ಎಂದು ಕಾಂಬೆನೊ ಎನ್ನ ಸಲಹುವ ತಂದೆ ಉಡುಪಿಯ ಜಾಣನಾ|
ಮಂದಹಾಸ ಪ್ರವಿಣನಾ ಇಂದಿರಾ ಭೂರಮಣನಾ||
ದೇವಕಿಯ ಜಠರದಲಿ ಬಂದನ ಆವ ಪಳ್ಳಿಲಿ ನಿಂದನಾ|
ಮಾವ ಕಂಸನ ಕೊಂದನಾ ಕಾವನಯ್ಯ ಮುಕುಂದನಾ||೧||
ಕಢಲ ದಡದೋಳೆಸೆವ ರಂಗನ ಕಡಗೋಲ್ನೆಣನ ಪಿಡಿದನಾ|
ಮೃಡ ಪುರಂದರ ರೊಡೆಯನಾ ಈರಡಿಗಳಲಿ ಶಿರವಿಡುವೆನಾ||೨||
ಪೂರ್ಣಪ್ರಜ್ಞರಿಗೊಲಿದು ದ್ವೊರಕೆ ಮಣ್ಣಿನೊಳಪ್ರಕಟಿಸಿದನಾ| ಭವಾಣಕೆಪ್ಲವನಾದನಾ ಪ್ರಸನ್ನವೆಂಕಟ ಕೃಷ್ಣನಾ||೩||
endu kAMbeno enna salahuva taMde uDupiya jANanA|
mandahAsa praviNanA indirA BUramaNanA||
dEvakiya jaTharadali bandana Ava paLLili nindanA|
mAva kaMsana kondanA kAvanayya mukundanA||1||
kaDhala daDadOLeseva rangana kaDagOlneNana piDidanA|
mRuDa purandara roDeyanA IraDigaLali SiraviDuvenA||2||
pUrNapraj~jarigolidu dvorake maNNinoLaprakaTisidanA|
BavANakeplavanAdanA prasannavenkaTa kRuShNanA||3||
2 thoughts on “Endu Kambeno enna salahuva”