮಗಳಿಗಳಿಯನಾದ ಅಳಿಯಗಳಿಯನಾದ ||1||

ಮಗಳ ಮಗಗೆ ಮೈದುನನಾಗಿ ಮಾವನ
ಜಗವರಿಯಲು ಕೊಂದ ಕುಲಗೇಡಿ ಗೋವಳ ||2||

ಅತ್ತೆಗೆ ವಲ್ಲಭನಾದ ಭೃತ್ಯರಿಗಾಳಾದ
ಚಿತ್ತ ಒಲಿದು ಚೆನ್ನ ಆದಿಕೇಶವನೊಳು||3||

Ene manavitte lalitaangi || pa ||

Asamaana govugala kulavilladavanolu || a. Pa. ||

Magage maidunanaada magalige patiyaada |
Magaligaliyanaada aliyagaliyanaada || 1 ||

Magala magage maidunanaagi maavana |
Jagavariyalu konda kulagedi govugala || 2 ||

Attege vallabhanaada bhrutyarigaalaada |
Chittavolidu namma aadikeshavanolu || 3 ||

dasara padagalu · kanakadasaru · MADHWA

ellaru maduvudu hottegagi

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ   ।।ಪ ।।

ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆ
ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ         ||1||

ಚಂಡಭಟರಾಗಿ ನಡೆದು ಕತ್ತಿ ಡಾಲು ಕೈಲಿ ಹಿಡಿದು
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ         ||2||

ಅಂಗಡಿ ಮುಂಗಟ್ಟನ್ನ ಹೂಡಿ ವ್ಯಂಗ ಮಾತುಗಳನ್ನ ಅಡಿ
ಭಂಗಬಿದ್ದು ಗಳಿಸಿವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ               ||3||

ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿ
ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ      ||4||

ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳುಮಾಡಿ
ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ       ||5||

ಕೊಟ್ಟ ಹಣವನು ಕುಟ್ಟಿಕೊಂಡು ಕಟ್ಟಿಗೆಯನು ಹೊತ್ತುಕೊಂಡು
ಕಷ್ಟ ಮಾಡಿ ಉಣ್ಣುವುದು  ಹೊಟ್ಟೆಗಾಗಿ ಗೇಣುಬಟ್ಟೆಗಾಗಿ          ||6||

ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ
ನಾನ ವೇಷಗಳೆಲ್ಲ ಹೊಟ್ಟೆಗಾಗಿ ಗೇಣುಬಟ್ಟೆಗಾಗಿ                     ||7||

ಹಳ್ಳದಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು
ಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ            ||8||

ಅಂದಣ  ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ
ಚಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ          ||9||

ಉನ್ನತ ಕಾಗಿನೆಲೆಯಾದಿಕೇಶವನಾ ದ್ಯಾನವನ್ನು
ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ                  ||10||

ellAru mADuvudu hoTTegAgi gENubaTTegAgi ||pa||

vEdaSAstra pancAngava OdikonDu anyarige
bOdhaneya mADuvudu hoTTegAgi gENubaTTegAgi ||1||

canDaBaTarAgi naDedu katti DAlu kaili hiDidu
KanDa tunDa mADuvudu hoTTegAgi gENubaTTegAgi ||2||

angaDi mungaTTanna hUDi vyanga mAtugaLanna aDi
Bangabiddu gaLisivudu hoTTegAgi gENubaTTegAgi ||3||

kunTe tudige koraDu hAki henTe maNNu samanu mADi
ranTe hoDedu beLesuvudu hoTTegAgi gENubaTTegAgi ||4||

belladante mAtanADi ellarannu maruLumADi
suLLu bogaLi tiMbuvudu hoTTegAgi gENubaTTegAgi ||5||

koTTa haNavanu kuTTikonDu kaTTigeyanu hottukoMDu
kaShTa mADi uNNuvudu hoTTegAgi gENubaTTegAgi ||6||

sanyAsi jaMgama jOgi jaTTi monDa bairAgi
nAna vEShagaLella hoTTegAgi gENubaTTegAgi ||7||

haLLadali kuLitukoMDu kallu doNNe hiDidukonDu
kaLLatanava mADuvudu hoTTegAgi gENubaTTegAgi ||8||

andaNa pallakki Eri mandi mArbala kUDi
candadinda mereyuvudu hoTTegAgi gENubaTTegAgi ||9||

unnata kAgineleyAdikESavanA dyAnavannu
manamuTTi mADuvudu muktigAgi AnandakAgi ||10||

