ಸುಕೃತ ಫಲವೋ ದರುಶನ
ಏಸು ಪುಣ್ಯಕರವೋ ||pa||
ಸುಕೃತ ಫಲವೋ ಶ್ರೀ
ವ್ಯಾಸರಾಜ ಗುರುವರ್ಯರ ದರುಶನ ||a.pa||
ವರ ಕರ್ಣಾಟಕ ಸಿಂಹಾಸನದಲಿ
ಮೆರೆಯುತಲಿರುವ ಯತೀಂದ್ರರ ದರುಶನ ||1||
ಚಂದ್ರಿಕ ನ್ಯಾಯಾಮೃತ ತಾಂಡವದಲಿ
ನಂದಕುಮಾರನ ಕುಣಿಸುವÀ ದರುಶನ ||2||
ಹಗಲು ದೀವಟಿಗೆ ಹಸುರು ಛತ್ರಿ ಮುಖ
ಬಗೆ ಬಗೆ ಬಿರುದಾವಳಿಗಳ ವೈಭವ ||3||
ರಾಜನ ಕುಹಯೋಗವನೆ ನಿವಾರಿಸಿ
ರಾಜಾಧಿರಾಜ ಸಂಪೂಜ್ಯರ ದರುಶನ ||4||
ರುಕುಮಿಣಿ ಭಾಮಾರಮಣನ ಪೂಜಿಸಿ
ಸುಕೃತ ಸ್ವರೂಪ ಪ್ರಸನ್ನರ ದರುಶನ ||5||
sukRuta PalavO daruSana
Esu puNyakaravO ||pa||
sukRuta PalavO SrI
vyAsarAja guruvaryara daruSana ||a.pa||
vara karNATaka siMhAsanadali
mereyutaliruva yatIndrara daruSana ||1||
chandrika nyAyAmRuta tAnDavadali
nandakumArana kuNisuvaÀ daruSana ||2||
hagalu dIvaTige hasuru Catri muKa
bage bage birudAvaLigaLa vaiBava ||3||
rAjana kuhayOgavane nivArisi
rAjAdhirAja saMpUjyara daruSana ||4||
rukumiNi BAmAramaNana pUjisi
sukRuta svarUpa prasannara daruSana ||5||
One thought on “Sukruta palavo darushana”