dasara padagalu · MADHWA · parampara · pranesha dasaru

Vandhisuve guru santatige

ವಂದಿಸುವೆ ಗುರು ಸಂತತಿಗೆ ಪ್ರತಿದಿನಾ |ನಂದ ತೀರ್ಥರ ಮತೋದ್ಧಾರರಿವರಹುದೆಂದು ||pa||

ಶ್ರೀಮದಕ್ಷೋಭ್ಯ ಮುನಿ ತ್ರೈಲೋಕ್ಯ ಭೂಷಣರ |ಧೀಮಂತ ಲೋಕವಂದಿತ ತೀರ್ಥರ |
ರಾಮಪದ ಜಲಜಾಳಿ ಸುಲಭ ರಘುಪುಂಗವರ |ಶ್ರೀಮಂತ ರಘುನಾಥ ರಘುವರ್ಯ ರಘುಸುತಗೆ ||1||

ವಿದ್ಯಾನಿಧಿ ಮುನಿ ರಘುಪತಿಯ ನಾರಾಯಣರ |ಮಧ್ವ ಭಕ್ತಾಗ್ರಣಿ ಮುಕುಂದ ತೀರ್ಥರ |
ಅದ್ವೈತ ಗಿರಿ ಕುಲಿಶ ರಾಮ ರಘುಪತಿ ತೀರ್ಥ |ಸದ್ವೈಷ್ಣವರ ಪಾಲ ರಾಮಚಂದ್ರಾರ್ಯರಿಗೆ ||2||

ಶ್ರೀ ರಘೋತ್ತಮ ತೀರ್ಥ ರಘುರಾಜ ರಘುಪತಿಯ |ಶ್ರೀರಾಮಚಂದ್ರ ತೀರ್ಥಾರ್ಯರ ಪದ |
ವಾರಿಜಯುಗಳವ ಭಕ್ತಿಪೂರ್ವಕದಿ ಸ್ಮರಿಸುವೆನು |ಮಾರಮಣ ಪ್ರಾಣೇಶ ವಿಠಲ ಕರುಣಿಸಲೆಂದು ||3||

Vandisuve guru santatige | pratidina |
Nandatirthara matoddhararivarahudendu || pa ||

Sri madakshobyamuni trailokya bushanara |
Dhimanta lokavandita tirthara |
Rama pada jalajali sulaba ragupungavara |
Srimanta raghunatha raghuvarya raghusutage || 1 ||

Vidyanidhi muni ragupatiya narayanara |
Madhva baktagrani mukundatirthara |
Advaita giri kulisa rama ragupati tirtha |
Sadvaishnavara pala ramachandraryarige || 2 ||

Sri ragottama tirtha raghuraja raghupatiya |
Sri ramachandratirtharyara pada |
Varijayugalada Bhakti purvakadi smarisuvenu |
Maramana pranesaviththala karunisalendu || 3||

dasara padagalu · ganesh · MADHWA · pranesha dasaru

Lambodhara pahi pahi

ಲಂಬೋದರ ಪಾಹೀ ಪಾಹೀ ಜಗದ್ಗುರು|
ಶಂಭುನಂದನ ಸುರಸುತ ಪಾದಾ ||pa||

ಯೋಗೀಶಾರ್ಚಿತ ಶ್ರೀ ಪಾರ್ವತಿ ಪುತ್ರ ನತಮಿತ್ರಾ |
ಆಗಸವಾಳ್ದಮೂಷಕರೂಢಾ ||
ನಾಗಶಯನನಪಾದಧ್ಯಾನದಲ್ಲಿಡು ನಿತ್ಯಾ |
ಶ್ರೀ ಗಣಪತಿ ನಿನ್ನ ಬಲಗೊಂಬೆ || 1 ||

