ಜಯವ್ರಜಕ್ಕೆ ನೀ ಜನ್ಮಸೆಧಿಕವು
ಶ್ರೀಯಳವಾಸವೂ ಶಾಶ್ವತಿಲ್ಲಿಯು
ಪ್ರಿಯಗೆ ಪ್ರಾಣವ ಅರ್ಪಿಸಿ ನೋಡುವ
ಪ್ರಿಯರ ದೃಷ್ಟಿಗೆ ಪ್ರಾಪ್ತಿಯಾಗದೆ ॥ 1 ॥
ಸ್ವಜನ ವಿಸ್ಮಯಾ ಸ್ಮಿತದಲಳಿದೆಯೋ
ವ್ರಜದ ದುಃಖವನ್ನೊದ್ದ ವೀರನೆ
ಭಜಿಸು ಕಿಂಕರೀರ್ಬಾಸಖಾ ಹರೇ
ಅಂಬುಜಸಮಾಸ್ಯವಾ ಅಕ್ಷಿಗೆ ತೋರ್ವನೇ ॥ 2 ॥
ಶರತ ಕಾಲದ ಸ್ವಬ್ಜಗರ್ಭದ
ಸಿರಿಗೆ ಪೋಲುವಾಸ್ಯೇಕ್ಷೆ ಒಪ್ಪುವ
ಸುರತಸ್ವಾಮಿ ನೀಂ ಶುಲ್ಕದಾಸೇರಂ
ವರದ ಕಾಯದೇ ವಿಧಿಯದಾವದೈ ॥ 3 ॥
ವಿಷದ ನೀರ್ದೊರೆ ವ್ಯಾಳರಾಕ್ಷರಿಂ
ವಿಷಮ ಗಾಳಿಮಳೆ ವೈದ್ಯುತಾಗ್ನಿಯಿಂ
ವೃಷಭ ಮುಖ್ಯರಿಂ ವಿಶ್ವದುಃಖದಿಂ
ವೃಷಭ ನಮ್ಮನೂ ರಕ್ಷಿಸಿದೆಯೋ ನೀ ॥ 4 ॥
ಅಖಿಳಜೀವರ ಅಂತರ್ನಿಯಾಮಕ
ಗೋಕುಲರಕ್ಷಕರ್ಗೆಂತೋ ಬಾಲಕ
ವಿಖನಸಾರ್ಚಿತಾ ಸರ್ವಗೋಪಿಕಾ
ಸಖ ನೀ ಪುಟ್ಟಿದೆ ಸತ್ವವಂಶದಿ ॥ 5 ॥
ವರವರಿಷ್ಠನೇ ವೃಷ್ಣಿಕಾಂತನೇ
ಶರಣು ಹೊಕ್ಕರಾ ಸಂಸೃತಿಹರಾ
ನೆರೆ ಕರಾಬ್ಜವಾನ್ನಿಟ್ಟು ಶೀರ್ಷವಾ
ಆದರಿಸು ಶ್ರೀಕರಾ ಧರಿಸಿದಾ ಕರಾ ॥ 6 ॥
ಪ್ರಣತ ಪ್ರಾಣಿಗಳ ಪಾಪಕರ್ಷಕಾ
ಆವಿನಬಳಿಲಿಪ್ಪ ವೈಷ್ಣವಾರ್ಚಿತಾ
ಫಣಿ ಫಣೇಲಿಹ ಪಾದಪದ್ಮವಾ
ಸ್ತನಕೆ ಹೊಂದಿಸೈ ತಾಪವಾರಿಸೈ ॥ 7 ॥
ಬುಧರ ಮೆಚ್ಚಿನಾ ಬುದ್ಧಿಕಾರಣಾ
ಮಧುರ ಮಾತಿನಾಂಬುಜನೇತ್ರನೇ
ತ್ವದೀಯ ಆಜ್ಞೆಯ ತಪ್ಪದಿಪ್ಪುವರ್ಗೆ
ಅಧರ ಸೋಮವ ಊಡು ವೀರನೆ ॥ 8 ॥
ನಿನ್ನ ಕಥಾಮೃತ ನೀಚ ಜೀವನಂ
ಮುನಿಗಳರ್ಥ್ಯವು ಮತ್ತೆ ಅಘಹರಂ
ಮನನ ಭವ್ಯವು ಮಹಾಭಾಗ್ಯವು
ನೆನೆವ ಭಕ್ತರು ನಿತ್ಯದಾತರು ॥ 9 ॥
ಪ್ರಿಯ ನಿನ್ಹಾಸವು ಪ್ರೇಮನೋಟವು
ದಯೆಯ ಕ್ರೀಡೆಯು ಧ್ಯಾನ ಶೋಭನ
ನಯ ರಹಸ್ಯವು ನಮ್ಮ ಮನವು
ಬೆಯಿಸಿ ನೊಯಿಸುವ ಬುದ್ಧಿ ಕೈತವ ॥ 10 ॥
ವ್ರಜವ ಬಿಟ್ಟು ಆವನ್ನು ಮೇಸುವಾಂ –
ಬುಜವ ಹೋಲುವಾ ಅಂಘ್ರಿಗೊತ್ತುವ
ರಜತೃಣಾಶ್ಮವಾಲೋಚಿಸಿ ಮನ
ಭಜಿಸದೈ ಸುಖ ಭೂಪತೆ ಸಖಾ ॥ 11 ॥
ದನದ ಧೂಳಿಯಿಂದೊಪ್ಪುವಳಕದಿಂ
ವನಜ ವಕ್ತ್ರವ ವೀಕ್ಷಿಸಿ ಮನ
ನೆನೆಸೆ ಇಚ್ಛಿಪೆವು ನಿನ್ನ ರೂಪವ
ಇನನ ಅಸ್ತದಿ ವೀರ ನಿತ್ಯದಿ ॥ 12 ॥
ಭಕುತರಿಚ್ಛಿಪ ಅಬ್ಜೇಜನರ್ಚಿಪಾ
ಪೃಥಿವಿಭೂಷಿಪಾ ಆಪತ್ತು ಪಾರಿಪಾ
ಸುಖಕೆ ಶ್ರೇಷ್ಠವಾ ಸತ್ಪದಾಬ್ಜವಾ
ಸುಕುಚದಲ್ಲಿಡೈ ಸುವ್ಯಥೇ ಸುಡೈ ॥ 13 ॥
ಸುರತ ಹುಟ್ಟುವಾ ಶೋಕವಟ್ಟುವಾ
ಸ್ಮರಿಪ ವಂಶವಾ ಸಂಧಿಸೊಪ್ಪುವಾ
ನರರ ರಾಗವನಟ್ಟಿ ಮರೆಸುವಾ
ಅರಸ ನಿನ್ನ ಅಧರಾಂಕಿತ ಸುಧಾ ॥ 14 ॥
