ಇದು ಏನೆ ಯಶೋದೆ ಇದು ಏನೆ ಯಶೋದೆ
ದಧಿಯ ದಾಮೋದರ ಹೆದರಿಕಿಲ್ಲದೆ
ಕುಡಿದೋಡಿ ತಾ ಪೋದ ||pa||
ಕೊಳಲನೂದುತಲೆ ಆಕಳನೆ ಕಾಯುತಲ್ಹೋಗಿ
ಕಳಲ ಗಡಿಗೆಸುತ್ತ ಕುಣಿದಾಡುವುದು ||1||
ವತ್ಸಕಾಯುತ ವನದೊಳಗೆ ಆಡೆಂದರೆ
ಕಿಚ್ಚುನುಂಗಿ ಸರ್ಪವ ತುಳಿಯುವುದು ||2||
ಚೆಂಡನಾಡುತ ತುರುವ್ಹಿಂಡು ಕಾಯೆಂದರೆ
ಗಂಡನುಳ್ಳವರ್ಹಿಂದ್ಹಿಂದೆ ತಿರುಗುವುದು ||3||
ವಛ(ತ್ಸ?) ನಂದದಲಿ ಬಾಯ್ ಹಚ್ಚ ಗೋವಿನ ಕ್ಷೀರ
ಅಷ್ಟು ಕುಡಿದನಾಶ್ಚರ್ಯ ನೋಡಮ್ಮ ||4||
ಇಂದೆನ್ನ ಮನೆಯಲ್ಲೊಂದಿಷ್ಟು ಕ್ಷೀರಗಳಿಲ್ಲ
ಗಂಡ(ಅ?) ತಿ ದುಷ್ಟೆನ್ನ ಕೊಲ್ಲುವನಮ್ಮ ||5||
ಮೌನಗೌರಿಯ ನೋತು ನೀರೊಳಗಿದ್ದೆವೆ
ಮಾನಹೀನರ ಮಾಡಿ ಮರವನೇರುವುದು ||6||
ಬ್ಯಾಡೊ ಕೃಷ್ಣನೆ ಬಟ್ಟೆ ನೀಡೆಂದಾಲ್ಪರಿಯಲು
ಜೋಡಿಸಿ ನಿಮ್ಹಸ್ತ ಮುಗಿ(ಯಿ) ರೆಂದಾಡುವುದು||7||
ಬುದ್ಧಿಹೇಳೆಂದರೆ ಮುದ್ದು ಮಾಡುವರೇನೊ
ಕದ್ದು ಬಂದರೆ ಕಾಲು ಕಟ್ಟಿ ಹಾಕಮ್ಮ ||8||
ಅಂಧಕಾರದ ಮನೆಯೊಳಿಟ್ಟಿದ್ದ ದಧಿ ಬೆಣ್ಣೆ
ಚಂದ್ರನಂತ್ಹೊಕ್ಕು ತಾ ತಿಂದ ನೋಡಮ್ಮ ||9||
ಕೇರಿ ಮಕ್ಕಳ ನೋಡೊ ಮಹರಾಯ ಬಲರಾಮ
ದೊಡ್ಡಮಗನು ಎಲ್ಲೆ ದೊರಕಿದನಮ್ಮ ||10||
ಮೀಸಲ್ಹಾಕಿದ ಬೆಣ್ಣೆ ನೀ ಸವಿದೀಯೆಂದು
ಲೇಸಾಗಿ ಹೇಳೆ ಭೀಮೇಶಕೃಷ್ಣನಿಗೆ||11||
Idu enesoda idu enesoda dadhiya damodara
Hedarikillade kudidodi ta poda ||pa||
Kolalanudutire akalane kayutalhogi
Kalala gadige sutta kunidaduvudu ||1||
Vatsa kayuta vanadolage adendare
Kiccunungi sarpava tuliyuvudu ||2||
Chendanaduta turuvhindu kayendare
Gandanullavar^hind~hinde tiruguvudu ||3||
Vatsanandadali bay^hacci govina kshirava
Ashtu kudidanascarya nodamma ||4||
Indenna maneyallondishtu kshiragalilla
Gandanati dushtenna kolluvanamma ||5||
Maunagauriya notu nirolagiddeve
Manahinara madi maravaneruvudu ||6||
Byado krushnane batte nidemdalpariyalu
Jodisi nimhasta mugiyirendaduvudu ||7||
Buddhihelendare muddumaduvareno
Kaddubandare kalu katti hakamma ||8||
Andhakarada maneyolittidda dadhi benne
Chandranant~hokku ta tinda nodamma ||9||
Kerimakkala nodo maharaya balarama
Dodda maganu elle dorakidanamma ||1N||
Misalhakida benne ni savidiyendu
Lesagi hele bimesakrushnanige ||11||
One thought on “Idhu yenyashodhe”