dasara padagalu · kanakadasaru · MADHWA

Yataravanendusurali jaga

ಯಾತರವನೆಂದುಸುರಲಿ ಜಗ
ನ್ನಾಥ ಮಾಡಿದ ಒಂದು ನರರೂಪವಯ್ಯ     ||ಪ||

ಮುಟ್ಟು ಹುಟ್ಟಿನೊಳು ನೆಟ್ಟನೆ ನಾ ಬಂದೆ
ತೊಟ್ಟಿದ್ದೆನಾಗ ತೊಗಲಬಕ್ಕಣ
ಇಷ್ಟರೊಳಗೆ ಒಂದು ವಿವರವರಿಯದಿಂಥ
ಭ್ರಷ್ಟಗೆ ನನಗಿನ್ಯಾತರ ಕುಲವಯ್ಯ          ।।೧।।

ಇಂದ್ರಿಯ ಸುತಕ ದುರ್ಗಂಧದ ಮಲಮೂತ್ರ
ನಿಂದ ಠಾವಲಿ ತನ್ನ ನಿಜವರಿಯದೆ
ಬಂದದ್ದು ಬಚ್ಚಲಗುಣಿ ತಿಂದದ್ದು ಮೊಲೆ ಮಾಂಸ ಇಂಥ
ಅಂಧಕಗೆ ನನಗಿನ್ಯಾತರ ಕುಲವಯ್ಯ       ।।೩।।

ಒಂಬತ್ತು ಎಜ್ಜದೊಳೊಸರುವ ಹೊಲಸದು
ತುಂಬಿ ತುಳುಕುವ ಕೊಡವಾಗಿರಲು
ಇಂಬಿಲ್ಲದೆ ಹೊಲೆಗೊಂಡ ಠಾವಿನಲಿ ಬಂದಂಥ
ಡಂಬಕ ನನಗಿನ್ಯಾತರ ಕುಲವಯ್ಯ          ।।೩।।

ಕರುಳು ಖಂಡ ನಾರುವ ಚರ್ಮ ರೋಹಿತ
ನರಪಂಜರದೀ ಹುರುಳಿಲ್ಲದ
ನರದೇಹ ಹೊತ್ತು ತಿರುಗುವಂತ
ತಿರುಕ ನನಗಿನ್ಯಾತರ ಕುಲವಯ್ಯ             ।।೪।।

ಹಚ್ಚಡದ ಮೇಲೆ ಲಚ್ಚಿಕೆಯಿಟ್ಟಂತೆ
ಹೆಚ್ಚು ಕಡಮೆ ಎಂದು ಹೆಣಗಾಡುತ
ನಿಚ್ಚ ಕಾಗಿನೆಲೆಯಾದಿಕೇಶವನ
ಹುಚ್ಚಗೆ ನನಗಿನ್ಯಾತರ ಕುಲವಯ್ಯ             ।।೫।।

Yataravanendusurali jaga
Nnatha madida omdu nararupavayya ||pa||

Muttu huttinolu nettane na bande
Tottiddenaga togalabakkana
Ishtarolage ondu vivaravariyadintha
Brashtage nanaginyatara kulavayya ||1||

Indriya sutaka durgandhada malamutra
Ninda thavali tanna nijavariyade
Bandaddu baccalaguni tindaddu mole mamsa intha
Andhakage nanaginyatara kulavayya ||2||

Ombattu ejjadolosaruva holasadu
Tumbi tulukuva kodavagiralu
Imbillade holegonda thavinali bandantha
Dambaka nanaginyatara kulavayya ||3||

Karulu kannda naruva carma rohita
Narapanjaradi hurulillada
Naradeha hottu tiruguvanta
Tiruka nanaginyatara kulavayya ||4||

Haccadada mele laccikeyittante
Heccu kadame endu henagaduta
Nicca kagineleyadikesavana
Huccage nanaginyatara kulavayya ||5||

dasara padagalu · kanakadasaru · MADHWA

Aru hitavaru endu nambabeda

ಆರು ಹಿತವರು ಎಂದು ನಂಬಬೇಡ                      ।।ಪ।।
ಯಾರಿಗ್ಯಾರಿಲ್ಲ ಆಪತ್ತು ಬಂದೊದಗಿದಡೆ               ।।ಅ.ಪ।।