 

dasara padagalu · MADHWA

Nemavillada homa innetake

ನೇಮವಿಲ್ಲದ ಹೋಮವೇತಕಯ್ಯ
ರಾಮನಾಮವಲ್ಲದೆ ಮತ್ತೆ ನಮಗೊಂದೆ

ನೀರ ಮುಳುಗಲೇಕೆ ನಾರಿಯ ಬಿಡಲೇಕೆ
ವಾರಕೊಂದುಪವಾಸ ಇರಲೇತಕೆ
ನಾರಸಿಂಹನ ದಿವ್ಯನಾಮವನು ನೆನೆದರೆ
ಘೋರ ಪಾತಕವೆಲ್ಲ ತೊಲಗಿ ಹೋಗುವುದು

ಅಂಬರದೊಳಿರಲೇಕೆ ತಾಂಬೂಲವ ಬಿಡಲೇಕೆ
ಡಂಬಕತನದಲಿ ಇರಲೇತಕೆ
ಅಂಬುಜನಾಭನನು ಭಾವದಲಿ ನೆನೆದರೆ
ಇಂಬುಂಟು ವೈಕುಂಠಪುರದ ಒಳಗಯ್ಯ

ಬಂಧದೊಳಗೆ ಬಿದ್ದು ಹರಿಯನೆ ನೆನೆಯುತಿರೆ
ಬೆಂದು ಹೋಗುವುದು ದುರಿತಂಗಳೆಲ್ಲ
ಬಂದ ಪಾಪಗಳೆಲ್ಲ ನಿಲ್ಲದೆ ಕಳೆದಾವು
ಚಂದಾಗಿ ನೆಲೆಯಾದಿ ಕೇಶವನ ನೆನೆಯೊ

Nemavillada homa innetake
ramanamavirada mantraveke ||pa||

Nira mulugalu Eke nariyala bidaleke
varakonduupavasa madaleke
narasimhana divya namava nenedare
ghora patakavella tolagi hoguvudu ||1||

Ambarava toreyaleke tambula bidaleke
dambhakada vruttiyali iraletake
ambujanabhananu bhavadali nenedare
imbuntu vaikumthavemba puradolage ||2||

bandhadolage biddu hariyanu neneyutire
bendu hoguvuvu duritangalella
banda duhkagalella nilladale kaleyuvuvu
chendagi neleyadikeshavana neneye ||3||

dasara padagalu · kanakadasaru · MADHWA

Bandevaya govinda setti

ಬಂದೆವಯ್ಯ ಗೋವಿಂದಶೆಟ್ಟಿ – ನಿಮ್ಮಹರಿವಾಣ ತೀರ್ಥಪ್ರಸಾದ ಉಂಟೆನಲಾಗಿ ||pa||

ಅಪ್ಪವು ಅತಿರಸ ತುಪ್ಪವು ಚಿನಿಪಾಲುಒಪ್ಪುವ ಸಕ್ಕರೆ ಯಾಲಕ್ಕಿಯು
ಅಪರೂಪವಾದ ಕಜ್ಜಾಯಗಳನೆಲ್ಲಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ||1||

ಒಡೆದ ಮಡಕೆ ತಂದು ಇಡಿದು ನಾಮವ ಮಾಡಿಕೊಡುವೆ ನೀ ಕಾಸಿಗೆ ಒಂದೊಂದನು
ಒಡಲು ತುಂಬಿ ಮಿಕ್ಕ ಅನ್ನವ ಮಾರಿಸಿಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ ||2||

ಶೇಷಗಿರಿಯಲ್ಲಿ ವಾಸ ಮಾಡಿಕೊಂಡುದೇಶದೇಶಕ್ಕೆ ಹೆಸರಾದ ಶೆಟ್ಟಿ
ಕಾಸುಕಾಸಿಗೆ ಬಡ್ಡಿ ಗಳಿಸಿಕೊಂಬ ಆದಿಕೇಶವ ನಾರಾಯಣ ತಿಮ್ಮಶೆಟ್ಟಿ||3||

Bandevaya govinda setti,
Nimma harivana tirtha prasada untenalagi||

Appavu athirasa tuppa cinni palu,
Oppuva sakkare Alakkiyu,
Aparupavada kajjaya rasigala,
Soppanna desakke maruva setti||1||

