dasara padagalu · krishnadwaipayana thirtharu · MADHWA

Dasara pada on Sri Krishna Dwaipayana thirtharu

ಕೃಷ್ಣದ್ವೈಪಾಯನ ಗುರುರಾಜರ ಚರಣ ಕಮಲಕಾನಮಿಪೆ
ಶಿರಬಾಗಿ ಬಿನ್ನೈಪೆ ||pa||

ಧರೆಸುರ ಮಂಡಿತ ಸುರಪುರದಲಿ ಮದ್ಗುರು
ಯಳಿಮೇಲಾರ್ಯರಿಗೆ ವರದ ಶಿರಿ||a.pa||

ವೇದವ್ಯಾಸರ ಕರಕಮಲಜರೆನಿಸಿ ವೇದೇಶರ ಮುಖದಿ
ವೇದಾಂತ ಸುಶಾಸ್ತ್ರ ಜ್ಞಾನವ ಘಳಿಸಿ ಮೇದಿನಿಯೊಳು ಚರಿಸಿ
ವಾದಿವಾರಣ ಮೃಗಾಧಿಪರೆನಿಸುತ ಮೇದಿನಿ ಸುರರಿಗೆ
ಮೋದವ ಗರೆದ ||1||

ಧರಿಜಾರಮಣನ ಪದಪೂಜಿಸಿದಂಥ ಶ್ರೀ ವ್ಯಾಸರ ಮಂತ್ರ
ಧರಿಯೊಳು ಜಪಿಸಿದರಿವರೆ ಮಹಾಂತರೆನಿಸಿದರತಿ ಶಾಂತ
ವರುಣಿಸಲೊಶವೆ ಗುರುವರ ಮಠದಲಿ ಸುರಗಂಗೆಯು
ಬಂದಿರುವ ಮಹಿಮೆಯನು ||2||

ವರ ಭೀಮಾತಟದಿ ವಿರಾಜಿಸುವಂಥ ಕುಸುಮೂರುತಿ ಸಂಸ್ಥ
ಶರಣಾಗತ ಜನರಿಗೆ ಸಕಲಾಭೀಷ್ಟ ಗರಿಯುವ ಸುಸಮರ್ಥ
ಧರೆಯೊಳು ಮೆರೆಯುವ ‘ಶಿರಿ ಕಾರ್ಪರ ನರಹರಿ’ ಯ
ನೊಲಿ-ಸಿರುವ ಪರಮ ಮಹಾತ್ಮ||3||

kRuShNadvaipAyana gururAjara caraNa kamalakAnamipe
SirabAgi binnaipe ||pa||

dharesura manDita surapuradali madguru
yaLimElAryarige varada Siri||a.pa||

vEdavyAsara karakamalajarenisi vEdESara muKadi
vEdAMta suSAstra j~jAnava GaLisi mEdiniyoLu carisi
vAdivAraNa mRugAdhiparenisuta mEdini surarige
mOdava gareda ||1||

dharijAramaNana padapUjisidantha SrI vyAsara mantra
dhariyoLu japisidarivare mahAntarenisidarati SAnta
varuNisaloSave guruvara maThadali suragangeyu
baMdiruva mahimeyanu ||2||

vara BImAtaTadi virAjisuvaMtha kusumUruti saMstha
SaraNAgata janarige sakalABIShTa gariyuva susamartha
dhareyoLu mereyuva ‘Siri kArpara narahari’ ya
noli-siruva parama mahAtma||3||


ಕೃಷ್ಣ ದ್ವೈ ಪಾಯನ ಕೃಪಣವತ್ಸಲ ಪರ
ಮೇಷ್ಠಿ ಜನಕನ ತೋರೊ ||pa||

ಅನಿಮಿಷ ಕುಲಗುರು ಆನಂದತೀರ್ಥ ಸ
ನ್ಮುನಿಮತ ವಿಮಲಾಂಬುಜಾ
ದಿನಕರ ದಯದಿ ನೋಡೆನ್ನನು ಬಾದರಾ
ಯಣ ನಾಮಧೇಯರ ತನಯ ಸಂಯಮಿ ವರ ||1||