ಜನಕ ಹಿತದವನೆಂದು ನಂಬಬಹುದೇ ಹಿಂದೆ
ತನಯ ಪ್ರಹ್ಲಾದನಿಗೆ ಪಿತ ಮುನಿದನು
ಜನನಿಯೇ ರಕ್ಷಿಪಳೆಂತೆಂಬೆನೆ ಅ ಕುಂತಿ
ತನಯ ರಾಧೇಯನಿಗೆ ಎರಡೆಣಿಸಿದ ಮೇಲೆ            ।।೧।

ಮಗನು ತೆತ್ತಿಗನೆನಲು ಕಂಸ ತನ್ನಯ ಪಿತನ
ವಿಗಡ ಬಂಧನದಿಂದ ಬಂಧಿಸಿದನು
ಜಗವರಿಯೇ ಸೋದರನು ಮಮತೆಯುಳ್ಳವನೆನಲು
ಹಗೆವರಸಿ ವಾಲಿಯನು ಅನುಜ ಕೊಲಿಸಿದ ಮೇಲೆ    ।।೨।।

ತನಗೆ ದೇಹಾನುಬಂಧುಗಳೇ ಬಂಧುಗಳೆಂದು
ಮನದಿ ನಿಶ್ಚಯವಾಗಿ ನಂಬಬೇಡ
ಘನಕೃಪಾನಿಧಿ ಕಾಗಿನೆಲೆಯಾದಿ ಕೇಶವ
ಅನುದಿನ ನಂಬಿದವಗಿಹಪರದಿ ಸುಖವು                   ।।೩।।

Aru hitavaru endu nambabeda ||pa||
Yarigyarilla Apattu bandodagidade ||a.pa||

Janaka hitadavanendu nambabahude himde
Tanaya prahladanige pita munidanu
Jananiye rakshipalemtembene a kunti
Tanaya radheyanige eradenisida mele ||1|

Maganu tettiganenalu kamsa tannaya pitana
Vigada bamdhanadinda bandhisidanu
Jagavariye sodaranu mamateyullavanenalu
Hagevarasi valiyanu anuja kolisida mele ||2||

Tanage dehanubandhugale bandhugalendu
Manadi niscayavagi nambabeda
Ganakrupanidhi kagineleyadi kesava
Anudina nambidavagihaparadi sukavu ||3||

dasara padagalu · kanakadasaru · MADHWA

Nadate hinanadarenayya

ನಡತೆ ಹೀನನಾದರೇನಯ್ಯ ಜಗ
ದೊಡೆಯನ ಭಕುತಿ  ಇದ್ದರೆ ಸಾಲದೆ                      ।।ಪ।।

ಪುಂಡರಾ  ಪಾಂಡುನಂದನರು ಮತ್ತದರೊಳು
ಕಂಡೋರ್ವಳೈವರು ಭೋಗಿಪರು
ಖಂಡಿಸಿದರು ರಣದೊಳು ಗುರುಹಿರಿಯರ
ಪುಂಡರೀಕಾಕ್ಷನ ಒಲುಮೆಯೊಂದಲ್ಲದೆ                   ।।೧।।

ಒಂದೊಂದು ಪರಿ ಬುದ್ಧಿಯ ಹೇಳಿ ಹಿರಣ್ಯಕ
ಕಂದನ ನಿರ್ಬಂಧಿಸುತಿರಲು
ಅಂದು ಸಾಧಿಸಲು ಕಂಬದ ಬಳಿಯೆ ತನ್ನ
ತಂದೆಯ ಕೊಲಿಸಿದನೆಂಬರು ಜನರು                     ।।೨।।