Odeda madakeyalli aredu namava madi,
Koduveni kasige ondondanu.
Odalu tumbimikka ogara marisi,
Odeveya galisuva kadu lobi setti||2||

Sesagiriyalli vasa madi kondu,
Desakke prasada nadesuva setti,
Ase madi hana-kasu galipa,
Adikesava narayana timmappa setti||3||

dasara padagalu · kanakadasaru · MADHWA

Badukidenu badukidenu bhava enage hingitu

ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು

ಹರಿತೀರ್ಥ ಪ್ರಸಾದ ಎನ್ನ ಜಿಹ್ವೆಗೊದಗಿತುಹರಿಯ ನಾಮಾಮೃತ ಕಿವಿಗೊದಗಿತು
ಹರಿಯ ದಾಸರು ಎನ್ನ ಬಂಧು ಬಳಗವಾದರುಹರಿಯ ಶ್ರೀಮುದ್ರೆ ಆಭರಣವಾಯ್ತು ||1||

ಮುಕುತರಾದರು ಎನ್ನ ನೂರೊಂದು ಕುಲದವರುಮುಕುತಿ ಮಾರ್ಗಕೆ ಯೋಗ್ಯ ನಾನಾದೆನೊ
ಅಕಳಂಕ ಶ್ರೀಹರಿ ಭಕುತಿಗೆನ್ನ ಮನ ಬೆಳೆದುರುಕುಮಿಣಿಯರಸ ಕೈವಶನಾದನೆನಗೆ ||2||

ಇಂದೆನ್ನ ಜೀವಕ್ಕು ಸಕಲ ಸಂಪದವಾಯ್ತುಮುಂದೆನ್ನ ಜನ್ಮ ಸಫಲವಾಯಿತು
ತಂದೆ ಶ್ರೀ ಕಾಗಿನೆಲೆಯಾದಿಕೇಶವರಾಯಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ ||3||

Badukidenu badukidenu bhava enage hingitu
padumanabhana padadolime enagayitu

Haritirtha prasada jihvege dorakitu
hariya namamrutavu kivigodagitu
hariya dasaru enna bandhugaladaru
hariya shrimudre enagabharanavayitu

Mukutharaadharu yenna noorondu kooraravaru
Mukuthi maargakke yogya naanenadheno
Akalanga sri hariya bakuthige manaveladhu
Rukuminiyarara kaivasharu adhenege

Indenna jivakke sakala sampadavayitu
mundenna janma saphalyavayitu
tande shri kaginele adikeshavaraya
bandenna hrudayadali neleyagi ninta

dasara padagalu · kanakadasaru

Aritu nadeyalu beku narakayavettida mele

ಅರಿತು ನಡೆಯಲು ಬೇಕು ನರಕಾಯವೆತ್ತಿದ ಮೇಲೆ
ಅರಿಯದಿದ್ದರೆ ನರಕವೇ ಪ್ರಾಪ್ತಿ                                              ।।ಪ।।

ದುರ್ಜನರ ಮನೆಯ ಪಾಯಸಾನ್ನಕಿಂತ
ಸಜ್ಜನರ ಮನೆಯ ರಬ್ಬಳಿಗೆ ಲೇಸು
ಹೆಜ್ಜೆಗೆ ಸಾವಿರಾರು ಹೊನ್ನನಿತ್ತರೂ ಬೇಡ ಬಲು
ದುರ್ಜನರ ಸಂಗ ಬಲು ಭಂಗ ಹರಿಯೆ                                     ।।೧।।

ಭಕ್ತಿಹೀನರ ಮನೆಯ ಪಟ್ಟ ಸುಪ್ಪತಿಗೆಗಿಂತ
ಭಕ್ತರ ಮನೆಯ ಕಡೆಬಾಗಿಲ ಕಾಯುವುದು ಲೇಸು
ಮುಕ್ತಿ ಮಾರ್ಗವ ತೋರ್ಪ ಮುರಹರಣ ದಾಸರನು
ಸಕ್ತಿಯಿಂ ಸೇವಿಸುವುದು ಬಲು ಸೌಖ್ಯ ಹರಿಯೆ                            ।।೨।।

