ಮಧ್ವರಾಯರ ಚರಿತೆ ಕೇಳಲು
ಶುದ್ಧವಾಯಿತು ಜನತೆ ||pa||
ತಿದ್ದಿತೆಲ್ಲರ ನಡತೆ ಸುಲಭದಿ
ಲಬ್ಧವಾಯಿತು ಘನತೆ ||a.pa||
ಉತ್ತಮ ದಿವಿಜರ ಸತ್ಸಭೆಗಳಲಿ
ನಿತ್ಯ ಪಾಡುವ ಕಥೆ
ಮರ್ತ್ಯಲೋಕದ ಮದ ಮತ್ಸರ ರೋಗಕೆ
ಪಥ್ಯಮಾಡುವವರಿಗೆ ಉತ್ತಮವೀ ಕಥೆ ||1||
ಇಲ್ಲಿಯ ಜೀವನ ಅಲ್ಲಿಗೆ ಸಾಧನ
ಎಲ್ಲಿಯು ಭೇದವ ತೋರಿದರು
ಕ್ಷುಲ್ಲಕ ಮತಗಳ ಬೆಲ್ಲದ ವಚನವು
ಸಲ್ಲದಾಯಿತು ಬಲು ಬಲ್ಲ ಮಹಾತ್ಮ ಶ್ರೀ ||2||
ಹರಿ ಗುರು ಕೃಪೆಯಿದು ಮರುದಂಶರ ಮೈ
ಮರೆಸುವ ಚರಿತೆಯು ಹರಿದುದು ಶ್ರವಣದೊಳ
ದುರಿತವು ತೊಲಗಿತು ಪರಮ ಪ್ರಸನ್ನನ
ಪರಮ ಪದದ ರುಚಿಯರಿತರು ಸುಜನರು ||3||
Madhvarayara carite kelalu
Suddhavayitu janate ||pa||
Tidditellara nadate sulabadi
Labdhavayitu Ganate ||a.pa||
Uttama divijara satsabegalali
Nitya paduva kathe
Martyalokada mada matsara rogake
Pathyamaduvavarige uttamavi kathe ||1||
Illiya jivana allige sadhana
Elliyu bedava toridaru
Kshullaka matagala bellada vacanavu
Salladayitu balu balla mahatma sri ||2||
Hari guru krupeyidu marudamsara mai
Maresuva cariteyu haridudu sravanadola
Duritavu tolagitu parama prasannana
Parama padada ruciyaritaru sujanaru ||3||
One thought on “Madhvarayara carite kelalu”