dasara padagalu · MADHWA · raghavendra

Vasudheyolagenega

ವಸುಧೆಯೊಳಗೆಣೆಗಾಣೆನೋ ಈ ಗುರುಗಳಿಗೆ
ಅಸುಪತಿ ಸಮದಿಂದ್ಯೆಶಸುವ ಕುಶಲರಿಗೆ        || ಪ ||

ಶ್ರೀರಮಣನ ಪಾದಸಾರಸಮಧುಪ
ಸೂರಿಜನ ವಿನುತ ಶ್ರೀರಾಘವೇಂದ್ರರಿಗೆ    || ೧ ||

ಬಂದ ಜನರಿಗಾನಂದಗರೆವ
ಕುಂದುರಹಿತ ಕಾಮನಂದಿಗಳೊಡೆಯರಿಗೆ        || ೨ ||

ದಿಟ್ಟ ವೆಂಕಟೇಶ ವಿಠ್ಠಲನ ಪಾದವ
ಮುಟ್ಟಿ ಭಜಿಪರೊಳು ಶ್ರೇಷ್ಠರೆನಿಸುವರಿಗೆ    || ೩ ||

Vasudheyolageneganeno I gurugalige
Asupati samadindyesasuva kusalarige || pa ||

Sriramanana padasarasamadhupa
Surijana vinuta sriraghavendrarige || 1 ||

Banda janariganandagareva
Kundurahita kamanandigalodeyarige || 2 ||

Ditta venkatesa viththalana padava
Mutti bajiparolu sreshtharenisuvarige || 3 ||

dasara padagalu · MADHWA · raghavendra

Tappugalenisade ennappa

ತಪ್ಪುಗಳೆಣಿಸದೆ ಎನ್ನಪ್ಪ ಕಾಯಲಿಬೇಕು
ಸರ್ಪಶಯನನ ದೂತಾ                               || ಪ ||
ಇಪ್ಪತ್ತೋಂದು ಕುಭಾಷ್ಯವ ಮುರಿದ ಸುಮತ ಪ್ರ
ವರ್ತಕ ರಾಘವೇಂದ್ರ – ಮುನಿಪ                 || ಅ ||

ಪ್ರತಿವರುಷ ಬಂದು ನುತಿಸಿ  ಪೋಗು ಎಂದು
ನತಸ್ವಪ್ನದಲಿ ನೀ ಬಂದು
ಹಿತದಿಂದ ಪೇಳಲು ರತನಾಗಿ ಧನದಿ ಮ
ರೆತುಬಿಟ್ಟೆ ನಿಮ್ಮನು – ಯತಿಕುಲೋತ್ತಮ            || ೧ ||

ಸ್ನಾನ ಸಂಧ್ಯಾನ ಸುಜಪತಪ ವ್ರತ ಹೋಮ
ಮೌನ ಮಾರ್ಗಗಳರಿಯೇ
ಜ್ಞಾನಿಗಳಾನುಸಂಧಾನಪೂರ್ವಕ ಪೂಜೆ
ಏನೂ ಮಾಡದೆ – ದುಷ್ಟಮಾನವರೊಳಗಿದೆ     || ೨ ||

ಏಸುಜನ್ಮದಿ ಬಂದ ದೋಷವ ಕಳೆದು ವಿ
ಶೇಷ ಸುಖವ ಕೊಡುವ
ಈ ಸುವಾರ್ತೆಯ ಕೇಳಿ ಮೊರೆಹೊಕ್ಕ ಗುರುಪ್ರಾ
ಣೇಶವಿಠ್ಠಲ
ನ ದೂತಾ – ಮತ್ಪ್ರೀತಾ                  || ೩ ||

Tappugalenisade ennappa kayalibeku
Sarpasayanana duta || pa ||

Ippattondu kubashyava murida sumata pra
Vartaka raghavendra – munipa || a ||

Prativarusha bandu nutisi pogu endu
Natasvapnadali ni bandu
Hitadinda pelalu ratanagi dhanadi ma
Retubitte nimmanu – yatikulottama || 1 ||

Snana sandhyana sujapatapa vrata homa
Mauna margagalariye
J~janigalanu sandhanapurvaka puje
Enu madade – dushtamanavarolagide || 2 ||

