ಕಂಡೆ ಕರುಣಾನಿಧಿಯ ಗಂಗೆಯ ಮಂಡೆಯೊಳಿಟ್ಟ ದೊರೆಯ ಶಿವನ ||ಪ||
ರುಂಡಮಾಲೆ ಸಿರಿಯ ನೊಸಲೊಳು ಕೆಂಡಗಣ್ಣಿನ ಬಗೆಯ ಹರನ ||ಅ.ಪ||
ಕಪ್ಪುಗೊರಳ ಹರನ ಕಂದರ್ಪ ಪಿತನ ಸಖನ
ಮುಪ್ಪುರ ಗೆಲಿದವನ ಮುನಿನುತ ಸರ್ಪಭೂಷಣ ಶಿವನ ಹರನ ||೧||
ಭಸಿತ ಭೂಷಿತ ಶಿವನ ಭಕ್ತರ ವಶದೊಳಗಿರುತಿಹನ
ಪಶುಪತಿಯೆನಿಸುವನ ವಸುಧೆಯೊಳು ಶಶಿಶೇಖರ ಶಿವನ ಹರನ ||೨||
ಗಜ ಚರ್ಮಾಂಬರನ ಗೌರೀವರ ತ್ರಿಜಗದೀಶ್ವರನ
ತ್ರಿಜಗನ್ಮೋಹನನ ತ್ರಿಲೋಚನ ತ್ರಿಪುರಾಂತಕ ಶಿವನ ಹರನ ||೩||
ಕಾಮಿತ ಫಲವೀವನ ಭಕ್ತರ ಪ್ರೇಮದಿ ಸಲಹುವನ
ರಾಮನಾಮಸ್ಮರನ ರತಿಪತಿ ಕಾಮನ ಸಂಹರನ ಶಿವನ ||೪||
ಧರೆಗೆ ದಕ್ಷಿಣಕಾಶಿ ಎನಿಸುವ ಪುರ ಪಂಪಾವಾಸಿ
ತಾರಕ ಉಪದೇಶಿ ಪುರಂದರವಿಠಲ ಭಕ್ತರ ಪೋಷಿ ||೫||
kande karunanidhiya gangeya mandeyolitta dhoreya |
rundamaleya siriya nosalolu kenda gannina bageya
harana gaja carmanbarana gauri vara jagadisvarana |
trijaganmohanana dakshadhvarayajana kedisidana sivana harana | 1 |
basita bushita harana baktara vasadolagirutihana |
pasupatiyenisuvana vasudheli sasisekara sivana harana | 2 |
kappu korala harana kanrapa pitana sakana |
muppura gelidavana muninuta sarpabushanana sivana harana | 3 |
kamita palavivana bakutara premadi salahuvana |
rama nama smarana ratipati kamana sanharana sivana | 4 |
dharege dakshina kasi enisuva panpapura vasi |
taraka upadesi purandara vithalana baktara poshi harana | 5 |
2 thoughts on “kande karunanidhiya gangeya”