dasara padagalu · kanakadasaru · MADHWA

Arigaadharu purva 

ಆರಿಗಾದರೂ ಪೂರ್ವ ಕರ್ಮ ಬಿಡದು, ಅಜ
ಹರ ಸುರ ಮುನಿಗಳ ಕಾಡುತಿಹುದು ||ಪ||

ವೀರ ಭೈರವನಂತೆ ತಾನು ಬತ್ತಲೆಯಂತೆ
ಮಾರಿ ಮಸಣಿಗಳಂತೆ ಕೂಳನ್ನು ತಿಂಬರಂತೆ
ಸೂರ್ಯ ಚಂದ್ರಮರಂತೆ ರಾಹುವಟ್ಟುಳಿಯಂತೆ
ಮೂರೆರಡು ತಲೆ ಹರಗೆ ಕೈಯೊಳು ಕರ್ಪರವಂತೆ ||೧||

ಶಿಷ್ಟ ಹರಿಶ್ಚಂದ್ರಗೆ ಮಸಣದಡಿಗೆಯು ಅಂತೆ
ಸೃಷ್ಟಿಸುವ ಬೊಮ್ಮನಿಗೆ ಶಿರವು ತಾ ಹೋಯಿತಂತೆ
ಅಷ್ಟ ದಿಕ್ಪಾಲಕರು ಸೆರೆಯಾಗಿರುವರಂತೆ
ಕಟ್ಟುಗ್ರದಿಂದ ಇಂದ್ರನಿಗೆ ಮೈಯೆಲ್ಲ ಕಣ್ಣಂತೆ ||೨||

ಹನ್ನೊಂದಕ್ಷೋಹಿಣಿ ಬಲವುಳ್ಳ ಕೌರವನು
ರಣದೊಳಗೆ ತೊಡೆ ಮುರಿದು ಬಿದ್ದು ತಾನಿಹನಂತೆ
ವನಜಾಕ್ಷ ಸಿರಿಯರಸ ಬಲಿಯ ಬೇಡಿದನಂತೆ
ವನಿತೆ ಆ ಧರ್ಮಜನ ತಾಯಿ ತಿರಿದುಂಬಳಂತೆ ||೩||

ಧರೆಗೆ ಧರ್ಮಜನಂತೆ ಕಂಕ ಭಟ್ಟನು ಅಂತೆ
ಶೂರ ಭೀಮನು ತಾನು ಬಾಣಸಿಗನಾದಂತೆ
ವೀರ ಫಲುಗುಣನಂತೆ ಕೈಯೊಳಗೆ ಬಳೆಯಂತೆ
ಕಿರಿ ನಕುಲ ಸಹದೇವ ತುರುಗಳನು ಕಾಯ್ದರಂತೆ ||೪||

ಹರನ ವಾಹನವಂತೆ ಹುಲ್ಲು ಹೊರುವನಂತೆ
ವಿರಿಂಚಿ ವಾಹನವಂತೆ ಕಮಲ ಭಕ್ಷಿಪನಂತೆ
ಹರಿಯ ಹೊತ್ತಿಹನಂತೆ ಹಾವು ಭಕ್ಷಿಪನಂತೆ
ನೆರೆಯಾದಿಕೇಶವನು ತಾ ಬೆಣ್ಣೆಗಳ್ಳನಂತೆ ||೫||

Arigadaru purva karma aja
hara sura munigala kadutihudu ||pa||

Vira Bairavanante tanu battaleyante
mari masanigalante kulannu timbarante
surya chandramarante rahuvattuliyante
mureradu tale harage kaiyolu karparavante ||1||

Sishta harischandrage masanadadigeyu ante
srushtisuva bommanige Siravu ta hoyitante
ashta dikpalakaru sereyagiruvarante
kattugradinda indranige maiyella kannante ||2||

Hannondakshohini balavulla kauravanu
ranadolage tode muridu biddu tanihanante
vanajaksha siriyarasa baliya bedidanante
vanite A dharmajana tayi tiridumbalante ||3||

Dharege dharmajanante kanaka battanu ante
sura bimanu tanu banasiganadante
vira palugunanante kaiyolage baleyante
kiri nakula sahadeva turugalanu kaydarante ||4||

