ಅತಿ ಶೋಭಿಸುತಿದೆ ಶ್ರೀಪತಿಯ ವಾಹನ ||ಪ||
ಚತುರ್ದಶಲೋಕದಲಿ ಅಪ್ರತಿವಾಹನ ||ಅ.ಪ||
ವಿನತೆ ಕಶ್ಯಪಮುನಿಗೆ ತನಯನೆನಿಸಿದ ವಾಹನ
ಅನುಜರನು ಕದ್ದೊಯ್ದ ಆಢ್ಯವಾಹನ
ವನದಿ ಮಧ್ಯದಿ ನಾವಿಕರ ಭಕ್ಷಿಸಿದ ವಾಹನ
ಜನಕನಾಜ್ಞದಿ ಕೂರ್ಮಗಜರ ನುಂಗಿದ ವಾಹನ ||೧||
ಕುಲಿಶ ಪಾಣಿಯ ಕೂಡೆ ಕಲಹ ಮಾಡಿದ ವಾಹನ
ಒಳಹೊಕ್ಕು ಪೀಯೂಷ ತಂದ ವಾಹನ
ಮಲತಾಯಿ ಮಕ್ಕಳನು ಮರುಳುಗೊಳಿಸಿದ ವಾಹನ
ಬಲಿರಾಯ ಒಯ್ದ ಮಕುಟವ ತಂದ ವಾಹನ ||೨||
ಕಾಲನಾಮಕನಾಗೆ ಕಮಲಭವನಲಿ ಜನಿಸಿ
ಕಾಲಾತ್ಮ ಹರಿಯ ಸೇವಿಪವಾಹನ
ಕಾಳಗದಿ ಕಪಿವರರ ಕಟ್ಟು ಬಿಡಿಸಿದ ವಾಹನ
ಸೌಪರ್ಣಿಪತಿಯೆಂಬ ಹೊಂಬಣ್ಣವಾಹನ ||೪||
ಪನ್ನಗಾಶನ ವಾಹನ ಪತಿತಪಾವನ ವಾಹನ
ಸನ್ನುತಿಪ ಭಕ್ತರನು ಸಲಹುವ ವಾಹನ
ಪನ್ನಗಾದ್ರಿನಿವಾಸ ಜಗನ್ನಾಥವಿಠಲಗೆ
ಉನ್ನತ ಪ್ರಿಯವಾದ ಗರುಡವಾಹನ ||೫||
atisobisutide sripatiya vahana |
chaturadasalikakkapratima vahana |
kalanamaengagi kamalabanadali janisi |
kalatma hariya sevipa vahana |
kalagadi kapivarara kattu bidisida vahana |
valakilyara varava padediha vahana || 1 ||
vinuta kasyapa rushiya tanaya nenisida vahana |
anujara kaddoyda adhya vahana |
vanada madhyadi avukari bakshisida vahana |
janaengajnadi kurmagaja nungida vahana || 2 ||
kuparadedege mandar oyda vahana |
nijarupadi hariya sevegaiyda vahana |
sapatniyarige amrutava prapta madida vahana |
sauparni patiyenba ponbanna vahana || 3 ||
kulisapaniyarodane kalaha madida vahana |
olapokku piyusha tanda vahana |
malatayi makkalanu marulu golisida vahana |
balirajanoyda mukutava tanda vahana || 4 ||
pannagasananada patita pavana vahana |
sannutipa sajjanara poreva vahana |
pannagacala vasa jagannatha vithalage |
unnata priyavada garuda vahana || 5 ||
2 thoughts on “atisobisutide sripatiya”