Esujanmadi banda doshava kaledu vi
Sesha sukava koduva
I suvarteya keli morehokka gurupra
Nesaviththalana duta – matprita || 3 ||

dasara padagalu · MADHWA · raghavendra

vrundavana nodiro

ವೃ೦ದಾವನ ನೋಡಿರೋ – ಗುರುಗಳ
ವೃಂದಾವನ ಪಾಡಿರೋ                              || ಪ ||
ವೃಂದಾವನ ನೋಡಿ – ಆನಂದ ಮದವೇರಿ
ಚಂದದಿ ದ್ವಾದಶ ಪೌಂಡ್ರಾಂಕಿತಗೊಂಬ        || ಅ ||

ತುಂಗಭದ್ರಾ ನದಿಯ ತೀರದಿ ಇದ್ದ
ತುಂಗಮಂಟಪ ಮಧ್ಯದಿ
ಶೃಂಗಾರ ಶ್ರೀ ತುಳಸಿ ಪದ್ಮಾಕ್ಷ ಸರಗಳಿಂದ
ಮಂಗಳಕರ ಮಹಾ ಮಹಿಮೆಯಿಂದೊಪ್ಪುವ            || ೧ ||

ದೇಶದೇಶದಿ ಮೆಚ್ಚುತ ಇಲ್ಲಿಗೆ ಬಂದು
ವಾಸವಾಗಿ ಸೇವಿಪ
ಭಾಷೆ ಕೊಟ್ಟಂದದಿ ಬಹುವಿಧ ವರಗಳ
ಸೂಸುವ ಕರ ಮಹಾಮಹಿಮೆಯಿಂದೊಪ್ಪುವ        || ೨ ||

ನಿತ್ಯ ಸನ್ನಿಧಿ ಸೇವಿಪ ಭಕ್ತರಿಗೆಲ್ಲ
ಮತ್ತಭೀಷ್ಟವ ಕೊಡುತ
ಸತ್ಯಾದಿಗುಣಸಿಂಧು ವೆಂಕಟವಿಠ್ಠಲ
ನಿತ್ಯಸನ್ನಿಧಿಯಿಂದ ನಿರುತ ಪೂಜೆಯಗೊಂಬ            || ೩ ||

Vrundavana nodiro – gurugala
Vrundavana padiro || pa ||

Vrundavana nodi – Ananda madaveri
Chandadi dvadasa paundrankitagomba || a ||

Tungabadra nadiya tiradi idda
Tungamantapa madhyadi
Srungara sri tulasi padmaksha saragalinda
Mangalakara maha mahimeyindoppuva || 1 ||

Desadesadi meccuta illige bandu
Vasavagi sevipa
Bashe kottandadi bahuvidha varagala
Susuva kara mahamahimeyindoppuva || 2 ||

Nitya sannidhi sevipa Baktarigella
Mattabishtava koduta
Satyadigunasindhu venkataviththalana
Nityasannidhiyinda niruta pujeyagomba || 3 ||

MADHWA · raghavendra

Saranara surabuja

ಶರಣರ ಸುರಭೂಜ – ಗುರುರಾಜ            || ಪ ||

ವರಮಂತ್ರಾಲಯ ಪುರಮಂದಿರ ಸುಂ
ದರ ಮುನೀಂದ್ರ ಭಾಸ್ಕರ ಸಮತೇಜ        || ೧ ||

ಕಾಮಿತಾರ್ಥಗಳ ಕಾಮಧೇನುವಿನ
ಸೀಮೆ ಮೀರಿ ಕೊಡುವ ಮಹಾರಾಜ            || ೨ ||

ಭೇಶಕೋಟಸಂಕಾಶನಾದ ಕಮ
ಲೇಶವಿಠ್ಠಲನ ದಾಸನೆ ಸಹಜ        || ೩ ||

Saranara surabuja – gururaja || pa ||

Varamatralaya puramandira sun
Dara munindra baskara samateja || 1 ||

Kamitarthagala kamadhenuvina
Sime miri koduva maharaja || 2 ||

Besakota sankasanada kama
Lesaviththalana dasane sahaja || 3 ||

dasara padagalu · MADHWA · raghavendra

Nodele manave kondadu

ನೋಡೆಲೆ ಮನವೆ ಕೊಂಡಾಡು ಗುರುಗಳ ಪಾದ-ಈಡು ಇಲ್ಲವೊ ಪುಣ್ಯಕೆ            || ಪ ||
ನಾಡೊಳಗೆ ಗುರುರಾಘವೇಂದ್ರ ರಾಯರ ಸೇವೆ-ಮಾಡಿದವ ಪರಮ ಧನ್ಯ – ಮಾನ್ಯ        || ಅ ||

