dasara padagalu · indiresha · krishna · MADHWA

Nanda balashtaka

ಒಂದಾನು ಒಂದು ದಿನ ಶಿಂಧುವಿನೊಳ್ ನೆರೆದು ಬಂದಾರು ದೇವತೆಗಳು
ವೃಂದಾವು ದುಷ್ಟ ಜನರಿಂದಾಲೆ ಭೂಮಿ ನೊಂದಾಳುಎಂದುಸುರಿತಾ ||ಪ||

ಕಂದರ್ಪತಾತ ನಿನಗೊಂದಿಸಿ ಬೇಡುವೆನು ಛಂದಾದಸೂರ್ಯಸುತನಾ
ಮಂದಿರದೋಳ್ ಜನಿಸಿ ನಂದಾದಿ ಗೋಕುಲದಿ ನಿಂದಾತ್ಮಲೀಲೆ ತೋರೊ ||ಅ.ಪ.||

ಅಂದಾಡಿದೂತ ಸುರವೃಂದಾರ ವಾಕ್ಯಗಳ ಕಿವಿಯಿಂದಾಲೆಕೇಳಿ ಹರಿಯು
ಛಂದಾದಿ ನೀವುಗಳು ಮುಂದಾಗಿ ಜನಿಸುವದು ಹಿಂದಾಗಿನಾ ಜನಿಸುವೇ
ಅಂದಾಡಿದಂಥ ಹರಿ ಸುಂದರಾ ಮಾತವನು ತಂದಾನುಬ್ರಹ್ಮ ಮನದೀ
ಇಂದ್ರಾದಿಗಳಿಗೆಲ್ಲ ಅವನಂದದ್ದು ಪೇಳೆ ನಿಜಮಂದಿರಖೋಗಿರೆಂದಾ ||1||

ಎಲ್ಲಾ ಅಮರರೂ ನಿಜವಲ್ಲಾಭಿಯರು ಸಹ ಅಲ್ಲಲ್ಲೆಜನಿಸುತಿಹರೂ
ಫುಲ್ಲಾಕ್ಷತಾ ಮಥುರೆಯಲಿಟ್ಟು ಗೋಕುಲದಿ ಮೆಲ್ಲಾನೆಬೆಳೆಯುತಿರಲು
ಅಲ್ಲಿದ್ದ ಗೋಪಿಯರು ಯಲ್ಲಾರು ತಾವು ನಿಜವಲ್ಲಾಭೆರೆಂದು ಹರಿಯೋಳ್‍
ಎಲ್ಲಾನು ಬಿಟ್ಟು ಅವನಲ್ಲಿಗೆ ಸ್ನೇಹವನು ಉಲ್ಹಾಸಮಾಡುತಿರಲು ||2||

ಇಂದೀವರಾಕ್ಷ ಇಹ ಬಂದಾ ಸುರೇಂದ್ರಗಣ ನೊಂದಾನುಒಂದು ಬಿಡದೇ
ವೃಂದಾವನಾದಿ ತನನಂಥಾ ದಿನಗಳೆಲ್ಲ ಒಂದೊಂದೇಲೀಲೆ ತೋರಿ
ಇಂದ್ರಾನ ಗರ್ವಕಳೆದಿಂದೆತ್ತಿ ಪರ್ವತವ ಒಂದಂಗುಲಿಯಲ್ಲಿಧರಿಸೀ
ಮುಂದೇಳು ದಿವಸ ವ್ರಜ ಮಂದೀಯ ಕಾಯ್ದ ಕರ ವೃಂದಾವನದಲ್ಲಿಳುಹಿದಾ ||3||

ವಂದೀನ ರಾತ್ರಿ ರವಿನಂದಿನಿಯೋಳ್ ಹರಿಯುನಿಂದೂದಲಾಗ ಕೊಳಲು
ವೃಂದಾದರಾಗಗಳಿಂದಾಲೆ ಕೇಳಿ ವ್ರಜದಿಂದಾವರಾನಿಹರೂ ಮಂದೀರದೊಳಗೆ ನಿಜ
ಕಂದಾರು ನಾಥಗಳು ಛಂದಾದವಸ್ತ್ರಂಗಳುವಂದಾನು ನೋಡದಲೆ
ವಂದಾರು ಯಮುನೆಯಲಿಂದಾರುಮೈಯ್ಯ ಮರೆತು ||4||

ಬಂದೇವು ನಾವು ನಿಜ ಮಂದೀರ ಬಿಟ್ಟು ನಿಮ್ಮ ಸುಂದರಕೊಳಲ ಧ್ವನಿಗೇ
ಛಂದಾದ ಸ್ಮರಣೆ ಸುಖದಿಂದಿತ್ತು ನಮಗೆ ದ್ವಿಜೇಂದ್ರೇತಕಾಯೋ ಯನಲು
ಅಂದಾವರಾಮಾತು ನಂದಾನುಸೂನ ದಯದಿಂದಾಲೆಕೇಳಿ ಹರಿಯೂ
ಮುಂದಣಿಯಾಗ ಅವರಿಂದಾಲೆ ಕೂಡಿ ದಯದಿಂದಾಲೆನಲಿದು ಮರೆದೂ ||5||