ದಾಸಿಯ ಜಠರದೊಳು ಜನಿಸಿದ ವಿದುರ ಸ
ನ್ಯಾಸಿಯೆಂದೆನಿಸಿಕೊಂಡ
ಸಾಸಿರನಾಮದೊಡೆಯ ಕೃಷ್ಣ ಬಾಡದಾದಿ
ಕೇಶವನ ಭಕುತಿಯೊಂದಿದ್ದರೆ ಸಾಲದೆ                    ।।೩।।

Nadate hinanadarenayya jaga
Dodeyana Bakuti iddare salade ||pa||

Pundara pandunandanaru mattadarolu
Kandorvalaivaru bogiparu
Kandisidaru ranadolu guruhiriyara
Pundarikakshana olumeyomdallade ||1||

Ondondu pari buddhiya heli hiranyaka
Kandana nirbamdhisutiralu
Andu sadhisalu kambada baliye tanna
Tandeya kolisidanembaru janaru ||2||

Dasiya jatharadolu janisida vidura sa
Nyasiyendenisi konda
Sasiranamadodeya krushna badadadi
Kesavana Bakutiyondiddare salade ||3||

dasara padagalu · kanakadasaru · MADHWA

Hannu kombuva banniri haridasaru

ಹಣ್ಣು ಕೊಂಬುವ ಬನ್ನಿರಿ ಹರಿದಾಸರು
ಹಣ್ಣು ಕೊಂಬುವ ಬನ್ನಿರಿ                                  ।।ಪ।।

ಚೆನ್ನ ಬಾಲಕೃಷ್ಣನೆಂಬ
ಕನ್ನೆಗೊನೆಬಾಳೆಹಣ್ಣು                                     ।।ಅ.ಪ।।

ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣು
ಭಕ್ತರ ಬಾಯೊಳು ನೆನೆವ ಹಣ್ಣು
ಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆ
ನಿತ್ಯ ಮಾಧವನೆಂಬ ಅಚ್ಚಮಾವಿನ ಹಣ್ಣು             ।।೧।।

ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣು
ನಿಜಮುನಿಗಳಿಗೆ ತೋರಿಸಿದ ಹಣ್ಣು
ತ್ರಿಜಗವಂದಿತ ಪಾಲ್ಗಡಲೊಡೆಯನೆ ಹಣ್ಣು
ಸುಜನಭಕ್ತರೆಲ್ಲ ಕೊಳ್ಳಬನ್ನಿರಿ ಹಣ್ಣು                     ।।೨।।

ತುರುವ ಕಾಯ್ದ ಹಣ್ಣು ತುರಗನ ತುಳಿದಾ ಹಣ್ಣು
ಕರೆದರೆ ಕಂಬದೊಳು ಓಯೆಂಬ ಹಣ್ಣು
ಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣು
ಕರುಣಾಳು ಕಾಗಿನೆಲೆಯಾದಿಕೇಶವ ಹಣ್ಣು             ।।೩।।

Hannu kombuva banniri haridasaru
Hannu kombuva banniri ||pa||

Chenna balakrushnanemba
Kannegonebalehannu ||a.pa||

Suttelu lokadi suraru bittida hannu
Baktara bayolu neneva hannu
Artiyullavarella kolli bekadare
Nitya madhavanemba accamavina hannu ||1||

Ajana padeda hannu gajava kayda hannu
Nijamunigalige torisida hannu
Trijagavandita palgadalodeyane hannu
Sujanabaktarella kollabanniri hannu ||2||

Turuva kayda hannu turagana tulida hannu
Karedare kambadolu oyemba hannu
Maruguva dhruvanige pattagattida hannu
Karunalu kagineleyadikesava hannu ||3||

dasara padagalu · kanakadasaru · MADHWA

Endiddari kompe enage nambikeyilla

ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ
ಮುಂದರಿತು ಹರಿಪಾದ ಹೊಂದುವುದು ಲೇಸು           ।।ಪ।।

ಎಲುವುಗಳು ತೊಳೆ ಜಂತೆ ನರಗಳವು ಬಿಗಿದಂತೆ
ಬಲಿದ ಚರ್ಮವು ಮೇಲು ಹೊದಿಕೆಯಂತೆ
ಗಳಗಳನೆ ನುಡಿವ ನಾಲಗೆ ಗಂಟೆಯುಲಿಯಂತೆ
ಕೆಲಕಾಲಕೀ ಕೊಂಪೆ ಕಡೆಗಾಹುದಂತೆ                      ।।೧।।