Harana vahanavante hullu horuvanante
virinchi vahanavante kamala bakshipanante
hariya hottihanante havu bakshipanante
nereyadikesavanu ta bennegallanante ||5||

dasara padagalu · kanakadasaru · MADHWA

Tanu ninnadhu

ತನು ನಿನ್ನದು ಜೀವನ ನಿನ್ನದು ಸ್ವಾಮಿ
ಅನುದಿನದಿ ಬಾಹೊ ಸುಖ ದುಃಖ ನಿನ್ನದಯ್ಯ || ೧ ||

ಸವಿನುಡಿ ವೇದ ಪುರಾಣ ಶಾಸ್ತ್ರಗಳೆಲ್ಲ
ಕಿವಿಗೊಟ್ಟು ಕೇಳುವ ಸ್ಥಿತಿ ನಿನ್ನದು
ನವಮೋಹನಾಂಗಿಯರ ರೂಪವ ಕಣ್ಣಿಂದ
ಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ || ೧ ||

ಒಡಗೂಡಿ ಗಂಧ ಕಸ್ತೂರಿ ಪರಿಮಳವೆಲ್ಲ
ಬಿಡದೆ ಲೇಪಿಸಿಕೊಂಬುವುದು ನಿನ್ನದು
ಷಡುರಸದನ್ನಕ್ಕೆ ನಲಿದಾಡುವ ಜಿಹ್ವೆ
ಕಡುರುಚಿಗೊಂಬುವ ಆ ಸವಿ ನಿನ್ನದಯ್ಯ || ೨ ||

ಮಾಯಪಾಶದ ಬಲೆಗೊಳು ಸಿಕ್ಕಿ ತೊಳಲುವ
ಕಾಯ ಪಂಚೇದ್ರಿಯದ ಗತಿ ನಿನ್ನದು
ಕಾಯಜಪಿತ ಕಾಗಿನೆಲೆಯಾದಿ ಕೇಶವ
ರಾಯ ನೀನಲ್ಲದೆ ನರರು ಸ್ವತಂತ್ರರೇ || ೩ ||

Tanu ninnadu jeevana ninnadu ||p||

anudinadali baaho sukha dukha ninnadayya ||a.pa||

Savi nudi veda puraana shaastragala
Kivigottu keluva kathe ninnadu
Nava mohanaangera roopava kannali
Eve ikkade noduva nota ninnadayya ||1||

Vadagoodi gandha kasturi parimalangala
Bidade lepisikombuvadu ninnadu
Shadu rasadannakke nalidaaduva jivhe
Kadu ruchigondare aa ruchi ninnadayya ||2||

maaya paashada baleyolage silukiruvantha
Kaaya pancendriyangalu ninnavu
Kaaya japita kaagi neleyaadi keshava
Raaya neenallade nararu swatantrare ||3||

dasara padagalu · kanakadasaru · MADHWA

yenu olle hariye ninna stuthisi keluvudu

yenu olle hariye ninna stuthisi keluvudu
gnana bhakthi kodu yanage idhonde doddadu

ondu neva dinda nanna kaadidavarige
hennu honnu gandu makkalu agali awarige
kandi kundhi yenna bhadhe padisidavarige
kanya danada phala bandhu tataali awarige||1||

hindhe nanna baidhavarella chendagirali
mundhe nanna baivuyavarella andanawerali
kundu ittawarella kudereya katti balali
bandhu vaddhavarege bhattadha gadde beleyali||2||

janara olage maanabhanga madidavarige
jenu tuppa sakkare oota agali awarige
haani baradhantha loka agali awarige
mahanubhava mukthiya koduva nele adhikeshava||3||

dasara padagalu · kanakadasaru · MADHWA

Kula kula kulavennutiharu

ಕುಲ ಕುಲ ಕುಲವೆನ್ನುತಿಹರು ||pa||

ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ ||a.pa||

ಕೆಸರೊಳು ತಾವರೆ ಪುಟ್ಟಲು ಅದ ತಂದುಬಿಸಜನಾಭನಿಗರ್ಪಿಸಲಿಲ್ಲವೆ
ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವವಸುಧೆಯೊಳಗೆ ಭೂಸುರರುಣಲಿಲ್ಲವೆ||||

