dasara padagalu · MADHWA · purandara dasaru · srinivasa

Govindaa ninna naamave chandaa

ಗೋವಿಂದಾ ನಿನ್ನ ನಾಮವೆ ಚಂದ ||

ಅಣುರೇಣು ತೃಣ ಕಾಷ್ಟ ಪರಿಪೂರ್ಣ ಗೋವಿಂದ ನಿರ್ಮಲಾತ್ಮಕನಾಗಿ ಇರುವುದೆ ಆನಂದ||

ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ ಈ ಪರಿ ಮಹಿಮೆಯ ತಿಳಿಯುವುದೆ ಆನಂದ||

ಪರಮ ಪುರುಷ ಶ್ರೀ ಪುರಂದರ ವಿಟ್ಠಲನ ಹಿಂಗದ ದಾಸರ ಸಲಹುವುದೆ ಆನಂದ ||

Govindaa ninna naamave chandaa || pa ||

Anurenu truna kaashtha paripoorna govinda |
Nirmalaatmakanaagi iruvude aananda || 1 ||

Srushti sthiti laya kaarana govinda |
Ee pari mahimeya tiliyuvude ananda || 2 ||

Mangala mahima shree purandaraviththalana|
Hingade daasana salahuvude aananda||3||

dasara padagalu · MADHWA · purandara dasaru · srinivasa

Tirupathi Venkataramana

ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ

ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೊ ಕರುಣ

ಅಳಗಿರಿಯಿಂದಲಿ ಬಂದಾ ಸ್ವಾಮಿ ಅಂಜನಗಿರಿಯಲಿ ನಿಂದ
ಕೊಳಲೂದೊ ಧ್ವನಿ ಚಂದಾ ನಮ್ಮ ಕುಂಡಲರಾಯ ಮುಕುಂದ

ಬೇಟೆಯಾಡುತ ಬಂದಾ ಸ್ವಾಮಿ ಬೆಟ್ಟದ ಮೇಲೆ ನಿಂದಾ
ನೀಟುಗಾರ ಗೋವಿಂದಾ ಅಲ್ಲಿ ಜೇನು ಸಕ್ಕರೆಯನು ತಿಂದಾ

ಮೂಡಲಗಿರಿಯಲಿ ನಿಂತ ಮುದ್ದು ವೆಂಕಟಪತಿ ಬಲವಂತ
ಈಡಿಲ್ಲ ನಿನಗೆ ಶ್ರೀಕಾಂತಾ ಈರೇಳು ಲೋಕಕನಂತ

ಆಡಿದರೆ ಸ್ಥಿರವಪ್ಪ ಅಬದ್ಧಗಳಾಡಲು ಒಪ್ಪ
ಬೇಡಿದ ವರಗಳನಿಪ್ಪ ನಮ್ಮ ಮೂಡಲಗಿರಿ ತಿಮ್ಮಪ್ಪ

ಅಪ್ಪವ ಅತಿರಸ ಮೆದ್ದ ಸ್ವಾಮಿ ಅಸುರರ ಕಾಲಲಿ ಒದ್ದ
ಸತಿಯರ ಕೂಡಾಡುತಲಿದ್ದ ಸ್ವಾಮಿ ಸಕಲ ದುರ್ಜನರನು ಗೆದ್ದ

ಬಗೆಬಗೆ ಭಕ್ಷ್ಯ ಪರಮಾನ್ನ ನಾನಾ ಬಗೆಯ ಸಕಲ ಶಾಲ್ಯಾನ್ನ
ಬಗೆಬಗೆ ಸೊಬಗು ಮೋಹನ್ನ ನಮ್ಮ ನಗೆಮುಖದ ಪ್ರಸನ್ನ

ಕಾಶೀ ರಾಮೇಶ್ವರದಿಂದ ಅಲ್ಲಿ ಕಾಣಿಕೆ ಬರುವುದೆ ಚಂದ
ದಾಸರ ಕೂಡೆ ಗೋವಿಂದ ಅಲ್ಲಿ ದಾರಿ ನಡೆವುದೇ ಚೆಂದ