ಹಗಲು ಚರಿಸುವಿ ಹೋಗಿಯಾಟವಿ
ಯುಗಕೆ ವೆಗ್ಗಳವು ಒಂದು ತೃಟಿಯದು
ಮೊಗದ ಸಿರಿಗುರುಳ್ಮೆಚ್ಚಿ ನೋಡಲು
ಮಗುಳೆ ಜಡದೊಳು ಮೋಹಿಪೆವೀಗಳು ॥ 15 ॥
ಎಳೆಯರಿನಿಯರ ಇಷ್ಟರಾಪ್ತರಾ
ಬಲವ ಮೀರುತ ಬಂದೆವಚ್ಚುತಾ
ಲಲಿತಗೀತದಾಲಾಪಮೋಹದಾ
ಬಲೆರ ನೈಶಕೆ ಬಿಟ್ಟ ಕುಹಕವಾ ॥ 16 ॥
ಮುಗುಳು ನಗೆಮೊಗ ಮೋಹನೋಟವು
ಮುಗುಳಗಣೆಯನ ಮೀಟುವಾಘನಾ
ಮಿಗಿಲು ನಿಮ್ಮದೆ ಮಾಟ ಕಂಡೆದೆ
ಬಿಗಿದು ಅಪ್ಪುವೆಂಬೆಸೆವ ಮೋಹವು ॥ 17 ॥
ಆಕಳ ಕಾವರಾ ಮಂಗಳಾಹರಾ
ಪ್ರಕಟ ನಿನ್ನದು ಪಾಪ ಪೋಪದು
ಸ್ವಕೀಯರಾರ್ತಿಹಾ ಸರ್ವರೋಗಹಾ
ನಿಖಿಳರಾಸೆಯಾ ಪೂರೈಸಯ್ಯ ನೀ ॥ 18 ॥
ಪ್ರಸನ್ನವೇಂಕಟಾ ಪಶುಪ್ರಪಾಲಕಾ
ಆಸೆಯರ್ಗೀತವಾ ಆರಿತು ಮಾಧವಾ
ಪ್ರಸನ್ನವಾಗುವ ಆಪತ್ತು ಹರಿಸುವಾ
ಶಶಿಮುಖಿಯರೊಳ್ ಸ್ನೇಹತಪ್ತರಾ ॥ 19 ॥
jayavrajakke nI janmasedhikavu |
SrIyaLavAsavU SASvatilliyu ||
priyage prANava arpasi nODuva |
priyara dRuShTige prAptiyA gade || 1 ||
svajana vismayA smitadalaLideyO |
vrajada duHKavannodda vIrane ||
Bajipa kiMkarIrbAsaKA harE |
aMbujasamAsyavA akShige tOrvanE || 2 ||
Sarata kAlada svabjagarBada |
sirige pOluvAsyEkShe oppuva ||
suratasvAmi nIM SulkadAsEraM |
varada kAyadE vidhiyadAvudai || 3 ||
viShada nIrdore vyALarAkShariM |
viShama gALimaLe vaidyutAgniyiM ||
vRuShaBa muKyariM viSvaduHKadiM |
vRuShaBa nammanU rakShisideyO nI || 4 ||
aKiLajIvara aMtarniyAmaka |
gOkularakShakargeMtO bAlaka ||
viKanasArcitA sarvagOpikA |
saKa nI puTTide satvavaMSadi || 5 ||
varavariShThanE vRuShNikAMtanE |
SaraNu hokkarA saMsRutiharA ||
nere karAbjavAnniTTu SIrShavA |
Adarisu SrIkarA dharisidA karA || 6 ||
praNata prANigaLa pApakarShakA |
AvinabaLilippa vaiShNavArcitA ||
PaNiya PaNEliha pAdapadmavA |
stanake hoMdisai tApavArisai || 7 ||
budhara meccinA buddhikAraNA |