ನಿಷ್ಠೆಯಿಂದಲಿ ಸ್ಮರಿಸೆ ಕಷ್ಟಗಳು ದೂರ ಮನೋ-ಭೀಷ್ಟಗಳ ಪೂರೈಪರೋ
ಅಷ್ಟಸೌಭಾಗ್ಯವನೆ ಕೊಟ್ಟು ಸುಜನರಿಗೆ ಶ್ರೀ-ವಿಷ್ಣುದಾಸ್ಯವ ತೋರ್ಪರೋ
ದೃಷ್ಟಿಯಿಂದಲಿ ನೋಡಲನೇಕ ಜನ್ಮದ ಪಾಪ-ಬಿಟ್ಟು ಪೋಪವೊ ಕ್ಷಣದಲಿ
ಎಷ್ಟು ಹೇಳಲಿ ಇವರ ನಿಷ್ಠ ಮಹಾತ್ಮ್ಯೆಯನು-ದುಷ್ಟರಿಗೆ ದೊರೆಯದಿವರ ಸೇವಾ            || ೧ ||

ಹಲವು ಕ್ಷೇತ್ರಗಳೇಕೆ ಹಲವು ತೀರ್ಥಗಳೇಕೆ-ಫಲ ಸುಲಭದಲ್ಲಿರಲು
ಬಲವು ಇದ್ದದ್ದರೊಳು ಪ್ರದಕ್ಷಿಣೆ ಸುಪದಜಲ-ತಲೆಯಲ್ಲಿ ಧರಿಸಿ ನಿತ್ಯ
ಮಲರಹಿತನು ಆಗಿ ದಂಡಪ್ರಣಾಮವ ಮಾಡೆ-ಒಲಿವರು ಕರುಣದಲಿ ಬೇಗ
ಜಲಜನಾಭನು ನಾಲ್ಕುರೂಪದಿಂದಿವರಲ್ಲಿ-ಸಿಲುಕಿ ಪೂಜೆಯಗೊಂಬ ಸತತ – ಮೋಕ್ಷದಾತಾ    || ೨ ||

ಹರಿದಾಸರಿದ್ದ ಸ್ಥಳ ವರಕಾಶಿ ಮೊದಲಾದ-ಕುರುಕ್ಷೇತ್ರಕಿಂತಧಿಕವೋ
ಸುರ ಋಷಿ ಮುನಿಗಳು ಇಲ್ಲಿಹರು ವೈಕುಂಠ-ಸರಿಮಿಗಿಲು ಎಂದೆನಿಪುದೋ
ಪರಮ ಸುಜ್ಞಾನಿಗಳಿಗೀ ಫಲವು ದೊರಕುವುದು-ತರತಮದಿ ಇತರ ಜನಕೆ
ಗುರುಶ್ರೀಶವಿಠ್ಠಲನು ಇವರ ರೂಪನಾಮದಲಿ-ಪರಿಪರಿಯ ವರವಗರೆವಾ – ಪೊರೆವಾ        || ೩ ||

Nodele manave kondadu gurugala pada-idu illavo punyake || pa ||

Nadolage gururaghavendra rayara seve-madidava parama dhanya – manya || a ||

Nishtheyindali smarise kashtagalu dura mano-bishtagala puraiparo
Ashtasaubagyavane kottu sujanarige sri-vishnudasyava torparo
Drushtiyindali nodalaneka janmada papa-bittu popavo kshanadali
Eshtu helali ivara nishtha mahatmyeyanu-dushtarige doreyadivara seva || 1 ||

Halavu kshetragaleke halavu tirthagaleke-Pala sulabadalliralu
Balavu iddaddarolu pradakshine supadajala-taleyalli dharisi nitya
Malarahitanu Agi dandapranamava made-olivaru karunadali bega
Jalajanabanu nalkurupadindivaralli-siluki pujeyagomba satata – mokshadata || 2 ||

