ಜಯಮಂಗಲಂ ನಿತ್ಯ ಶುಭಮಂಗಲಂ ||pa||
ವಾತಜಾತನು ಆಗಿ ಖ್ಯಾತಿಯಲಿ ಮೆರೆದಗೆಸೇತುವೆಯ ಭರದಿಂದ ಲಂಘಿಸಿದಗೆ|
ಸೀತೆಯನು ವಂದಿಸುತೆ ಉಂಗುರವನಿತ್ತವಗೆದೈತ್ಯಪುರವನು ಭರದಲುರಿಸಿದವಗೆ ||1||
ವಸುಧೆಯಲಿ ಕುಂತಿನಂದನನಾಗಿ ಉದಿಸಿದಗೆಕುಸುಮವನು ತಂದು ದ್ರೌಪದಿಗಿತ್ತಗೆ|
ಕುಶಲತನದಲಿ ಕೌರವಾದಿಗಳ ಸಂಹರಿಸಿ-ದಸಹಾಯ ವೀರ ಶ್ರೀ ಭೀಮಸೇನಗೆ ||2||
ಮಧ್ಯಗೃಹದಾತನಾ ಸತಿಯಲ್ಲಿ ಉದಿಸಿದಗೆಬೌದ್ಧ ಚಾರ್ವಾಕ ಮಾಯ್ಗಳ ಜರಿದಗೆ|
ಮಧ್ವಶಾಸ್ತ್ರವನೆಲ್ಲ ಸಜ್ಜನರಿಗೊರೆದಗೆಮುದ್ದು ಶ್ರೀಆದಿಕೇಶವನ ಭಜಕಗೆ ||3||
Jayamangalam nitya subamangalam ||pa||
Vatajatanu Agi kyatiyali meredagesetuveya Baradinda langisidage|
Siteyanu vandisute unguravanittavagedaityapuravanu Baradalurisidavage ||1||
Vasudheyali kuntinandananagi udisidagekusumavanu tandu draupadigittage|
Kusalatanadali kauravadigala samharisi-dasahaya vira sri bimasenage ||2||
Madhyagruhadatana satiyalli udisidagebauddha carvaka maygala jaridage|
Madhvasastravanella sajjanarigoredagemuddu sri^^adikesavana Bajakage ||3||
2 thoughts on “Jaya Mangalam – avathara traya mukhya prana mangalam”