ಎಲ್ಲ ದೇವರ ಗಂಡ ಅವ ಚಿಲ್ಲರೆ ದೈವದ ಮಿಂಡ
ಬಲ್ಲಿದರಿಗೆ ಉದ್ದಂಡ ಶಿವನ ಬಿಲ್ಲ ಮುರಿದ ಪ್ರಚಂಡ

ಕಾಸು ತಪ್ಪಿದರೆ ಪಟ್ಟಿ ಬಡ್ಡಿ ಕಾಸು ಬಿಡದ ಗಂಟು ಕಟ್ಟಿ
ದಾಸನೆಂದರೆ ಬಿಡ ಗಟ್ಟಿ ನಮ್ಮ ಕೇಸಕ್ಕಿ ತಿಮ್ಮಪ್ಪಸೆಟ್ಟಿ

ದಾಸರ ಕಂಡರೆ ಪ್ರಾಣ ತಾ ಧರೆಯೊಳಗಧಿಕ ಪ್ರವೀಣ
ದ್ವೇಷಿಯ ಗಂಟಲ ಗಾಣ ನಮ್ಮ ದೇವಗೆ ನಿತ್ಯಕಲ್ಯಾಣ

ಮೋಸ ಹೋಗುವನಲ್ಲಯ್ಯ ಒಂದು ಕಾಸಿಗೆ ಒಡ್ಡುವ ಕೈಯ
ಏಸು ಮಹಿಮಗಾರನಯ್ಯ ನಮ್ಮ ವಾಸುದೇವ ತಿಮ್ಮಯ್ಯ

ಚಿತ್ತವಧಾನ ಪರಾಕು ನಿನ್ನ ಚಿತ್ತದ ದಯವೊಂದೆ ಸಾಕು
ಸತ್ವವಾಹಿನಿ ನಿನ್ನ ವಾಕು ನೀನು ಸಕಲ ಜನರಿಗೆ ಬೇಕು

ಅಲ್ಲಲ್ಲಿ ಪರಿಷೆಯ ಗುಂಪು ಮತ್ತಲ್ಲಲ್ಲಿ ತೋಪಿನ ತಂಪು
ಅಲ್ಲಲ್ಲಿ ಸೊಗಸಿನ ಸೊಂಪು ಮತ್ತಲ್ಲಲ್ಲಿ ಪರಿಮಳದಿಂಪು

ಅಲ್ಲಲ್ಲಿ ಜನಗಳ ಕೂಟ ಮತ್ತಲ್ಲಲ್ಲಿ ಬ್ರಾಹ್ಮಣರೂಟ
ಅಲ್ಲಲ್ಲಿ ಪಿಡಿದ ಕೋಲಾಟ ಮತ್ತಲ್ಲಿಂದ ಊರಿಗೆ ಓಟ