ಆಶೆಕಾರರ ಮನೆಯ ವಿಳಾಸ ಸುಖಕಿಂತ
ಆಶಾರಹಿತರ ಮನೆಯ ನಿರ್ಗತಿಕ ದೈನ್ಯ ಲೇಸು
ಭೂಸುರ ಪ್ರಿಯ ಕಾಗಿನೆಲೆಯಾದಿಕೇಶವನ
ಮೀಸಲಿನ ಪಾದಭಜನೆ ಕಡುಲೇಸು ಮನವೆ                              ।।೩।।

Aritu nadeyalu beku narakayavettida mele
Ariyadiddare narakave prapti ||pa||

Durjanara maneya payasannakinta
Sajjanara maneya rabbalige lesu
Hejjege saviraru honnanittaru beda balu
Durjanara sanga balu Banga hariye ||1||

Baktihinara maneya patta suppatigeginta
Baktara maneya kadebagila kayuvudu lesu
Mukti margava torpa muraharana dasaranu
Saktiyim sevisuvudu balu saukya hariye ||2||

Asekarara maneya vilasa sukakinta
Asarahitara maneya nirgatika dainya lesu
Busura priya kagineleyadikesavana
Misalina padabajane kadulesu manave ||3||

dasara padagalu · kanakadasaru · MADHWA

Bayi narida mele ekantave

ಬಾಯಿ ನಾರಿದ ಮೇಲೆ ಏಕಾಂತವೆ
ತಾಯಿ ತೀರಿದ ಮೇಲೆ ತವರಾಸೆಯೆ                         ।।ಪ॥

ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ
ಬಣ್ಣಗುಂದಿದ ಮೇಲೆ ಬಹುಮಾನವೆ
ಪುಣ್ಯತೀರಿದ ಮೇಲೆ ಪರಲೋಕ ಸಾಧನವೆ
ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ                    ।।೧।।

ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣ ಬಹುದೆ
ಚಳಿಯುರಿಗೆ ಚಂದನದ ಲೇಪ ಹಿತವೆ
ಮೊಲೆಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ
ಬೆಲೆಬಿದ್ದ ಸರಕಿನೊಳು ಲಾಭವುಂಟೆ                          ।।೨।।

ಪಥ್ಯ ಸೇರದ ಮೇಲೆ ನಿತ್ಯಸುಖವೆನಬಹುದೆ
ಸತ್ತ್ವ ತಗ್ಗಿದ ಮೇಲೆ ಸಾಮರ್ಥ್ಯವೆ
ಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನ
ಭಕ್ತಿಯಿಲ್ಲದ ನರಗೆ ಮುಕ್ತಿಯುಂಟೆ?                            ।।೩।।

Bayi narida mele ekantave
Tayi tirida mele tavaraseye ||pa||

Kannu ketta mele kadurupa celvikeye
Bannagundida mele bahumanave
Punyatirida mele paraloka sadhanave
Sunnavillada vilyavadu svadumayave ||1||

Kilubina battalolu huli kalasi una bahude
Caliyurige chandanada lepa hitave
Molebidda henninolu mohakke sogasahude
Belebidda sarakinolu labavunte ||2||

Pathya serada mele nityasukavenabahude
Sattva taggida mele samarthyave
Pruthviyolu kagineleyadikesava ninna
Baktiyillada narage muktiyunte? ||3||

dasara padagalu · kanakadasaru · MADHWA

Aru ballaru hari harara mahimeyanu

ಆರು ಬಲ್ಲರು ಹರಿ ಹರರ ಮಹಿಮೆಯನು
ವಾರಿಜೋದ್ಭವ ಸುರೇಂದ್ರಾದಿಗಳಿಗಳವಲ್ಲ                    ।।ಪ॥

ಪೌರತ್ರಯವ ಗೆಲುವ ಸಮಯದಲಿ ತಪವಮಾಡಿ
ನಾರಾಯಣಾಸ್ತ್ರವನು ಪಡೆದನೀತ
ಗೌರಿಮನೋಹರನ ಘನತರಾರ್ಚನೆಗೈದು
ಚಾರುತರ ಚಕ್ರವನು ಪಡೆದನಾ ಶೌರಿ                          ।।೧।।

ಬಲಿ ಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ
ಗಿಲಕಾಯ್ದನಚ್ಯುತನು ಅನುಗಾಲದಿ
ಬಲಭುಜನು ಬಾಣಾಸುರನ ಗೃಹದ್ವಾರವನು
ಬಳಸಿ ಕಾಯ್ದನು ಹರನು ವರವ ತಾನಿತ್ತು                      ।।೨।।

