guru jagannatha dasaru · raghavendra · raghavendra vijaya

Raghavendra Vijaya – SANDHI 09

ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುನ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು

ಜಯತು ಜಯ ಗುರುರಾಜ ಶುಭತಮ
ಜಯತು ಕವಿಜಯಗೇಯ ಸುಂದರ
ಜಯತು ನಿಜ ಜನ ಜಾಲಪಾಲಕ ಜಯತು ಕರುಣಾಳೊ
ಜಯತು ಸಜ್ಜನ ವಿಜಯದಾಯಕ
ಜಯತು ಕುಜನಾರಣ್ಯ ಪಾವಕ
ಜಯತು ಜಯ ಜಯ ದ್ವಿಜವರಾರ್ಚಿತ ಪಾದ ಪಂಕೇಜ ||೧||

ಹಿಂದೆ ನೀ ಪ್ರಹ್ಲಾದನೆನಿಸೀ
ತಂದೆಸಂಗಡ ವಾದ ಮಾಡೀ
ಇಂದಿರೇಶನ ತಂದು ಕಂಬದಿ ಅಂದು ತೋರಿಸಿದೆ
ಮುಂದೆ ನಿನ್ನಯ ಪಿತಗೆ ಸದ್ಗತಿ
ಛಂದದಿಂದಲಿ ಕೊಡಿಸಿ ಮೆರೆದೆಯೊ
ಎಂದು ನಿನ್ನಯ ಮಹಿಮೆ ಪೊಗಳಲು ಎನಗೆ ವಶವಲ್ಲಾ ||೨||

ತೊಳಪುನಾಶಿಕ ಕದಪುಗಳು ಬಲು
ಪೊಳೆವ ಕಂಗಳು ನೀಳಪೂರ್ಭುಗ-
ಳೆಸೆವ ತಾವರೆನೊಸಲು ಥಳಥಳನಾಮವಕ್ಷತಿಯು
ಲಲಿತ ಅರುಣಾಧರದಿ ಮಿನುಗುವ
ಸುಲಿದದಂತಸುಪಂಕ್ತಿ ಸೂಸುವ
ಎಳೆನಗೆಯ ಮೊಗದಲ್ಲಿ ಶೋಭಿಪ ಚುಬುಕತಾನೊಪ್ಪ ||೩||

ಕಂಬು ಕಂಠವು ಸಿಂಹ ಸ್ಕಂಧವು
ಕುಂಭಿಕರಸಮ ಬಾಹುಯುಗ್ಮವು
ಅಂಬುಜೋಪಮ ಹಸ್ತಯುಗಳವು ನೀಲಬೆರಳುಗಳು
ಅಂಬುಜಾಂಬಕ ಸದನ ಹೃದಯದಿ
ಅಂಬುಜಾಕ್ಷೀತುಲಸಿ ಮಾಲಾ
ಲಂಬಿತಾಮಲಕುಕ್ಷಿವಳಿತ್ರಯ ಗುಂಭಸುಳಿನಾಭೀ ||೪||

ತೊಳಪುನಾಮಸಮುದ್ರಿಕಾವಳಿ
ಪೊಳೆವೊ ಪೆಣೆಯೊಳ ಗೂರ್ಧ್ವಪುಂಡ್ರವು
ತಿಲಕದೋಪರಿ ಮಿನುಗೊದಕ್ಷತಿ ರತ್ನ ಮಣಿಯೊಪ್ಪೆ
ಲಲಿತ ಮೇಖಲ ಕೈಪ ಕಟಿತಟ
ಚಲುವ ಊರೂಯುಗಳ ಜಾನೂ
ಜಲಜ ಜಂಘೆಯು ಗುಲ್ಪಪದಯುಗ ಬೆರಳು ನಖವಜ್ರ ||೫||