ಪಾಪ ವಿನಾಶಿನಿ ಸ್ನಾನ ಹರಿ ಪಾದೋದಕವೇ ಪಾನ
ಕೋಪತಾಪಗಳ ನಿಧಾನ ನಮ್ಮ ಪುರಂದರವಿಠಲನ ಧ್ಯಾನ

Tirupati Venkataramana Ninagyatake Baradu Karuna
Nambide Ninnaya Carana Paripalisa Beko Karuna
1: Alagiriyindalli Banda Svami Anjanagiriyali Ninda
Kolaludo Dvani Chanda Namma Kundalaraya Mukunda
2: Beteyaduta Banda Svami Bettada Mele Ninda
Nitugara Govinda Alli Jenu Sakkareyanu Tinda
3: Mudala Giriyali Ninda Muddu Venkatapati Balavanta
Idilla Ninage Shrikanta Irelu Lokakananta
4: Adidare Sthiravappa Abhaddagaladalu Oppa
Bedida Varagalanippa Namma Mudalagiri Timmappa
5: Appava Atirasa Medda Svami Asurara Kalali Odda
Satiyayara Kudadutalidda Svami Sakala Durjanaranu Gedda
6: Bage Bage Bhaksa Paramanna Nana Bageya Sakala Shalyanna
Bage Bage Sobagu Mohanna Namma Nagumukhada Suprasanna
7: Kashi Rameshvaradinda Alli Kanike Baruvude Canda
Dasara Kude Govinda Alli Dari Nadevude Canda
8: Ella Devara Ganda Ava Cillare Daivada Minda
Ballidavarige Uddanda Shiva Billa Murida Pracanda
9: Kasu Tappidare Patti Baddi Kasu Bidade Gantu Katti
Dasanendare Bida Gatti Namma Kesakki Timmappasetti
10: Dasara Kandare Prana Ta Dhareyolagadhika Pravina
Dvesiya Gantala Gana Namma Devage Nitya Kalyana
11: Mosa Hoguvanallayya Ondu Kasige Odduva Kayya
Esu Mahimegaranayya Namma Vasudeva Timmayya
12: Cittavadhana Paraku Ninna Cittada Daya Onde Saku
Satyavahini Ninna Vaku Ninu Sakala Janarige Beku
13: Allalli Pariseya Gumpu Mattallalli Topina Tampu
Allalli Sogasina Sompu Mattallalli Parimaladimpu
14: Allalli Janagala Kuta Mattallalli Brahmanaruta
Allalli Pidida Kolata Mattallallinda Urige Ota
15: Papa Vinashini Snana Hari Padodakave Pana
Kopa Tapagala Nidhana Namma Purandara Vittalana Dhyana

dasara padagalu · MADHWA · purandara dasaru · srinivasa

Venkataramanane baaro

ವೆಂಕಟರಮಣನೆ ಬಾರೋ ಶೇಷಾಚಲವಾಸನೆ ಬಾರೋ              ||ಪ||

ಪಂಕಜನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೋ              ||ಅ.ಪ||

ಮುದ್ದು ಮುಖದ ಮಗುವೆ ನಿನಗೆ ಮುತ್ತು ಕೊಡುವೆನು ಬಾರೋ
ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ         ||೧||

ಮಂದರ ಗಿರಿಯನೆತ್ತಿದ ಆನಂದ ಮೂರ್ತಿಯೇ ಬಾರೋ
ನಂದನ ಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೋ    ||೨||

ಕಾಮನಯ್ಯ ಕರುಣಾಳು ಶ್ಯಾಮಲ ವರ್ಣನೆ ಬಾರೋ
ಕೋಮಾಳಾಂಗ ಶ್ರೀಪುರಂದರ ವಿಠಲನೆ ಸ್ವಾಮಿರಾಯನೆ ಬಾರೋ  ||೩||

Venkataramanane baaro |
Sheshaacalavaasane baaro || pa ||

Pankajanaabha parama pavitra |
Shankara mitrane baaro || a.pa ||

Muddu mukada maguve
Ninage muddu koduvenu baaro |
Nirdayaveko ninnolage naanu |
Pondiddeno baa–ro || 1 ||

Mandaragiriyanu ettidaananda moorutiye baaro |
Mandaragiriyanu ettidaananda moorutiye nee baaro |
Nandana kanda govnda mukunda indire arasane baa–ro || 2 ||