ಬಂದಾನು ಮಥುರೆಯಲಿ ಕೊಂದಾನು ಮಾತುಳನೆತಂದೀಯಾ
ಬಂಧನವ ಬಿಡಿಸೀಸಾಂದೀಪಗಿತ್ತು ಕಂದಾನಸೂನ ಕುರು ನಂದಾರಕೊಲ್ಲಿಸಿದನೂ
ಇಂದ್ರತ್ವ ಜ್ವಾಲೆಗಳೂ ಅಂತಿತ್ತು ರಾಜ ಸುಖ ಸಂದೇಹ ಸಂತೋಷದೀ
ಇಂದ್ರಾದಿ ಸರ್ವಸುರ ಸಂದೇಹ ಪ್ರಾರ್ಥಿಸಿದ ಒಂದೊಂದೆ ಮಹಿಮೆಗಳನೂ ||6||

ಛಂದಾಗಿ ಮಾಡಿದ್ವಶ ಮಡುಹಿಕರ ವೃಂದಾವಪಾಲಿಸಿದನೂ
ನಂದಾತ್ಮ ಜಾತವು ಒಂದೊಂದೆ ಮಹಿಮೆಗಳ ತಂದೊಮ್ಮೆಮನದಿ ಸ್ಮರಿಸೀ
ಬೆಂದಾವು ಪಾಪಗಳು ಬಂದಾವು ಸೌಖ್ಯಗಳುಸಂದೇಹವಿಲ್ಲನಿದರೋಳ್‍
ಕಂದಾರ ಕೊಡುವ ಧನ ವೃಂದಾವು ಪೊರೆವಾ ಮಂದೀರವಿತ್ತು ಸಲಹುವ ||7||

ಇಂದೆನ್ನ ಮಾನಸದಿ ತಂದಾತ್ಮ ರೂಪವನೂ ಛಂದಾಗಿ ಸಂತೈಸಲೀ
ನಂದಬಾಲಾಷ್ಟಕವನೂ ಇಂದುವಾವರು ಪಠಿಸುವಾ ಇಂದಿರೇಶನು ಪಾಲಿಸುವನೂ ||8||

ondAnu ondu dina SindhuvinoL neredu bandAru dEvategaLu
vRundAvu duShTa janarindAle BUmi nondALu^^eMdusuritA ||pa||

kandarpatAta ninagoMdisi bEDuvenu CandAdasUryasutanA
mandiradOL janisi naMdAdi gOkuladi nindAtmalIle tOro ||a.pa.||

andADidUta suravRundAra vAkyagaLa kiviyindAlekELi hariyu
CandAdi nIvugaLu mundAgi janisuvadu hindAginA janisuvE
andADidntha hari sundarA mAtavanu tandAnubrahma manadI
indrAdigaLigella avanandaddu pELe nijamandiraKOgirendA ||1||

ellA amararU nijavallABiyaru saha allallejanisutiharU
PullAkShatA mathureyaliTTu gOkuladi mellAnebeLeyutiralu
allidda gOpiyaru yallAru tAvu nijavallABereMdu hariyOL^
ellAnu biTTu avanallige snEhavanu ulhAsamADutiralu ||2||

indIvarAkSha iha bandA surEMdragaNa nondAnu^^ondu biDadE
vRundAvanAdi tanananthA dinagaLella ondondElIle tOri
indrAna garvakaLedindetti parvatava ondanguliyallidharisI
mundELu divasa vraja mandIya kAyda kara vRundAvanadalliLuhidA ||3||

vandIna rAtri ravinaMdiniyOL hariyunindUdalAga koLalu
vRundAdarAgagaLiMdAle kELi vrajadindAvarAniharU maMdIradoLage nija
kandAru nAthagaLu CandAdavastrangaLuvandAnu nODadale
vandAru yamuneyaliMdArumaiyya maretu ||4||

bandEvu nAvu nija mandIra biTTu nimma sundarakoLala dhvanigE
CandAda smaraNe suKadiMdittu namage dvijEndrEtakAyO yanalu
andAvarAmAtu nandAnusUna dayadindAlekELi hariyU
mundaNiyAga avarindAle kUDi dayadindAlenalidu maredU ||5||

bandAnu mathureyali kondAnu mAtuLanetaMdIyA
bandhanava biDisIsAndIpagittu kandAnasUna kuru naMdArakollisidanU
indratva jvAlegaLU antittu rAja suKa sandEha saMtOShadI
indrAdi sarvasura sandEha prArthisida ondonde mahimegaLanU ||6||

CandAgi mADidvaSa maDuhikara vRundAvapAlisidanU
nandAtma jAtavu ondonde mahimegaLa tandommemanadi smarisI
bendAvu pApagaLu bandAvu sauKyagaLusanEhavillanidarOL^
kandAra koDuva dhana vRundAvu porevA mandIravittu salahuva ||7||

indenna mAnasadi tandAtma rUpavanU CandAgi santaisalI
nandabAlAShTakavanU induvAvaru paThisuvA indirESanu pAlisuvanU ||8||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s