ಶ್ರೀವರ ಶ್ರೀರಾಮಚಂದ್ರ ಧರ್ಮರಾಯಾ |
ದೇವೇಂದ್ರಾ ನಿನ್ನ ಪೂಜಿಸಿದಾರೋ ||
ಕೇವಾಲಾಕಲಿದುರ್ಯೋಧನ ಪೂಜಿಸದೆ ಕೆಟ್ಟಾ |
ಶ್ರೀ ವಿಘ್ನೇಶ್ವರ ನಿನ್ನ ಬಲಗೊಂಬೆ || 2 ||

ದನುಜಾರ ಮೋಹೀಸೂವದಕೆ ಸಂಕಟ ಚೌತಿ |
ಮನಿಸೀ ಪೂಜಿಸಿಕೊಂಬೆ ಖಳರಿಂದಾ ||
ಮುನಿ ವ್ಯಾಸ ಕೃತ ಗ್ರಂಥಾರ್ಥವ ತಿಳಿದು ಬರೆದಾ |
ಗಣರಾಜಾ ನಿನ್ನ ಪಾದಾ ಬಲಗೊಂಬೆ || 3 ||

ಶಂಬು ಚಕ್ರಾಂಕಿತಾ ಪಾಶಧಾರನೇ ರಕ್ತ |
ಅಂಬರಾದ್ವಯ ಭೂಷಾ ನಿರ್ದೋಷಾ ||
ಶಂಬರಾರಿಪುಶರಾ ವಿಜತಾಮೃದ್ಭವ ಗಾತ್ರಾ |
ಅಂಬಾರಾಧಿಪ ನಿನ್ನ ಬಲಗೊಂಬೆ || 4 ||

(ಅಂಬೂಜಾಲಯಜಾನೆ ಬಲಗೊಂಬೆ)ಏಕವಿಂಶತಿಪುಷ್ಪಾನ ಮನ ಮೋದಕ ಪ್ರೀಯ |
ನೀ ಕರುಣಿಪುದೂ ನಿನ್ನವಾನೆಂದು ||
ಸಾಕು ವಿಷಯ ಸುಖಾ ಸುಜನಾರೋಳಾಡಿಸೊ |
ಏಕಾದಂತನೆ ನಿನ್ನ ಬಲಗೊಂಬೆ || 5 ||

ಏನು ಬೇಡುವೊದಿಲ್ಲಾ ಏನು ಮಾಡುವೊಕರ್ಮ|
ಶ್ರೀನಿವಾಸನೆ ಮಾಡಿಸುವನೆಂಬೊ ||
ಜ್ಞಾನಾವೆ ಯಂದೆಂದಿಗಿರಲಿ ತಾರಶಾಂತ- |
ಕಾನುಜಾ ನಿನ್ನ ಬಲಗೊಂಬೆ || 6 ||

ಪ್ರಾಣಸೇವಕ ಚಾಮೀಕರವರ್ಣ ಗಜಮುಖ |
ಪ್ರಾಣೇಶ ವಿಠಲನಾ ಸುಕುಮಾರಾ ||
ನೀನೊಲಿದೆಮಗೆ ವಿಘ್ನವ ಪರಿಹರಿಸುತ |
ಪೋಣಿಸು ಸನ್ಮತೀ ಬಲಗೊಂಬೆ || 7 ||

Lambodara pahi pahi jagadguru|sambunamdana surasuta pada ||pa||

Yogisarchita sri parvati putra natamitra |agasavaldamushakarudha
|nagasayananapadadhyanadallidu nitya |sri ganapati ninna balagombe ||1||

Srivara sriramachandra dharmaraya |devemdra ninna pujisidaro ||
Kevalakaliduryodhana pujisade ketta |sri vignesvara ninna balagombe ||2||

Danujara mohisuvadake sankata chauti |manisi pujisikombe kalarinda ||
Muni vyasa kruta grantharthava tilidu bareda |ganaraja ninna pada balagombe ||3||

