ಗೌರಿಯ ಪೂಜಿಪೆ ಬಾರೆ |
ಶ್ರೀಗೌರಿಯ ಪೂಜಿಪೆ ಬಾರೆ ಸಖಿಯೇ ನಾ |
ಶ್ರೀಗೌರಿಯ ಪೂಜಿಪೆ ಬಾರೆ || ಪ ||
ಸಖಿಯರು ನಾವೆಲ್ಲ ಸಹಿತದಿ ಕೂಡಿ ಸಂಪಿಗೆ ಹೂಗಳ ತರುವಾ |
ದುಂಡುಮಲ್ಲಿಗೆ ಚಂಪಕ ಪಾದರಿ ನಂದಿವರ್ದನ ರೋಜಾ || 1 ||
ಮುತ್ತಿನ ಮಂಟಪವನು ಶ್ರೀಂಗರಿಸಿ | ರತ್ನ ಸಿಟ್ಟಜಲಯ್ಯನ
ಮಡಡಿಯೊಳಾಗಿಹ ಮುದ್ದು ಶ್ರೀ | ಗೌರಿಯ ಕರೆವಾ || 2 ||
ಸಾಲು ಸಾಲಾಗಿಹ ಸತ್ಯಪ್ರಸನ್ಣ ಬಗೆ ಬಗೆ ಭಕ್ಷಗಳ ಸಹಿತಾ |
ಭಾಮೆ ಶ್ರೀಗೌರಿಗೆ ನೈವೇದ್ಯವನು ಪ್ರೇಮಡಲಿದುವೆನು ಬಾರೇ || 3 ||
Gouriya poojipe baare |
Shreegouriya poojipe baare sakhiye naa |
Shreegouriya poojipe baare || pa ||
Sakhiyaru naavella sahitadi koodi sampige hoogala taruvaa |
Dundumallige champaka paadari nandivardana roja || 1 ||
Muttina mantapavanu shreengarisi | ratna cittajalayyana
Madadiyolaagiha muddu shree | gouriya karevaa || 2 ||
Saalu saalaagiha satyaprasanna bage bage bhakshagal sahitaa |
Bhaame shreegourige naivedyavanu premadaliduvenu baa-re || 3 ||
One thought on “Gouriya poojipe baare”