ಅರುಣ ಶಾಠಿಯು ಶಿರದಲಿಂದಲಿ
ಚರಣ ಪರಿಯತರದಲೊಪ್ಪಿರೆ
ಚರಣಪಾದುಕಗಳ ಪುರದಲಿ ನಿರುತ ಶೋಭಿಪದು
ಕರುಣಪೂರ್ಣಕಟಾಕ್ಷದಿಂದಲಿ
ಶರಣ ಜನರನ ಪೊರೆಯೊ ಕಾರಣ
ಕರೆದರಾಕ್ಷಣ ಬರುವನೆಂಬೋ ಬಿರುದು ಪೊತ್ತಿಹನು ||೬||

ರಾಯನಮ್ಮೀಜಗಕೆ ಯತಿಕುಲ
ರಾಯನಂ, ಕಲ್ಯಾಣಗುಣಗಣ
ಕಾಯನಂ ನಿಸ್ಸೀಮಸುಖತತಿದಾಯನೆನಿಸಿರ್ಪ
ರಾಯ ವಾರಿಧಿ ವೃದ್ಧ ಗುಣಗಣ
ರಾಯ ನಿರ್ಮಲಕೀರ್ತಿಜೋತ್ಸ್ನನು
ರಾಯರಾಯನುಯೆನಿಸಿ ಶೋಭಿಪನೆಂದು ಕಾಂಬುವೆನು ||೭||

ಗಂಗಿಗಾದುದು ಯಮನಸಂಗದಿ
ತುಂಗತರ ಪಾಲ್ಗಡಲಿಗಾದುದು
ರಂಗನಂಗದಿ ನೈಲ್ಯತೋರ್ಪುದು ಸರ್ವಕಾಲದಲಿ
ಸಿಂಗರಾದ ಸುವಾಣಿದೇವಿಗೆ
ಉಂಗರೋರುಸು ಗುರುಳು ಸರ್ವದ
ಮಂಗಳಾಂಗಿಯು ಗೌರಿ ಹರನಿಂ ಕಪ್ಪು ಎನಿಸಿಹಳೋ ||೮||

ಮದವುಯೇರ‍್ರೋದು ದೇವಜಗಕೇ
ರದನದಲಿ ನಂಜುಂಟು ಫಣಿಗೇ
ಮದವು ಮಹವಿಷ ಕಪ್ಪು ದೋಷವು ಎನಗೆಯಿಲ್ಲೆಂಬ
ಮುದದಿ ಲೋಕತ್ರಯದಿ ತಾನೇ
ಒದಗಿ ದಿನದಿನ ಪ್ರ‍್ಳ್ವತೆರದಲಿ
ಸದಮಲಾತ್ಮಕರಾದ ರಾಯರ ಕೀರ್ತಿಶೋಭಿಪದು ||೯||

ಸರ್ವಸಂಪದ ನೀಡೊಗೋಸುಗ
ಸರ್ವಧರ್ಮವ ಮಾಡೊಗೋಸುಗ
ಸರ್ವವಿಘ್ನವ ಕಳೀಯೊಗೋಸುಗ ಕಾರ್ಯನೇರ್ವಿಕೆಗೆ
ಸರ್ವಜನರಿಗೆ ಕಾಮಿತಾರ್ಥವ
ಸರ್ವರೀತಿಲಿ ಸಲಿಸೊಗೋಸುಗ
ಊರ್ವಿತಳದೊಳು ತಾನೆ ಬೆಳಗೂದು ಅಮಲಗುರುಕೀರ್ತಿ ||೧೦||

ಇಂದುಮಮ್ಡಲ ರೋಚಿಯೋ ಪಾ-
ಲ್ಸಿಂದು ರಾಜನ ವೀಚಿಯೋ ಸುರ-
ರಿಮ್ದ್ರನೊಜ್ರಮರೀಚಿಯೋ ಸುರ-
ರಿಂದ್ರನೊಜ್ರಮರೀಚಿಯೋ ಸುರತುರಗ ಸದ್ರುಚಿಯೊ
ಕಂದುಗೊರಳನ ಗಿರಿಯೊ ರಾಘಾ
ವೇಂದ್ರಗುರುಗಳ ಕೀರ್ತಿಪೇಳ್ವೆಡೆ
ಮಂದಬುದ್ಧಿಗೆ ತೋರದದಿಂದ ಕೀರ್ತಿರಾಜಿಪದು ||೧೧||

