dasara padagalu · DEVOTIONAL · hanuma · MADHWA

vaathanna jaya jaathanna

ವಾತನ್ನ ಜಯಾಜಾತನ್ನ ಲೋಕ-
ಪ್ರೀತನ್ನ ಸ್ತುತಿಸಿ ಖ್ಯಾತನ್ನ ||

ವಿಷವ ನುಂಗಿದ ಮಹಾಶೌರ್ಯನ್ನ ನಿತ್ಯ
ಅಸಮ ಸುಂದರ ಮತಿಧಾರ್ಯನ್ನ
ನಿಶಾಚರ ಕುಲದೋಷ ಸೂರ್ಯನ್ನ ಆರಾ
ಧಿಸುವ ಭಕ್ತರ ಸುಕಾರ್ಯನ್ನ ||

ವಾನರ ಕುಲದೊಳು ಧೈರ್ಯನ್ನ ಮುದ್ದು
ಆನನ ಗೀರ್ವಾಣವರ್ಯನ್ನ
ಆನಂದ ವಿe್ಞÁನ ಚರ್ಯನ್ನ ದುಷ್ಟ –
ದಾನವರಳಿದತಿ ವೀರ್ಯನ್ನ ||

ದ್ವಿಜರಾಜ ಕುಲಾಗ್ರಣಿ ಭೀಮನ್ನ ಮಹ
ದ್ವಿಜಕೇತ ನಂಘ್ರಿಗೆ ಪ್ರೇಮನ್ನ
ದ್ವಿಜರ ಪಾಲಿಸಿದ ನಿಸ್ಸೀಮನ್ನ ಕುರು
ವ್ರಜವ ಸದೆದ ಸಾರ್ವಭೌಮನ್ನ ||

ಅದ್ವೈತ ಮತ ಕೋಲಾಹ ಲನ್ನ ವೇದ
ಸಿದ್ಧಾಂತ ಶುಭಗುಣ ಶೀಲನ್ನ
ಸದ್ವೈಷ್ಣವರನ್ನು ಪಾಲನ್ನ ಗುರು
ಮಧ್ವಮುನಿ ಗುಣಲೋಲನ್ನ ||

ಚಾರುಚರಿತ ನಿರ್ದೋಷನ್ನ ಲೋಕ
ಮೂರರೊಳಗೆ ಪ್ರಕಾಶನ್ನ
ಧೀರ ವಿಜಯವಿಠ್ಠಲೇಶನ್ನ ಬಿಡದೆ
ಆರಾಧಿಪ ಭಾರತೀಶನ್ನ ||

vaathanna jaya jaathanna|loka preethanna
bajisi dhathanna tuthisi kyathanna||

vishava nunkitha mahaa sowriyanna|nithya
asama sundara mathi daaryanna| nishasara
kula dhosha suryaanna araadhisuva
baktharige kaariyanna||1||

saagara baladholu dhairyanna|muddhu
ananaagrvaanaa variyanna|anantha
vignana charyanna dhusta
dhanavaralidhadhi veeryanna||2||

dhveeja raja kulagrani beemanna |maha
dhveeja kethanangrige premanna
dhveejara palipa nissimanna guru
vrujava sathadha saarva bowmanna||3||

advaitha matha kolahalanna vedha
siddhantha madha subha guna seelanna
sath vaishnava baalanna guru
madhva muni guna seelanna||4||

chaaru charitha nirdhoshanna loga
moorarolage prakassanna dheera
vijaya vittalasenna bida
dhaaradisuva baaratheesanna||5||

dasara padagalu · DEVOTIONAL · hanuma · MADHWA · Vidhyaprasanna thirtharu

Hanuman ki jai

ಹನುಮಾನ್ ಕೀ ಜೈ ಹನುಮಾನ್ ಕೀ ಜೈ
ಹನುಮಾನ್ ಕೀ ಜೈ ಜೈ ಹನುಮಾನ್ || ಪ ||

ಥೈ ಥೈ ಥೈ ಥೈ ಥೈಥಕ ಥೈಥಕ
ತಕಿಟ ತಕಿಟ ತಕ ಜೈ ಹನುಮಾನ್ || ಅ ಪ ||

ಹರಿ ಸರ್ವೋತ್ತಮನೆಂಬುವ ತತ್ವಕೆ ಜಯ
ಭೇರಿಯ ಹೊಡೆದೆಯೋ ಹನುಮ
ಢಣ ಢಣ ಢಣ ಢಣ ಢಣ ಢಣ
ಢಣ ಜಯಭೇರಿಯ ನಾದವು ಕೇಳುತಿದೆ || ೧ ||