ಮೃಗಗಳ ಮೈಯಲಿ ಪುಟ್ಟಿದ ಕತ್ತುರಿಯತೆಗೆದು ಪೂಸುವರು ದ್ವಿಜರೆಲ್ಲರು
ಬಗೆಯಿಂದ ನಾರಾಯಣನ್ಯಾವ ಕುಲಅಗಜ ವಲ್ಲಭನ್ಯಾತರ ಕುಲದವನು ||2||

ಆತ್ಮ ಯಾವ ಕುಲ ಜೀವ ಯಾವ ಕುಲತತ್ತ್ವೇಂದ್ರಿಯಗಳ ಕುಲ ಪೇಳಿರಯ್ಯ|
ಆತ್ಮಾಂತರಾತ್ಮ ನೆಲೆಯಾದಿಕೇಶವನುಆತನೊಲಿದ ಮೇಲೆ ಯಾತರ ಕುಲವಯ್ಯ ||3||

Kula kula kulavennutiharu || pa ||

Kulavyavudu satyasukavulla janarige || a.pa ||

Kesarolu tavare puttalu ada tandu
Bisajanaba nigarpisalillave
Hasuvina mamnsadolutpatti kshiravu
Vasudheyolage busurarunnalillave || 1 ||

Mrugagala maiyalli puttida kasturi
Tegedu pusuvaru busurarellaru
Bageyinda narayananyava kuladava
Agajavallabanyatara kuladavanu || 2 ||

Atma yava kula jiva yava kula
Tattvendriyagala kula pelirayya
Atmamtaratma neleyadikesava
Atanolida mele yatara kulavayya || 3 ||

