ಯತಿಕುಲಮುಕುಟ ಶ್ರೀ ಜಯತೀರ್ಥ
ಸದ್ಗುಣಗಣ ಭರಿತ
ಅತಿಸದ್ಭಕುತಿಲಿ ನುತಿಪಜನರ ಸಂ –
ತತ ಪಾಲಿಸುತಲಿ ಪೃಥಿವಿಲಿ ಮೆರೆವ ||pa||
ಶ್ರೀ ಮಧ್ವಮತ ವಾರಿಧಿನಿಜಸೋಮ
ಅಗಣಿತಸನ್ಮಹಿಮ ಆಮಹಾಭಕ್ತಾರ್ತಿಹ ನಿಷ್ಕಾಮ
ಮುನಿಸಾರ್ವಭೌಮ ರಾಮಪದಾರ್ಚಕ
ಈ ಮಹಿಸುರರನು
ಪ್ರೇಮದಿ ಪಾಲಿಪ ಕಾಮಿತ ಫಲದ ||1||
ಮಧ್ವಮುನಿಗಳಗ್ರಂಥಕೆ ವ್ಯಾಖ್ಯಾನ
ರಚಿಸಿದ ಸುಜ್ಞಾನ ವಿದ್ಯಾರಣ್ಯನ ಸದ್ವಾದÀದಿ ನಿಧನ
ಗೈಸಿದಗುಣಪೂರ್ಣ ಅದ್ವೈತಾಟವಿ ದಗ್ಧಕೃತಾನಲ
ಸದ್ವೈಷ್ಣವ ಹೃತ್ಪದ್ಮಸುನಿಲಯ ||2||
ಲಲಿತಾ ಮಂಗಳವೇಡಿಪÀ ರಘುನಾಥ
ವನಿತಾಸಂಜಾತ ಮಳಖೇಡ ಕಾಗಿನಿ ತೀರನಿವಾಸ
ಮಾಡಿಹ ಮೌನೀಶನಲವರದೇಶ ವಿಠಲನ ವಲಿಮೆಯಲಿ
ಇಳಿಯೊಳು ಬೋಧಿಪ ಅಲವ ಬೋಧಾಪ್ತ ||3||
Yatikulamukuta srijayatirtha sadgunabarita || pa ||
Atisadbakutili nutipa janara sam-
Tata palisutali pruthivili mereva || a.pa ||
Srimadhvamatavaridhi nijasoma aganitasanmahima
A maha baktartiha nishkama munisarvabauma
Ramapadarchaka I mahisuraranu
Premadi palipa kamitapalada || 1 ||
Madhvamunigala gramthake vyakyana racisida suj~jana
Vidyaranyana sadvadadi nidhana gaisida sukasadana
Advaitatavidagdha krutanala
Sadvaishnavahrutpadmasunilaya || 2 ||
Lalita mamgalavedistha ragunatha vanitasanjata
Nilaya malakeda kagini tira vasa tapatrayadura
Naliva varadesavithalana olumeya
Ileyolu bodhipa alavabodhapta || 3 ||
One thought on “Yatikulamukuta srijayatirtha”