ನಿಟಿಲ ನೇತ್ರನ ತೆರದಿ ಸಿತ ಸುರ-
ತಟಿನಿ ಯಂದದಿ ಗೌರಗಾತರ
ಸ್ಪಟಿಕಮಣಿಮಯ ಪೀಠದಂದದಿ ಧವಳ ರಾಜಿಪದು
ಮಠದೊಳುತ್ತಮ ಮಧ್ಯಮಂಟಪ
ಸ್ಪುಟಿತಹಾಟಕರತ್ನ ಮುಕುರದ
ಕಟಕಮಯವರ ಪೀಠದಲಿ ಗುರುರಾಯ ಶೋಭಿಸಿದ ||೧೨||

ಹರಿಯ ತೆರದಲಿ ಲಕ್ಷ್ಮಿನಿಲಯನು
ಹರನ ತೆರದಲಿ ಜಿತಮನೋಜನು
ಸರ್ಸಿ ಜೋದರ ತೆರದಿ ಸರ್ವದ ಸೃಷ್ಟಿಕಾರಣನು
ಮರುತನಂತಾಮೋದಕಾರಿಯು
ಸುರಪನಂತೆ ಸುಧಾಕರನು ತಾ
ಸುರರ ತರುವರದಂತೆ ಕಾಮದ ನನಿಪ ಗುರುರಾಯ ||೧೩||

ಚಿತ್ತಗತ ಅಭಿಲಾಷದಂದದಿ
ಮತ್ತೆ ಮತ್ತೆ ನವೀನ ತಾ ಘನ
ಉತ್ತಮೋತ್ತಮ ಲಕುಮಿಯಂದದಿ ವಿಭವಕಾಸ್ಪದನೂ
ಮಾತೆ ಚಂದ್ರನತೆರದಿ ಗುರುವರ
ನಿತ್ಯದಲಿ ಸುಕಳಾದಿನಾಥನು
ಮೃತ್ಯುಯಿಲ್ಲದ ಸ್ವರ್ಗತೆರದಲಿ ಸುರಭಿ ಸಂಭೃತನು ||೧೪||

ಗಗನದಂದದಿ ಕುಜನಸುಶೋಭಿತ’ನಿಗಮದಮ್ದದಿ ನಿಶ್ಚಿತಾರ್ಥನು
ರಘುಕುಲೇಶನ ತೆರದಿ ಸರ್ವದ ಸತ್ಯಭಾಷಣನು
ನಗವರೋತ್ತಮನಂತೆ ನಿಶ್ಚಲ
ಗಗನ-ನದಿತೆರ ಪಾಪಮೋಚಕ
ಮುಗಿಲಿನಂದದಿ ಚಿತ್ರಚರ್ಯನುಯೆನಿಸಿ ತಾ ಮೆರೆವ ||೧೫||

ಸರಸಿಜೋದ್ಭವನಂತೆ ಸರ್ವದ
ಸರಸ ವಿಭುದರ ಸ್ತೋಮವಂದಿತ
ಸುರವರೇಮ್ದ್ರನ ತೆರದಿ ಸಾಸಿರನಯನಕಾಶ್ರಯನು
ತರುಗಳಾರಿಯ ತೆರದಿ ಸಂತತ
ಸುರಗಣಾನನನೆನಿಪ ಕಾಲನ
ತೆರದಿ ಸಂತತ ಕುಜನರಿಗೆ ತಾಪವನೆ ಕೊಡುತಿಪ್ಪ ||೧೬||

ನಿರುತ ನಿರರುತಿಯಂತೆ ಮದ್ಗುರು-
ವರ ಸದಾ ನವಬಿಧವನೆನಿಪನು
ವರುನ ನಂದದಿ ಸಿಂಧುರಾಜಿತನಮಿತ ಬಲಿಯುತನೂ
ಮರುತನಂತೆ ಸ್ವಸತ್ತ್ವಧಾರಿತ
ಪರಮಶ್ರೀ ಭೂರಮಣಸೇವಕ
ಹರನ ಮಿತ್ರನ ತೆರದಿ ಮಹಧನಕೋಶ ಸಂಯುತನೂ ||೧೭||