ಕಂಡಿಗಳು ಒಂಬತ್ತು ಕಳಬಂಟರೈವರು
ಅಂಡಲೆವುದೊತ್ತಿನಲಿ ಷಡುವರ್ಗವು
ಮಂಡಲಕೆ ಹೊಸಪರಿಯು ಮನ್ಮಥನ ಠಾಣ್ಯವಿದು
ಮಂಡೆಹೋಗುವುದನ್ನು ಅರಿಯದೀ ಕೊಂಪೆ               ।।೨।।

ಕೊಂಪೆಯಲಿ ಶೃಂಗಾರ ಕೊಂಡಾಡಲಳವಲ್ಲ
ಕೆಂಪುಬಣ್ಣಗಳಿಂದ ಚೆನ್ನಾಯಿತು
ಇಂಪಿನಲಿ ಕಾಗಿನೆಲೆಯಾದಿಕೇಶವನನ್ನು
ಸೊಂಪಿನಲಿ ನೆನೆನೆನೆದು ಸುಖಿಯಾಗೋ ಮನುಜಾ    ।।೩।।

Endiddari kompe enage nambikeyilla
Mundaritu haripada honduvudu lesu ||pa||

Eluvugalu tole jante naragalavu bigidante
Balida charmavu melu hodikeyante
Galagalane nudiva nalage ganteyuliyante
Kelakalaki kompe kadegahudante ||1||

Kandigalu ombattu kalabamtaraivaru
Andalevudottinali shaduvargavu
Mandalake hosapariyu manmathana thanyavidu
Mandehoguvudannu ariyadi kompe ||2||

Kompeyali srungara kondadalalavalla
Kempubannagalinda chennayitu
Impinali kagi neley adikesavanannu
Sompinali nenenenedu sukiyago manuja ||3||

dasara padagalu · kanakadasaru · MADHWA

Kulakula kulavendu

ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರೂ ಬಲ್ಲಿರಾ                             ।।ಪ।।

ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲವೋ
ಗುಟ್ಟುಕಾಣಿಸೆ ಬಂತು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜ                            ।।೧।।

ಜಲವೇ ಸಕಲ ಕುಲಕ್ಕೆ ತಾಯಿಯಲ್ಲವೆ ಆ
ಜಲದ ಕುಲವನೇನಾದರೂ ಬಲ್ಲಿರಾ
ಜಲದ ಬೊಬ್ಬುಳಿಯಂತೆ ಸ್ಥಿರವಲ್ಲ ಈ ದೇಹ
ನೆಲೆಯನರಿತು ನೀ ಹರಿಯ ನೆನೆ ಮನುಜ                        ।।೨।।

ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿಕಾಗಿನೆಲೆಯಾದಿಕೇಶವರಾಯನ
ಚರಣಕಮಲವನು ಕೀರ್ತಿಸುವನೆ ಕುಲಜ                         ।।೪।।

Kulakula kulavendu hodedadadiri nimma
Kulada neleyanenadaru ballira ||pa||

Huttada yonigalilla mettada bumigalilla
Attu unnada vastugalillavo
Guttukanise bantu hiridenu kiridenu
Nettane sarvaj~jana nenekamdya manuja ||1||

Jalave sakala kulakke tayiyallave A
Jalada kulavanenadaru ballira
Jalada bobbuliyante sthiravalla I deha
Neleyanaritu ni hariya nene manuja ||2||

Hariye sarvottama hariye sarvesvara
Harimayavellavenuta tilidu
Siri kagineley adikesava rayana
Charanakamalavanu kirtisuvane kulaja ||3||

dasara padagalu · kanakadasaru · MADHWA

Bandhu trijagake sri hariyallade mikka

ಬಂಧು ತ್ರಿಜಗಕೆ ಶ್ರೀ ಹರಿಯಲ್ಲದೆ ಮಿಕ್ಕ
ಬಂಧುಗಳದಾರಿಗಾರಿದ್ದರೇನು                                             ।।ಪ।।