ವೈಷ್ಣವ ತತ್ವಗಳನು ಬೋಧಿಸಿ
ಜಯಭೇರಿಯ ಹೊಡೆದೆಯೋ ಬಲ ಭೀಮ
ಢಣ ಢಣ ಢಣ ಢಣ ಢಣ ಢಣ
ಢಣ ಜಯಭೇರಿಯ ನಾದವು ಕೇಳುತಿದೆ || ೨ ||

ಮೋಕ್ಷಕೆ ಒಳ್ಳೆಯ ಮಾರ್ಗವ ತೋರುವ
ಜಯಭೇರಿಯ ಹೊಡೆದೆಯೋ ಮಧ್ವ
ಢಣ ಢಣ ಢಣ ಢಣ ಢಣ ಢಣ
ಢಣ ಜಯಭೇರಿಯ ನಾದವು ಕೇಳುತಿದೆ || ೩ ||

ಅಂದಿನ ನಾದವು ಇಂದು ನುಡಿಯುತಿರೆ
ಮಂದಿಗಳೆಲ್ಲರು ಕೇಳುವರು
ತಂದೆ ಪ್ರಸನ್ನನ ಮಂದಿರದಲಿ ಇದು
ಎಂದೆಂದಿಗೂ ಶಾಶ್ವತವಿರಲಿ || ೪ ||

Hanuman ki jai hanuman ki jai
hanuman ki jai hanuman||

thai thai thai thai thai thai thakka thakka
thakida thakida thaka jaya hanuman||

hari sarvothama embuva thathvakke
jeya beriya hodadhayo hanumaan
dana dana dana dana dana dana dana
dana jaya beriya naadhavu keluthidhe||1||

vaishnava thathvagalannu bodhisidha
jeya beriya hodadheyo bala bheema
dana dana dana dana dana dana dana
dana jaya beriya naadhavu keluthidhe||2||

mokshake holleya maargava thorudha
jaya beriya hodadheyo madhwa
dana dana dana dana dana dana dana
dana jaya beriya naadhavu keluthidhe||3||

andhina nadhavu indhu nudiyuthire
mandhigallelalaru keluvudhu
thande prasanna mandiradhalli idhu
endhendhigub saasvatha irali ||4||

dasara padagalu · DEVOTIONAL · hanuma · MADHWA

Ikko nodire

ಇಕ್ಕೋ ನೋಡಿರೆ ಚಿಕ್ಕ ಹನುಮಂತಾ. ||

ಇಕ್ಕೋ ನೋಡಿರಿಂತ ಚಿಕ್ಕ ಹನುಮಂತಾ ಭಕ್ತಿ ಕೊಡುವಂತ ಭಾರತಿಕಾಂತ

ರಾಮ ದೂತನೆ ಬಹು ಶೂರನೀತ|
ರಾಮಚಂದ್ರಗಾಗಿ ಜಲಧಿದಾಟಿ ಪೋಗಿ|
ಸೀತೆಗೆ ಉಂಗುರವನ್ನಿತ್ತ ಮಹಾನುಭಾವ||

ಎಲ್ಲಾ ಕೇಳಿರೆ ವಲ್ಲಭನ ಮಹಿಮೆ|
ತಲ್ಲನಯನ ಪಾಲ ನಿಲ್ಲಿಸಿದ ಲೋಲ|
ಒಳ್ಳೆ ಗುಣಶೀಲ ಇಲ್ಲಿ ಬಹಳ ಪ್ರಭಲ||

ಅಪಾರ ಮಹಿಮ ಬಹು ಶೂರನೀತ|
ಅಂಜನಿಯ ಕಂದಾ ಸಂಜೀವಿನಿಯ ತಂದ|
ನರಸಿಂಹ ದೂತ ನಮ್ಮ ಪೊರೆವಧಾತ||

Ikko nodire chikka hanumanthaa
bakthi koduvantha baarathi kantha||

raama dhuthane bahu sura neetha
ramachandragagi sarathi dhaadi pogi
seethe unguruvanittha mahaanu bhava||1||

ella pelire vallabha mahime
kallaneya bala nillisidha lola
holle gunaseela illi bahala prabala||2||

apaara mahima bahu suraneetha
anjaneya kandha sanjeeviniya thandha
narasimha dhutha enna poreva dhatha||3||

