ವೃಂದಾವನಾಚಾರ್ಯರ ಭಾವಿಸಮೀರರ
ವೃಂದಾವನದಿ ಶಾಸ್ತ್ರದ ವೃಂದವನೆ ಪಠಿಸುತ
ಚಂದದಿ ಲೋಕದೊಳಗತ್ಯಂತ ಪೂಜ್ಯರ
ನಮಿಸುವೆನು ವಿಶ್ವಪ್ರಿಯರ ||pa||
ವಿಷ್ಣುತೀರ್ಥರ ಪೀಠದಿ ವಾಸಿಸಿ ವಾಸಿಷ್ಠ
ಕೃಷ್ಣನ ದಯದಿ ದ್ವಾದಶಾಬ್ದಗಳಲ್ಯುಪೋಷಣ
ಕೃಷ್ಣನೊಳಗರ್ಪಿಸಲು ಪ್ರೇಮದಿ ಕೃಷ್ಣ
ಭೂಪನು ರತ್ನ ಮಂಟಪವನ್ನೆ ನಿಮಗರ್ಪಿಸಿದನು ||1||
ಕೇರಳ ನೃಪವರ್ಯನು ನಿಮ್ಮಯ ಶಿಷ್ಯವರ್ಯ-
ನಾಗಿರುತಿಹನು ಸಾರಮಧ್ವಾಗಮವ
ನಿಮ್ಮೊಳಗೋದಿ ಪಂಡಿತವರ್ಯ-
ನೆನಿಸುತ ವೀರ ವಿಷ್ಣುಭಕ್ತನಾದನು ||2||
ರಾಜೇಶ ಹಯಮುಖನ ಕಿಂಕರರೊಳು
ನಿಮಗೆಣೆ ನಾ ಕಾಣೆನು
ರಾಜರಾಜರು ಪೊಂದದಿರುತಿಹ ನಾಕಿನಾಥನ
ಪದವನೇರುವ ಗುರುವರ್ಯರನೆ ನಮಿಪೆ ||3||
vRundAvanAcAryara BAvisamIrara
vRundAvanadi SAstrada vRundavane paThisuta
candadi lOkadoLagatyanta pUjyara
namisuvenu viSvapriyara ||pa||
viShNutIrthara pIThadi vAsisi vAsiShTha
kRuShNana dayadi dvAdaSAbdagaLalyupOShaNa
kRuShNanoLagarpisalu prEmadi kRuShNa
BUpanu ratna manTapavanne nimagarpisidanu ||1||
kEraLa nRupavaryanu nimmaya SiShyavarya-
nAgirutihanu sAramadhvAgamava
nimmoLagOdi panDitavarya-
nenisuta vIra viShNuBaktanAdanu ||2||
rAjESa hayamuKana kiMkararoLu
nimageNe nA kANenu
rAjarAjaru pondadirutiha nAkinAthana
padavanEruva guruvaryarane namipe ||3||
One thought on “Dasara pada on Sri vishwapriya thirtharu(Vrundavanacharya)”