ನೆಗಳ ಕೈಯಲ್ಲಿ ಮಾತಂಗವು ಸಿಕ್ಕಿ ಒದರಲಾಗಿ ಆ
ನೆಗಳೇನ ಮಾಡುತಿರ್ದವಡವಿಯಲ್ಲಿ
ನಗಜೆಯಾಳ್ದನ ಬ್ರಹ್ಮೇತಿ ಬಂದು ಕಡಲಾಗಿ ರುದ್ರಾ
ದಿಗಳೇನ ಮಾಡುತಿರ್ದರಾ ಶೈಲದೊಳಗೆ                              ।।೧।।

ದಿಂಡೆಯ ಮಾರ್ಗದಿ ಮಲತಾಯಿ ಮಗನ ಹೊಡೆಯಲು
ಮಂಡಲಪತಿ ಏನ ಮಾಡುತಿರ್ದನು
ಮಿಂಡಿ ಪೆಣ್ಣನು ಸಭೆಯಲಿ ಸೀರೆ ಸುಲಿಯಲು
ಗಂಡರೈವರು ನೋಡಿ ಏನು ಮಾಡುತಿರ್ದರಯ್ಯ                    ।।೨।।

ಮೃಗ ಚಕ್ರವರ್ತಿ ಬಹುವರನಾಗಿ ಪೋಗುತ್ತಿರೆ
ಮಿಗೆ ಸತಿಸುತರೇನ ಮಾಡುತಿರ್ದರು
ಮೃಗ ಮಾನವಾಕಾರ ಕಾಗಿನೆಲೆಯಾದಿಕೇಶವನಲ್ಲದೆ
ಮಿಗು ಬಂಧುಗಳದಾರಿಗಾರಿದ್ದರೇನು                                    ।।೩।।

Bandhu trijagake sri hariyallade mikka
Bandhugaladarigariddarenu ||pa||

Negala kaiyalli matangavu sikki odaralagi A
Negalena madutirdavadaviyalli
Nagajeyaldana brahmeti bandu kadalagi rudra
Digalena madutirdara sailadolage ||1||

Dindeya margadi malatayi magana hodeyalu
Mandalapati Ena madutirdanu
Mindi pennanu sabeyali sire suliyalu
Gandaraivaru nodi Enu madutirdarayya ||2||

Mruga cakravarti bahuvaranagi poguttire
Mige satisutarena madutirdaru
Mruga manavakara kagineleyadikesavanallade
Migu bandhugaladarigariddarenu ||3||

dasara padagalu · kanakadasaru · MADHWA

Nanninda nane janisi bandene deva

ನನ್ನಿಂದ ನಾನೇ ಜನಿಸಿ ಬಂದೆನೆ ದೇವ
ಎನ್ನ ಸ್ವತಂತ್ರವು ಲೇಶವಿದ್ದರು ತೋರು ||pa||

ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆನಿನ್ನದು ತಪ್ಪೋ ನನ್ನದು ತಪ್ಪೋ ಪರಮಾತ್ಮ||a.pa||

ಜನನಿಯ ಜಠರದಲಿ ನವಮಾಸ ಪರಿಯಂತಘನದಿ ನೀ ಪೋಷಿಸುತಿರೆ, ನಾನು|
ಜನಿಸಲಾರೆನು ಎನೆ ಜನಿಸೆಂದಿಕ್ಕಳದಿಂದವನಜಾಕ್ಷ ನೂಕಿದವನು ನೀನಲ್ಲವೆ ||1||

ಎಲವುಗಳ ಜಂತೆ ಮಾಡಿ ನರಗಳ ಹುರಿಯಿಂಹೊಲಿದು ಚರ್ಮವ ಹೊದಿಸಿ ದೇಹದೊಳು|
ಮಲಮೂತ್ರಕೆ ಹೊರದಾರಿ ನಿರ್ಮಿಸಿ ಹೃದಯದಲಿನೆಲಸಿ ಚೇತನವನಿತ್ತವ ನೀನಲ್ಲವೆ ||2||