Kaamanayyaa karunaalo |
Shyaamala varnane baaro |
Komalaanga shri purundaravithalane |
Swaamiraayane baaro || 3 ||

dasara padagalu · MADHWA · purandara dasaru · srinivasa

Srinivasa neene paaliso

ಶ್ರೀನಿವಾಸ ನೀನೆ ಪಾಲಿಸೊ ಶ್ರಿತಜನಪಾಲ
ಗಾನಲೋಲ ಶ್ರೀ ಮುಕುಂದನೆ

ಧ್ಯಾನಮಾಳ್ಪ ಸಜ್ಜನರ ಮಾನದಿಂದ ಪರಿಪಾಲಿಸುವ
ವೇಣುಗೋಪಾಲ ಗೋವಿಂದ ವೇದವೇದ್ಯ ನಿತ್ಯಾನಂದ

ಎಷ್ಟು ದಿನ ಕಷ್ಟಪಡುವುದೋ ಯಶೋದೆ ಕಂದ
ದೃಷ್ಟಿಯಿಂದ ನೋಡಲಾಗದೆ
ಮುಟ್ಟಿ ನಿನ್ನ ಭಸಿಸಲಾರೆ, ಕೆಟ್ಟ ನರಜನ್ಮದವ
ದುಷ್ಟ ಕಾರ್ಯ ಮಾಡಿದಾಗ್ಯೂ ಇಷ್ಟನಾಗಿ ಕೈಯ ಪಿಡಿಯೋ

ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ
ಎಂದಿಗೆ ಲಭ್ಯವೊ ಮಾಧವ
ಅಂಧಕಾರಣ್ಯದಲಿ ನಿಂದು ತತ್ತರಿಸುತಿಹೆನೊ
ಅಂದದಿಂ ಭವಾಬ್ದಿಯೊಳು ನಿಂದು ನೊಂದೆನೊ ಗೋವಿಂದ

ಅನುದಿನ ಅನೇಕ ರೋಗಗಳ ಅನುಭವಿಸಿದೆನು
ಘನ ಮಹಿಮನೆ ಕೇಳಯ್ಯ
ತನುವಿನಲಿ ಬಲವಿಲ್ಲ ನೆನೆದ ಮಾತ್ರದಿ ಸಲಹೊ ಯೆನ್ನ
ಹನುಮದೀಶ ಪುರಂದರವಿಟ್ಠಲನೆ ಕೈಯ ಪಿಡಿದು

Srinivasa neene paaliso Shrtajana pala ganalola Shri Mukundane||

Dhyana malpa sajjanara manadim paripalipa
Venugopala govinda vedavedya nityananda shrinivasa||1||

Endige ninna padabjava honduva sukha endige labhayavo madhava
andhakaranyadalli nindu tattalisutiheno andhadi bhavadalli nindu nondeno mukunda shrinivasa||2||

Eshtu dina kashta paduvudo yashode kanda drishtiyinda nodalareya
Mutti ninna bhajisalare ketta narajanmadalli dusta karya madidagyu ishtanagi kayya pididu shrinivasa||3||

Anudina aneka rogagala anubhavisude naanu ghana mahimane kelalareya tanuvinalli balavilla
neneda matra salahuva hanumadhisha Purandara Vittala ni enna salaho shrinivasa||4||

dasara padagalu · MADHWA · purandara dasaru

Daniya nodidhano venkatana

ಧಣಿಯ ನೋಡಿದೆನೋ ವೆಂಕಟನ , ಮನ-
ದಣಿಯೆ ನೋಡಿದೆ ಶಿಖಾಮಣಿ ತಿರುಮಲನ ||

ಚರಣದಂದುಗೆ ಗೆಜ್ಜೆಯವನ , ಪೀತಾಂ-
ಬರ ಉಡಿಗೆ ಒಡ್ಯಾಣವಿಟ್ಟವನ
ಮೆರೆಯುವ ಮಾಣಿಕ್ಯದವನ , ಚೆನ್ನ
ಸರ ಹಾರ ಪದಕ ಕೌಸ್ತುಭ ಧರಿಸಿದವನ ||

ಕೊರಳೊಳು ವೈಜಯಂತಿ ಇಹನ , ಕಿರು
ಬೆರಳ ಮುದ್ರಿಕೆ ಭುಜಕೀರ್ತಿಲೊಪ್ಪುವನ
ಅರಳುಕಂಗಳ ನೋಟದವನ , ಸುಳಿ-
ಗುರುಳು ನೊಸಲು ಪಟ್ಟಿ ನಾಮ ಹಚ್ಚಿಹನ ||