ಈಶನಂತೆ ವಿಭೂತಿಧಾರಕ
ಭೇಶನಂತೆ ಕಳಾಸುಪೂರಣ
ಕೀಶನಂತೆ ಜಿತಾಕ್ಷ ನಿರ್ಜಿತಕಾಮ ಸುಪ್ರೇಮಾ
ವ್ಯಾಸನಂತೆ ಪ್ರವೀಣಶಾಸ್ತ್ರ ದಿ-
ನೇಶನಂದದಿ ವಿಗತದೋಷ ನ-
ರೇಶನಂದದಿ ಕಪ್ಪಕಾಣೀಕೆ ನಿರುತ ಕೊಳುತಿಪ್ಪಾ ||೧೮||

ವನದತೆರ ಸುರಲೋಕತೆರದಲಿ
ಅನವರತ ಸುಮನೋಭಿವಾಸನು
ಇನನತೆರದಲಿ ಇಂದುತೆರದಲಿ ಕಮಲಕಾಶ್ರಯನು
ವನಜ ನೇತ್ರನ ತೆರದಿ ನಭತೆರ
ಮಿನುಗೊ ಸದ್ವಿಜರಾಜರಂಜಿತ
ಕನಕ ಕವಿತೆಯ ತೆರದಲಂಬುಧಿ ತೆರದಿ ತಾ ಸರಸ ||೧೯||

ಇನತೆ ಗುಣಗಳು ನಿನ್ನೊಳಿಪ್ಪವೊ
ಘನಮಹಿಮ ನೀನೊಬ್ಬ ಲೋಕಕೆ
ಕನಸಿಲಾದರು ಕಾಣೆ ಕಾವರ ನಿನ್ನ ಹೊರತಿನ್ನು
ಮನವಚನ ಕಾಯಗಲ ಪೂರ್ವಕ
ತನುವು-ಮನಿ-ಮೊದಲಾದುದೆಲ್ಲನು
ನಿನಗೆ ನೀಡಿದೆಯಿದಕೆ ಎನಗನುಮಾನವಿನಿತಿಲ್ಲ ||೨೦||

ಹರಿಯು ಭಕುತರ ಪೊರೆದ ತೆರದಲಿ
ಗುರುವೆ ನಿನ್ನಯ ಭಕುತ ಜನರನು
ಧರೆಯ ತಳದಲಿ ಪೊರೆಯೊಗೋಸುಗ ನಿನ್ನ ಅವತಾರ
ಕೊರತೆಯಿದಕೇನಿಲ್ಲ ನಿಶ್ಚಯ
ಪರಮ ಕರುಣೀಯು ನೀನೆ ಎನ್ನನು
ಶಿರದಿ ಕರಗಳನಿಟ್ಟು ಪಾಲಿಸೊ ಭಕುತಪರಿಪಾಲಾ ||೨೧||

ಎನ್ನ ಪಾಲಕ ನೀನೆ ಸರ್ವದ
ನಿನ್ನ ಬಾಲಕ ನಾನೆ ಗುರುವರ
ಎನ್ನ ನಿನ್ನೊಳು ನ್ಯಾಯವ್ಯಾತಕೆ ಘನ್ನಗುಣನಿಧಿಯೇ
ಬನ್ನ ಬಡಿಸುವ ಭವದಿ ತೊಳಲುವ-
ದನ್ನ್ನು ನೋಡೀನೋದದಂದದಿ
ಇನ್ನು ಕಾಯದಲಿರುವರೇನಾಪನ್ನಪರಿಪಾಲಾ ||೨೩||

ನಂಬಿಭಜಿಸುವ ಜನಕೆ ಗುರುವರ
ಇಂಬುಗೊಟ್ತವರನ್ನು ಕಾಯುವಿ
ಎಂಬೋ ವಾಕ್ಯವುಯೆಲ್ಲಿ ಪೋಯಿತೊ ತೋರೋ ನೀನದನು
ಬಿಂಬ ಮೂರುತಿ ನೀನೆ ವಿಶ್ವ ಕು-
ಟುಂಬಿ ಎನ್ನನು ಸಲಹೊ ಸಂತತ
ಅಂಬುಜೋಪಮ ನಿನ್ನ ಪದಯುಗ ನಮಿಪೆನನವರತ ||೨೩||