ಭೀಮ ತರಂಗಿಣಿ ಬದಿಗನೆನಿಸಿ ಸೀತಾ
ರಾಮ ಕರ್ಮ ಗುಣಕೀರ್ತನಗೈವ
ನಿರ್ಮಲಾತ್ಮಕನ ಸತ್ಪ್ರೇಮದಿ ಸಲಹುವ
ಸುಜನ ಶಿರೋಮಣಿ ||2||

ವಿಗತದೇಹಾಭಿಮಾನಿಯೆ ನಿಮ್ಮೊಡನೆ ನಿತ್ಯ
ಹಗೆಗೊಂಬ ಪಾಪಿಗಳ
ವಿಗಡಕರ್ಮಗಳೆಲ್ಲ ಮರೆದು ವಿಶ್ವವ್ಯಾಪಿ
ಜಗನ್ನಾಥ ವಿಠಲ ಸ್ವತಂತ್ರ ಕರ್ತಯೆಂಬಾ ||3||

kRuShNa dvai pAyana kRupaNavatsala para
mEShThi janakana tOro ||pa||

animiSha kulaguru AnandatIrtha sa
nmunimata vimalAMbujA
dinakara dayadi nODennanu bAdarA
yaNa nAmadhEyara tanaya saMyami vara ||1||

BIma tarangiNi badiganenisi sItA
rAma karma guNakIrtanagaiva
nirmalAtmakana satprEmadi salahuva
sujana SirOmaNi ||2||

vigatadEhABimAniye nimmoDane nitya
hagegoMba pApigaLa
vigaDakarmagaLella maredu viSvavyApi
jagannAtha viThala svataMtra kartayeMbA ||3||


ಕೃಷ್ಣದ್ವೈ ಪಾಯನ ಗುರುರಾಯ ಮನೋ
ಭೀಷ್ಟದಾಯಕ ಕರುಣದಿ ಪಿಡಿ ಕೈಯಾ ||pa||

ರಾಮಕೃಷ್ಣ ಪವನಾತ್ಮಜನಂಘ್ರಿ
ತಾಮರಸವ ಧೇನಿಸು ಪರಿವ್ರಾಜಾ
ಭೀಮತೀರ ಪಿಪ್ಪಲ ಭೂಜ ಮೂಲ
ಸೀಮೆಯೊಳಗೆ ರಾಜಿಸುವ ಯತಿರಾಜ ||1||

ಭೇದ ಮತಾಂಬುಧಿ ಚಂದಿರಾ ಗುರು
ವೇದವ್ಯಾಸ ಮುನಿವರ ಸುಕುಮಾರಾ
ಸಾಧು ಸದ್ಗುಣಗಣ ಗಂಭೀರನಾದ
ಬಾದರಾಯಣನಾಮದಲಿಪ್ಪ ಧೀರಾ ||2||

ದೇವ ಜಗನ್ನಾಥ ವಿಠಲನ್ನ ಪಾದ
ಸೇವಕ ಭೇಡುವೆ ಹರಿಮೂರ್ತಿ ಧ್ಯಾನ
ಕೇವಲ ಭಕುತಿ ನಿರ್ಮಲ ಜ್ಞಾನ
ವಿತ್ತು ಪಾವನ್ನ ಮಾಡಿ ಪಾಲಿಸೋ ಪ್ರತಿದಿನ ||3||
kRuShNadvai pAyana gururAya manO
BIShTadAyaka karuNadi piDi kaiyA ||pa||

rAmakRuShNa pavanAtmajananGri
tAmarasava dhEnisu parivrAjA
BImatIra pippala BUja mUla
sImeyoLage rAjisuva yatirAja ||1||

BEda matAMbudhi candirA guru
vEdavyAsa munivara sukumArA
sAdhu sadguNagaNa gaMBIranAda
bAdarAyaNanAmadalippa dhIrA ||2||

dEva jagannAtha viThalanna pAda
sEvaka BEDuve harimUrti dhyAna
kEvala Bakuti nirmala j~jAna
vittu pAvanna mADi pAlisO pratidina ||3||

One thought on “Dasara pada on Sri Krishna Dwaipayana thirtharu

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s