ಎಂಥ ಮಹಿಮ ಏನು ಚಲುವನೆ ಶ್ರೀ ಉಡುಪಿ ನಿಲಯ || ಪ||
ಎಂಥ ಮಹಿಮ ಏನು ಚಲುವ ಕಂತುಪಿತ ಶ್ರೀ ಬಾಲಕೃಷ್ಣ
ಶಾಂತಯತಿಗಳಿಂದ ಪೂಜಿತ ನಿಂತ ಮಧ್ವಮುನಿಕರಾರ್ಚಿತ ||ಅ.ಪ||
ಕಂಡ ಕ್ಷಣದಿ ಮಂಡೆ ಬಾಗಿದ
ಹಿಂಡು ಭಕ್ತರಘ ಕಳೆವ
ಪುಂಡರೀಕ ನೇತ್ರ ಕನಕ-
ಕಿಂಡಿಯಲ್ಲಿ ಕಾಂಬ ರೂಪ||1||
ಬಾಲರೆಂಟು ಯತಿಗಳಿಂದ
ಲೀಲೆಯಿಂದ ಪೂಜೆಗೊಂಬ
ಲೀಲಮಾನುಷರೂಪ ರುಕ್ಮಿಣಿ
ಲೋಲ ಲೋಕಪಾಲ ಜಾಲ ||2||
ಕಾಲಕಾಲದ ಪೂಜೆಗೊಂಬ
ಬಾಲತೊಡಿಗೆ ಧರಿಸಿಕೊಂಬ
ವ್ಯಾಳಶಯನ ಮುದ್ದುಮುಖ ಗೋ
ಪಾಲಕೃಷ್ಣವಿಠ್ಠಲನೀತ ||3||
Entha mahima Enu chaluvane sri udupi nilaya || pa||
.entha mahima Enu chaluva kantupita sri balakrushna
Santayatigalinda pujita ninta madhvamunikararchita ||a.pa||
Kanda kshanadi mande bagida hindu baktaraga kaleva
Pundarika netra kanaka- kindiyalli kamba rupa||1||
Balarentu yatigalinda lileyinda pujegomba
Lilamanusharupa rukmini lola lokapala jala ||2||
Kalakalada pujegomba balatodige dharisikomba
Vyalasayana muddumuka go pala krushnaviththala nita ||3||
One thought on “Entha mahime yenu cheluve”