ಶಂಖಚಕ್ರವ ಪಿಡಿದವನ , ಕೈ-
ಕಂಕಣ ತೋಳ್ಬಂದಿ ಬಾಪುರಿಯವನ
ಶಂಖನೂದುವ ಸರ್ವೋತ್ತಮನ , ಭೂ –
ವೈಕುಂಠವಿದೆಂದು ಹಸ್ತದಿ ತೋರಿಸುವನ ||

ಕೇಸಕ್ಕಿ ಅನ್ನ ಉಂಬುವನ , ಬಡ್ಡಿ
ಕಾಸು ಬಿಡದ ಹಾಗೆ ಕೂಡಿ ಹಾಕುವನ
ಘೋಷಾನಾದಕ್ಕೆ ಒಲಿದಿಹನ , ಮೈಯೊಳ್
ಸೂಸುವ ಗಂಧ ಕಸ್ತೂರಿ ಲೇಪಿತನ ||

ನೀಟಾದ ವಲ್ಲಿ ಹೊದ್ದಿಹನ , ಹೊರ
ಬೇಟೆಯಾಡಿ ಅಂದದಿಂದ ಬರುವನ
ನೋಟದಿ ಬಂದು ನಿಂತಿಹನ , ಈ
ಸೃಷ್ಟಿಗೊಡೆಯ ಪುರಂದರವಿಟ್ಠಲನ ||

Daniya nodidhano venkatana mana
Daniya nodide shikamani tirumalana ||

Kesakki annava unbuvana baddi
Kasu bidade honna galisuvana
Dose annava marisuvana tanna
Dasara myaladi kunidadutihana ||1||

Gantinalli huduvavana hora
Hontu hogi beteyadvana
Gante nadake naliyuvana bhuvai
Kunthavidendu hastava torutihana ||2||

Bettadolage irutihana mana
Mutti bhajiparige ishtava salisuvana
Kotta varava tappadavana
Srushtigadhipa shriPurandara vittalana ||3||

dasara padagalu · MADHWA · purandara dasaru · srinivasa

Venkataachala nilayam

ವೆಂಕಟಾಚಲ ನಿಲಯಂ ವೈಕುಂಠ ಪುರ ವಾಸಂ        ||ಪ||

ಪಂಕಜ ನೇತ್ರಂ ಪರಮ ಪವಿತ್ರಂ
ಶಂಖ ಚಕ್ರಧರ ಚಿನ್ಮಯ ರೂಪಂ                           ||ಅ.ಪ||

ಅಂಬುಜೋದ್ಭವ ವಿನುತಂ ಅಗಣಿತ ಗುಣ ನಾಮಾಂ
ತುಂಬುರು ನಾರದ ಗಾನವಿಲೋಲಂ                      ||೧||

ಮಕರಕುಂಡಲಧರ ಮದನಗೋಪಾಲಂ
ಭಕ್ತಪೋಷಕ ಶ್ರೀಪುರಂದರವಿಠಲಂ                       ||೩||

Venkataachala nilayam |vaikumtha puravaasam || pa ||

Pankajanetram | parama pavitram |
Shankha chakra dhara cinmaya roopam || 1 ||

Ambujodbhava vinutam | aganita dhaamam |
Tumburu naarada | gaana vinodam || 2 ||

Makara kundala dhaamam | madana gopaalam |
Bhakta poshaka shree | purandaraviththalam ||3 ||