ಜನಿಸಿದಾರಭ್ಯದಿಂದ ಇಂದಿನ ಪರಿಯಂತಘನಘನ ಪಾಪ ಸುಕರ್ಮಂಗಳನು|
ಮನಕೆ ಬೋಧಿಸಿ ಮಾಡಿಸಿ ಮುಂದೆ ಇದನೆಲ್ಲಅನುಭವಿಸುವುದು ಜೀವನೊ ನೀನೊ ದೇವ ||3||

ಅಂಧಕನ ಕೈಲಿ ಕೋಲಿತ್ತು ಕರೆದೊಯ್ಯುವಾಮುಂದಾಳು ತಪ್ಪಿ ಗುಂಡಿಗೆ ಕೆಡಹಲು|
ಅಂಧಕನ ತಪ್ಪೊ ಅದು ಮುಂದಾಳಿನ ತಪ್ಪೊಹಿಂದಾಡಬೇಡ ಎನ್ನೊಳು ತಪ್ಪಿಲ್ಲವೊ ||4||

ಕಂದನ ತಾಯಿ ಆಡಿಸುವಾಗ ಅದು ಪೋಗಿಅಂದಿ ಬಾವಿಯ ನೋಡುವುದನು| |
ಕಂಡುಬಂದು ಬೇಗನೆ ಬಾಚಿ ಎತ್ತಿಕೊಳ್ಳದಿದ್ದರದುಕಂದನ ತಪ್ಪೊ ಮಾತೆಯ ತಪ್ಪೊ ಪರಮಾತ್ಮ ||5||

ಭಾರ ನಿನ್ನದೊ ದೂರು ನಿನ್ನದೊ ಕೃಷ್ಣನಾರಿ ಮಕ್ಕಳು ತನುಮನ ನಿನ್ನದಯ್ಯ|
ಕ್ಷೀರದೊಳಗದ್ದು ನೀರೊಳಗದ್ದು ಗೋವಿಂದಹೇರನೊಪ್ಪಿಸಿದ ಮೇಲೆ ಸುಂಕವೆ ದೇವ ||6||

ನ್ಯಾಯವಾದರೆ ದುಡುಕು ನಿನ್ನದೊ, ರಂಗ, ಮತ್ತ-ನ್ಯಾಯವಾದರೆ ಪೇಳುವರಾರು|
ಮಾಯಾರಹಿತ ಕಾಗಿನೆಲೆಯಾದಿಕೇಶವಕಾಯಯ್ಯ ತಪ್ಪನೆಣಿಸದೆ ದೇವ ||7||

Nanninda nane janisi bandene deva
Enna svatantravu lesaviddaru toru ||pa||

Ninna preraneyinda nadedu nudida mele
Ninnadu tappo ennadu tappo paramatma ||a.pa||

Jananiya jatharadi navamasa pariyanta
Ganadi ni poshisutire nanu
Janisalarenu ene janisendikkaladinde
Vanajaksha nukidavanu ninallave deva ||1||

Andhakana kaiyali kolittu karedoyva
Mundalu tappi gundige kedahalu
Andhakanadu tappo mundalina tappo
Hindadabeda ennali tappillavo deva ||2||

Kandana tayiyu adisutire pogi
Kandanu baviya amdu nodutire
Bandu begadi bigidappadiralu A
Kandana tappo mateya tappo paramatma ||3||

Baravu ninnado duru ninnado krushna
Nari makkalu tanu mana ninnavayya
Kshiradoladdu nirolagaddu govinda
Heranoppisida mele sumkavetake deva ||4||

Elavugala jante madi naragala huriyim
Holidu charmava hodisi dehadolu
Malamutrake horadari nirmisi hrudayadali
Nelasi cetanavanittava ninallave ||5||

Janisidarabyadimda indina pariyanta
Ganagana papa sukarmamgalanu
Manake bodhisi madisi munde idanella
Anubavisuvudu jivano nino deva ||6||