dasara padagalu · kanakadasaru · MADHWA

kokoko enniro kumbhiniyarella

ಕೊಕೊಕೋ ಎನ್ನಿರೊ ಕುಂಭಿನಿಯವರೆಲ್ಲಕೊಕೊಕೋ ಎನ್ನಿರೊ – ನಮ್ಮ ||pa||

ಗೋಕುಲದೊಳಗೊಬ್ಬ ಕಳ್ಳ ಬರುತಾನೆಂದುಕೊಕೊಕೋ ಎನ್ನಿರೊ ||a.pa||

ಹೊದ್ದಿ ಮೊಲೆಯನುಂಡವಳಸುವನೆ ಕೊಂದಮುದ್ದುಗಾರ ಕಳ್ಳ ಕೊಕೊಕೋ ಎನ್ನಿರೊ|

ಕದ್ದುಕೊಂಡೊಯ್ವ ರಕ್ಕಸರನೆಲ್ಲರ ಕಾಲಲೊದ್ದೊರಸಿದ ಕಳ್ಳ ಕೊಕೊಕೋ ಎನ್ನಿರೊ|

ಹದ್ದು ಹಗೆಯ ಹಾಸಿಗೆಯ ಮೇಲೊರಗಿದಮುದ್ದುಗಾರ ಕಳ್ಳ ಕೊಕೊಕೋ ಎನ್ನಿರೊ

ಅರ್ಧದೇಹನ ಕೈಯ ತಲೆಯ ಕಪಟದಿಂದಕದ್ದು ಬಿಸುಟ ಕಳ್ಳ ಕೊಕೊಕೋ ಎನ್ನಿರೊ |

ಕೆಂಜಾಜಿಯ ಮಣಿ ಮಲ್ಲಿಗೆ ದಂಡೆಯರಂಜೆ ಕದ್ದ ಕಳ್ಳ ಕೊಕೊಕೋ ಎನ್ನಿರೊ|

ಗುಂಜಿಯ ದಂಡೆಯ ಕಲ್ಲಿಯ ಚೀಲದಮಂಜು ಮೈಯ್ಯ ಕಳ್ಳ ಕೊಕೊಕೋ ಎನ್ನಿರೊ

ಅಂಜದೆ ಗೊಲ್ಲರ ಹಳ್ಳಿಯೊಳಗೆ ಹಾಲನೆಂಜಲಿಸಿದ ಕಳ್ಳ ಕೊಕೊಕೋ ಎನ್ನಿರೊ

ಸಂಜೆ ಬೈಗಿನಲ್ಲಿ ಕರೆಯುವ ಸತಿಯರಅಂಜಿಸಿದ ಕಳ್ಳ ಕೊಕೊಕೋ ಎನ್ನಿರೊ |

ಕೇಸರಿ ಎಂಬ ರಕ್ಕಸರನೆಲ್ಲರ ಕೊಂದವೇಷಧಾರಿ ಕಳ್ಳ ಕೊಕೊಕೋ ಎನ್ನಿರೊ|

ಮೋಸದಿ ಬಲಿಯ ದಾನವ ಬೇಡಿ ಅನುದಿನಬೇಸರಿಸಿದ ಕಳ್ಳ ಕೊಕೊಕೋ ಎನ್ನಿರೊ

ಮೀಸಲ ಅನ್ನವ ಕೂಸಾಗಿ ಸವಿದುಂಡವೇಷಧಾರಿ ಕಳ್ಳ ಕೊಕೊಕೋ ಎನ್ನಿರೊ

ಸಾಸಿರ ನಾಮಕ್ಕೆ ಹೆಸರಾದ ಚಪ್ಪನ್ನದೇಶದ ದಾರಿಗಳ್ಳ ಕೊಕೊಕೋ ಎನ್ನಿರೊ

ಆಕಳೊಳಾಡಿ ಪರಲೋಕಕೆ ನಡೆದಂಥಆಕೆವಾಳ ಕಳ್ಳ ಕೊಕೊಕೋ ಎನ್ನಿರೊ

ಭೂಕಾಂತೆಯ ಸೊಸೆಯರನೆತ್ತೆ ಬಲುಹಿಂದನೂಕಿ ತಂದ ಕಳ್ಳ ಕೊಕೊಕೋ ಎನ್ನಿರೊ

ಗೋಕುಲದೊಳು ಪುಟ್ಟಿ ಗೊಲ್ಲರೆಲ್ಲರ ಕೈಲಿಸಾಕಿಸಿಕೊಂಡ ಕಳ್ಳ ಕೊಕೊಕೋ ಎನ್ನಿರೊ

ಸಾಕಾರನಾಗಿ ಈ ಲೋಕವನೆಲ್ಲವಆಕ್ರಮಿಸಿದ ಕಳ್ಳ ಕೊಕೊಕೋ ಎನ್ನಿರೊ

ಕ್ಷೀರವಾರಿಧಿ ವೈಕುಂಠನಗರಿಯನುಸೇರಿಸಿದ ಕಳ್ಳ ಕೊಕೊಕೋ ಎನ್ನಿರೊ

ದ್ವಾರಾವತಿಯನು ನೀರೊಳು ಬಚ್ಚಿಟ್ಟಊರುಗಳ್ಳ ಬಂದ ಕೊಕೊಕೋ ಎನ್ನಿರೊ

ದ್ವಾರಕೆಯಾಳುವ ಉಭಯದಾಸರ ತನ್ನಊರಿಗೊಯ್ದ ಕಳ್ಳ ಕೊಕೊಕೋ ಎನ್ನಿರೊ

ಕಾರಣಾತ್ಮಕ ಕಾಗಿನೆಲೆಯಾದಿಕೇಶವಕ್ಷೀರ ಬೆಣ್ಣೆಯ ಕಳ್ಳ ಕೊಕೊಕೋ ಎನ್ನಿರೊ

kokoko enniro kumbhiniyarella | kokoko enniro |

namma gokuladolagobba kalla
barutanendu | kokoko enniro | 1 |

ondinoleyanundavala asuvane konda |
muddugara kalla kokoko enniro | 2 |

kaddu kondoyva rakkasaranellara kala |
loddorasida kalla kokoko enniro |3 |

haddu hasigeya meloragida |
muddugara kalla kokoko enniro | 4 |

ardha dehana kayyataleya kapatadinda |
kaddu bisuta kalla kokoko enniro |5 |

kesariyenba rakkasaranellara konda |
veshadhari kalla kokoko enniro | 6 |

mosadi baliya danava bedi anudina |
besarasida kalla kokoko enniro | 7 |