 

dasara padagalu · DEVOTIONAL · MADHWA · purandara dasaru · srinivasa

Ninna nodi dhanyanaadeno

ನಿನ್ನ ನೋಡಿ ಧನ್ಯನಾದೆನೊ ಹೇ ಶ್ರೀನಿವಾಸ

ನಿನ್ನ ನೋಡಿ ಧನ್ಯನಾದೆ ಎನ್ನ ಮನೋನಯನಕೀಗ-
ಇನ್ನು ದಯಮಾಡು ಸುಪ್ರಸನ್ನ ಸ್ವಾಮಿ ಪಾಂಡುರಂಗ

ಪಕ್ಷಿವಾಹನ ಲಕ್ಷ್ಮೀರಮಣ
ಲಕ್ಷ್ಮಿ ನಿನ್ನ ವಕ್ಷದಲ್ಲಿ
ರಕ್ಷ ಶಿಕ್ಷಣದಕ್ಷ ಪಾಂಡವ
ಪಕ್ಷ ರಕ್ಷ ಕಮಲಾಕ್ಷ

ದೇಶದೇಶ ತಿರುಗಿ ನಾನು
ಆಶಾಬದ್ಧನಾದೆ ಸ್ವಾಮಿ
ದಾಸನು ನಾನಲ್ಲವೆ ಜಗ-
ದೀಶ ಶ್ರೀಶ ಶ್ರೀನಿವಾಸ

ಕಂತುಜನಕ ಕೇಳೊ ನೀ ನಿ-
ರಂತರದಿ ನಿನ್ನ ಸೇವೆ
ಅಂತರಂಗದಿ ಪಾಲಿಸಯ್ಯ
ಹೊಂತಕಾರಿ ಪುರಂದರವಿಠಲ

Ninna nodi dhanyanaadeno | he shreenivaasa|
Ninna nodi dhanyanaadeno || pa ||

Pakshivaahana lakshmi ramana |
Lakshyavittu nodo paandava |
Paksha sarva daitya shiksha |
Rakshisenna kamalaaksha || 1 ||

Desha desha tirugi naanu|
Aashaa baddhanaade swaami |
Daasanu naanalle jaga |
Jagadeesha shreesha shreenivaasa || 2 ||

Kanu janaka kelo enna |
Antarangadaaseyannu |
Antaravillade paalisu |
Shreekaanta purandaraviththala || 3 ||

dasara padagalu · DEVOTIONAL · MADHWA · Mahalakshmi · purandara dasaru

Aarige vadhuvaade ambujaakshi

ಆರಿಗೆ ವಧುವಾದೆ ಅಂಬುಜಾಕ್ಷಿ
ಕ್ಷೀರಾಬ್ಧಿಕನ್ನಿಕೆ ಶ್ರೀಮಹಾಲಕುಮಿ ||ಪ||

ಶರಧಿಬಂಧನ ರಾಮಚಂದ್ರಮೂರುತಿಗೋ
ಪರಮಾತ್ಮ ಶ್ರೀ ಅನಂತಪದ್ಮನಾಭನಿಗೋ
ಸರಸಿಜನಾಭ ಜನಾರ್ಧನಮೂರುತಿಗೋ
ಎರಡು ಹೊಳೆಯ ರಂಗಪಟ್ಟಣವಾಸಗೋ ||

ಚೆಲುವ ಬೇಲೂರ ಚೆನ್ನಿಗರಾಯನಿಗೋ
ಕೆಳದಿ ಹೇಳುಡುಪಿನ ಕೃಷ್ಣರಾಯನಿಗೋ
ಇಳೆಯೊಳು ಪಂಢರೀಪುರನಿಲಯ ವಿಠಲೇಶಗೋ
ನಳಿನಾಕ್ಷಿ ಹೇಳು ಬದರೀನಾರಾಯಣನಿಗೋ ||

ಮಲಯಜಗಂಧಿ ಬಿಂದುಮಾಧವರಾಯಗೋ
ಸುಲಭದೇವರ ಪುರುಷೋತ್ತಮನಿಗೋ
ಫಲದಾಯಕ ನಿತ್ಯಮಂಗಳನಾಯಕಗೋ
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ ||