dasara padagalu · DEVOTIONAL · hanuma · MADHWA · purandara dasaru

Hanuma namma thayi thande

ಹನುಮ ನಮ್ಮ ತಾಯಿತಂದೆ
ಭೀಮ ನಮ್ಮ ಬಂಧು ಬಳಗ
ಆನಂದ ತೀರ್ಥರೇ ನಮ್ಮ ಗತಿಗೋತ್ರವಯ್ಯ ||ಪ||

ತಾಯಿ ತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ
ಆಯಾಸವಿಲ್ಲದೆ ಸಂಜೀವನವ ತಂದೆ
ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆವ ರಘು
ರಾಯನಂಘ್ರಿಗಳೆ ಸಾಕ್ಷಿ ತ್ರೇತಾ ಯುಗದಿ ||

ಬಂಧುಬಳಗದಂತೆ ಆಪದ್ಬಾಂಧವನಾಗಿ ಪಾರ್ಥನಿಗೆ
ಬಂದ ದುರಿತಗಳ ಪರಿಹರಿಸಿ
ಅಂಧಕ ಜಾತರ ಕೊಂದು ನಂದ ಕಂದಾರ್ಪಣೆಂದ ಗೋ-
ವಿಂದನಂಘ್ರಿಗಳೆ ಸಾಕ್ಶಿ ದ್ವಾಪರ ಯುಗದಿ ||

ಗತಿ ಗೋತ್ರರಂತೆ ಸಾಧುಯತಿಗಳಿಗೆ ಮತಿಯ ತೋರಿ
ಮತಿ ಕೆಟ್ಟ ಇಪ್ಪತ್ತಒಂದು ಮತವ ಖಂಡಿಸಿ
ಗತಿಗೆಟ್ಟ ವೈಷ್ಣವರಿಗೆ ಗತಿಯ ತೋರಿದೆ ಪರಮಾತ್ಮ
ಗತಿ ಪುರಂದರ ವಿಠಲನೆ ಸಾಕ್ಷಿ ಕಲಿಯುಗದಲ್ಲಿ ||

Hanuma namma thayi thande
bheema namma bhandu bhalaga
Ananda thirthare namma gathigothravayya||

Thayithande hasulegagi sahayamadi sakuvanthe
ayasavillade sanjivanava thande
ghayagonda kapigalanu sayadanthe poreda
raghu rayanangrigale sakshi threetayugadi||1||

Bandhubalagadanthe aapadbandhavanagi parthanige
bahdha bandha durithagala pariharisi
andhakajhathara kondu nadakandarpanendu
govindanangrigale sakshi dwaparayugadi||2||

Gathigotraranthe sadhuthathigalige mathiya thori
mathigetta ipathaondu mathava khandisi
gathigetta sadhvaishnavarige sadgathiya thorida paramathama
gathi purandaravittahalane sakshi kaliyugadalli||3||

dasara padagalu · DEVOTIONAL · hanuma · MADHWA · purandara dasaru

Gatika Chaladi ninta Sri hanumanta

ಘಟಿಕಾಚಲದಿ ನಿಂತ ಪಟು ಹನುಮಂತನ
ಪಠನೆಯ ಮಾಡಲುತ್ಕಟದಿ ಪೊರೆವೆನೆಂದು

ಚತುರ ಯುಗದಿ ತಾನು ಮುಖ್ಯಪ್ರಾಣನು
ಚತುರಮುಖನಯ್ಯನ
ಚತುರ ಮೂರುತಿಗಳನು ಚತುರತನದಿ ಭಜಿಸಿ
ಚತುರ್ಮುಖನಾಗಿ ಜಗಕೆ ಚತುರ್ವಿಧ ಫಲ ಕೊಡುತೆ

ಸರಸಿಜ ಭವಗೋಸ್ಕರ ಕಲ್ಮಷದೂರ
ವರ ಚಕ್ರತೀರ್ಥ ಸರ
ಮೆರೆವಾಚಲದಿ ನಿತ್ಯ ನರಹರಿಗೆದುರಾಗಿ
ಸ್ಥಿರಯೋಗಾಸನದಿ ಕರೆದು ವರಗಳ ಕೊಡುತೆ

ಶಂಖ ಚಕ್ರವ ಧರಿಸಿ ಭಕ್ತರ ಮನಃ-
ಪಂಕವ ಪರಿಹರಿಸಿ
ಪಂಕಜನಾಭ ಶ್ರೀ ಪುರಂದರವಿಠಲನ
ಬಿಂಕದ ಸೇವಕ ಸಂಕಟ ಕಳೆಯುತ