eesala annava kusagi savidunda |
veshadhari kalla kokoko enniro | 8 |

sasiranamake hesarada cappanna |
desadhari kalla kokoko enniro | 9 |

ksheeravaridhi vaikunta nagariyannu |
serisida kalla kokoko enniro | 10 |

dvaravatiyannu neerolu bachchitta |
urugalla banda kalla kokoko enniro | 11 |

dvarakeyaluva ubhaya dasaru tanna |
urigoyda kalla kokoko enniro | 12 |

karanatmaengu kagineleyadikesava |
ksheera benne kalla kokoko enniro | 13 |

dasara padagalu · kanakadasaru · MADHWA

muttadiru ennanu rangayya

ಮುಟ್ಟದಿರೊ ಎನ್ನನು – ರಂಗಯ್ಯಮುಟ್ಟದಿರೊ ಎನ್ನನು ||pa||

ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆಮುತ್ತೆಲ್ಲ ಸಡಲ್ಯಾವೊ ಹೇ ಮುದ್ದುರಂಗ ||a.pa|

ಅತ್ತೆಯೊಬ್ಬಳ ಕೂಡ ಆಡಿ ಬರುವುದ ಕಂಡೆ|
ಸತ್ಯವ ಮಾಡದಿರೊ – ಹೇ ಸರಿನಂಟ |
ನೂರೆಂಟ ಬಣ್ಣದ ಬಂಟ ಬಿಡು ಎನ್ನ ಗಂಟ||1||

ಹಡೆದವರ ತಲೆಗೆ ಮರಳು ಚೆಲ್ಲಿದಂತೆಮಡದೇರ |
ಕೂಡ್ಯಾಡಿ – ಕಲಿತ್ಯೆಲ್ಲೊ ಮಿರುಗ ದಿಮ್ಮದಿರುಗ
ಸೊಕ್ಕಿಮುರುಗ ಬಿಡು ಎನ್ನ ಸೆರಗ ||2||

ಅಂಗೈಯ ನೊರೆಹಾಲು ಮುಂಗೈಯ ಮೇಲುಗಡೆ|
ಸಿಂಗಾರವಾದುದ – ಕಂಡೆ ಕಲೆಯ ಕಾಗಿನೆಲೆಯ |
ಬಟ್ಟಮೊಲೆಯ ಕನಕಯ್ಯನಿಗೊಲೆಯ ||3||

muttadiru ennanu rangayya |
muttadiru ennanu mungaiya sulivige |
mutengla sadaluvavo | e mudduranga | pa |

erale kangale bale kereya maralu celli |
geletera kudadi kalienglo bedaga |
sokkinhuduga bidu enna seraga | 1 |

attalobbala kuda adi baruvuda kande |
satyava madadiro e savinenta |
bannana banta bidu enna ganta |2|

angaiya aragini mungaiya murahari |
srungaravagitte na kanta
katiya kagineleya engakada doreye | 3 |

dasara padagalu · kanakadasaru · MADHWA

ombattu huvige onde

ಒಂಬತ್ತು ಹೂವಿಗೆ ಒಂದೇ ನಾಳವು ಚಂದಮಾಮ ||pa||

ತುಂಬಿ ನಾಳತುದಿ ತುಂಬಿ ಭಾನು ಪ್ರಭೆ ಚಂದಮಾಮ||a||

ಕದರು ಗಾತ್ರ ಕಂಬ ತೆಕ್ಕೆಗಾತರ ಹೂವು ಚಂದಮಾಮ
ಆನೆಗಾತರ ಕಾಯಿ ಒಂಟೆಗಾತರ ಹಣ್ಣು ಚಂದಮಾಮ ||1||

ಕಾಲಿಲ್ಲದಾತನು ಹತ್ತಿದನು ಮರವನು ಚಂದಮಾಮ
ಕೈಯಿಲ್ಲದಾತನು ಕೊಯ್ದನಾ ಹಣ್ಣನು ಚಂದಮಾಮ ||2||

ನೆತ್ತಿಲ್ಲದಾತನು ಹೊತ್ತನು ಹಣ್ಣ ಚಂದಮಾಮ
ತಳವಿಲ್ಲದಾ ಗೂಡೆಯಲಿಳಿಸಿದನಾ ಹಣ್ಣ ಚಂದಮಾಮ ||3||

ಮಾರ್ಗ ತಪ್ಪಿ ಮಾರ್ಗ ಹಿಡಿದು ನಡೆದರು ಚಂದಮಾಮ|
ಸದ್ದಿಲ್ಲದಾ ಸಂತೇಲಿಳಿಸಿದರಾ ಹಣ್ಣ ಚಂದಮಾಮ ||4||