ಭೋಗಿಶಯನನು ಆಗಿ ಭೋಗಿಭೂಷಣನಾಗಿ
ವಾಗೀಶನಾಗಿ ಸೃಷ್ಟಿ ಸ್ಥಿತಿ ಲಯಗಳಿಂಗೆ
ಆಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆ
ಕಾಗಿನೆಲೆಯಾದಿಕೇಶವನ ಮಹಿಮೆಯನು                      ।।೩।।

Aru ballaru hari harara mahimeyanu
Varijodbava surendradigaligalavalla ||pa||

Pauratrayava geluva samayadali tapavamadi
Narayanastravanu padedanita
Gaurimanoharana ganatararcanegaidu
Carutara cakravanu padedana Sauri ||1||

Bali cakravarti Baktige mecci avana ba
Gilakaydanacyutanu anugaladi
Balabujanu banasurana gruhadvaravanu
Balasi kaydanu haranu varava tanittu ||2||

Bogisayananu Agi bogibushananagi
Vagisanagi srushti sthiti layagalimge
Agu karana karya karmadi rupakke
Kagineleyadikesavana mahimeyanu ||3||

dasara padagalu · kanakadasaru · MADHWA

Ava siriyali ninu enna marete

ಆವ ಸಿರಿಯಲಿ ನೀನು ಎನ್ನ ಮರೆತೆ ?
ದೇವ ಜಾನಕಿರಮಣ ಪೇಳು ರಘುಪತಿಯೆ ?                      ।।ಪ॥

ಸುರರ ಸೆರೆಯನು ಬಿಡಿಸಿ ಬಂದನೆಂಬಾ ಸಿರಿಯೆ
ಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆ ?
ಶರಧಿ ಸೇತುವೆಯ ಕಟ್ಟಿದೆನೆನ್ನುವಾ ಸಿರಿಯೆ
ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ                           ।।೧।।

ಕಡಲೊಳಗೆ ಮನೆ ಮಾಡಿ ಮಲಗಿದೆನೆಂಬಾ ಸಿರಿಯೆ
ಮೃಡ ನಿನ್ನ ಸಖನಾದನೆಂಬ ಸಿರಿಯೆ ?
ಬಿಡದೆ ದ್ರೌಪದಿ ಮಾನ ಕಾಯ್ದನೆಂಬ ಸಿರಿಯೆ
ದೃಢವಾಗಿ ಹೇಳೆನಗೆ ದೇವಕೀಸುತನೆ                                ।।೨।।

ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ
ಕಾಮ ನಿನ್ನ ಸುತನಾದನೆಂಬ ಸಿರಿಯೆ
ಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ
ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ                            ।।೩।।

ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆ
ಹನುಮ ನಿನ್ನ ಬಂಟನಾದೆನೆಂಬ ಸಿರಿಯೆ
ಬಿನುಗುದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆ
ಅನುಮಾನ ಮಾಡದೆ ಪೇಳೋ ನರಹರಿಯೆ                        ।।೪।।

ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿ
ಪಂಥವೇ ನಿನಗಿದು ಆವಾ ನಡತೆ
ಕಂತುಪಿತ ಕಾಗಿನೆಲೆಯಾದಿಕೇಶವ ರಂಗ
ಚಿಂತೆಯನು ಬಿಡಿಸಿ ಸಂತೋಷಪಡಿಸೊ                            ।।೫।।

Ava siriyali ninu enna marete ?
Deva janakiramana pelu ragupatiye ? ||pa||

Surara sereyanu bidisi bandanemba siriye
Kari moreya lalisidenemba siriye ?
Saradhi setuveya kattidenennuva siriye
Sthiravagi helenage helu ragupatiye ||1||

Kadalolage mane madi malagidenemba siriye
Mruda ninna sakanadanemba siriye ?
Bidade draupadi mana kaydanemba siriye
Drudhavagi helenage devakisutane ||2||

Bumiyanu muradiya madidenemba siriye
Kama ninna sutanadanemba siriye
A mahalakumi ninna satiyadalemba siriye
Premadali helenage svami acyutane ||3||

Manujarellaru ninna stutisuvaremba siriye
Hanuma ninna bantanadenemba siriye
Binugudaivagalu ninageneyillavemba siriye
Anumana madade pelo narahariye ||4||

Intu siriyali ninu enna maretare svami
Panthave ninagidu ava nadate
Kantupita kagineleyadikesava ranga
chinteyanu biDisi santOShapaDiso ||5||