Gatika Chaladi ninta Sri hanumanta Sri hanumanta
Gatika Chaladi ninta patu hanumantanu pathaneya madalu tatadi porevenendu ||

Chaturayugadi tanu atibalavaatanu chaturmukanayyanu
Chaturamurutigala chaturatanadi bhajisi chaturmukanagi chaturvida Pala koduta ||1||

Sarasija bhavagoskara kalmasha dura varachakratirthasara
Mereva Paladi nitya naraharigeduragi sthirayogasanadhi varava koduvenendu ||2||

Shankacakravadharisi bhaktara manava binkava pariharisi
Pankajanabhasri purandara vithalanu bhinkada sevaka sankata kaleyuta ||3||

dasara padagalu · DEVOTIONAL · hanuma · MADHWA · purandara dasaru

Sundaramurthi Mukhya prana

ಸುಂದರಮೂರುತಿ ಮುಖ್ಯಪ್ರಾಣ ಬಂದ ಮನೆಗೆ
ಪ್ರಾಣ ಬಂದ ಮನೆಗೆ , ಶ್ರೀರಾಮಧ್ವನಿಗೆ ||

ಕಣಕಾಲಂದುಗೆ ಗೆಜ್ಜೆ ಝಣಝಣರೆನುತ
ಜಣಕು ಜಣಕುರೆಂದು ಕುಣಿಕುಣಿದಾಡುತ ||

ತುಂಬುರು ನಾರದ ವೀಣೆ ಬಾರಿಸುತ
ವೀಣೆ ಬಾರಿಸುತ ಶ್ರೀರಾಮನಾಮ ಪಾಡುತ ||

ಪುರಂದರವಿಠಲನ ನೆನೆದು ಪಾಡುತಲಿ
ನೆನೆದು ಪಾಡುತಲಿ ಆಲಿಂಗನ ಮಾಡುತಲಿ ||

Sundaramurthi Mukhya prana banda namma manege

Sri Rama nama dwanike , mukhya prana banda Manege

Kana kala anduge gejjeye , galu galurenutha,
Janakku janakku yendhu , kuni kuni dhadutha||1||

Thumburu naradharu veene barisutha,
Veene barisutha , Sri Rama nama padutha||2||

Purundara vittalna nenadhu padu thalli,
Nenadhu paduthalli , aalingana maduthalli ||3||

dasara padagalu · DEVOTIONAL · hanuma · MADHWA

pavana sambutha olidu

ಪವನ ಸಂಭೂತ ಒಲಿದು ತವಕದಿ ಕಾಯಬೇಕು
ಇವನಾರೋ ಎಂದು ಉದಾಸೀನ ಮಾಡದಲೆನ್ನ ||ಪಲ್ಲವಿ||

ಕಪಿಪ ಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು
ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು ||೧||

ಹರಿವೇಷಧರನೆ ನರಹರಿ ಭಕುತರ ಪೊರೆವುದಕ್ಕೆ
ಹರಿಯಂತೆ ಒದಗುವೆಯೊ ನೀನು ಹರಿದಾಸನು ನಾನು ||೨||

ಅಜಸುತನ ಶಾಪದಿಂದ ಅಜಗರನಾದವನ ಪಾದ|
ರಜದಿ ಪುನೀತನ ಮಾಡಿದನೇ, ಅಜ ಪದವಿಗೆ ಬಹನೇ ||೩||

ಕಲಿಯುಗದಿ ಕವಿಗಳೆಲ್ಲ ಕಲಿಬಾಧೆಯಿಂದ ಬಳಲೆ|
ಕಲಿವೈರಿಮುನಿಯೆಂದೆನಿಸಿದಿ, ಕಲಿಮಲವ ಕಳೆದಿ ||೪||

ಗುರು ಪ್ರಾಣೇಶ ವಿಠಲ ಹರಿ ಪರನೆಂಬೊಜ್ಞಾನ
ಗುರುಮಧ್ವರಾಯ ಕರುಣಿಸೊ ದುರ್ಮತಿಗಳ ಬಿಡಿಸೊ ||೫||

Ivanaaro eno endu udaaseena maadalennaa
pavana sambhuta Olidu tavakadi kaayabeku ||

kapipakapi aagneyante kapilana patniyannu
kapigalu huduki midukalu kaaydeyaagalu ||1||

hariveshadharane narahari bhakutara porevudakke
hariyante odeguveyo neenu hari daasanu naanu ||2| |

ajasutana shaapadinda ajagaranaadavana paada
rajadi puneetane maadidane aja padavige bahane ||3||

kaliyugadi kavigalella kalibaadheyinda balali
kalivairimuniyendenisidi kalimalava kaledi ||4||

gurupraneshavithala  haripadanembo  jnana
gurumadhwaraya karuniso durmatigala bidiso ||5||