ರೊಕ್ಕವಿಲ್ಲದಾತ ಕೊಂಡನಾ ಹಣ್ಣ ಚಂದಮಾಮ
ಮೂಗಿಲ್ಲದಾತ ಮೂಸಿದನಾ ಹಣ್ಣ ಚಂದಮಾಮ ||5||

ಕಣ್ಣಿಲ್ಲದಾತನು ಕೆಂಪಾನೆ ಹಣ್ಣೆಂದ ಚಂದಮಾಮ
ಅಂಗುಳಿಲ್ಲದಾತ ನುಂಗಿದನಾ ಹಣ್ಣ ಚಂದಮಾಮ \|6||

ಬಾಯಿಲ್ಲದಾತ ತಿಂದು ಬಸಿರಲಿಂಬಿಟ್ಟ ಚಂದಮಾಮ
ಸುಲಭ ಪದವಿದು ನಳಿನಜಾಂಡದೊಳು ಚಂದಮಾಮ ||7||

ಗುರುವಿನ ಮಹಿಮೆ ಗುರುವೆ ತಾ ಬಲ್ಲನು ಚಂದಮಾಮ
ಮೂಢನಾದವನೇನು ಬಲ್ಲನು ಈ ಮಾತು ಚಂದಮಾಮ ||8||

ಕನಕನಾಡಿದ ಗುಟ್ಟು ಆದಿಕೇಶವ ಬಲ್ಲ ಚಂದಮಾಮ
ತಿಳಿದವರು ಪೇಳಿರೀ ಹಳೆಗನ್ನಡವ ಚಂದಮಾಮ ||9||

(raga: nadanamakriya)
ombattu huvige onde nalavu chandamama ||pa||
tumbi nalatudi tumbi bhanu prabhe chandamama ||anupa||

kadaru gatra kamba tekkegatra huvu chandamama
anegatara kayi omtegatara hannu chandamama ||1||

(raga: kedara)
kalilladatanu hattidanu maravanu chandamama
kaiyilladatanu koyvana hannanu chandamama ||2||

nettilladatanu hottana hanna chandamama
talavillada gudeyalilisidana hanna chandamama ||3||

(raga: simdhubhairavi)
marga tappi marga hididu nadedaru chandamama
saddillada santelilisidara hanna chandamama ||4||

rokkavilladata komdana hanna chandamama
mugilladata musidana hanna chandamama ||5||

(raga: jamjuti)
kannilladatanu kempane hannenda chandamama
amgulilladata nungidana hanna chandamama ||6||

bayilladata tindu basiralimbitta chandamama
sulabha padavidu nalinajandadolu chandamama ||7||

(raga: punnagavarali)
guruvina mahimeya guruve ta ballanu chandamama
mudhanadavanenu ballanu I matu chandamama ||8||

kanakanadida guttu Adi keshava balla chandamama
tilidavaru peliri halegannadava chandamama ||9||

dasaavatharam · dasara padagalu · kanakadasaru · MADHWA

Devi namma devaru bandaru bannire

ದ್ಯಾವಿ ನಮ್ಮ ದ್ಯಾವರು ಬಂದರು ಬನ್ನೀರೆ, ನೋಡ ಬನ್ನಿರೆ ||pa||

ಕೆಂಗಣ್ಣ ಮೀನನಾಗಿ ನಮ ರಂಗಗುಂಗಾಡು ಸೋಮನ ಕೊಂದಾನ್ಮ್ಯಾ
ಗುಂಗಾಡು ಸೋಮನ ಕೊಂದು ವೇದವನುಬಂಗಾರದೊಡಲನಿಗಿತ್ತಾನ್ಮ್ಯಾ||1||