Haridasaridda sthala varakasi modalada-kurukshetrakimtadhikavo
Sura rushi munigalu illiharu vaikuntha-sarimigilu endenipudo
Parama suj~janigaligi Palavu dorakuvudu-taratamadi itara janake
Gurusrisaviththalanu ivara rupanamadali-paripariya varavagareva – poreva || 3 ||

dasara padagalu · MADHWA · raghavendra

Vrundavanadali rajipa

ವೃಂದಾವನದಲಿ ರಾಜಿಪ ಯತಿವರನ್ಯಾರೇ ಪೇಳಮ್ಮಯ್ಯ            || ಪ ||
ಇಂದಿರೆಯನರಸನ ಚಂದದಿ ಭಜಿಸುವ
ಕುಂದುರಹಿತ ರಾಘವೇಂದ್ರ ಕಾಣಮ್ಮ            || ಅ ||

ಮಂತ್ರಾಲಯಕೃತಮಂದಿರನೆನಿಸುವನ್ಯಾರೇ ಪೇಳಮ್ಮಯ್ಯ
ತಂತ್ರದೀಪಿಕಾ ಗ್ರಂಥಕರ್ತನ್ಯಾರೇ ಪೇಳಮ್ಮಯ್ಯ
ಕಂತುಪಿತನ ಸತ್ಪಂಥದಿ ಭಜಿಸುವನ್ಯಾರೇ ಪೇಳಮ್ಮಯ್ಯ
ಚಿಂತಿತಫಲದ ದುರಂತಶಕ್ತ ಜಯವಂತ ನೀತ ಅಘಶಾಂತ ಕಾಣಮ್ಮ        || ೧ ||

ಶ್ರೀಸುಧೀಂದ್ರಕರಕಮಲಜನೆನಿಸುವನ್ಯಾರೇ ಪೇಳಮ್ಮಯ್ಯ
ತಾ ಸ್ವಪ್ನದಿ ಮಂತ್ರಾಕ್ಷತೆ ಕೊಡುತಿಹನ್ಯಾರೇ ಪೇಳಮ್ಮಯ್ಯ
ಆಶುಗಮನಮತ ಸ್ಥಾಪಕನೆನಿಸುವನ್ಯಾರೇ ಪೇಳಮ್ಮಯ್ಯ
ಭಾಸುರಜ್ಞಾನ ವಿಶೇಷವಾಗಿ ಹರಿದಾಸ್ಯವ ಪಡೆದ ಯತೀಶ ಕಾಣಮ್ಮ    || ೨ ||

ಧಾರುಣಿಪತಿಸುತೆ ತೀರದಿ ನೆಲೆಸಿಹನ್ಯಾರೇ ಪೇಳಮ್ಮಯ್ಯ
ಸಾರಿದ ಭಜಕರ ಬಾರಿಗೆ ಪೊರೆಯುವನ್ಯಾರೇ ಪೇಳಮ್ಮಯ್ಯ
ಕಾರುಣ್ಯನಿಧಿ ಅಪಾರ ಮಹಿಮನಿವನ್ಯಾರೇ ಪೇಳಮ್ಮಯ್ಯ
ನಾರಾಯಣ ತಂದೆಶ್ರೀಪತಿವಿಠ್ಠಲನ ಆರಾಧಿಪ ರಾಘವೇಂದ್ರ ಕಾಣಮ್ಮ        || ೩ ||

Vrundavanadali rajipa yativaranyare pelammayya || pa ||

Indireyanarasana chandadi Bajisuva
Kundurahita raghavendra kanamma || a ||

Mantralaya krutamandiranenisuvanyare pelammayya
Tantradipika gramthakartanyare pelammayya
Kantupitana satpamthadi bajisuvanyare pelammayya
Chintitapalada durantasakta jayavanta nita agasanta kanamma || 1 ||

Srisudhindra karakamala janenisuvanyare pelammayya
Ta svapnadi mantrakshate kodutihanyare pelammayya
Asugamanamata sthapakanenisuvanyare pelammayya
Basuraj~jana viseshavagi haridasyava padeda yatisa kanamma || 2 ||

Dharunipatisute tiradi nelesihanyare pelammayya
Sarida Bajakara barige poreyuvanyare pelammayya
Karunyanidhi apara mahimanivanyare pelammayya
Narayana tande sripativiththalana aradhipa raghavendra kanamma || 3 ||

MADHWA · raghavendra

guruve karunadinda

ಗುರುವೆ ಕರುಣದಿಂದ ನೋಡೋ – ನಿನ್ನ
ತರಳನೆಂದು ದಯಮಾಡೋ                || ಪ ||
ದುರುಳರೊಳತಿದುರುಳ ನರ ನಾ
ಮೊರೆಯ ಪೋಗುವೆನು – ಪೊರೆಯೊ ಅಸ್ಮದ್ಗುರುವೆ        || ಅ ||

