ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರೂ ಬಲ್ಲಿರಾ ।।ಪ।।
ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲವೋ
ಗುಟ್ಟುಕಾಣಿಸೆ ಬಂತು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜ ।।೧।।
ಜಲವೇ ಸಕಲ ಕುಲಕ್ಕೆ ತಾಯಿಯಲ್ಲವೆ ಆ
ಜಲದ ಕುಲವನೇನಾದರೂ ಬಲ್ಲಿರಾ
ಜಲದ ಬೊಬ್ಬುಳಿಯಂತೆ ಸ್ಥಿರವಲ್ಲ ಈ ದೇಹ
ನೆಲೆಯನರಿತು ನೀ ಹರಿಯ ನೆನೆ ಮನುಜ ।।೨।।
ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿಕಾಗಿನೆಲೆಯಾದಿಕೇಶವರಾಯನ
ಚರಣಕಮಲವನು ಕೀರ್ತಿಸುವನೆ ಕುಲಜ ।।೪।।
Kulakula kulavendu hodedadadiri nimma
Kulada neleyanenadaru ballira ||pa||
Huttada yonigalilla mettada bumigalilla
Attu unnada vastugalillavo
Guttukanise bantu hiridenu kiridenu
Nettane sarvaj~jana nenekamdya manuja ||1||
Jalave sakala kulakke tayiyallave A
Jalada kulavanenadaru ballira
Jalada bobbuliyante sthiravalla I deha
Neleyanaritu ni hariya nene manuja ||2||
Hariye sarvottama hariye sarvesvara
Harimayavellavenuta tilidu
Siri kagineley adikesava rayana
Charanakamalavanu kirtisuvane kulaja ||3||
One thought on “Kulakula kulavendu”