ದೊಡ್ಡ ಮಡುವಿನೊಳಗೆ ನಮ ರಂಗಗುಡ್ಡವ ಹೊತ್ಕೊಂಡು ನಿಂತಾನ್ಮ್ಯಾ|
ಗುಡ್ಡವ ಹೊತ್ಕೊಂಡು ನಿಂತು ಸುರರನುದೊಡ್ಡವರನ್ನ ಮಾಡ್ಯಾನ್ಮ್ಯಾ ||2||

ಚೆನ್ನ ಕಾಡಿನ ಹಂದಿಯಾಗಿ ನಮ ರಂಗಚಿನ್ನದ ಕಣ್ಣನ ಕೊಂದಾನ್ಮ್ಯಾ
ಚಿನ್ನದ ಕಣ್ಣನ ಕೊಂದು ಭೂಮಿಯವನಜಸಂಭವಗಿತ್ತಾನ್ಮ್ಯಾ ||3||

ಸಿಟ್ಟಿಂದ ಸಿಂಹನಾಗಿ ನಮ ರಂಗಹೊಟ್ಟೆಯ ಕರುಳ ಬಗೆದಾನ್ಮ್ಯಾ
ಹೊಟ್ಟೆಯ ಕರುಳ ಹಾರವ ಮಾಡಿ ಪುಟ್ಟಗೆ ವರವ ಕೊಟ್ಟಾನ್ಮ್ಯಾ||4||

ಹುಡುಗ ಹಾರುವನಾಗಿ ನಮ ರಂಗಬೆಡಗಲಿ ಮುಗಿಲಿಗೆ ಬೆಳೆದಾನ್ಮ್ಯಾ
ಬೆಡಗಲಿ ಮುಗಿಲಿಗೆ ಬೆಳೆದು ಬಲಿಯನ್ನಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ ||5||

ತಾಯ ಮಾತನು ಕೇಳಿ ಸಾಸಿರ ತೋಳಿನಆವಿನ ಕಳ್ಳನ ಕೊಂದಾನ್ಮ್ಯಾ
ಆವಿನ ಕಳ್ಳನ ಕೊಂದು ಭೂಮಿಯಅವನಿಸುರರಿಗೆ ಇತ್ತಾನ್ಮ್ಯಾ ||6||

ಪಿಂಗಳ ಕಣ್ಣಿನ ಕೊಂಗಗಳ ಕೂಡಿಛಂಗನೆ ಲಂಕೆಗೆ ಪೋದಾನ್ಮ್ಯಾ
ಛಂಗನೆ ಲಂಕೆಗೆ ಪೋಗಿ ನಮ ರಂಗಹೆಂಗಸುಗಳ್ಳನ ಕೊಂದಾನ್ಮ್ಯಾ||7||

ಕರಿಯ ಹೊಳೆಯ ಬಳಿ ತುರುಗಳ ಕಾಯುತಉರಗನ ಮಡುವ ಧುಮುಕ್ಯಾನ್ಮ್ಯಾ
ಉರಗನ ಹೆಡೆ ಮೇಲೆ ಹಾರ್ಹಾರಿ ಕುಣಿವಾಗವರವ ನಾರೇರ್ಗೆ ಕೊಟ್ಟಾನ್ಮ್ಯಾ ||8||

ಭಂಡನಂದದಿ ಕುಂಡೆಯ ಬಿಟುಗೊಂಡುಕಂಡ ಕಂಡಲ್ಲಿಗೆ ತಿರುಗ್ಯಾನ್ಮ್ಯಾ|
ಕಂಡ ಕಂಡಲ್ಲಿಗೆ ತಿರುಗಿ ತ್ರಿಪುರರಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ ||9||

ಚೆಲುವ ಹೆಂಡತಿಯ ಕುದುರೆಯ ಮಾಡಿಒಳ್ಳೆ ರಾಹುತನಾದಾನ್ಮ್ಯಾ
ಒಳ್ಳೆ ರಾಹುತನಾಗಿ ಮ್ಲೇಚ್ಛರಡೊಳ್ಳು ಹೊಟ್ಟೆಯ ಮ್ಯಾಲೊದ್ದಾನ್ಮ್ಯಾ ||10||