ಮಾತೆ ತನ್ನಯ ಬಾಲನಾಡಿದ
ಮಾತಿನಿಂದಲಿ ತಾನು ಸಂತತ
ಪ್ರೀತಳಾಗುವ ತೆರದಿ ಎನ್ನಯ ನುಡಿದ ನುಡುಯಿಂದ
ತಾತ! ನೀನೇ ಎನಗೆ ಸರ್ವದ
ಪ್ರೀತನಾಗುವುದಯ್ಯ ಕಾಮಿತ
ದಾತಗುರುಜಗನ್ನಾಥವಿಠಲ ಲೋಲ ಪರಿಪಾಲ ||೨೪||

rAGavEndrara vijaya pELuve
rAGavEndrara karuna baladali
rAGavEndrara BakutarAdavaridanu kELuvudu

jayatu jaya gururAja SuBatama
jayatu kavijayagEya sundara
jayatu nija jana jAlapAlaka jayatu karuNALo
jayatu sajjana vijayadAyaka
jayatu kujanAraNya pAvaka
jayatu jaya jaya dvijavarArcita pAda pankEja ||1||

hinde nI prahlAdanenisI
tandesangaDa vAda mADI
indirESana tandu kaMbadi andu tOriside
munde ninnaya pitage sadgati
Candadindali koDisi meredeyo
endu ninnaya mahime pogaLalu enage vaSavallA ||2||

toLapunASika kadapugaLu balu
poLeva kangaLu nILapUrBuga-
Leseva tAvarenosalu thaLathaLanAmavakShatiyu
lalita aruNAdharadi minuguva
sulidadantasupankti sUsuva
eLenageya mogadalli SOBipa cubukatAnoppa ||3||

kaMbu kanThavu siMha skaMdhavu
kuMBikarasama bAhuyugmavu
aMbujOpama hastayugaLavu nIlaberaLugaLu
aMbujAMbaka sadana hRudayadi
aMbujAkShItulasi mAlA
laMbitAmalakukShivaLitraya guMBasuLinABI ||4||

toLapunAmasamudrikAvaLi
poLevo peNeyoLa gUrdhvapunDravu
tilakadOpari minugodakShati ratna maNiyoppe
lalita mEKala kaipa kaTitaTa
caluva UrUyugaLa jAnU
jalaja janGeyu gulpapadayuga beraLu naKavajra ||5||

aruNa SAThiyu Siradalindali
caraNa pariyataradaloppire
caraNapAdukagaLa puradali niruta SOBipadu
karuNapUrNakaTAkShadindali
SaraNa janarana poreyo kAraNa
karedarAkShaNa baruvaneMbO birudu pottihanu ||6||

rAyanammIjagake yatikula
rAyanaM, kalyANaguNagaNa
kAyanaM nissImasuKatatidAyanenisirpa
rAya vAridhi vRuddha guNagaNa
rAya nirmalakIrtijOtsnanu
rAyarAyanuyenisi SOBipanendu kAMbuvenu ||7||

gangigAdudu yamanasangadi
tungatara pAlgaDaligAdudu
ranganangadi nailyatOrpudu sarvakAladali
singarAda suvANidEvige
ungarOrusu guruLu sarvada
mangaLAngiyu gauri haraniM kappu enisihaLO ||8||

madavuyEr^rOdu dEvajagakE
radanadali nanjunTu PaNigE
madavu mahaviSha kappu dOShavu enageyilleMba
mudadi lOkatrayadi tAnE
odagi dinadina pr^Lvateradali
sadamalAtmakarAda rAyara kIrtiSOBipadu ||9||

sarvasaMpada nIDogOsuga
sarvadharmava mADogOsuga
sarvaviGnava kaLIyogOsuga kAryanErvikege
sarvajanarige kAmitArthava
sarvarItili salisogOsuga
UrvitaLadoLu tAne beLagUdu amalagurukIrti ||10||