ವಾಸವಾರ್ಚಿತ ಕಾಂಚಿ ವರದರಾಜಮೂರುತಿಗೋ
ಅಸುರಾರಿ ಶ್ರೀಮುಷ್ಣದಾದಿವರಹನಿಗೋ
ಶೇಷಶಾಯಿಯಾದ ಶ್ರೀರಂಗನಾಯಕಗೋ
ಸಾಸಿರನಾಮದೊಡೆಯ ಅಳಗಿರೀಶಗೋ ||

ಶರಣಾಗತರ ಪೊರೆವ ಶಾರ್ಙ್ಗಪಾಣಿಗೋ
ವರಗಳೀವ ಶ್ರೀನಿವಾಸಮೂರುತಿಗೋ
ಕುರುಕುಲಾಂತಕ ರಾಜಗೋಪಾಲಮೂರುತಿಗೋ
ಸ್ಥಿರವಾದ ಪುರಂದರವಿಠಲರಾಯನಿಗೋ ||

Aarige vadhuvaade ambujaakshi nee || pa ||

Ksheeraabdhi kannike shree mahaalakumi nee || a. Pa ||

Sharadhi bandhana raamachandra moorutigo |
Paramaatma shree ananta padmanaabhanigo ||
Sarasijanaabha janaardhana moorutigo |
Eradu holeya ranga pattanavaasago || 1 ||

Cheluva beloora chennigaraayanigo |
Keladi heludupiya krushnaraayanigo ||
Ileyolu pandharapura nilaya viththalago |
Nalinaakshi helu badari naaraayananigo || 2 ||

Malayaja gandhi bindu maadhava raayago |
Sulabha devara deva purushottamanigo ||
Phaladaayaka nitya mangaladaayakago |
Cheluve naacade helu shreevenkateshago || 3 ||

Vaasavaarcita kanchi varadaraaja moorutigo |
Asuraari shreemushnaadi varahanigo ||
Sheshashaayiyaada shreeranganaayakago |
Saasira naamadodeya alagireeshago || 4 ||

Sharanaagatara poreva saaranga paanigo |
Varagalaneeva shreenivaasa moorutigo ||
Kurukulaantaka namma raajagopaala moorutigo |
Sthiravaada purandaraviththala raayanigo || 5 ||

dasara padagalu · DEVOTIONAL · purandara dasaru

Aravindaalaye taaye

ಅರವಿಂದಾಲಯೇ ತಾಯೇ ,ಶರಣು ಹೊಕ್ಕೆನು ಕಾಯೇ
ಸಿರಿ ರಮಣನ ಪ್ರಿಯೇ , ಜಗನ್ಮಾತೇ ||ಪ||

ಕಮಲ ಸುಗಂಧಿಯೇ, ಕಮಲದಳ ನೇತ್ರೆಯೆ, ಕಮಲ ವಿಮಲ ಶೋಭಿತೇ
ಕಮನೀಯ ಹಸ್ತಪಾದ, ಕಮಲ ವಿರಾಜಿತೇ, ಕಮಲೇ ಕಾಯೇ ಎನ್ನನು||

ನಿನ್ನ ಕರುಣಾ ಕಟಾಕ್ಷ ವೀಕ್ಷಣದಿಂದಲಿ ತನುಮನಗಳನಿತ್ತೆ
ಧನ್ಯ ವಿರಾಜಿತೇ, ಅಜ ಭವಾದಿಗಳ ಪ್ರಸನ್ನೇ, ಕಾಯೇ ಎನ್ನನು||

ಹರಿ ನಿನ್ನ ಉರದಲ್ಲಿ ಧರಿಸಿದನೆಂಬಂಥ ಗರುವದಿ ಮೆರೆಯದಿರೆ
ನಿರತ ನಿನ್ನಯ ಮುದ್ದು ಪುರಂದರ ವಿಠಲನ ಚರಣ ಕಮಲವ ತೋರಿಸೆ ||