ಡೊಳ್ಳಿನ ಮ್ಯಾಲ್ ಕೈ ಭರಮಪ್ಪ ಹಾಕ್ಯಾನುತಾಳವ ಶಿವನಪ್ಪ ತಟ್ಟಾನ್ಮ್ಯಾ|
ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನುಚೆಲುವ ಕನಕಪ್ಪ ಕುಣಿದಾನ್ಮ್ಯಾ||11||

Devi namma devaru bandaru bannire

Kenganna minanagi namma ranga gungadi somana kondanmya
gungadi somana kondu vedavanu bangara dodalanigittanmya||1||

Dodda maduvinolu namma ranga guddava hottukondu nintanmya
guddava hottukondu nintu suraranu doddavarannu madyanmya||2||

Cennakadina handiyagi namma ranga cinnada kannana kondanmya
cinnana kannana kondu bhumiya vanaja sambhavagittanmya||3||

Sittinda simhanagi nammaranga hotteya karula bagedanmya
hotteya karula harava madi puttage varava kottanmya||4||

Huduga haruvanagi namma ranga bedagili mugilige beladanmya
bedagili mugilige beladu baliyanu adiyinda patalakottanmya||5||

Taya matanu keli savira tolina Avina kallana kondanmya
Avina kallanu kondu bhumiya avaniya surarigittanmya||6||

Tingala kannina kongagalanu kudi changane lankege podanmya
changane lankege pogi namma ranga hengasugallana kondanmya||7||

Kariya holeyali turugala kayuta uragana maduva dhumuktyanma
urugana hedemale harihari kunivaga varava naryarige kottanmya||8||

Kanda kandalli kundeya bittukondu bhandatanadali nintanmya
bhandatanadali nintu tripurara hendiranella kedisanmya||9||

Celva hendatiya kudureya madi olleya ravutanadanmya
olleya ravutanagi mleccara dolla hotteyamele voddanmya||10||

Dollinamel; kaiya bharamappa hakyanu talava shivanappa tattanmya
ollolle padagala hanumappa hadyanu celuva kanakappa kunidanmya||11||

dasara padagalu · kanakadasaru · MADHWA

Puttadasanu nanalla

ಪುಟ್ಟ ದಾಸನು ನಾನಲ್ಲ | ದಿಟ್ಟ ದಾಸನು ನಾನಲ್ಲ |
ಸಿಟ್ಟು ದಾಸನು ನಾನಲ್ಲ | ಸುಟ್ಟ ದಾಸನು ನಾನಲ್ಲ |

ಸುಡಗಾಡು ದಾಸ ನಾನಲ್ಲ |ಕಷ್ಟದಾಸ ನಾನಲ್ಲ |
ಕೊಟ್ಟ ದಾಸ ನಾನಲ್ಲ |ಹೊಟ್ಟೆ ದಾಸ ನಾನಲ್ಲ |

ಇಟ್ಟಿಗೆ ದಾಸ ನಾನಲ್ಲ |ಶಿಷ್ಟ ದಾಸ ನಾನಲ್ಲ |
ನಿಷ್ಟ ದಾಸ ನಾನಲ್ಲ |ಭ್ರಷ್ಟ ದಾಸ ನಾನಲ್ಲ |

ಶ್ರೇಷ್ಟ ದಾಸ ನಾನಲ್ಲ |ವಿತ್ತ ದಾಸ ನಾನಲ್ಲ |
ಹುತ್ತ ದಾಸ ನಾನಲ್ಲ |

ನಾನು ಈ ಷೊಡಶ ದಾಸರುಗಳ ದಾಸನು ದಾಸರ ದಾಸಿಯರ
ಮನೆಯ ಮಂಕುದಾಸರ ಮನೆಯ ಶಂಕು ದಾಸ ಬಾಡದಾದಿ ಕೇಶವ ||

Puttadasanu nanalla | ditta dasanu nanalla |
Sittu dasanu nanalla | sutta dasanu nanalla |

Sudagadudasa nanalla | kashthadasa nanalla |
Kottadasa nanalla |hottedasa nanalla |

Ittige dasa nanalla | sishtadasa nanalla |
Nishthadasa nanalla | brashthadasa nanalla |

Sreshthadasa nanalla | vittadasa nanalla |
Huttadasa nanalla |

nanu I Shodasa dasarugala dasanu dasara dasiyara
Maneya mankudasara maneya sankudasa badadadi kesava ||