 

dasara padagalu · DEVOTIONAL · hanuma · MADHWA · purandara dasaru

Veera hanuma bahu paraakramaa

ವೀರ ಹನುಮ ಬಹು ಪರಾಕ್ರಮ ||ಪ||
ಸಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ ||ಅ.ಪ||

ರಾಮ ದೂತನೆನಿಸಿ ಕೊಂಡೆ ನೀ, ರಾಕ್ಷಸರ
ವನವನೆಲ್ಲ ಕಿತ್ತು ಬಂದೆ ನೀ
ಜಾನಕಿಗೆ ಮುದ್ರೆಯಿತ್ತು ಜಗತಿಗೆಲ್ಲ ಹರ್ಷವಿತ್ತು
ಚೂಡಾಮಣಿಯ ರಾಮಗಿತ್ತು ಲೋಕಕೆ ಮುದ್ದೆನಿಸಿ ಮೆರೆವ

ಗೋಪಿಸುತನ ಪಾದ ಪೂಜಿಸಿ , ಗದೆಯ ಧರಿಸಿ
ಬಕಾಸುರನ ಸಂಹರಿಸಿದೆ
ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು
ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ

ಮಧ್ಯಗೇಹನಲ್ಲಿ ಜನಿಸಿ ನೀ ಬಾಲ್ಯದಲ್ಲಿ
ಮಸ್ಕರೀಯ ರೂಪಗೊಂಡೆ ನೀ
ಸತ್ಯವತಿಯ ಸುತನ ಭಜಿಸಿ ಸನ್ಮುಖದಿ ಭಾಷ್ಯ ಮಾಡಿ
ಸಜ್ಜನರ ಪೊರೆವ ಮುದ್ದು ಪುರಂದರವಿಠಲನ ದಾಸ

Veera hanuma bahu paraakramaa || pa ||
Suj~jaanavittu paalisenna jeevarottamaa ||

Raama dootanenisikomde nee raakshasara vanavanella kittu bamde nee |
Jaanakige mudre ittu jagatigella harushavittu
Choodaamaniya raamagittu lokake muddenisi mereva || 1||

Gopi sutana paada poojisi gadheya dharisi bakaasurana samhariside |
Droupatiya moreya keli matte keechakanna komdu
Bheemanembanaama dharisi samgraama dheeranaagi jagadi || 2 ||

Madhyagehanalli janisi nee baalyadalli maskariya roopagonde nee |
Satyavatiya sutana bhajisi sanmukhadi bhaashyamaadi
Sajjanara poreva muddu purandara vithalana daasa || 3 ||

dasara padagalu · DEVOTIONAL · hanuma · MADHWA · Vijaya dasaru

Pavamaana pavamaana

ಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ
ಭವಭಯಾರಣ್ಯ ದಹನ |ಪ|

ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ |ಅ.ಪ|

ಹೇಮ ಕಚ್ಚುಟ ಉಪವೀತ ಧರಿಪ ಮಾರುತ
ಕಾಮಾದಿ ವರ್ಗ ರಹಿತ
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ
ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು

ವಜ್ರ ಶರೀರ ಗಂಭೀರ ಮುಕುಟಧರ
ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರ ವಾರ ಉದಾರ
ಸಜ್ಜನರಘವ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ
ಮಾರ್ಜನದಲಿ ಭವ ವರ್ಜಿತನೆನಿಸೊ

ಪ್ರಾಣ ಅಪಾನ ವ್ಯಾನೋದಾನ ಸಮಾನ
ಆನಂದ ಭಾರತಿ ರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ
ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿ ಕೊಡುವದು ಭಾನು ಪ್ರಕಾಶ

Pavamaana pavamaana jagadapraana | sankarushana |
Bhava bhayaaranya dahanaa pavanaa || pa ||

Shravanave modalaada nava vidha bhakutiya |
Tavakadindali kodu kavigala preeya || a. Pa. ||

Hemakacchuta upaveeta | dharipa maaruta |
Kaamaadi varga rahita ||
Vyomaadi sarva vyaaputa satata nirbheeta |
Raamacandrana nija doota ||
Yaama yaamake ninnaaraadhipudake kaamipe
Enagidu | nemisi pratidina |
Ee manasige sukha stomava toruta |
Paamara matiyanu nee maanipudu || 1 ||

