ಇದು ನಿನಗೆ ಧರ್ಮವೇ ಇಂದಿರೇಶ
ಬದೆಗ ನೀನಾಗಿದ್ದು ಭೀತಿಪಡಿಸುವುದು ।।ಪ।।
ನಿನ್ನ ಗುಣಗಳ ತುತಿಸಿ ನಿನ್ನನೆ ಹಾರೈಸಿ
ನಿನ್ನವರ ಪ್ರೀತಿಯನು ಸಂಪಾದಿಸಿ
ಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವ
ಮಾನವನ ಈ ಪರಿಯ ಬನ್ನಬಡಿಸುವುದು ।।೧।।
ದುರುಳನಲ್ಲವೊ ನಿನ್ನ ಚರಸೇವಕರವನೊ
ಪರಿಪಾಲಿಸುವುದು ನಿನಗೆ ಪರಮಧರ್ಮ
ಗುರುಗಳಂತರ್ಯಾಮಿ ಕರಮುಗಿದು ಬಿನ್ನೈಪೆ
ಶರಣರ ಪಾಲಕನೆಂಬ ಬಿರುದು ಸುಳ್ಳಾಗುತಿದೆ ।।೨।।
ಶೋಕನಾಷಣ ವಿಗತಶೋಕನೆಂಬೊ ನಾಮ
ನಾ ಕೇಳಿ ಮರೆಹೊಕ್ಕೆ ಲೋಕಬಂಧು
ನೀಕರಿಸೆಮ್ಮ ನೀ ಸಾಕಬೇಕನುದಿನವು
ವಾಕು ಮನ್ನಿಪುದು ಲೋಕೈಕರಕ್ಷಾಮಣಿ ।।೩।।
ಗುಣವೇ ನಿನ್ನದು ಬರಿದೆ ದಣಿಸುವುದು ಶರಣರನು
ಪ್ರಣತಾರ್ತಿಹರ ವಿಭೀಷಣಪಾಲಕ
ಕ್ಷಣಕನಂತಪರಾಧವೆಣಿಸುವಡೆ ಕಡೆಯುಂಟೆ
ಮಣಿದು ಬಿನ್ನಹ ಮಾಳ್ಪೆ ದನುಜದಲ್ಲಣನೆ ।।೪।।
ನಮೋ ನಮೋ ಬ್ರಹ್ಮಣ್ಯದೇವರದೇವ
ನಮೋ ನಮೋ ಧನ್ವಂತ್ರಿ ದುರಿತಹಂತ್ರೀ
ನಮೋ ನಮೋ ಕಾರುಣ್ಯಶೀಲ ಸಜ್ಜನಪಾಲ
ನಮೋ ನಮೋ ಜಗನ್ನಾಥ ವಿಠಲ ವಿಖ್ಯಾತ ।।೫।।
Idu ninage dharmave indiresa
Badega ninagiddu bitipadisuvudu ||pa||
Ninna gunagala tutisi ninnane haraisi
Ninnavara pritiyanu sampadisi
Anyaranu lekkisade chennagi baluva
Manavana I pariya bannabadisuvudu ||1||
Durulanallavo ninna carasevakaravano
Paripalisuvudu ninage paramadharma
Gurugalantaryami karamugidu binnaipe
Saranara palakanemba birudu sullagutide ||2||
Sokanashana vigatasokanembo nama
Na keli marehokke lokabandhu
Nikarisemma ni sakabekanudinavu
Vaku mannipudu lokaikarakshamani ||3||
Gunave ninnadu baride danisuvudu saranaranu
Pranatartihara vibishanapalaka
Kshanakanantaparadhavenisuvade kadeyumte
Manidu binnaha malpe danujadallanane ||4||
Namo namo brahmanyadevaradeva
Namo namo dhanvantri duritahantri
Namo namo karunyasila sajjanapala
Namo namo jagannatha vithala vikyata ||5||
2 thoughts on “idu ninage dharmave”