Nyayavadare duduku ninnado matta-
Nyayavadare peluvararu ?
Kayajapita kagineleyadikesava
Raya ni kayayya tappugalenisade ||7||

dasara padagalu · kanakadasaru · MADHWA

Endu sairisiri sri krishnana tappa

ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ
ಮುಂದಕೆ ನಿಮ್ಮ ಮನೆಗೆ ಬಾರನಮ್ಮ||

ಮಗುವು ಬಲ್ಲುದೆ ಇಷ್ಟು ಬೆಣ್ಣೆಯ ಕದ್ದರೆಬಿಗಿಯ ಬಹುದೇ ಶ್ರೀ ಚರಣವನು|
ಅಗಣಿತ ಮಹಿಮನ ಅಂಜಿಸಲೇಕಮ್ಮಬಗೆಯ ಬಾರದೆ ನಿಮ್ಮ ಮಕ್ಕಳಂತೆ ||1||

ಹಸುಮಗುವನು ಕಂಡು ಮುದ್ದಿಸಲೊಲ್ಲದೆಹುಸಿಗ ಕಳ್ಳನೆಂದು ಕಟ್ಟುವಿರಿ|
ವಸುಧೆಯೊಳಗೆ ನಾನೊಬ್ಬಳೆ ಪಡೆದೆನೆ ನಿಮ್ಮಹಸು ಮಗುವಿನಂತೆ ಭಾವಿಸಬಾರದೆ ||2||

ಎಷ್ಟು ಸಾರಿಯು ನಾ ಬೇಡವೆಂದರೆ ಕೇಳದುಷ್ಟ ಮಕ್ಕಳ ಕೂಡೆ ಒಡನಾಟವ|
ಕಟ್ಟಿದ ನೆಲುವಿನ ಬೆಣ್ಣೆಯನೀವೆನುಬಿಟ್ಟು ಕಳುಹಿರಮ್ಮ ಆದಿಕೇಶವನ ||3||

Endu sairisiri sri krishnana tappa
Mundake nimma manege baranamma

Maguvu ballude ishtu benneya kaddare
Bigiyabahude shricharanavanu
Aganita mahimana anjisalekamma
Bageyabarade nimma makkalante |1|

Hasu maguvanu kandu muddisalollade
Pusiga kallanendu kattuviri
Vasudheyolage nanobbale padedene nimma
Hasumaguvendu bhavisabarade |2|

Eshto bariyu na bedavendaru kela
Dushta makkala kuda odanatava
Kattida neluvina benneyanivenu
Bittu kaluhiramma adikeshavana |3|

dasara padagalu · kanakadasaru · MADHWA

Ene manavitte lalitaangi

ಏನೆ ಮನವಿತ್ತೆ ಲಲಿತಾಂಗಿ
ಅಸ-ಮಾನ ಗೋವಳ ಕುಲವಿಲ್ಲದವನೊಳು ||pa||

ಮಗಗೆ ಮೈದುನನಾದ ಮಗಳಿಗೆ ಪತಿಯಾದ
ಮಗಳಿಗಳಿಯನಾದ ಅಳಿಯಗಳಿಯನಾದ ||1||

ಮಗಳ ಮಗಗೆ ಮೈದುನನಾಗಿ ಮಾವನ
ಜಗವರಿಯಲು ಕೊಂದ ಕುಲಗೇಡಿ ಗೋವಳ ||2||

ಅತ್ತೆಗೆ ವಲ್ಲಭನಾದ ಭೃತ್ಯರಿಗಾಳಾದ
ಚಿತ್ತ ಒಲಿದು ಚೆನ್ನ ಆದಿಕೇಶವನೊಳು||3||

Ene manavitte lalitaangi || pa ||

Asamaana govugala kulavilladavanolu || a. Pa. ||

Magage maidunanaada magalige patiyaada |
Magaligaliyanaada aliyagaliyanaada || 1 ||

Magala magage maidunanaagi maavana |
Jagavariyalu konda kulagedi govugala || 2 ||

Attege vallabhanaada bhrutyarigaalaada |
Chittavolidu namma aadikeshavanolu || 3 ||