indumamDala rOciyO pA-
lsindu rAjana vIciyO sura-
rimdranojramarIciyO sura-
rindranojramarIciyO suraturaga sadruciyo
kandugoraLana giriyo rAGA
vEndragurugaLa kIrtipELveDe
mandabuddhige tOradadiMda kIrtirAjipadu ||11||

niTila nEtrana teradi sita sura-
taTini yandadi gauragAtara
spaTikamaNimaya pIThadandadi dhavaLa rAjipadu
maThadoLuttama madhyamanTapa
spuTitahATakaratna mukurada
kaTakamayavara pIThadali gururAya SOBisida ||12||

hariya teradali lakShminilayanu
harana teradali jitamanOjanu
sarsi jOdara teradi sarvada sRuShTikAraNanu
marutanantAmOdakAriyu
surapanante sudhAkaranu tA
surara taruvaradante kAmada nanipa gururAya ||13||

cittagata aBilAShadandadi
matte matte navIna tA Gana
uttamOttama lakumiyaMdadi viBavakAspadanU
mAte candranateradi guruvara
nityadali sukaLAdinAthanu
mRutyuyillada svargateradali suraBi saMBRutanu ||14||

gaganadandadi kujanasuSOBita’nigamadamdadi niScitArthanu
raGukulESana teradi sarvada satyaBAShaNanu
nagavarOttamanante niScala
gagana-naditera pApamOcaka
mugilinandadi citracaryanuyenisi tA mereva ||15||

sarasijOdBavanante sarvada
sarasa viBudara stOmavandita
suravarEmdrana teradi sAsiranayanakASrayanu
tarugaLAriya teradi santata
suragaNAnananenipa kAlana
teradi santata kujanarige tApavane koDutippa ||16||

niruta nirarutiyante madguru-
vara sadA navabidhavanenipanu
varuna nandadi sindhurAjitanamita baliyutanU
marutanante svasattvadhArita
paramaSrI BUramaNasEvaka
harana mitrana teradi mahadhanakOSa saMyutanU ||17||

ISanante viBUtidhAraka
BESanante kaLAsupUraNa
kISanante jitAkSha nirjitakAma suprEmA
vyAsanante pravINaSAstra di-
nESanandadi vigatadOSha na-
rESanandadi kappakANIke niruta koLutippA ||18||

vanadatera suralOkateradali
anavarata sumanOBivAsanu
inanateradali iMduteradali kamalakASrayanu
vanaja nEtrana teradi naBatera
minugo sadvijarAjaranjita
kanaka kaviteya teradalaMbudhi teradi tA sarasa ||19||

inate guNagaLu ninnoLippavo
Ganamahima nInobba lOkake
kanasilAdaru kANe kAvara ninna horatinnu
manavacana kAyagala pUrvaka
tanuvu-mani-modalAdudellanu
ninage nIDideyidake enaganumAnavinitilla ||20||

hariyu Bakutara poreda teradali
guruve ninnaya Bakuta janaranu
dhareya taLadali poreyogOsuga ninna avatAra
korateyidakEnilla niScaya
parama karuNIyu nIne ennanu
Siradi karagaLaniTTu pAliso BakutaparipAlA ||21||

enna pAlaka nIne sarvada
ninna bAlaka nAne guruvara
enna ninnoLu nyAyavyAtake GannaguNanidhiyE
banna baDisuva Bavadi toLaluva-
dannnu nODInOdadandadi
innu kAyadaliruvarEnApannaparipAlA ||23||

naMbiBajisuva janake guruvara
iMbugoTtavarannu kAyuvi
eMbO vAkyavuyelli pOyito tOrO nInadanu
biMba mUruti nIne viSva ku-
TuMbi ennanu salaho saMtata
aMbujOpama ninna padayuga namipenanavarata ||23||

mAte tannaya bAlanADida
mAtinindali tAnu santata
prItaLAguva teradi ennaya nuDida nuDuyinda
tAta! nInE enage sarvada
prItanAguvudayya kAmita
dAtagurujagannAthaviThala lOla paripAla ||24||

3 thoughts on “Raghavendra Vijaya – SANDHI 09

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s