Vajra shareera gambheera mukutadhara |
Durjana vana kuthaara ||
Nirjara mani dayaa paara vaara udaara |
Sajjanaragha parihaara ||
Arjunagolidandu dhwajavaanisi nindu |
Moorjagavarivante garjane maadidi |
Hejje hejjege ninna abja paadada dhooli |
Maarjanadali bhava varjitaneniso || 2 ||

Praana apaana vyaanodaana samaana |
Aananda bhaarati ramana ||
Neene sharvaadi geervaanaadyamararige |
J~jaana dhana paalipa varenya ||
Naanu nirutadali enenesagide |
Maanasaadi karma ninagoppisideno |
Praananaatha siri vijayaviththalana |
Kaanisi koduvadu bhaanu prakaasha || 3 ||

dasara padagalu · DEVOTIONAL · hanuma · MADHWA · purandara dasaru

Nodirayya hanumantana

ನೋಡಿರಯ್ಯ ಹನುಮಂತನ ಮಹಿಮೆಯ
ಬೇಡಿರೋ ವರಗಳನು || ಪಲ್ಲವಿ ||

ರೂಢಿಯೊಳು ಇವನನ್ನು ಪಾಡಿ ಪೊಗಳುತಿಪ್ಪ ಜನರ
ನೋಡಿ ನೋಡಿ ವರವನೀವ ಗಾಡಿಕಾರ ಹನುಮನ್ನ || ಅನು ಪಲ್ಲವಿ ||

ಅಂದು ದಶರಥಸುತನಾಗಿ ಬಂದು ನಿಂದು ಸಾಕೇತದಿ
ಚಂದದಿಂದಪ್ಪನೆಂದು ಅಂದದಿಂ ವಿಶ್ವಾಮಿತ್ರ
ತಂದು ರಘುರಾಮನಿಗೊರೆಯಲಂದು ಯಾಗವ ಕಾಯ್ದ
ಸುಂದರ ರಾಮನಿಗೆ ವಂದನೆಗೈವನೀತ || ೧ ||

ಧೀರನಾಗಿ ಧನುವ ಮುರಿದು ಮೆರೆದು ದಂಡಕವ
ಸೇರಿ ಘೋರ ರಕ್ಕಸರ ಸದೆದು ಜರಿದು ತಂದು ಕಪಿಪತಿಯೊಡನೆ
ಸೇರಿ ಸಖ್ಯವನ್ನೆ ಮಾಡಿ ಧಾರಿಣಿಯೊಳಗೆ ಕಡು
ನಾರಿಯನ್ನೆ ಹುಡುಕಿಸಿದ ಧೀರ ರಾಮದೂತನೀತ || ೨ ||

ಖ್ಯಾತಿಯಿಂದ ಸೇತುವೆಯನು ಕಟ್ಟಿ ಮೆಟ್ಟಿ ರಾವಣ ಪಡೆಯ
ಭೂತಳದೊಳು ಕೆಡಹಿಬಿಟ್ಟು ಮಹಾಂತದೊಳು
ಈತನೆಂದು ಸೇರಿ ಬಂದು ವಾತತನುಜನೆಮ್ಮ ಬಹು
ಪ್ರೀತಿಯಿಂದ ಪುರಂದರವಿಠಲನ್ನ ದಾಸನಾದ || ೩ ||

Nodirayya hanumantana mahimeya bediro Varagalanu || pa ||

Roodhiyolu ivanannu paadi pogalutippa janara |
Nodi nodi varava neeva gaadigaara hanumanna || a. Pa. ||

Andu dasharatha sutanaagi bandu nindu
Saaketadi candadindippanendu |
Andadim vishvaamitra tandu
Raghuraamanigoreyalandu yaagava kaayda |
Sundara raamanige vandanegaivaneeta || 1 ||

Dheeranaagi dhanuva muridu meredu Dandakavaseri |
Ghora rakkasara sadedu jaridu tamdu
Kapipatiyodane seri |
Sakhyavanne maadi dhaaruniyolage kadu |
Naariyanne hudukisida dheera raamadootaneeta ||2 ||

Khyaatiyinda setuveyanu katti metti raavana Padeya |
Bhootaladolu kedahi bittu mahaantadolu |
Eetanendu seri bandu vaatatanujanemma bahu |
Preetiyinda purandaravithalana daasanaada || 3||