Aravindaalaye taaye shaaranu hokkenu taaye |
Siriramanana preeye jaganmaate || pa ||

Kamala sugandhiye | kamala dala netriye |
Kamala vimala shobhite ||kamaneeya hasta paada |
Kamala viraajite |kamale kaaye ennanoo |
Taaye | kamale kaaye ennanoo || 1 ||

Ninna karuna kataaksha | veekshanadinda |
Tanumanagalanitte| dhanya viraajitee |
Ajabhavaadigala | prasanne kaaye ennanoo |
Taaye | prasanne kaaye ennanoo || 2 ||

Ninna uradalli dharisidanembantha |
Garuvadi mereyadire || niruta ninnaya muddu |
Purandara viththalana charanakamalava torise |
Taaye | charanakamalava torise || 3 ||

dasara padagalu · DEVOTIONAL · MADHWA · purandara dasaru

Bandaalu namma manege

ಬಂದಾಳು ನಮ್ಮ ಮನೆಗೆ ಶ್ರೀ ಮಹಾಲಕುಮಿ ಸಂದೇಹ ವಿಲ್ಲದಲೆ

ಬಂದಾಳು ನಮ್ಮ ಮನೆಗೆ ನಿಂದಾಳು ಗೃಹದಲಿ
ನಂದ ಕಂದನ ರಾಣಿ ಇಂದಿರೆ ನಮ್ಮ ಮನೆಗೆ

ಹೆಜ್ಜೆ ಯ ಮೇಲೆ ಹೆಜ್ಜೆ ನಿಕ್ಕುತ
ಗೆಜ್ಜೆಯ ಕಾಲ ಘಲ್ಲು ಘಲ್ಲು ರೆನುತಾ
ಮೂರ್ಜಗವ ಮೋಹಿಸುತಾ ಮುರಹರನ ರಾಣಿಯು
ಸಂಪತ್ತು ಕೊಡಲಿಕ್ಕೆ ವೆಂಕಟೇಶನ ಸಹಿತ

ಮಾಸ ಶ್ರಾವಣ ಶುಕ್ಲ ಶುಕ್ರವಾರ
ಪೌರ್ಣಿಮೆ ದಿನಮುನ್ನ
ಭೂಸುರರೆಲ್ಲಾ ಕೂಡಿ ಸಾಸಿರ ನಾಮ
ಪಾಡಿ ವಾಸ ವಾಗಿರಲಿಕ್ಕೆ ವಾಸುದೇವನ ಸಹಿತಾ

ಉಟ್ಟ ಪೀತಾಂಬರ ಹೊಳೆಯುತಾ
ಕರದಲಿ ಘಟ್ಟಿ ಕಂಕಣ ಹಿಡಿಯುತ
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲ ನ
ಪಟ್ಟದರಸಿ ನಮಗೆ ಇಷ್ಟಾರ್ಥ ಕೊಡುವುದಕೆ

Bandaalu namma manege | nintaalu gruhadalli |

Nanda kandana raani | indire namma manege || a.pa ||

Hejje mele hejjeyanikkutaa |
Gejjeya kaala ghalu ghalu ghalu ennuta |
Moorjagava mohisutta mukundana raaniyu |
Sampattu kodalikke | venkateshana sahita || 1 ||

Maasa shraavana shuklavu shukravaara |
Pournami dinadandu |
Bhoosurarella seri | saasira naamava paadi |
Vaasavaagiralikke vaasudevana raani || 2 ||

Kanakavaayitu mandira | janani baralu |
Jaya jaya jaya ennire |
Sanakaadi munigala seveyanu swikarisi |
Kanakavalliyu tanna kaantana karedukondu || 3 ||

Utta peetaambara holeyutaa |
Karadalli gatti kankana hidiyutaa |
Srushthigodeya namma purandaraviththalana |
Pattadarasi namage | ishtaartha kodalikke || 4 ||