Sambu chakrankita pasadharane rakta |ambaradvaya busha nirdosha ||
Sambararipusara vijatamrudbava gatra |ambaradhipa ninna balagombe||4||

Ekavimsatipushpana mana modaka priya |ni karunipudu ninnavanemdu ||
Saku vishaya suka sujanaroladiso |ekadantane ninna balagombe ||5||

Enu beduvodilla Enu maduvokarma|srinivasane madisuvanembo ||
J~janave yandendigirali tarasanta- |kanuja ninna balagombe ||6||

Pranasevaka chamikaravarna gajamuka |pranesa vithalana sukumara ||
Ninolidemage vignava pariharisuta |ponisu sanmati balagombe ||7||

dasara padagalu · MADHWA · pranesha dasaru · siva

Maha deva mahadeva

ಮಹದೇವಾ ಮಹದೇವಾ |ಕಾಯೋ ಮಹದೇವ ಎನ್ನನೀ ||ನೋಯಗೊಡದೆ ತ್ವರ |ಪಾವನ ಮಾಡಿ

ಅಸಮ ರಕ್ಕಸಗೆ |ವಶವಾಗೆ ವನನುಬಿಸಜಾಕ್ಷಗೆ ಒಪ್ಪಿಸಿ |ಕೊಲಿಸಿದನೇ||1||

ನಂಜುಂಡರಗಿಸಿ |ದಂಜನೆ ಕುವರ ಪ್ರ ||ಭಂಜನ ಸುತನಾನಂಜುವೆನೀಗಾ ||2||

ಸೂಸುವ ಭವಶರ |ದೀಸದೆ ಗುರು ಪ್ರಾ ||ಣೇಶ ವಿಠ್ಠಲನ |ದಾಸ ಮುಣುಗುವೆ ||3||

Mahadeva mahadeva sankaramahadeva mahadeva Sankara ||pa||
Sankara Sankara Sankara ||a.pa||

Asama rakkasage vasavagavananu
Bisajakshake ottisi kollisidane ||mahadeva|| – {1}

Bunjisi vishava nanjundanenisidi
Prabanjana priya ninakanjali mugive na ||mahadeva|| – {2}

Susuva Bava saradhim datiso
Guru pranesavithalana dasamunugevena ||mahadeva|| – {3}

dasara padagalu · Gowri · MADHWA · pranesha dasaru

palise ni ennanu gauri devi

ಪಾಲಿಸೆ ಶ್ರೀ ಗೌರೀ ಎನ್ನನು ||pa||

ಪಾಲಿಸೆ ನಿನ್ನಯ ಪಾಲಿಗೆ ಬಂದೆನು |ಬೀಳುವೆ ಸರ್ವದ ಕಾಲಿಗೆ ಕರುಣದೀ|| a.pa||

ಶರಣೆಂದವರನು ಪೊರೆವಳು ಎಂಬುವ |ಬಿರಿದು ನಿನ್ನದು ಎಂದರಿದೆನು ತ್ವರದಿಂ||

ಸನ್ಮತಪುರುಷನ ಯಿನ್ನೆಲ್ಲಿ ಕಾಣೆನೋ |ಮನ್ಮಥನೆಂಬುವ ಬನ್ನಬಿಡಿಪ ಬಲು||

ಕಾಣೆನು ಶಾಂತಿಯ ಏನೆಂಧೇಳಲಿ |ಪ್ರಾಣೇಶ ವಿಠಲನು ತಾನೆಯೇ ಬಲ್ಲನು ||

palise ni ennanu gauri devi  | pa |

palise yennanu ninnaya palige bandenu
biluve sarvada kalige karunadi | a.pa.|

saranendavaranu porevalu enbuva
birudu ninnadendaridenu karunadi || 1 ||

sannuta purushana innelli kanenu
manmathanenbuva banna badipa balu || 2 ||

kanisu santiya enendu helali
pranesa vithalanu tane ballanu taye| | 3 ||