madhura mAtinAMBOjanEtranE ||
tvadIya Aj~jeya tappadippuvarge|
adhara sOmava UDu vIrane || 8 ||
ninna kathAmRuta nIca jIvanaM |
munigaLarthyavu matte aGaharaM ||
manana Bavyavu mahABAgyavu |
neneva Baktaru nityadAtaru || 9 ||
priya ninhAsavu prEmanOTavu |
dayeya krIDeyu dhyAna SOBana ||
naya rahasyavu namma manavu |
beyisi noyisuva buddhi kaitava || 10 ||
vrajava biTTu Avannu mEsuvAM- |
bujava hOluvA aMGrigottuva ||
rajatRuNASmavAlOcisi mana |
Bajisadai suKa BUpate saKA || 11 ||
danada dhULiyiMdoppuvaLakadiM |
vanaja vaktrava vIkShisi mana ||
nenese icCipevu ninna rUpava |
inana astadi vIra nityadi || 12 ||
BakutaricCipa abjEjanarcipA |
pRuthiviBUShipA Apattu pAripA ||
suKake SrEShThavA satpadAbjavA |
sukucadalliDai suvyathE suDai || 13 ||
surata huTTuvA SOkavaTTuvA |
smaripa vaMSavA saMdhisoppuvA ||
narara rAgavanaTTi maresuvA |
arasa ninna adharAMkita sudhA || 14 ||
hagalu carisuvi hOgiyATavi |
yugake veggaLavu oMdu tRuTiyadu ||
mogada siriguruLmecci nODalu |
maguLe jaDadoLu mOhipevIgaLu || 15 |
|eLeyariniyara iShTarAptarA |
balava mIruta baMdevaccutA ||
lalitagItadAlApamOhadA |
balera naiSake biTTa kuhakavA || 16 ||
muguLu nagemoga mOhanOTavu |
muguLagaNeyana mITuvAGanA ||
migilu nimmade mATa kaMDede |
bigidu appuveMbeseva mOhavu || 17 ||
AkaLa kAvarA maMgaLAharA |
prakaTa ninnadu pApa pOpadu ||
svakIyarArtihA sarvarOgahA |
niKiLarAseyA pUraisayya nI || 18 ||
prasannaveMkaTA paSuprapAlakA |
AseyargItavA Aritu mAdhavA ||
prasannavAguva Apattu harisuvA |
SaSimuKiyaroL snEhataptarA || 19 ||