ಸುಧೀಂದ್ರಕರಕಂಜಜಾತ – ಈ ವ
ಸುಧೆಯೊಳು ಪರಮಪ್ರಖ್ಯಾತ
ಸದಮಲ ಶುಭಗುಣನಿಧಿ ನಿರ್ಮಲಜ್ಞಾನ
ಪ್ರದ ಪ್ರೇಕನಾಗಿ ಮದಡಮತಿಯ ಬಿಡಿಸೋ
ಪದುಮನಾಭನ ಪದಪದುಮ ಪದೋಪದೆಗೆ
ಹೃದಯದಿ ಮುದದಿ ಧೇನಿಪ – ಮುದಮುನಿಮತ ಉದಧಿಗೆ ಚಂದ್ರ        || ೧ ||

ಪಂಚಬಾಣನ ನಿರಾಕರಿಸಿ – ಪಂಚ
ಪಂಚಕರಣವ ಸ್ವೀಕರಿಸೀ
ಪಂಚಮುಖನೆ ಪರನೆಂಬ ವಾದಿಯ ಮತ
ಮುಂಚೆ ಮುರಿದನೆಂದು ಸಂಚಕಾರವ ಪಿಡಿದು
ಸಂಚರಿಸಿ ಅವರುಕುತಿ ನಿಲ್ಲಿಸಿ ಪ್ರಪಂಚದೊಳಗಿಹ
ಸರ್ವಜಮನನೋವಾಂಛಿತವಗರೆದವ ನೀ ಮುನ್ನ ಪೊರೆದಂತೆ ಎನ್ನ    || ೨ ||

ದೇಶದೇಶದಿ ತವಕೀರ್ತಿ ತುಂಬಿ
ಸೂಸಿಪರಿವದೆಂಬ ವಾರ್ತಿ
ಲೇಸಾಗಿ ಕೇಳಿ ಬಂದಾ ಸುಜನರ ಮನದಾಸೆ
ಪೂರೈಸು ವಿಶೇಷ ಫಲವ ನಿತ್ಯ
ಮಾ ಸರೋಹ ವ್ಯೋಮಕೆಶಾಮರೇಶಮುಖರಿಗೆ
ಈಶನೆನಿಸುವ ಶ್ರೀಶಕೇಶವವಿಠ್ಠಲನ ದಾಸಾ – ತುಂಗಾನಿವಾಸ        || ೩ ||

Guruve karunadinda nodo – ninna
Taralanendu dayamado || pa ||

Durularolatidurula nara na
Moreya poguvenu – poreyo asmadguruve || a ||

Sudhindra karakanjajata – I va
Sudheyolu paramaprakyata
Sadamala subagunanidhi nirmalaj~jana
Prada prekanagi madadamatiya bidiso
Padumanabana padapaduma padopadege
Hrudayadi mudadi dhenipa – mudamunimata udadhige chandra || 1 ||

Panchabanana nirakarisi – panca
Pancakaranava svikarisi
Pancamukane paranemba vadiya mata
Munce muridanendu sanchakarava pididu
Sancharisi avarukuti nillisi prapancadolagiha
Sarvajamananovanchitavagaredava ni munna poredante enna || 2 ||
Desadesadi tavakirti tumbi
Susiparivademba varti
Lesagi keli banda sujanara manadase
Puraisu visesha Palava nitya
Ma saroha vyomakesamaresamukarige
Isanenisuva srisakesavaviththalana dasa – tunganivasa || 3 ||

dasara padagalu · MADHWA · raghavendra

Nere nambi padeyiro

ನೆರೆನಂಬಿ ಪಡೆಯಿರೋ – ಸ್ಥಿರವಾದ ಕರುಣವ
ಗುರುರಾಘವೇಂದ್ರರಾಯರ ಚಾರುಚರಣವ            || ಪ ||

ವರದಂಷ್ಟ್ರಜಲಸುತ್ಸರಿತ ತೀರದಿ ನಿಂದು
ಶರಣರ ದುರಿತವ ತರಿದು ಕಾಯ್ವನೆಂದು        || ೧ ||

ಕರವ ಮುಗಿದು ಬಂದ ಪರಮ ಪಾಮರರಾ
ಪೊರೆವ ಕರುಣ ಕೃಪಾಕರಯತಿವರರ                || ೨ ||

ಶ್ರೀಶಕೇಶವವಿಠ್ಠಲೇಶನ ದೂತ
ರಾಸೆ ಪೂರೈಸುವ ಗುಣನಿಧಿ ಸತತ            || ೩ ||

Nerenambi padeyiro – sthiravada karunava
Gururaghavendrarayara carucaranava || pa ||

Varadamshtrajalasutsarita tiradi nindu
Saranara duritava taridu kayvanendu || 1 ||

Karava mugidu banda parama pamarara
Poreva karuna krupakarayativarara || 2 ||

Srisakesavaviththalesana duta
Rase puraisuva gunanidhi satata || 3 ||

dasara padagalu · MADHWA · raghavendra

Bo yati varadendra

ಭೋ ಯತಿ ವರದೇಂದ್ರ – ಶ್ರೀಗುರುರಾಯ ರಾಘವೇಂದ್ರ        || ಪ ||
ಕಾಯೋ ಎನ್ನ ಶುಭಕಾಯ ಭಜಿಸುವೆನು – ಕಾಯೋ ಮಾಯತಮಕೆ ಚಂದ್ರಾ            || ಅ ||

ಕಂಡ ಕಂಡ ಕಡೆಗೆ ತಿರುಗಿ – ಬೆಂಡಾದೆನೋ ಕೊನೆಗೆ
ಕಂಡ ಕಂಡವರ ಕೊಂಡಾಡುತ ನಿಮ್ಮ – ಕಂಡೆ ಕಟ್ಟ ಕಡೆಗೆ                || ೧ ||

ನೇಮವು ಎನಗೆಲ್ಲೀ ಇರುವುದು – ಕಾಮಾಧಮನಲ್ಲಿ
ಭೋ ಮಹಾಮಹಿಮನೆ ಪಾಮರ ನಾ – ನಿಮ್ಮ ನಾಮವೊಂದೆ ಬಲ್ಲೆ            || ೨ ||

ಮಂತ್ರವ ನಾನರಿಯೇ – ಶ್ರೀಮನ್ಮಂತ್ರಾಲಯ ಧೊರೆಯೆ
ಅಂತರಂಗದೊಳು ನಿಂತು ಪ್ರೇರಿಸುವ – ಅನಂತಾದ್ರೀಶ ನಾನರಿಯೆ            || ೩ ||

BO yati varadendra – srigururaya ragavendra || pa ||

Kayo enna subakaya Bajisuvenu – kayo mayatamake chandra || a ||

Kanda kanda kadege tirugi – bendadeno konege
Kanda kandavara kondaduta nimma – kande katta kadege || 1 ||

Nemavu enagelli iruvudu – kamadhamanalli
BO mahamahimane pamara na – nimma namavonde balle || 2 ||

Mantrava nanariye – srimanmantralaya dhoreye
Antarangadolu nintu prerisuva – anantadrisa nanariye || 3 ||

dasara padagalu · MADHWA · raghavendra

Bandanu Raghavendra

ಬಂದಾನು ರಾಘವೇಂದ್ರ ಇಂದಿಲ್ಲಿಗೆ                  || ಪ ||
ಕಂದನ ಮೊರೆ ಕೇಳಿ ಜನನಿಯು ಬರುವಂತೆ        || ಅ ||

ಗಜವೇರಿ ಬಂದಾ – ಜಗದಿ ತಾ ನಿಂದಾ
ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ          || ೧ ||

ಹರಿಯ ಕುಣಿಸುತ ಬಂದ – ನರಹರಿ ಪ್ರಿಯ ಬಂದಾ
ಶರಣಾಗತರನು ಕರವಪಿಡಿವೆನೆಂದು                  || ೨ ||

ಪ್ರಲ್ಹಾದ ವ್ಯಾಸಮುನೀಂದ್ರ – ರಾಘವೇಂದ್ರ
ನಿಲಿಸುತ ಮನವ ಮಧ್ವೇಶವಿಠ್ಠಲನಲ್ಲಿ            || ೩ ||

Bandanu raghavendra indillige || pa ||

Kandana more keli jananiyu baruvante || a ||

Gajaveri banda – jagadi ta ninda
Ajapita ramana padabja smarisutali || 1 ||

Hariya kunisuta banda – narahari priya banda
Saranagataranu karavapidivenendu || 2 ||

Pralhada vyasamunindra – raghavendra
Nilisuta manava madhvesaviththalanalli || 3 ||